Tuesday 25 February 2020

ಸಿರಿಭೂವಲಯವು ಮೇಧಾವಿಗಳಿಗೂ; ದಡ್ಡರಿಗೂ ಅರ್ಥವಾಗುವ ಕಾವ್ಯ


ಪ್ರಾಚೀನವಾದ ಕಾವ್ಯ, ಶಾಸ್ತ್ರಗಳನ್ನು ಕುರಿತ ಬಹವೇ ಆಗಿರಲೀ; ಯಾವುದೇ ವಿಷಯಕುರಿತ ಆಧುನಿಕ ಬರಹವೇ ಇರಲೀ,  ಅದು ಜನಸಾಮಾನ್ಯರಿಗೂ ಹಾಗೂ ವಿದ್ವಾಂಸರಿಗೂ ಒಂದೇ ರೀತಿಯಲ್ಲಿ ಅರ್ಥವಾಗುವಂತೆ ರಚನೆಯಾಗುವುದು ಬಹಳ ಅಪರೂಪದ ಸಂಗತಿ.
 ಸಾಮನ್ಯಜನರಿಗೆ ಇಷ್ಟವಾಗುವಂತಿದ್ದರೆ; ವಿದ್ವಾಂಸರು ಅದರ ಸರಳತೆಯನ್ನೇ ದೋಷವಾಗಿ ಪರಿಗಣಿಸಿ, ಅದನ್ನು ಉಪೇಕ್ಷಿಸುತ್ತಾರೆ. ತಮಗೆ ಸುಲಭವಾಗಿ ಅರ್ಥವಾಗದರೀತಿಯಲ್ಲಿ, ವಿದ್ವಾಂಸರಿಗೆಮಾತ್ರ  ತಿಳಿಯುವಂಥ ಕಾವ್ಯವಾಗಿದ್ದಲ್ಲಿ, ಸಾಮ್ಮಾನ್ಯಜನರು ಅಂಥ ಬರಹವನ್ನು ಓದಲು ಇಷ್ಟಪಡುವುದಿಲ್ಲ; ಸಾಧ್ಯವೂ ಇರುವುದಿಲ್ಲ!! 
ಆದರೆ,  ಸಿರಿಭೂವಲಯಕಾವ್ಯವು ಈ ವಿಚಾರದಲ್ಲಿ ತನ್ನದೇಆದ ಒಂದು ವಿಶೇಷತೆಯನ್ನು ಹೊಂದಿದ್ದು ಅದು ಮಹಾನ್ ವಿದ್ವಾಂಸರಿಗೂ, ಹೆಚ್ಚಿನ ವಿಧ್ಯಾಭ್ಯಾಸವಿಲ್ಲದ  ಸಾಮಾನ್ಯಜನರಿಗೂ ಅರ್ಥವಾಗುವಂಥ,  ಉಪಯೋಗಕ್ಕೆ ಬರುವಂಥ  ಏಕೈಕಕಾವ್ಯವಾಗಿದೆ!  ಈ ಮಾತನ್ನು ಕವಿ ಕುಮುದೇಂದುಮುನಿಯೇ ತನ್ನ ವಿಶ್ವಕಾವ್ಯವಾದ ಸಿರಿಭೂವಲಯದಲ್ಲಿ ಸೂಚಿಸಿರುವುದುಂಟು!!!
ವಿರುದ್ಧವಲ್ಲವ ಸಿದ್ಧಾಂತಗಳನ್ನು ಮಹಾವ್ರತಕ್ಕಾಗಿಯೂ;  ನವಪದಗಳು ಅಣುವ್ರತಕ್ಕಾಗಿಯೂ ಸೇರಿಸಿ ಸ್ವಾರಸ್ಯಕರವಾಗಿ ಮೂಢರಿಗೂ, ಫ್ರೌಢರಿಗೂ ತಿಳಿಯುವಂತೆ ರಚಿಸಿರುವ ನವಪದದ ಭಕ್ತಿಯಿರುವ ಒಂದೇ ಕಾವ್ಯ ಎಂಬ ಮಾತನ್ನು ಕವಿಯು ಖಚಿತವಾಗಿ ಸೂಚಿಸಿರುವುದಿದೆ. ’ಮವಿರುದ್ಧಸಿದ್ಧಾಂತವನುಮಹಾವ್ರತಕೆಂದು|ನವಪದವಣುವ್ರತಕೆಂದು|ಸವಿಯಾಗಿಸಿಫ್ರೌಢ ಮೂಢರೀರ್ವರಿಗೊಂದೆ|ನವಪದಭಕ್ತಿ ಭೂವಲಯ||’  ಎಂಬ  ವಿವರವನ್ನು ಪ್ರಥಮಖಂಡದ ಪ್ರಥಮ ಅಧ್ಯಾಯದಲ್ಲೇ ಓದುಗರು ಕಾಣಬಹುದಾಗಿದೆ.
 ಇದು ಅಕ್ಷರಶಃ ನಿಜವಾದಮಾತು!!  ಸಿರಿಭೂವಲಯಕಾವ್ಯವು ಕಳೆದ ಶತಮಾನದ ಧರಣೇಂದ್ರಪಂಡಿತರು,  ಚಂದಾಪಂಡಿತರು,  ಕೆ. ಶ್ರೀಕಂಠಯ್ಯನವರು, ಡಾ|| ಶ್ರೀಕಂಠಶಾಸ್ತ್ರಿಯವರು, ಕೆ. ಅನಂತಸುಬ್ಬರಾಯರಂಥ ಮಹಾನ್ ಮೇಧಾವಿಗಳಿಗೂ; ಮುಂದೆ ಹಾಸನದ ಸುಧಾರ್ಥಿಯಂಥ ಅವಿದ್ಯಾವಂತನಿಗೂ ಅವರವರ ಶಕ್ತಿಗೆ ತಕ್ಕಂತೆ ಅರ್ಥವಾಗಿರುವುದನ್ನು ನೋಡಿದಾಗ ಇದು ಎಂಥವರಿಗೂ ಮನವರಿಕೆಯಾಗಲೇಬೇಕು. ಇವರಿಗೆ ಅರ್ಥವಾದದ್ದು ಉಳಿದವರಿಗೇಕೆ ಅರ್ಥವಾಗುವುದಿಲ್ಲ!!!???
                                                                                                                                            -ಸಿರಿಭೂವಲಯದಸುಧಾರ್ಥಿ. 

Sunday 23 February 2020

ಸಿರಿಭೂವಲಯದಲ್ಲಿ ವಿವೇಕಿಗಳು ಈ ಮಾಹಿತಿಯನ್ನು ಗಮನಿಸಲೇಬೇಕು


ನಿಮಗೆ ’ನೂರುಸಾವಿರಲಕ್ಷಕೋಟಿ’ ಶ್ಲೋಕಗಳ ವ್ಯಾಪ್ತಿಯ ಸಿರಿಭೂವಲಯಕಾವ್ಯವನ್ನು ಸಮಗ್ರವಾಗಿ ಓದಿ ತಿಳಿಯಲು ಆಗದಿದ್ದರೆ ಬೇಸರಿಸಬೇಡಿ!  ಇಲ್ಲಿಸೂಚಿಸಿರುವ ಎರಡು ಪದ್ಯಗಳ ಮಾಹಿತಿಯನ್ನರಿತರೂ ಅದು ನಿಮಗೆ ಎಷ್ಟೋ ಉಪಯುಕ್ತವೆನಿಸೀತು...
”ರಸಯುತವಾದಣುವ್ರತಗಳಿಲ್ಲದಜೀವ| ಹೊಸವಿದ್ಯೆ  ಇದಂ  ಕಾಣಲರಿದುಂ|
ರಸೆಯೊಳಗಿನ ಬ್ರಹ್ಮಚಾರಿಣಿಯರೆ ನೀವು| ಹಸನಾಗಿಸಿರಿಸೀವರನು||   
 ದೃಷ್ಟತ್ವವಾದೈದು ವ್ರತಗಳಬಿಟ್ಟು ಶಿಷ್ಟರನ್ನಾಗಿಸುವಣ್ಣ ದುಷ್ಟರೇಮುಂದೆ
ಶಿಷ್ಟರಾಗುವರೆಂಬಕಷ್ಟದ ವಿದ್ಯೆ ಭೋಧಿಪನು ಮಶುಭ ಪರಿಹಾರ||
ಜೈನಸಂಪ್ರದಾಯದಲ್ಲಿ ಅಣುವ್ರತವೆಂಬುದು ತುಂಬ ಸೂಕ್ಷ್ಮವಾದ ಕಠಿಣ ಜೀವನಕ್ರಮ. ಅದನ್ನು ತಿಳಿಯದ ಜೀವಗಳಿಗೆ ಈ ಸಿರಿಭೂವಲಯಕಾವ್ಯವು ಒಂದು ಹೊಸವಿದ್ಯೆ. ಇದನ್ನು ತಿಳಿಯಲಾಗದು, ಕಾಣಲಾಗದು. ಭೂಮಿಯಲ್ಲಿ  ಬ್ರಹ್ಮಜ್ಞಾನದೊಂದಿಗೆ ಚಲಿಸುವ ಮಹಿಳೆಯರೇ  ನೀವು  ಋಷಿವರನ ವಾಣಿಯನ್ನು ಸಾರಿಯಾಗಿ ಗ್ರಹಿಸಿರಿ- ಅಂದರೆ ನಿಮ್ಮ ’ರಿಸೀವರನ್ನು’ ಸ್ವಚ್ಚಗೊಳಿಸಿಕೊಂಡು ಋಷಿವಾಣಿಯ ಮಹತ್ವವನ್ನು ಗ್ರಹಿಸಿರಿ- ಎಂದುಅರ್ಥೈಸಿಕೊಂಡರೂ ತಪ್ಪೇನಿಲ್ಲ!!- ಕಣ್ಣಿಗೆಕಾಣುವಂತಿರುವ ಐದು ವ್ರತಗಳನ್ನು ಹೊರತುಪಡಿಸಿ (ಪಂಚಾಣುವ್ರತ) ಜ್ಞಾನಿಯು ನಮ್ಮನ್ನು ಶಿಷ್ಟರನ್ನಾಗಿಸುತ್ತಾನೆ.  ದುಷ್ಟರೇ ಮುಂದೆ ಶಿಷ್ಟರಾಗುತ್ತಾರೆ ಎಂಬ ಕಷ್ಟದ ವಿದ್ಯೆಯನ್ನು ಬೋಧಿಸುತ್ತಾನೆ .ಜೀವನದ ಅಶುಭವುಪರಿಹಾರವಾಗುತ್ತದೆ ಎಂಬು ಇಲ್ಲಿನ ಭಾವಾರ್ಥ.
ನಿಜಕ್ಕೂ ಇದು ಜಗತ್ತಿನ - ಭಾರತದ -ಇಂದಿನ ಪರಿಸರದಲ್ಲಿ ಅತಿ ಮಹತ್ವದ ಅಂಶವಾಗಿದೆ.  ಆತ್ಮದ ಅಗಾಧಕಾಲಾವಧಿಯ ಪಯಣದಲ್ಲಿ ಅದು ೮೪ ಲಕ್ಷ ಯೋನಿಗಳಲ್ಲಿ ಹುಟ್ಟಿಬಂದು ಉತ್ತಮವಾದ ಸಂಸ್ಕಾರವನ್ನು ಪಡೆಯುತ್ತದೆ. ಎಲ್ಲ ದೇಹಾಂತರ್ಗತವಾದ ಆತ್ಮವೂ ಒಂದೇ ಎಂಬುದು ಖಚಿತ.
ಹಾಗಿರುವಲ್ಲಿ ಭಾರತೀಯರುಮಾತ್ರ ಸುಸಂಸ್ಕೃತರು. ಒಳ್ಳೆಯವರು, ಸಭ್ಯರು, ಸುಹೃದಯಿಗಳು, ಉಳಿದೆಲ್ಲರೂ ಕೆಳಹಂತದವರು ಎಂದು ನಿರ್ಧರಿಸಲು ಹೇಗೆ ಸಾಧ್ಯ!!?  ಯಾವುದೇ ದೇಹದ ಅಂತ್ಯವಾದಕೂಡಲೇ ಆತ್ಮವು ತನಗೆ ಯೋಗ್ಯವಾದ ಬೇರೊಂದು ದೇಹದಲ್ಲಿ ಸೇರಿ ತನ್ನ ಪಯಣ ಮುಂದುವರೆಸುತ್ತದೆ.ಇದು ಖಚಿತ.
 ಹಿಂದೂ, ಜೈನ, ಬುದ್ಧ, ಕ್ರಿಶ್ಚಿಯನ್, ಮುಸ್ಲಿಮ್  ಇತ್ಯಾದಿ ಬೇರೆ ಬೇರೆ ಸಂಪ್ರದಾಯಗಳಲ್ಲಿ ಹುಟ್ಟಿಬೆಳೆದು  ದೇಹತ್ಯಾಗಮಾಡುವ ಆತ್ಮಕ್ಕೆ  ಆಯಾಯಾ ಸಂಪ್ರದಾಯಗಳ ’ಸಂಸ್ಕಾರ’ ದೊರೆತು, ಜೀವನಪ್ರಯಾಣ ಮುಂದುವರೆಯುತ್ತದೆ. ಇದು ಶಾಸ್ತ್ರವಚನ.
ಹಾಗಿರುವಲ್ಲಿ ತುಂಬಾ ಸಾತ್ವಿಕನಾದ ಉತ್ತಮಸಂಸ್ಕಾರದ ಯಾರೋಒಬ್ಬ ಸಜ್ಜನನು ಸತ್ತು, ಅವನ ಯಾವುದೋ ಪಾಪಕರ್ಮದ ಫಲವಾಗಿ ಮುಸ್ಲಿಮನಾಗಿಯೋ, ಕ್ರಿಶ್ಚಿಯನಾಗಿಯೋ  ದಲಿತನಾಗಿಯೋ ಹುಟ್ಟಿದಲ್ಲಿ ಪರಿಸರಕ್ಕನುಗುಣವಾಗಿ ಆ ಆತ್ಮವು ತಾತ್ಕಾಲಿಕವಾಗಿ ದುಷ್ಟತನದಿಂದಲೇ ಜೀವಿಸಬೇಕಾಗುತ್ತದೆ!
ಅದೇ ಕ್ರಮದಲ್ಲಿ  ತುಂಬ ದುಷ್ಟತನದಿಂದ ವರ್ತಿಸುತ್ತಿದ್ದ ಒಬ್ಬ ಕ್ರಿಶ್ಚಿಯನನೋ ಅಥವಾ ಮುಸ್ಲಿಮನೋ ಕಾಲವಶನಾಗಿ ಅವನ ಪುಣ್ಯದ ಫಲವಾಗಿ ಆ ದೇಹದ ಆತ್ಮವು ತುಂಬ  ’ ಸುಸಂಸ್ಕೃತವೂ, ಸಾತ್ವಿಕವೂ ಆದ’  ಹಿಂದುವೋ ಅಥವಾ  ಬ್ರಾಹ್ಮಣನ ಮನೆಯಲ್ಲೋ ಹುಟ್ಟಿಬಂದರೆ,  ಪೂರ್ವಜನ್ಮದ  ದುಷ್ಟತನವನ್ನು ತ್ಯಜಿಸಿ,  ಶಿಷ್ಟನಾಗಿ ಜೀವಿಸಬೇಕಾಗುತ್ತದೆ.   ಈ ಕ್ರಮದಲ್ಲಿ ದುಷ್ಟರು  ಶಿಷ್ಟರಾಗುವುದು , ಶಿಷ್ಟರು ದುಷ್ಟರಾಗುವುದು  ಪ್ರಕೃತಿ ಸಹಜವಾದ ಪರಿವರ್ತನೆ ಎಂದಾಯಿತು!
ಈರೀತಿಯಲ್ಲಿ ಪರಿಸರಕ್ಕನುಗುಣವಾಗಿ ಆತ್ಮವು ತನ್ನ ಸ್ವಭಾವವನ್ನು ಬದಲಿಸಿಕೊಳ್ಳುವುದುಂಟು. ಬದಲಿಸಿಕೊಳ್ಳದೇ ಹಿಂದಿನಂತೆಯೇ ದುಷ್ಟವೋ; ಶಿಷ್ಟವೋ ಆಗಿ ಬಾಳುವುದೂ ಉಂಟು!! ಇದು ಎಲ್ಲ ಜಾತಿ ಹಾಗೂ ಧರ್ಮದಲ್ಲಿಯೂ ಕಾಣಬರುವ ಸಂಗತಿ.
 ಜಗತ್ತಿನ ಪ್ರತಿಯೊಂದು ಧರ್ಮ, ಮತ, ಸಂಪ್ರದಾಯ, ಜಾತಿ ಉಪಜಾತಿಗಳಲ್ಲೂ ವ್ಯಕ್ತಿಯ ದೇಹಾಂತರ್ಗತವಾದ ಆತ್ಮದ ಸಂಸ್ಕಾರವನ್ನು ಪರಿಷ್ಕರಿಸುವ ಕಾರ್ಯ ನಡೆದೇ ಇರುತ್ತದೆ.  ಮುಸ್ಲಿಮರು ಹಾಗೂ ಕ್ರಿಶ್ಚಿಯನರು ಮಸೀದಿ ಹಾಗೂ ಚರ್ಚುಗಳಲ್ಲಿ ಪ್ರರ್ಥನೆಮಾಡುವ ಮೂಲಕ,  ಉಳಿದವರು ತಮ್ಮ ಪವಿತ್ರ ಮಠ ಮಂದಿರಗಳಲ್ಲಿ ಪೂಜೆಮಾಡುವ ಮೂಲಕ ತಮ್ಮ ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತಾರೆ.
 ಅಂದಮೇಲೆ ಎಲ್ಲ ಆತ್ಮಗಳ ಗುರಿಯೂ ಒಂದೇ ಎಂದಂತಾಯಿತು.  ಆದರೆ,  ಕೆಲವು ಆತ್ಮಗಳಿಗೆ ಜಗತ್ತೆಲ್ಲವೂ ತನ್ನ ಹಾದಿಯಲ್ಲೇ ಸಾಗಬೇಕೆಂಬ ಕೆಟ್ಟಹಟವಿರುತ್ತದೆ.  ಹಿಂಸೆಯಿಂದಾದರೂ ಅದನ್ನು ಸಾಧಿಸಲೇಬೇಕೆಂಬ ವ್ಯಾಧಿ ಇರುತ್ತದೆ! ಇದು ಕೆಲವರಲ್ಲಿ ಹೆಚ್ಚಿರ ಬಹುದು ; ಕೆಲವರಲ್ಲಿ ಕಡಿಮೆ ಇರಬಹುದು. -ಇದೂ ಕೂಡ ಎಲ್ಲ ಧರ್ಮ ಸಂಪ್ರದಾಯದವರಲ್ಲೂ ಕಾಣಬರುವ ವರ್ತನೆ.-  ಅಂಥವರ ಅವಿವೇಕದ ವರ್ತನೆಯನ್ನು ತಿದ್ದಿ ಸರಿಪಡಿಸಬೇಕಾದುದು ಒಂದು ಸಾಮಾಜಿಕ ಹೊಣೆಗಾರಿಕೆ.  ಪ್ರತಿಯೊಂದು ಧರ್ಮದವರೂ ಇದರತ್ತ ಗಮನ ಹರಿಸುವುದು ಅತ್ಯವಶ್ಯಕ.  ಇಂಥ ಸಾರ್ವಕಾಲಿಕವಾದ ಸೂಕ್ತ ಮಾರ್ಗದರ್ಶನವನ್ನು ಓದುಗರು ಸಿರಿಭೂವಲಯಕಾವ್ಬ್ಯದಲ್ಲಿ ಹೇರಳವಾಗಿ ಕಾಣಬಹುದಾಗಿದೆ.
                                                                   -ಸಿರಿಭೂವಲಯದಸುಧಾರ್ಥಿ.

ಸಿರಿಭೂವಲಯದಲ್ಲಿ ಕಮಲಸರೋವರದ ವಿಚಾರ:


ಕುಮುದೇಂದುಮುನಿಯ ಸಿರಿಭೂವಲಯಕಾವ್ಯವನ್ನು ಅಧ್ಯಯನಮಾಡುವಾಗ  ಒಂದೆಡೆಯಲ್ಲಿ, ನಂದಿಬೆಟ್ಟದ ತಪ್ಪಲಿನಲ್ಲಿ ಕಮಲಸರೋವರವಿದ್ದ ವಿಚಾರ  ಬರುತ್ತದೆ. ೧೨೦೦ ವರ್ಷಗಳ ಹಿಂದಿದ್ದ ಈ ಸುಂದರ ಕಮಲಸರೋವರವನ್ನು ಈಗ ಅಲ್ಲಿಗೆ ಹೋಗಿ ಹುಡಿಕಿದರೆ ಸಿಗುವುದಾದರೂ ಎಲ್ಲಿ!!?? ಕೆಲವೇ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಜೀವಂತವಿದ್ದ ನೂರಾರು ಕೆರೆಗಳು ಇಂದು ಕಣ್ಮರೆಯಾಗಿವೆ!!!ಇನ್ನು ೧೨೦೦ ವರ್ಷಗಳ ಹಿಂದಿನ ಕಮಲಸರೋವರವು ಹೇಗೆ ಉಳಿದೀತು!!
                      *  *  *
**ತಿಳಿಕೊಳವನ್ನು ಕದಡಿ ರಾಡಿಮಾಡಿ ಮತ್ತೆ ತಿಳಿಗೊಳಿಸುವ ಕಾರ್ಯ**

’ಘರ್ಮದಬಿಸಿಗೆ ಜಲಜ ನಿರ್ಮಲ ಕೋಳದೊಳು ಕೌಶಲದಿಪ್ಪಂತೆ ಸರ್ವಸೌಖ್ಯವಮೋಘ ರಸವಸ್ತು ತ್ಯಾಗದಿಂ ದೇಹವುಕುಂದದು ದಿಶೆದಿಶೆಯೊಳಗೆಲ್ಲ| ’  ಎಂಬುದಾಗಿ ಸಿರಿಭೂವಲಯದಲ್ಲಿ ಒಂದೆಡೆ ಸೂಚಿಸಲಾಗಿದೆ. 
ತಾವರೆಯ ಕೊಳದಲ್ಲಿ ನೀರಿನ ಮೇಲ್ಮೈ ಎಲೆಗಳಿಂದ ಮುಚ್ಚಿರುವ ಕಾರಣ ಆ ಕೊಳದನೀರು ತಣ್ಣಗಿದ್ದು ಕೈ ಕೊರೆಯುವಂತಿರುತ್ತದೆ. ಇಂಥ ಕೊರೆಯುವ ತಂಪಿನ ನೀರಿನಲ್ಲಿರುವ ತಾವರೆಯ ಹೂವು ತನ್ನಲ್ಲಿರುವ ಶಾಖದಿಂದಲೇ ಜಾಣತನದಿಂದ ಸೌಖ್ಯವಾಗಿರುವಂತೆ ನಮ್ಮ ಶರೀರವೂ ರುಚಿಕರವಾದ ಆಹಾರವಿಲ್ಲದೇ ಕ್ಷೇಮದಿಂದಿರಬಲ್ಲುದೆಂದು ಇಲ್ಲಿನ ಭಾವವಾಗಿದೆ.
ಸುಮ್ಮನೆ ಸದಾಕಾಲವೂ ತಿನ್ನುತ್ತಲೇ ಇರುವುದರಿಂದ ಶರೀರವು ಸ್ಥೂಲವಾಗುತ್ತದೆ. ಸ್ಥೂಲಶರೀರದಿಂದಾಗಿ ಚಟುವಟಿಕೆಯು ಕುಂಠಿತವಾಗುತ್ತದೆ. ಸೋಮಾರಿತನ ಮೈಗೂಡುತ್ತದೆ. ನಿಷ್ಕ್ರಿಯತೆಯಿಂದ ನಿರಾಸಕ್ತಿ ಬೆಳೆದು ಜೀವನ ನಾಶವಾಗುತ್ತದೆ.
 ಈ ಕಾರಣದಿದಾಗಿಯೇ ನಮ್ಮ ಪೂರ್ವಿಕರು ವ್ರತ ಉಪವಾಸ ಮುಂತಾದುವುಗಳಿಂದ ಶರೀರದ ಚಟುವಟಿಕೆಯು ನಿರಂತರವಾಗಿ ಸುಸ್ಥಿಯಲ್ಲಿರುವಂತೆ ಎಚ್ಚರ ವಹಿಸುತ್ತಿದ್ದರು. ದೀರ್ಘಾಯುಗಳಾಗಿರುತ್ತಿದ್ದರು. ಈಗಿನ ಪರಿಸರ ಇದಕ್ಕೆ ವಿರುದ್ಧವಾಗಿದೆ. ನಾಲಗೆಯ ರುಚಿಯನ್ನು ತೀರಿಸುವ ದಿಸೆಯಲ್ಲಿ ಸಿಕ್ಕಿದ್ದನ್ನು ಮನಸೋಇಚ್ಛೆ ತಿಂದು ರೋಗಪೀಡಿತರಾಗಿ ಜೀವಂತ ಶವದಂತೆ ಜೀವಿಸುವುದು ಇಂದಿನ ಜೀವನಶೈಲಿಯಾಗಿದೆ!!! ಇದರ ದುಷ್ಪರಿಣಾಮವನ್ನು ಸರಿಪಡಿಸುವ ದಿಸೆಯಲ್ಲಿ ’ಡಯಟ್’ ಅನಿಯಮಿತವಾದ ವ್ಯಾಯಾಮಮಾಡುವುದು ಇತ್ಯಾದಿ ಕ್ರಮಗಳಿಗೆ ಹೋಗುವಂತಾಗುವುದು ಅನಿವಾರ್ಯವಾಗುತ್ತದೆ.
     

Friday 21 February 2020

ಸಿರಿಭೂವಲಯದಲ್ಲೇ ಭೂಮಿಯಸುತ್ತಲೂ ಸಮುದ್ರವು ಹರಡಿದೆಯೆಂಬ ಮಾಹಿತಿ ಇದೆ!


’ಭರತಖಂಡವೆಂಬುದು ಒಂದು ಹಾವಾಡಿಗರ ದೇಶ. ಇಲ್ಲಿನಜನರಿಗೆ ಲೋಕಜ್ಞಾನಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯೂ ತಿಳಿದಿಲ್ಲ!!  ಆಧುನಿಕ ವಿಜ್ಞಾನದ ಪರಿಚಯವೇ ಇವರಿಗಿಲ್ಲ!
ಸಾವಿರ ವರ್ಷಗಳ ಹಿಂದೆ ಮುಸ್ಲಿಮರ ಧಾಳಿಯೊಂದಿಗೆ ಈ ದೇಶದ ಜನರ ಜೀವನದಲ್ಲಿ ಸಂಚಲನವು ಪ್ರಾರಂಭವಾಯಿತು. ಪೋರ್ಚುಗೀಸರ ಆಗಮನದಿಂದ ಇಲ್ಲಿನವರಿಗೆ ಸಾಗರವು ಹೆಚ್ಚು ವಿಶಾಲವಾಗಿದೆ. ಅದರ ಆಚೆಯಲ್ಲಿ ಬೇರೆ ದೇಶಗಳಿವೆ  ಸಾಗರವು ಭೂಮಿಯಸುತ್ತಲೂ ವ್ಯಾಪಿಸಿದೆ ಎಂಬ ವಿಚಾರ ಅವರಿಗೆ ಅರಿವಾಯಿತು.  ಬ್ರಿಟಿಷರ ಆಗಮನದಿಂದಾಗಿ ಈ ದೇಶದ ಜನಜೀವನದಲ್ಲಿ ನಾಗರಿಕತೆ ತಲೆದೋರಿತು’ ಎಂಬ ಹುಚ್ಚು ಕಲ್ಪನೆ ಕೆಲವರದು!
ಇದೊಂದು ತಪ್ಪು ಕಲ್ಪನೆ ಎಂಬುದನ್ನು ಹಲವಾರುಜನ ಪಾಶ್ಚಿಮಾತ್ಯ ವಿಚಾರ ಶಾಲಿಗಳೇ ಹಲವಾರುಸಲ ಹೇಳಿದ್ದಾಗಿದೆ! ಈಗ ಭೂಮಿಯ ಬೇರೆ ಭಾಗದಲ್ಲೂ ಸಮುದ್ರವು ವ್ಯಾಪಿಸಿದೆ ಎಂಬ ಒಂದು ಮಾಹಿತಿಯನ್ನೇ ಗಮನಿಸಿ. ಈ ಮಾಹಿತಿಯನ್ನು ೧೨೦೦ ವರ್ಷಗಳಿಗೂ ಹಿಂದಿನವನಾದ ಕುಮುದೇಂದುಮುನಿಯೇ ತನ್ನ ಸಿರಿಭೂವಲಯಕಾವ್ಯದಲ್ಲಿ ಖಚಿತವಾಗಿ ಸೂಚಿಸಿರುವುದಿದೆ!!
ಈ ಕಾವ್ಯದಲ್ಲಿ ಇಂದಿನ ಆಧುನಿಕ ವಿಜ್ಞಾನದ ಸಾಧನೆಗಳೆಲ್ಲವೂ ತನಗೆ ತಿಳಿದೆತ್ತೆಂದು ಕವಿಯು ಸೂಚಿಸಿರುವುದನ್ನೂ ಕಾಣಬಹುದು. ಈಗ ಸಮುದ್ರದ ವ್ಯಾಪ್ತಿಯನ್ನು ಕುರಿತಂತೆ ಈ ಕಾವ್ಯದ ಹೇಳಿಕೆ ಏನೆಂಬುದನ್ನು ಇಲ್ಲಿ ನೋಡಿರಿ:
(ಮೂಲಸಾಹಿತ್ಯದ ೧೩ನೇ ಅಧ್ಯಾಯದ ಪಾದಪದ್ಯಗಳು ಹಾಗೂ ಪೂರ್ಣಪದ್ಯಗಳಲ್ಲಿ ಅಶ್ವಗತಿಯಲ್ಲಿ ಸಾಗಿದಾಗ ಉಗಮವಾಗುವ ಅಂತಸ್ರಾಹಿತ್ಯದ ೧೩ನೇ ಪದ್ಯ)
”ರಮೆಯಸುತ್ತಿಹಸಾಗರದಂತೆಗಂಭೀರರ್|ಸಮರದೊಳ್ಕರ್ಮವಗಲವರ್||
ಸಮತೆಯೊಳ್ಮಂದರಾಚಲದಂತೆಉಪಸರ್ಗ|ವಮರಲಕಂಪರಾಗಿಹರುಮ್|| ” ”ವ್ಯಕ್ತಿಜೀವನದ ಸಮಸ್ಯೆಗಳಿಗೆ ಮೂಲಕಾರಣವಾದ ’ಕರ್ಮ’ ವನ್ನು ಇಲ್ಲಿನ ಜನ ಯುದ್ಧದ ಮೂಲಕವೂ ಪರಿಹರಿಸಿಕೊಳ್ಳುತ್ತಾರೆ.  ಮಂದರ ಪರ್ವತಕ್ಕೆ ಸಮಾನವಾದ ಕಷ್ಟ, ತೊಂದರೆಗಳನ್ನು ಹೂವಿನ ಪರಿಮಳದಂತಾಗಿಸಿಕೊಳ್ಳುತ್ತಾರೆ. ಇವರು ಭೂಮಿಯನ್ನು ಸುತ್ತಿರುವ ಸಾಗರದಂತೆ ಗಂಭೀರವಾಗಿರುತ್ತಾರೆ’ ಎಂದು ಇಲ್ಲಿನ ಸಾಧು ಸಂತರ ಸಾಮರ್ಥ್ಯವನ್ನು ಸೂಚಿಸುವಲ್ಲಿ ಹೇಳಿರುವುದಿದೆ. ಅಂದರೆ ೧೨೦೦ ವರ್ಷಕ್ಕೆ ಮೊದಲೇ ಇಲ್ಲಿನವರಿಗೆ ’ಭೂಮಿಯಸುತ್ತಲೂ ಸಾಗರವು ಆವರಿಸಿಕೊಂಡಿದೆ’ ಎಂಬ ಮಾಹಿತಿಯು ತಿಳಿದಿರಲೇ ಬೇಕಲ್ಲವೇ!!??
                                      -ಸಿರಿಭೂವಲಯದಸುಧಾರ್ಥಿ.

ಸಿರಿಭೂವಲಯದಲ್ಲಿ ಭವಿಷ್ಯ !!


ಜಗತ್ತಿನಲ್ಲಿ ಪ್ರತಿಯೊಂದು ಜೀವದ ಜೀವನದ ಮುಂದಿನ ಘಟನೆಗಳು ಅವುಗಳ ಪೂರ್ವಾರ್ಜಿತದ ಕರ್ಮಫಲಕ್ಕನುಗುಣವಾಗಿಯೇ ನಡೆಯುವುದೆಂಬ ಖಚಿತವಾದ ಮಾಹಿತಿಯನ್ನು ನಮ್ಮ ಶಾಸ್ತ್ರಗ್ರಂಥಗಳು ಸ್ಪಷ್ಟವಾಗಿ ಸೂಚಿಸಿರುವುದಿದೆ! ಆದರೂ ಕೆಲವರಿಗೆ ತಮ್ಮ ಜೀವಿತದ ಮುಂದಿನ ದಿನಗಳಲ್ಲಿ ಏನಾಗುವುದೆಂಬುದನ್ನು ಮುಂದಾಗಿಯೇ ತಿಳಿಯುವ ತವಕವಿರುತ್ತದೆ!!  ಇದಕ್ಕಾಗಿ ಅವರು ಜೋತಿಷಿಗಳ  ಮೊರೆಹೋಗುತ್ತಾರೆ.
ಕೆಲವು ಪ್ರಾಮಾಣಿಕ ಜೋತಿಷಿಗಳು ತಾವು ಅಭ್ಯಸಿಸಿದ ಜೋತಿಷ್ಯಾಸ್ತ್ರದ ಆಧಾರದಲ್ಲಿ ಲೆಕ್ಕಹಾಕಿ ಅಣ್ಥವರ ಜೀವನದ ಮುಂದಿನ ಆಗು ಹೋಗುಗಳವಿಚಾರವಾಗಿ ಮುನ್ಸೂಚನೆ ನೀಡುವುದಿರುತ್ತದೆ. ಇನ್ನು ಕೆಲವರು ಈ ರೀತಿಯ ಭವಿಷ್ಯ ಕೇಳುವವರನ್ನೇ ತಮ್ಮ ಜೀವನದ ಆದಾಯದ ಮೂಲವಾಗಿ ಬಳಸುಕೊಳ್ಳುವುದೂ ಉಂಟು!!
ನಿಮ್ಮ ಗ್ರಹಗತಿಗಳು ಸರಿಯಿಲ್ಲ. ನಿಮಗೆ ಮುಂದೆ ಅತಿಭಯಂಕರವಾದ ಕಂಟಕವಿದೆ. ಅದರ ನಿವಾರಣೆಗಾಗಿ ಹಲವಾರು ಪರಿಹಾರ ಕ್ರಮಗಳನ್ನು ಮಾಡಬೇಕು ಎಂದು ಭೀತಿಯ ಬಿಜ ಬಿತ್ತುತ್ತರೆ!! ಇಂಥವರ ಬುದ್ಧಿವಂತಿಕೆಯ ಬಲೆಯಲ್ಲಿ ಸಿಕ್ಕಿಬಿದ್ದ ಹಲವರು ಕೇವಲ ತಮ್ಮ ಮನಸಿನ ನೆಮ್ಮದಿಗಾಗಿ ಅಪಾರ ಹಣವನ್ನು ವೆಚ್ಚಮಾಡುತ್ತಾರೆ!!
ಭವಿಷ್ಯವನ್ನು ಬಗೆದು ಮುಂದಾಗುವುದನ್ನು ತಿಳಿಯುವುದೆಂದರೆ; ಒಂದು ರೀತಿಯಲ್ಲಿ ಪ್ರಕೃತಿಗೆ ವಿರುದ್ಧವಾಗಿ ನಡೆಯುವುದೆಂದೇ ತಿಳಿಯಬೇಕು. ಪ್ರಕೃತಿಯ ವಿರುದ್ಧವಾಗಿ ನಾವು ನಡೆದರೆ, ಅದರಿಂದ ಅಪಾಯವಾಗುವುದು ಕಟ್ಟಿಟ್ಟ ಬುತ್ತಿ!  ಈ ಕಾರಣದಿಂದಾಗಿ ’ಭವಿಷ್ಯ’ ಕೇಳುವುದರಲ್ಲಿ ಆಸಕ್ತಿ ವಹಿಸಿರುವವರು ಹೆಚ್ಚು ಎಚ್ಚರಿಕೆಯಿಂದ ವರ್ತಿಸಬೇಕಾಗುತ್ತದೆ.
ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇಮಾಹಿತಿಯನ್ನು ಕುರಿತು ಪಾಶ್ಚಾತ್ಯರಿರಲೀ, ಭಾರತೀಯರಿರಲೀ, ತಮ್ಮ ಬರಹದಲ್ಲಿ ಸೂಚಿಸಿದ್ದಾರೆಂದರೆ, ಅದು ಕೇವಲ ಸಾಂಕೇತಿಕವಾಗಿ, ಒಗಟಿನರೂಪದಲ್ಲಿರುವುದು ಸಾಮಾನ್ಯಸಂಗತಿ. ಅದನ್ನು ಯಾರಾದರೊಬ್ಬರು ಸರಳವಾಗಿ ಬಿಡಿಸಿ, ವಿವರಿಸುವ ವರೆವಿಗೆ ಅದರ ಮಾಹಿತಿ ಏನೆಂಬುದು ಜನಸಾಮಾನ್ಯರಿಗೆ ತಿಳಿಯುವುದಿಲ್ಲ!!
 ನಾಸ್ಟರ್ಡಾಮಸ್, ಸರ್ವಜ್ಞ, ಬಸವೇಶ್ವರ, ಕೈವಾರತಾತಯ್ಯ, ನಾಡಿಶಾಸ್ತ್ರ, ಫಲಜೋತಿಷ್ಯ ಮುಂತಾದುವುಗಳೆಲ್ಲವೂ  ಇದೇ ಗುಂಪಿಗೆ  ಸೇರಿದವುಗಳಾಗಿವೆ. ಕುಮುದೇಂದುವಿನ ಸಿರಿಭೂವಲಯದಲ್ಲಿಯೂ ಭವಿಷ್ಯದ ಘಟನೆಗಳಿಗೆ ಸಂಬಂಧಿಸಿದಂತೆ ಕೆಲವು ಖಚಿತವಾದ ಸೂಚನೆಗಳು ಜನಸಾಮಾನ್ಯರಿಗೂ ಅರ್ಥವಾಗುವಂತೆ ಸೂಚಿತವಾಗಿರುವುದಿದೆ!!  ಇದಕ್ಕೆ ಸಂಬಧಿಸಿದ ಒಂದೆರಡು ಘಟನೆಗಳನ್ನು ಇಲ್ಲಿ ಗಮನಿಸೋಣ:
ಎರಡು ತಲೆಗಳುಳ್ಳಪಕ್ಷಿ ಗಂಡಭೇರುಂಡವನ್ನು ಇಂದಿನವರು ಕಲ್ಪನಿಕಪಕ್ಷಿ ಎಂದು ನಿರ್ಧರಿಸಬಹುದು. ಅದರೆ, ಈ ಪಕ್ಷಿಯು ವಿಜಯನಗರ ಸಾಮ್ರಾಜ್ಯದ ಪತನಾನಂತರ  ದಕ್ಷಿಣಭಾರತದಲ್ಲಿ ತಲೆಯೆತ್ತಿದ ಮೈಸೂರುಸಂಸ್ಥಾನದ ರಾಜಲಾಂಛನವೆಂಬ ಮಾಹಿತಿಯನ್ನು ಸಿರಿಭೂವಲಯವು ಸೂಚಿಸಿರುವುದಿದೆ!!   ನೋಡಿ: ಸ್ ವಣನುಂಡುಶ್ರೀಚರ್ಯೆಯೊಳಾತ್ಮನು|ವಿವರದವನುಆಚಿಂದು| ಸವಿದುಣ್ಣುವಮುನಿಗಂಡಭೇರುಂಡಈ|ನವಚಿಹ್ನಸ್ಯಾದ್ವಾದವಪ್ಪ|| ವಶವಲ್ಲದಮನಕೋಣನಂತಿರ್ದಾಗ|ವಶಗೊಳಿಸಿದಜಿನಮುದ್ರೆ|ಹೊಸಭೂವಲಯದಿ ಲಾಂಛನವಾಗಲು| ವಶವಾಯ್ತೆಮ್ಮಯಸೊಮ್ಮು||
 ಯದುವಂಶದರಸರ ಆಡಳಿತದಲ್ಲಿ ಗಂಡಭೇರುಂಡ ಪಕ್ಷಿಯ ಚಿಹ್ನೆಯು ರಾಜ್ಯಲಾಂಛನವಾಗಿದ್ದ ಮಾಹಿತಿಯನ್ನು ಕುರಿತು ಯಾರಿಗೂ ವಿವರಿಸಬೇಕಾದ ಅಗತ್ಯವಿಲ್ಲ.
ಕ್ರಿ.ಶ. ೧೯೪೭ರಲ್ಲಿ ಸ್ವಾತಂತ್ರ್ಯ ಪಡೆದ ಭಾರತದ ಪ್ರಜಾಸರ್ಕಾರವು ಅಶೋಕಸ್ಥಂಭವನ್ನು ರಾಷ್ಟ್ರಲಾಂಛನವಾಗಿ ಆಯ್ಕೆಮಾಡಿಕೊಂಡದ್ದು ಸರಿಯಷ್ಟೇ. ಈ ಸಂಗತಿಯನ್ನು ಸಿರಿಭೂವಲಯದ ಕವಿಯು ೧೨೦೦ ವರ್ಷಗಳಹಿಂದೆಯೇ ಖಚಿತವಾಗಿ ವಿವರಣೆಯಸಹಿತ  ಭವಿಷ್ಯ ನುಡಿದಿರುವುದಿದೆ!!
 ಇದಕ್ಕಿಂತಲೂ ಖಚಿತವಾಗಿ ಸಾವಿರಾರು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿರುವ ಉದಾಹರಣೆಯು ಇನ್ನಾವುದಿದೆ!!?? ನೋಡಿ: ”ಕರುಣೆಯಧವಳವರ್ಣದಪಾದಗಳಿಹ|ಪರಮಾತ್ಮಪಾದದ್ವಯದೆ|ಸಿರವಿಹನಾಲ್ಕಂಕವೆರಸಿದಸಿಂಹದಮುಖ| ಭರತಖಂಡದಶುಭಚಿಹ್ನೆ||”  ಭಗವಂತನ ಎರಡು ಪಾದಗಳುಳ್ಳ ನಾಲ್ಮೊಗದ ಸಿಂಹವು  ಭರತಖಂಡದ ಶುಭ ಚಿಹ್ನೆ ಎಂಬುದು ಎಲ್ಲರಿಗೂ ಸುಲಭವಾಗಿಯೇ ಅರ್ಥವಾಗುವಂತಿದೆಯಲ್ಲವೇ?
ಇಲ್ಲಿನ ವಿಶೇಷವೆಂದರೆ ನಾಲ್ಮೊಗದ ಸಿಂಹಕ್ಕೆ ಇರುವುದು ಎರಡೇಕಾಲುಗಳು!! ಸಾಮಾನ್ಯವಾಗಿ  ಸಿಂಹಕ್ಕೆ ಒಂದು ತಲೆ ಹಾಗೂ ನಾಲ್ಕು ಕಾಲುಗಳಿರುತ್ತವೆ.  ಈ ಲೆಕ್ಕದಲ್ಲಿ ನಾಲ್ಕುಮೊಗದ ಸಿಂಹಕ್ಕೆ ೧೬ ಕಾಲುಗಳಿರಬೇಕು!! ಆದರೆ ಈ ಸಿಂಹಲಾಂಚನದಲ್ಲಿ ಎರಡು ಪಾದಗಳು ಹಾಗೂ ನಾಲ್ಕುಮೊಗಗಳೆಂದು ವರ್ಣಿಸಲಾಗಿದೆ.
                                                                                                                        -ಸಿರಿಭೂವಲಯದಸುಧಾರ್ಥಿ,   

ಸಿರಿಭೂವಲಯದಲ್ಲಿ ಭೂಮಾಪನ ವಿಜ್ಞಾನ:


ಭಾರತಸರ್ಕಾರವು ತನ್ನ ಅಧಿಕಾರವ್ಯಾಪ್ತಿಗೆ ಬರುವ ಭೂಮಿಯನ್ನೆಲ್ಲ ಕರಾರುವಾಕ್ಕಾಗಿ ಅಳತೆಮಾಡಿ ದಾಖಲೆ ಹೊಂದಲು ಭೂಮಾಪಕರ ತಂಡವನ್ನು ಹೊಂದಿದೆ. ಈತಂಡದ ಶಾಖೆಗಳು ಪ್ರತಿಯೊಂದು ರಾಜ್ಯದಲ್ಲೂ ಇರುತ್ತವೆ. ಎಲ್ಲಜಿಲ್ಲೆಗಳ ಪ್ರತಿಯೊಂದು ಗ್ರಾಮದ ಭೂಮಿಯ ಅಳತೆಗೆ ಸಂಬಂಧಿಸಿ ಮಾಹಿತಿಯನ್ನೂ  ಈ ಭೂಮಾಪನ ಇಲಾಖೆಯು ಹೊಂದಿರುತ್ತದೆ.
 ಇಷ್ಟು ವಿಶಾಲವಾದ  ದೇಶದ ವನ್ನು ಅಳತೆಮಾಡುವ ದಿಶೆಯಲ್ಲಿ ಈ ಭೂಮಾಪನ ಇಲಾಖೆಯ ಮೋಜಿಣಿದಾರರು (ಸರ್ವೇಯರ್ ಗಳು) ಹಲವಾರು ಸಾಧನ ಸಲಕರಣೆಗಳನ್ನು ಬಳಸುವುದು ಸರ್ವವೇದ್ಯ.   ಇಲ್ಲಿ ಬಳಕೆಯಾಗುವ ಸಲಕರಣೆಗಳ ಪೈಕಿ , ’ಗೂಟ’  ’ಶಲಾಕೆ’  ’ಸೂಚಕಗಳು’  ’ಮೇಟಿ’ಮುಂತಾದ ಅಳತೆಯ ಸಾಧನಗಳ ಹೆಸರೂ ಸಿರಿಭೂವಲಯದಲ್ಲಿ ಪ್ರವೇಶಿಸಿರುವುದುಂಟು!!
 ನೋಡಿ:  ಕೋಟ್ಯಾನುಕೋಟಿ ಸಾಗರದಳತೆಯ ಗೂಟ ಶಲಾಕೆ ಸೂಚಿಗಳ ಮೇಟಿಯಪದ, ಣವಕಾರಮಂತ್ರದೆಬಹ ಪಾಟಿ ಅಕ್ಷರಗಳ ಲೆಕ್ಕಗಳಮ್”||  ಎಂಬುದಾಗಿ ಸೂಚಿಸಲಾಗಿದೆ!  ಅಂದರೆ, ಭೂಮಾಪನಮಾಡುವ ಕ್ರಿಯೆಯು ೧೨೦೦ ವರ್ಷಗಳಿಗೆ ಹಿಂದಿನಿಂದಲೂ ಭಾರತದಲ್ಲಿ ಪ್ರಚಲಿತವಿತ್ತೆಂಬುದಕ್ಕೆ ಇಲ್ಲಿ ಖಚಿತವಾದ ಸುಳಿವು ಸಿಗುತ್ತದೆ. ಇದೂ ಕೂಡ ಸಿರಿಭೂವಲಯಕಾವ್ಯಾಂತರ್ಗತವಾದ ಮಾಹಿತಿಯೇ ವಿನಃ. ಕಾವ್ಯದ ಸರಳ ಪರಿಚಯಕಾರನ ಕೈವಾಡವೇನಿಲ್ಲ!!!
                                -ಸಿರಿಭೂವಲಯದಸುಧಾರ್ಥಿ. 

Thursday 20 February 2020

ಸಿರಿಭೂವಲಯಕುರಿತ ಪರಿಚಯಕೃತಿಗಳ ಪ್ರಚಾರವಾಗಿಲ್ಲವೇಕೆ!?

ಕೆಲವು ಲೇಖಕರ ಬರಹಗಳು ಪ್ರಕಟವಾದ ಕೆಲವೇ ದಿಗಳೊಳಗಾಗಿಅಥವಾ ’ಪ್ರಸಿದ್ಧ’ ಬರಹಗಾರರ ಕೃತಿಗಳು ಪ್ರಕಟವಾಗುವ ದಿನದಂದೇ ಸಮೂಹಮಾಧ್ಯಮಗಳಲ್ಲಿ ಅವುಗಳನ್ನು ಕುರಿತ ಪರಿಚಯ ಅಥವಾ  ವಿಸ್ತಾರವಾದ ವಿಮರ್ಶೆಯು ಪ್ರಕಟವಾಗುವುದು ಸಹಜ ಸಂಗತಿ.
 ಇದು ಕಳೆದ ೨-೩ ದಶಕಗಳಿಂದಲೂ ಕನ್ನಡದ ವಿಮರ್ಶಾಕ್ಷೇತ್ರದಲ್ಲಿ ಬೇರುಬಿಟ್ಟಿರುವ ಸ್ಥಿತಿ! ಮಾಧ್ಯಮದವರಿಗೆ ಬೇಕಿರುವ ಬರಹಗಾರರ ಬರಹಕ್ಕೆ ಮಾತ್ರ  ಅಲ್ಲಿ ಅವಕಾಶ. ಇಲ್ಲವಾದಲ್ಲಿ ಅವುಗಳನ್ನು ಕೇಳಿವವರಿಲ್ಲ!!
ಸಿರಿಭೂವಲಯದ  ವಿಷಯಭರಿತ ಪರಿಚಯಕೃತಿಗಳು ಪ್ರಕಟವಾಗಿ ಐದರಿಂದ ಹತ್ತುವರ್ಷಗಳು ಕಳೆದರೂಸೂಕ್ತವಾದ ವಿಮರ್ಶೆಯು ಇನ್ನೂ ಬಾರದಿರುವ ಬಗ್ಗೆ ಕೆಲವು ಆಸಕ್ತರು ವಿಚಾರಿಸುವುದುಂಟು! ಹೇಳೆ ಕೇಳಿ ನಾನೊಬ್ಬ ಹಳ್ಳಿಗನಾದ ಕೃಷಿಕನಾಗಿದ್ದೆ. ಯಾವುದಾದರೂ ಕಾಲೇಜಿನ ಶಿಕ್ಷಕನಾಗಿದ್ದರೆ, ನೂರಾರು;ಸಾವಿರಾರು ಶಿಷ್ಯರ ಪರಂಪರೆಯನ್ನು ಹೊಂದಿ, ನಾನು ಬರೆದದ್ದು ಮಾರಾಟಕ್ಕೂ ವಿಮರ್ಶೆಗೂ; ಪರಿಚಯಕ್ಕೂ ಅರ್ಹವಾಗುತ್ತಿತ್ತು!
ಮೊದಲಿಗೆ ಕುಮುದೇಂದುವು ಜನಪ್ರಿಯತೆ ಪಡೆದ ಕವಿಯಲ್ಲ!  ಸಿರಿಭೂವಲಯದ ಶ್ರೀಕಂಠಯ್ಯನವರು  ವಿದ್ವಾಂಸರ ವಿರೋಧಕ್ಕೆ ಗುರಿಯಾಗಿದ್ದವರು! ಇಂಥ ಅಪ್ರಿಯ ವಿಚಾರಗಳ ವಿವರ ಸೂಚಿಸಿರುವ ಸುಧಾರ್ಥಿಯ ಸರಳ ಪರಿಚಯಕೃತಿಗಳಿಗೆ ವಿಮರ್ಶೆಯಾಗಲೀ, ಪರಿಚಯವಾಗಲೀ ದೊರೆಯಲುಹೇಗೆ ಸಾಧ್ಯ!!??
 ಮಾಧ್ಯಮಗಳ ಪದಾಧಿಕಾರಿಗಳು ಒಂದುರೀತಿಯ ಸಂದಿಗ್ಧತೆಯಲ್ಲಿ ಸಿಕ್ಕಿಬಿದ್ದಿರುತ್ತಾರೆ! ಮಾಧ್ಯಮಗಳ ಮಾಲಿಕರ ಮರ್ಜಿಗನುಗುಣವಾಗಿಯೇ ಅವರು ತಮ್ಮ ಕಾರ್ಯನಿರ್ವಹಿಸಬೇಕಿರುತ್ತದೆ. ಮಾಧ್ಯಮಗಳನ್ನು ಒಂದು ಉದ್ಯಮದ ರೀತಿಯಲ್ಲಿ ನಡೆಸುವುದರಿಂದ ಅಲ್ಲಿ ಲಾಭನಷ್ಟದ್ದೇ ಪ್ರಮಖ ಪಾತ್ರವಾಗಿರುತ್ತದೆ.
 ಪ್ರತಿಯೊಬ್ಬ ಮಾಲಿಕನ ಗುರಿಯೂ ’ಲಾಭ’ದತ್ತಲೇ ಕೇಂದ್ರಿತವಾಗಿರುತ್ತದೆ. ಅಲ್ಲಿ ಸಾಮಾಜಿಕ ಬದ್ಧತೆಯ ಮಹತ್ವ ವಿರುವುದಿಲ್ಲ. ಸಾಹಿತ್ಯಕ್ಕೆ ಸಂಬಂಧಿಸಿದ ಮಾಹಿತಿಗಳ ಪ್ರಸಾರಕ್ಕೆ  ಸಾಮಾನ್ಯವಾಗಿ ಆಧ್ಯತೆ ಕಡಿಮೆ. ಅಲ್ಪಸ್ವಲ್ಪ ಇದ್ದರೂ ಅದು ಅಲ್ಲಿನ ಪದಾಧಿಕಾರಿಗಳ ಕೃಪಾಪೋಷಿತರಿಗೆ ಮಾತ್ರ  ಸೀಮಿತವಾಗಿರುತ್ತದೆ. ತಮಗೆ ಬೇಕಾದವರಿಗೆ ಮಾತ್ರ, ಹೆಚ್ಚು ಪ್ರಸಿದ್ಧವ್ಯಕ್ತಿಗಳಿಗೆಮಾತ್ರ ಅವರು ಮಣೆಹಾಕುವುದು ಸಹಜಸಂಗತಿ.
ಹಾಗಿರುವಲ್ಲಿ  ಜನರಿಗೆ ಹೆಚ್ಚು ಪ್ರಿಯವೂ ಅಲ್ಲದ, ಶೀಘ್ರವಾಗಿ ಜನರ ಆಸಕ್ತಿಯನ್ನು ಸೆಳೆಯಲೂ ಆಗದ ಇಂಥ ಪ್ರಾಚೀನಕಾವ್ಯಗಳ ವಿಚಾರದಲ್ಲಿ ಮಾಧ್ಯಮದವರು ಆಸಕ್ತಿ ವಹಿಸುವುದು ದೂರದಮಾತು.  ಇದು ಎಲ್ಲರೀತಿಯ ಮಾಧ್ಯಮದವರಿಗೂ ಅನ್ವಯಿಸುತ್ತದೆ.
೧೯೭೦ ರಿಂದ ೧೯೯೦ರ ದಶಕದವರೆವಿಗೆ ಪತ್ರಿಕೆಗಳಲ್ಲಿ ಪುಸ್ತಕವಿಮರ್ಶೆಯು ಸ್ವಲ್ಪಮಟ್ಟಿಗೆ ಉದಾರವಾಗಿತ್ತು. ಅಲ್ಲಿಂದೀಚೆಗೆ ನೂರಾರು- ಸಾವಿರಾರು ರುಪಾಯಿ ಮುಖಬೆಲೆಯ ಪುಸ್ತಕಗಳನ್ನು ವಿಮರ್ಶೆಗಾಗಿ ಪತ್ರಿಕಾಲಯಗಳಿಗೆ ಹೋಗಿ ತಲುಪಿಸಿದರೆ, ಅದನ್ನು ಕೇಳುವವಾರು ನೋಡುವರು ಯಾರೂ ಗತಿಯಿರುತ್ತಿರಲಿಲ್ಲ!
 ಈ ಕಾರಣದಿಂದಾಗಿ ಸುಧಾರ್ಥಿಯು ಸಿರಿಭೂವಲಯಕ್ಕೆ ಸಂಬಂಧಿಸಿದ ಸರಳ ಪರಿಚಯಕೃತಿಗಳನ್ನು ಯಾವ ಪತ್ರಿಕೆಗೂ ವಿಮರ್ಶೆಗಾಗಿ ಕಳಿಸಿದ್ದಿಲ್ಲ! ಅವುಗಳನ್ನು ತಾಳ್ಮೆಯಿಂದ ಒದಿ, ಸೂಕ್ತವಾಗಿ ವಿಮರ್ಶಿಸುವ ಅರ್ಹತೆಯು ಸಮಕಾಲೀನ ಸಾಹಿತ್ಯಸಮುದಾಯದಲ್ಲಿ ಒಬ್ಬಿಬ್ಬರನ್ನು ಬಿಟ್ಟರೆ, ಬೇರೆ ಯಾರಿಗೂ ಇಲ್ಲವೆಂಬುದು ಸರ್ವವೇದ್ಯವಾದುದರಿಂದ ಅಲ್ಲಿ ಕೈತೋರಿಸಿ ಅವಲಕ್ಷಣವೆನಿಸಿಕೊಳ್ಳುವ ಅಗತ್ಯವೇನಿರುತ್ತದೆ!?
ಈ ಕಾರಣದಿಂದಾಗಿ ೨೦೧೩ರರಲ್ಲಿ ಪ್ರಕಟವಾದ ’ಸಿರಿಭೂವಲಯಸಾಗರರತ್ನಮಂಜೂಷ’ಕ್ಕೆ ನಾಡಿನ ಹಿರಿಯ ಚೇತನ ಪ್ರೊ. ಜಿ ವೆಂಕಟಸುಬ್ಬಯ್ಯನವರಿಂದ ಮುನ್ನುಡಿಬರೆಸುವ ಸಾಹಸಕ್ಕೆ ಕೈಹಾಕಿದ್ದಾಯಿತು!  ೧೯೭೧ರಿಂದಲೂ ಸಾಹಿತ್ಯಕ್ಷೇತ್ರದಲ್ಲಿ ಸುಧಾರ್ಥಿಯ  ಕಾಯಕವನ್ನು ನೋಡಿ ಮೆಚ್ಚುಗೆ ಸೂಚಿಸುತ್ತಿದ್ದ ಪ್ರೊ. ಜಿ.ವೆಂಕಟಸುಬ್ಬಯ್ಯನವರು  ಈತನಿಗೆ ಸಾಕಷ್ಟು ಮಾರ್ಗದರ್ಶನನೀಡಿ, ಬೆಂಬಲಿಸಿದವರೂ ಹೌದು.
 ಸಿರಿಭೂವಲಯ ಕಾವ್ಯದವಿಚಾರವಾಗಿ ಸುಧಾರ್ಥಿಯು ಕಳೆದ ೬೫ ವರ್ಷಗಳಿಂದಲೂ ನಿಷ್ಕ್ರಿಯರಾಗಿರುವ ಹಾಗೂ ಅನುಚಿತವಾಗಿ ವರ್ತಿಸಿರುವ ಕನ್ನಡ ವಿದ್ವತ್ ಲೋಕದ ವಿಚಾರದಲ್ಲಿ ತನ್ನ ಗೋತ್ರಪ್ರವರ್ತಕ ಜಮದಗ್ನಿಸುತನಂತೆ ಮಹಾನ್ ಕೋಪಿಷ್ಟನಾಗಿ ತನ್ನ ಬರಹವನ್ನು ರೂಪಿಸಿರುವನೆಂಬ ವಿಚಾರತಿಳಿದೂ, ಈ ಮಹನೀಯರು ಸಿರಿಭೂವಲಯದ ಘನೆತೆಗೆ ತಕ್ಕಂತೆ; ಸರಳಪರಿಚಯಕೃತಿಗಳ ನಿಜವಾದ ಉದ್ದೇಶ ಮತ್ತು ಕಾಳಜಿಯನ್ನು ಕುರಿತು, ಈ ಸರಳಪರಿಚಯಕೃತಿಗಳು ಸಾಧಿಸಿರುವ ಯಶಸ್ಸನ್ನು ಕುರಿತು, ತುಂಬ ಮೌಲಿಕವಾದ, ವಿಸ್ತಾರವಾದ ವಿಮರ್ಶಾತ್ಮಕ ಮುನ್ನುಡಿಯನ್ನು ಬರೆದು ಕೊಟ್ಟದ್ದು ಅಭೂತಪೂರ್ವವಾದದ್ದಾಗಿದೆ.
 ಈ ವಿಮರ್ಶಾತ್ಮಕವಾದ ಮುನ್ನುಡಿಯು, ಸುಧಾರ್ಥಿಯ ಶ್ರಮದ ಸಾರ್ಥಕತೆಯನ್ನು ಸೂಕ್ತವಾಗಿ ಪರಿಗಣಿಸುವ ಕಾರ್ಯವಾಗಿದೆ. ಇದರಿಂದ ನಿಜಕ್ಕೂ ಸುಧಾರ್ಥಿಯ ಬರಹವನ್ನು ಯಾರೊಬ್ಬರೂ ಗೌಣವಾಗಿ ಕಾಣಲು ಸಾಧ್ಯವಿಲ್ಲದಂತಾಗಿಸಿತು.
 ಕಳೆದ ಹತ್ತುವರ್ಷಗಳಿಂದ ಪತ್ರಿಕೆಗಳಲ್ಲಿ ಈ ಸಿರಿಭೂವಲಯದ ಪರಿಚಯಕೃಗಳನ್ನು ಕುರಿತು ಹೊಗಳಿಕೆಯ ಪ್ರವಾಹ ಹರಿದಿದ್ದರೂ, ಸುಧಾರ್ಥಿಗೆ ನಿಜಕ್ಕೂ ಯಾವುದೇ ನೆಮ್ಮದಿ ಸಮಾಧಾನ. ಸಂತೋಷವಿರುತ್ತಿರಲಿಲ್ಲ.  ಮೌಲಿಕವಾದ ವಿಮರ್ಶೆಯ ಮೂಲ ಉದ್ದೇಶವಿರುವುದು ಸಂಬಂಧಿಸಿದ ಕೃತಿಯ ನಿಜವಾದ ಸಾಹಿತ್ಯಿಕ ಮೌಲ್ಯವು ಸಾಮಾನ್ಯ ಓದುಗರಿಗೆ ತಲುಪುವುದು. ಪ್ರೊ. ಜಿ. ವೆಂಕಟಸುಬ್ಬಯ್ಯನವರ ಈ ಮೌಲಿಕ ಮುನ್ನಡಿಯು ಸುಧಾರ್ಥಿಯ ಪಾಲಿಗೆ ಒಂದು ಜೀವಿತದ ಮಹತ್ಸಾಧನೆ.
ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರಗಳ ವಿಚಾರವಿರಲೀ;  ’ನೊಬೆಲ್’ ಅಥವಾ ’ಪುಲಿಟ್ಜರ್ ’ಪ್ರಶಸ್ತಿಗಿಂತಲೂ  ಈ ಮುನ್ನುಡಿಯು ಮೇಲ್ಮಟ್ಟದ್ದೆಂಬ ಹೆಮ್ಮೆ ಸುಧಾರ್ಥಿಗಿದೆ.   ಯಾವುದೇ ಪ್ರಶಸ್ತಿ, ಪುರಸ್ಕಾರಕ್ಕಾಗಿ ಹಂಬಲಿಸಿ;  ಅದನ್ನು ಪಡೆಯಲು ಪಡಬಾರದ ಯಾತನೆ ಪಡುವ ವಿಚಾರದಲ್ಲಿ ಈತ  ಶಕ್ತಿ ಹೀನ! ಅದರಲ್ಲಿ ಈತನಿಗೆ ಆಸಕ್ತಿಯೂ ಇಲ್ಲ!!
ಇದೇ ಸಮಸ್ಯೆಯು ಸಾಮಾಜಿಕ ಜಾಲತಾಣದಲ್ಲೂ  ತಲೆಹಾಕುವುದರಲ್ಲಿ ಅಚ್ಚರಿಯೇನಿಲ್ಲ. ಇದರೊಂದಿಗೆ ಇಲ್ಲಿನ ಓದುಗರ ಮನೋಭಾವವೂ ತನ್ನದೇ ಆದ ಪರಿಧಿಯನ್ನುಹೊಂದಿರುತ್ತದೆ. ಓದುವ ಹವ್ಯಾಸವೇ ಕಡಿಮೆ. ಏನಿದ್ದರೂ ಬಣ್ಣ ಬಣ್ಣದ ಚಿತ್ರಗಳು ಮತ್ತು ಸಂಕ್ಷಿಪ್ತ ಮಾಹಿತಿಗಳಿಗೆ ಮಾತ್ರ ಇಲ್ಲಿ ಆಧ್ಯತೆ!
ಲೇಖನವು ಚಿತ್ರರಹಿತವಾಗಿದ್ದು, ದೀರ್ಘವಾಗಿದ್ದರಂತೂ ಅದರತ್ತ ಗಮನಹರಿಸುವವರ ಸಂಖ್ಯೆ  ಒಬ್ಬಿಬ್ಬರುಮಾತ್ರ!  ಇಂಥಪರಿಸರದಲ್ಲಿಯೂ ಈ ಸಿರಿಭೂವಲಯದ ಮಾಹಿತಿಗಳನ್ನು ಈ ಬರಡುಭೂಮಿಯಲ್ಲಿ ಬಿತ್ತಿ ಅದರಲ್ಲಿಯೂ ಅಲ್ಪಸ್ವಲ್ಪ ಫಸಲನ್ನು ತೆಗೆದದ್ದಾಯಿತು!
ನಿಜಕ್ಕೂ ಅತಿದೀರ್ಘವಾದ ಲೇಖನಗಳನ್ನು  ಪ್ರತಿದಿನವೂ ಧಾರಾವಾಹಿಯರೂಪದಲ್ಲಿ ಬರೆದು ಪ್ರಕಟಿಸಿ, ಸುಮಾರು ಹತ್ತುಜನಗಳ ಪರಿಧಿಯಲ್ಲಿ ಈ ಕಾವ್ಯದ ಮಾಹಿತಿಯು ಜನರ ಆಸಕ್ತಿಯನ್ನು ಸೆಳೆಯುವಂತೆ ಮಾಡುವಲ್ಲಿ ಯಶಸ್ಸುಪಡೆದದ್ದಾಗಿದೆ!
೧೯೫೬ ರರ ಸುಮಾರಿನಲ್ಲಿ ಡಾ|| ಎಸ್. ಶ್ರೀಕಂಠಶಾಸ್ತ್ರಿಯವರು ’ಈ ಸಿರಿಭೂವಲಯವು ಜಗತ್ತಿನಲ್ಲಿ ೫-೬ ಜನಗಳ ಆಸಕ್ತಿಯ ಕಾವ್ಯ’ ಎಂದು ಸೂಚಿಸಿದ್ದಿದ್ದೆ! ಈಗ ೨೦೨೦ರ ಸುಮಾರಿನಲ್ಲಿ ಕರ್ನಾಟಕದಲ್ಲಿಯೇ ಸುಮಾರು ೧೦ಕ್ಕೂ ಹೆಚ್ಚಿನ ಸಿರಿಭೂವಲಯದ  ಆಸಕ್ತರು ಇರುವಂತಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಲ್ಲವೇ!?
ಒಬ್ಬರು ಓದುಗ ಮಿತ್ರರಂತೂ ’fb ನಲ್ಲಿ ಉದ್ದುದ್ದದಲೇಖನ ಹಾಕಿದರೆ ಯಾರೂ ಅದರತ್ತ ಗಮನಹರಿಸುವುದಿಲ್ಲವೆಂಬ ವಿಚಾರವಿತ್ತು. ನಿಮ್ಮ ಬರಹಗಳಿಗೆ ’ಇಷ್ಟ’ ಹಾಕುವವರ ಸಂಖ್ಯೆ ಗಮನಿಸಿದರೆ, ನಿಮ್ಮ ಬರಹಕ್ಕೂ ಓದುಗರು ಇರುವುದು ತಿಳಿಯುತ್ತದೆ!’ ಎಂದು ಅಚ್ಚರಿ ಸೂಚಿಸಿರುವುದುಂಟು!!
  ಸಾಹಿತ್ಯ ಮಾತ್ರವಲ್ಲ; ಸಂಗೀತ, ನಾಟಕ, ಚಲನಚಿತ್ರರಂಗ, ದೂರದರ್ಶನದ ಕಿರುತೆರೆ ಇತ್ಯಾದಿ ಯಾವುದೇ  ಕ್ಷೇತ್ರದಲ್ಲಿ ಪ್ರವೇಶಿಸುವ ವ್ಯಕ್ತಿಗೂ,  ಅವನ/ಅವಳ ಪೂರ್ವಾರ್ಜಿತ ಸುಕೃತದ ಬಲವಿದ್ದಲ್ಲಿಮಾತ್ರವೇ ಅವರಿಗೆ ಅಲ್ಲಿ ಯಶಸ್ಸು, ಪ್ರೋತ್ಸಾಹ, ಪ್ರಚಾರ, ಪ್ರಶಸ್ತಿ, ಪುರಸ್ಕಾರ  ಜನಮನ್ನಣೆ ಇತ್ಯಾದಿಗಳು ಲಭಿಸುತ್ತವೆ. ಇಲ್ಲವಾದಲ್ಲಿ ಎಷ್ಟೇ ಉನ್ನತವಾದ ಪ್ರತಿಭೆ ಇದ್ದರೂ ಅದು ಯಾರಗಮನಕ್ಕೂ ಬಾರದೇ, ಮೂಲೆಗುಂಪಾಗುವುದು ಸಹಜ.
 ಈ ವಾಸ್ತವ ಸತ್ಯವನ್ನರಿತಿರುವ ಕಾರಣದಿಂದಾಗಿಯೇ ಸಿರಿಭೂವಲಯದ ಸುಧಾರ್ಥಿಯು ಇದಾವುದಕ್ಕೂ ಆಶಿಸದೇ, ಕೇವಲ ಕನ್ನಡಭಾಷೆಯ ಮಹತ್ವವನ್ನುಳ್ಳ ಈ ’ಸಿರಿಭೂವಲಯ’ ಕಾವ್ಯದ ಪ್ರಚಾರದಿಂದ ಒಂದು ರೀತಿಯ ಅವರ್ಣನೀಯವಾದ ಸಂತೋಷ. ತೃಪ್ತಿ ಸಿಗುವುದೆಂಬುದನ್ನು ಅನುಭವಿಸುತ್ತ ನಿರ್ಲಿಪ್ತನಾಗಿ ಈ ಕಾರ್ಯದಲ್ಲಿ ಮುಂದುವರೆಯಲು ಅವಕಾಶವಾಗಿದೆ. ನಿರಪೇಕ್ಷವಾದ ಈ ಸಾರ್ಥಕ  ಕಾರ್ಯಕ್ಕೆ ಇದಕ್ಕಿಂತ ಮಿಗಿಲಾದ ’ಪ್ರಚಾರ’ ಇರುವುದೇನು!!??
   -ಸಿರಿಭೂವಲಯದಸುಧಾರ್ಥಿ. 

Wednesday 19 February 2020

ಸಿರಿಭೂವಲಯದಲ್ಲಿ ಸ್ತಂಬಕಾವ್ಯರೂಪದ ಅಂತರ್ಸಾಹಿತ್ಯವಾಗಿ ಉಗಮವಾಗುವ ಇಂದ್ರಾಕ್ಷೀಸ್ತೋತ್ರಸಾಹಿತ್ಯ


ಕುಮುದೇಂದುಮುನಿಯ ಸಿರಿಭೂವಲಯದಲ್ಲಿ ಪ್ರಥಮಖಂಡದ ೫೯ ಅಧ್ಯಾಯಗಳ ಪೈಕಿ ೪೧ನೇ ಅಧ್ಯಾಯದಿಂದ ೫೯ನೇ ಅಧ್ಯಾಯದವರೆವಿಗೆ  ಪೂರ್ಣ ಪದ್ಯಗಳ ೩ನೇ ಪಾದದ ಬೇರೆ ಬೇರೆ ಶ್ರೇಣಿಗಳಲ್ಲಿ ಶ್ರೀ ಮಾರ್ಕಾಂಡೇಯ ಪುರಾಣೋಕ್ತ ಇಂದ್ರಕೃತ 'ಇಂದ್ರಾಕ್ಷೀಸ್ತೋತ್ರ'ವು ಕೆಲವು ಶ್ರೇಣಿಗಳಲ್ಲಿ ಮೇಲಿನಿಂದ ಕೆಳಕ್ಕೂ, ಕೆಲವು ಶ್ರೇಣಿಗಳಲ್ಲಿ ಕೆಳಗಿನಿಂದ ಮೇಲಕ್ಕೂ ಪ್ರವಹಿಸಿರುವುದನ್ನು ಕಾಣಬಹುದು.
ಈ ರೀತಿಯಲ್ಲಿ ಪ್ರವಹಿಸಿರುವ ಯಾವುದೇ ಶ್ರೇಣಿಯಲ್ಲೂ ಈ ಸ್ತೋತ್ರಸಾಹಿತ್ಯವು ನಾವು ಈಗ ಬಳಸುತ್ತ್ತಿರುವ ಕ್ರಮದಲ್ಲಿ ಒಂದೇ ಧಾರೆಯಾಗಿ ಸಾಗುವುದಿಲ್ಲ! ಈ ಸಾಹಿತ್ಯವನ್ನು ಸ್ತಂಬಕಾವ್ಯದ ಶ್ರೇಣಿಯಲ್ಲಿ ಪುನಃ ಅಶ್ವಗತಿಯಲ್ಲಿ ಸಾಗುತ್ತಾ ಪ್ರತ್ಯೇಕವಾಗಿ ಬರೆದುಕೊಂಡು ಸಮರ್ಪಕವಾದ ಪೂರ್ಣಪಾಠವನ್ನು ಪಡೆಯಬೇಕಾಗುತ್ತದೆ.  ಸ್ತೋತ್ರಾರಂಭದಲ್ಲಿ ಅಂಗನ್ಯಾಸ, ಹೃದಯನ್ಯಾಸ,  ದಿಗ್ಭಂಧನ ಹಾಗೂ ದಿಗ್ವಿಮೋಚನಕ್ರಮವನ್ನು ಅಳವಡಿಸಿರುವುದು ವಿಶೇಷವಾಗಿದೆ.
ಇಲ್ಲಿ ಪ್ರಚಲಿತವಿರುವ ಪೂರ್ಣಪಾಠವನ್ನು ನೀಡಲಾಗಿದೆ. ಇದರೊಂದಿಗೆ ಸಿರಿಭೂವಲಯದಲ್ಲಿ ಉಗಮವಾಗುವ ಸ್ತಂಬಕಾವ್ಯದಲ್ಲಿ ಅಶ್ವಗತಿಯಲ್ಲಿ ಕಾಣಬರುವ ಪಾಠವನ್ನು ತಾಳೆಹಾಕಿದಾಗ ಕೆಲವು ಪಾಠಾಂತರಗಳು ಹಾಗೂ ಹಲವಾರು ಅಕ್ಷರಗಳು ಲೋಪವಾಗಿರುವಂತೆ ಕಾಣುವುದು ಸಹಜ. ಇದಕ್ಕೆ ಪ್ರಮುಖಕಾರಣ ಕವಿಯು ಬಳಸಿರುವ ಗಣಿತಸೂತ್ರಗಳ ಇತಿಮಿತಿ ಹಾಗೂ ನೂರು ಸಾವಿರ ಲಕ್ಷಕೋಟಿ ಶ್ಲೋಕಗಳ ವ್ಯಾಪ್ತಿಯಲ್ಲಿ ಜಗತ್ತಿನ ಎಲ್ಲಭಾಷೆಗಳ ಎಲ್ಲ ಸಾಹಿತ್ಯಕೃತಿಗಳನ್ನೂ ಕಟ್ಟಿರಿಸುವಲ್ಲಿ ಕೆಲವಾರು ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಾದುದು ಕವಿಗೆ ಅನಿವಾರ್ಯವಾಗಿದೆ ಎಂಬುದನ್ನು ಓದುಗರು ಮರೆಯಬಾರದು.
 ಕೆಲವೊಂದು ಪದಗಳ ರಚನೆಯಲ್ಲಿ ಸಾಮಾನ್ಯ ಓದುಗರೂ ಸುಲಭವಾಗಿ ಊಹಿಸಿ ಅರ್ಥಮಾಡಿಕೊಳ್ಳಬಹುದಾದಂಥ ಅಕ್ಷರಗಳ ಲೋಪವನ್ನು ಕುಮುದೇಂದು ಮುನಿಯು ಯಥೇಚ್ಛವಾಗಿ ಮಾಡಿರುವುದನ್ನು ನಾನು ನನ್ನ ಅಧ್ಯಯನ ಸಮಯದಲ್ಲಿ ಗಮನಿಸಿದ್ದೇನೆ. ಇದನ್ನು ವಿದ್ವಾಂಸರು 'ದೋಷ'  ಎಂದು ಪರಿಗಣಿಸಬಾರದು.
ಮನುಷ್ಯನ ದೇಹಾರೋಗ್ಯವು ಕೆಡುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಅವುಗಳಪೈಕಿ, ಏನನ್ನೋ ಕಂಡು ಹೆದರಿದಂತೆ ಭ್ರಮೆಗೊಳಗಾಗುವುದೂ ಒಂದು ಕಾರಣ. ಸುಮಾರು ೭೦ ವರ್ಷಗಳಹಿಂದೆ  ನಾನಿನ್ನೂ ಚಿಕ್ಕವನಿದ್ದಾಗ, ನನ್ನ ತಾಯಿ ಹಾಸನದ ಮಿಷಿನ್ ಆಸ್ಪತ್ರೆಯ ಹಿಂಭಾಗದ ರಸ್ತೆಯಲ್ಲಿರುವ( ಈಗಿನ ಹರ್ಷಾಮಹಲ್ ರಸ್ತೆ) ಮನೆಯ ಹಿಂಭಾಗದಲ್ಲಿ ಸಂಜೆಗತ್ತಲಿನಲ್ಲಿ ಪಾತ್ರೆತೊಳೆಯುವಾಗ ಏನೋ ನೆರಳುಕಂಡಂತಾಗಿ ಹೆದರಿದರು. ಅಂದು ರಾತ್ರಿಯಿಂದಲೇ ಅವರಿಗೆ ಚಳಿ ಜ್ವರ ಬರಲಾರಂಭಿಸಿತು.   ಇಂದಿನ ದಿನಗಳಲ್ಲಿ ದೇಹಾರೋಗ್ಯಕೆಟ್ಟಕೂಡಲೇ ವೈದ್ಯರಲ್ಲಿ ಓಡಿಹೋಗುವುದು ಸಾಮಾನ್ಯಸಂಗತಿ! ಆದರೆ ನಮ್ಮ ತಂದೆಯವರು ಈ ಪದ್ಧತಿಗೆ ವಿರುದ್ಧವಾಗಿದ್ದವರು. ತಮ್ಮ ಪತ್ನಿಯ ಅನಾರೋಗ್ಯಕ್ಕೆ ಆಕೆ ಹೆದರಿರುವುದೇ ಕಾರಣವೆಂದು ಖಚಿತವಾಗಿ ತಿಳಿದುಕೊಂಡು, ಕೂಡಲೇ ಬೆಳಗಿನಜಾವ ಹಾಗೂ ಸಂಜೆಯವೇಳೆಯಲ್ಲಿ ಇಂದ್ರಾಕ್ಷೀ ಸ್ತೋತ್ರ ಹಾಗೂ ಶಿವಕವಚದ ಪಾರಾಯಣಕ್ಕೆ ಪ್ರಾರಂಭಿಸಿದರು! ಒಂದು ವಾರದ ಅವಧಿಯೊಳಗಾಗಿ ನನ್ನ ತಾಯಿಯ ಆರೋಗ್ಯ ಸುಧಾರಿಸಿತು.  ಸಾಮಾನ್ಯವಾಗಿ ತಲೆದೋರುವ ಇಂಥ ಅನಾರೋಗ್ಯದ ನಿವಾರಣೆಗಾಗಿ ನನ್ನ ತಂದೆಯವರು ತಮ್ಮ ಜೀವಮಾನಪೂರ್ತ ಈ ಜಪದ ಕ್ರಮವನ್ನು ಅನುಸರಿಸುತ್ತಿದ್ದರು. ೧೯೬೫ರ ಸುಮಾರಿನಲ್ಲಿ ಅವರು ಕಾಲವಶರಾದರು. ೧೯೭೫ರ ನಂತರ, ನನಗೂ ಈರೀತಿಯಲ್ಲಿ ಹಲವಾರುಸಲ ಸ್ವಲ್ಪ ಅನಾರೋಗ್ಯ ಉಂಟಾದಕಾರಣ ನಾನೂ ಈ ಪಾರಾಯಣಕ್ರಮವನ್ನು ಪ್ರಯೋಗಿಸಿ, ಯಶಸ್ವಿಯಾಗಿದ್ದೇನೆ.  ಈ ಸ್ತೋತ್ರಸಾಹಿತ್ಯದಲ್ಲಿ ಬರುವ  ”ಆಯುರಾರೋಗ್ಯಮೈಶ್ವರ್ಯಂ ಜ್ಞಾನಂ ವಿತ್ತಂ ಯಶೋಬಲಂ ಕ್ಷಯಾಪಸ್ಮಾರ ಕುಷ್ಟಾದಿ ತಾಪಜ್ವರನಿವಾರಣಂ| ” ಇಂದ್ರಸ್ತೋತ್ರಮಿದಂ ಪುಣ್ಯಂ ಜಪೇ ದಾಯುಷ್ಯ ವರ್ಧನಂ|” ವಿನಾಶಾಯಚ ರೋಗಾಣಾಮಪಮೃತ್ಯು ಹರಾಯಚ ”|ಎಂಬುದನ್ನು ನಾನು ಪ್ರಾಯೋಗಿಕವಾಗಿ ಪರಿಶೀಲಿಸಿದ್ದಾಗಿದೆ.
”ಶತಮಾವರ್ತಯೇ ದ್ಯಸ್ತು ಮುಚ್ಯತೇ ವ್ಯಾಧಿಬಂಧನಾತ್|
ಆವರ್ತಯೇತ್ ಸಹಸ್ರಂತು ಲಭತೇ ವಾಂಛಿತಂ ಫಲಂ| ” -ಅಂದರೆ, ನೂರುಸಲ ಈ ಮಂತ್ರಜಪ ಮಾಡುವುದರಿಂದ ರೋಗಬಂಧನದಿಂದ ಬಿಡುಗಡೆಯಾಗಬಹುದು ಹಾಗೂ ಸಾವಿರಸಲ ಜಪಮಾಡುವುದರಿಂದ ನಾವು ಇಚ್ಛಿಸಿದ ಫಲವು ದೊರೆಯುತ್ತದೆ’ ಎಂಬುದನ್ನು ಶಕ್ತಿಇರುವವರು ಪರೀಕ್ಷಿಸಿ ಫಲ ಪಡೆಯಬಹುದಾಗಿದೆ.
ಶ್ರೀಮನ್ಮಾರ್ಕಂಡೇಯ ಪುರಾಣೋಕ್ತ
   ಇಂದ್ರಕೃತ ಶ್ರೀಮದಿಂದ್ರಾಕ್ಷೀಸ್ತೋತ್ರಂ

ಓಂ ಅಸ್ಯ ಶ್ರೀ ಇಂದ್ರಾಕ್ಷೀಸ್ತೋತ್ರ ಮಹಾಮಂತ್ರಸ್ಯ| ಶಚೀಪುರಂದರ ಋಷಿಃ|
ಅನುಷ್ಟುಪ್ಛಂದಃ| ಇಂದ್ರಾಕ್ಷೀ ದೇವತಾ| ಮಹಾಲಕ್ಷ್ಮೀರಿತಿ ಬೀಜಂ
ಭುವನೇಶ್ವರೀ ಶಕ್ತಿಃ -ಭವಾನೀತೀ ಕೀಲಕಂ-
ಮಮ ಇಂದ್ರಾಕ್ಷೀ ಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ|
ಇಂದ್ರಾಕ್ಷೀಂ ಅಂಗುಷ್ಟಾಭ್ಯಾಂನಮಃ| ಮಹಾಲಕ್ಷ್ಮೀ ತರ್ಜನೀಭ್ಯಾ ನಮಃ|
ಮಾಹೇಶ್ವರೀಂ ಮಧ್ಯಮಾಭ್ಯಾಂನಮಃ| ಅಂಬುಜಾಕ್ಷೀಂ
ಅನಾಮಿಕಾಭ್ಯಾಂನಮಃ| ಕಾತ್ಯಾಯನೀಂ ಕನಿಷ್ಠಿಕಾಭ್ಯಾಂ ನಮಃ|
ಕೌಮಾರೀಂ ಕರತಲಪೃಷ್ಠಾಭ್ಯಾಂನಮಃ| ಇಂದ್ರಾಕ್ಷೀಂ ಹೃದಯಾಯನಮಃ|
ಮಹಾಲಕ್ಷ್ಮೀ ಶಿರಸೇಸ್ವಾಹಾ|  ಮಾಹೇಶ್ವರೀಂ ಶಿಖಾಯೈವಷಟ್|
ಅಂಬುಜಾಕ್ಷೀಂ ಕವಚಾಯಹುಂ| ಕಾತ್ಯಾಯನೀಂ ನೇತ್ರತ್ರಯಾ ಯವಷಟ್|
ಕೌಮಾರೀಂಅಸ್ತ್ರಾಯಫಟ್| ಭೂರ್ಭುವಸ್ಸುವರೋಂಇತಿ ದಿಗ್ಬಂಧಃ|
ಧ್ಯಾನಂ: ನೇತ್ರಾಣಾಂ ದಶಭಿಶ್ಶತೈಃ ಪರಿವೃತಾಮತ್ಯುಗ್ರಚರ್ಮಾಾಂಬರಾಂ
ಹೇಮಾಭಾಂ ಮಹತೀ ವಿಲಂಬಿತಶಿಖಾ| ಮಾಮುಕ್ತಕೇಶಾನ್ವಿತಾಂ|
ಘಂಟಾಮಂಡಿತ ಪಾದಪದ್ಮಯುಗಳಾಂ ನಾಗೇಂದ್ರ ಕುಂಭಸ್ತನೀಂ
 ಇಂದ್ರಾಕ್ಷೀಂ ಪರಿಚಿಂತಯಾಮಿ ಮನಸಾ ಪ್ರತ್ಯಕ್ಷಸಿದ್ಧಿಪ್ರದಾಂ|
ಇಂದ್ರಾಕ್ಷೀಂ ಶಿವಯುವತೀಂ ನಾನಾಲಂಕಾರ ಭೂಷಿತಾಂ|
 ಪ್ರಸನ್ನ ವದನಾಂಭೋಜಾ ಮಪ್ಸರೋಗಣ ಸೇವಿತಾಂ|
ಇಂದ್ರಾಕ್ಷೀಂ ದ್ವಿಭುಜಾಂ ವಂದೇ ಪೀತವಸ್ತ್ರ ದ್ವಯಾನ್ವಿತಾಂ|
ವಾಮಹಸ್ತೇ ವಜ್ರಧರಾ ದಕ್ಷಿಣೇನ ವರಪ್ರದಾಂ| ಇಂದ್ರ ಉವಾಚ|
ಓಂ ಇಂದ್ರಾಕ್ಷೀ ನಾಮ ಸಾ ದೇವಿ ದೈವತಾಸ್ಸಮುದಾಹೃತಾ|
ಗೌರೀ ಶಾಖಾಂಬರಿದೇವೀ ದುರ್ಗಾನಾಮ್ನೀತಿವಿಶ್ರುತಾ|
ನಿತ್ಯಾನಂದೀ ನೀರಾಹಾರೀ ನಿಷ್ಕಳಾಯೈ ನಮೋಸ್ತುತೇ|
ಕಾತ್ಯಾಯನೀ ಮಹಾದೇವೀ ಛಿನ್ನಘಂಟಾ ಮಹಾತಪಾ|
ಸಾವಿತ್ರೀ ಸಾ ಚ ಗಾಯತ್ರೀ ಬ್ರಹ್ಮಾಣೀ ಬ್ರಹ್ಮವಾದಿನೀ|
 ನಾರಾಯಣೀ ಭದ್ರಕಾಳಿ ರುದ್ರಾಣಿ ಕೃಷ್ಣಪಿಂಗಳಾ|
 ಅಗ್ನಿ ಜ್ವಾಲಾ ರೌದ್ರಮುಖೀ ಕಾಳರಾತ್ರೀ ತಪಸ್ವಿನೀ|
ಮೇಘಸ್ವನಾಸಹಸ್ರಾಕ್ಷೀ ವಿಕಟಾಂಗೀ ಜಟೋದರೀ| ಮಹೋದರೀ
 ಮುಕ್ತಕೇಶೀ ಘೋರರೂಪಾ ಮಹಾಬಲಾ| ಅಜಿತಾ ಭದ್ರದಾನಂತಾ
ರೋಗಹರ್ತ್ರೀ ಶಿವಪ್ರಿಯಾ| ಶಿವದೂತಿ ಕರಾಳೀ ಚ ಪ್ರತ್ಯಕ್ಷ ಪರಮೇಶ್ವರೀ|
ಇಂದ್ರಾಣೀ ಇಂದ್ರರೂಪಾ ಚ ಇಂದ್ರಶಕ್ತಿಃ ಪರಾಯಣೇ|
ಸದಾ ಸಂಮೋಹಿನೀದೇವಿ ಸುಂದರೀ ಭುವನೇಶ್ವರೀ|
ಏಕಾಕ್ಷರೀ ಪರಬ್ರಹ್ಮೀ ಸ್ಥೂಲಸೂಕ್ಷ್ಮಪ್ರವರ್ಧಿನೀ|
 ರಕ್ತಾಕ್ಷೀ ರಕ್ತದಂತಾ ಚ ರಕ್ತಮಾಲ್ಯಾಂಬರಾಪರಾ|
 ಮಹಿಷಾಸುರಹಂತೀ ಚ ಚಾಮುಂಡಾ ಖಡ್ಗಧಾರಿಣೀ|
ವಾರಾಹೀ ನಾರಸಿಂಹೀ ಚ ಭೀಮಾ ಭೈರವ ನಾದಿನೀ|
ನಂದಾ ಚ ರಕ್ತದಂತಾ ಚ ಚಕ್ರಧಾರಾ ವಿಭೂಷಿತಾ|
ಶೃತಿಃ ಸ್ಮೃತಿರ್ಧೃತಿರ್ಮೇದಾ ವಿದ್ಯಾ ಲಕ್ಷ್ಮೀ ಸರಸ್ವತೀ|
ಅನಂತಾ ವಿಜಯಾಪರ್ಣಾ ಮಾನಸ್ತೋಕಾಪರಾಜಿತಾ|
ಭವಾನೀ ಪಾರ್ವತೀ ದುರ್ಗಾ ಹೈಮವತ್ಯಂಬಿಕಾ ಶಿವಾ|
ಶಿವಾ ಭವಾನೀ ರುದ್ರಾಣೀ ಶಂಖರಾರ್ಧಶರೀರಿಣೀ|
ನಿತ್ಯಾ ಸಕಲ ಕಲ್ಯಾಣೀ ಸರ್ವೈಶ್ವರ್ಯ ಪ್ರದಾಯಿನೀ|
ದಾಕ್ಷಾಯಿಣೀ ಪದ್ಮಹಸ್ತಾ ಭಾರತೀ ಸರ್ವಮಂಗಳಾ|
ಕಲ್ಯಾಣೀ ಜನನೀ ದುರ್ಗಾ ಸರ್ವದುರ್ಗತಿನಾಶಿನೀ|
ಇಂದ್ರಾಕ್ಷೀ ಸರ್ವಭೂತೇಶೀ ಸರ್ವರೂಪಾ ಮನೋನ್ಮನೀ|
 ಮೃತ್ಯುಂಜಯೀ ಮಹಾಮಾಯಾ ಮಹಾಮಂಗಳದಾಯಿನೀ|
ಐರಾವತ ಗಜಾರೂಢಾ ವಜ್ರಹಸ್ತಾ ಮಹಾಬಲಃ|
 ಈಶ್ವರಾರ್ಧಾಂಗನಿಲಯಾ ವಿಧುಬಿಂಬಾ ನಿಭಾನನಾ|
ಸರ್ವರೋಗಪ್ರಶಮನೀ ಸರ್ವಮೃತ್ಯುವಿನಾಶಿನೀ|
 ಅಪವರ್ಗ ಪ್ರದಾರಮ್ಯಾ ಆಯುರಾರೋಗ್ಯದಾಯಿನೀ|
 ಇಂದ್ರಾದಿ ದೇವಸಂಸ್ತುತ್ಯಾ ಇಹಾಮುತ್ರಫಲಪ್ರದಾ|
ಇಚ್ಛಾಶಕ್ತಿಸ್ವರೂಪಾ ಚ ಇಭವಕ್ತ್ರಾದಿಜನ್ಮಭೂಃ|
ಐಂದ್ರೀದೇವೀ ಮಹಾಕಾಳೀ ಮಹಾಲಕ್ಷ್ಮೀ ನಮೋಸ್ತುತೇ|
ಮಾರ್ಕಂಡೇಯಃ|
ಏತೈ ರ್ನಾಮಪದೈರ್ದೇವ್ಯೈ ಸ್ತುತಾಃ ಶಕ್ರೇಣ ಧೀಮತಾ|
ಪರಿತುಷ್ಟಾವರಂಪ್ರಾದಾ ತಸ್ಮೈದೇವಿತದೀಪ್ಸಿತಂ|
ಆಯುರಾರೋಗ್ಯಮೈಶ್ವರ್ಯಂ ಜ್ಞಾನಂ ವಿತ್ತಂ ಯಶೋಬಲಂ|
ಕ್ಷಯಾಪಸ್ಮಾರ ಕುಷ್ಟಾದಿ ತಾಪಜ್ವರನಿವಾರಣಂ|
 ಶತಮಾವರ್ತಯೇ ದ್ಯಸ್ತು ಮುಚ್ಯತೇ ವ್ಯಾಧಿಬಂಧನಾತ್|
ಆವರ್ತಯೇತ್ ಸಹಸ್ರಂತು ಲಭತೇ ವಾಂಛಿತಂ ಫಲಂ|
ಇಂದ್ರಸ್ತೋತ್ರಮಿದಂ ಪುಣ್ಯಂ ಜಪೇ ದಾಯುಷ್ಯ ವರ್ಧನಂ|
ವಿನಾಶಾಯಚ ರೋಗಾಣಾಮಪಮೃತ್ಯು ಹರಾಯಚ |
ಸರ್ವಮಂಗಳಮಾಂಗಲ್ಯೇ ಶಿವೇ ಸರ್ವಾರ್ಥಸಾಧಕೇ|
ಶರಣೈತ್ರ್ಯಂಬಕೀ ದೇವೀ ನಾರಾಯಣೀ ನಮೋಸ್ತುತೇ|
ಅಪಮೃತ್ಯುಮಪಕ್ಷಧಂ ಅಪೆತಶ್ಯಪಥನ್ಜಹಿ|
ಅಥಾನೋ ಅಗ್ನ ಆವಹ| ರಾಯಸ್ಪೋಷಂಗ್ಂಸಹಸಿಣಂ|
ಏತೇ ಸಹಸ್ರಮಯುತಂ ಪಾಶಾನ್ ಮೃತ್ಯೋ ರ್ಮರ್ತ್ಯಾಯ ಹಂತವೇ|
ತಾನ್ಯಜ್ವಸ್ಯ ಮಾಯಯಾ ಸರ್ವಾನವ ಯಜಾಮಹೇ|
ಮೃತ್ಯವೇಸ್ವಾಹಾ ಮೃತ್ಯವೇಸ್ವಾಹಾ|
ಓನ್ನಮೋ ಭಗವತೇ ರುದ್ರಾಯ ವಿಷ್ಣುವೇ ಮೃತ್ಯುರ್ಮೇಪಾಹಿ|
ಮಮ ಅಪಮೃತ್ಯುರ್ನಶ್ಯಶು| ಆಯರ್ವರ್ಧತಾಂ|
ತ್ರಿಯಂಬಕಂ ಯಾಜಾಮಹೆ ಸುಗಂಧೀಂ ಪುಷ್ಟಿವರ್ಧನಂ|
 ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯಮಾಮೃತಾತ್|
ಮಮ ಅಪಮೃತ್ಯುರ್ನಶ್ಯತು ಆಯುರ್ವರ್ಧತಾಂ||
ಇಂದ್ರಾಕ್ಷೀಂ ಅಂಗುಷ್ಟಾಭ್ಯಾಂನಮಃ|
ಮಹಾಲಕ್ಷ್ಮೀ ತರ್ಜನೀಭ್ಯಾ ನಮಃ|
ಮಾಹೇಶ್ವರೀಂ ಮಧ್ಯಮಾಭ್ಯಾಂನಮಃ|
ಅಂಬುಜಾಕ್ಷೀಂ ಅನಾಮಿಕಾಭ್ಯಾಂನಮಃ|
ಕಾತ್ಯಾಯನೀಂ ಕನಿಷ್ಠಿಕಾಭ್ಯಾಂ ನಮಃ|
ಕೌಮಾರೀಂ ಕರತಲಪೃಷ್ಠಾಭ್ಯಾಂನಮಃ|
ಇಂದ್ರಾಕ್ಷೀಂ ಹೃದಯಾಯನಮಃ|
ಮಹಾಲಕ್ಷ್ಮೀ ಶಿರಸೇಸ್ವಾಹಾ|
ಮಾಹೇಶ್ವರೀಂ ಶಿಖಾಯೈವಷಟ್|
ಅಂಬುಜಾಕ್ಷೀಂ ಕವಚಾಯಹುಂ|
ಕಾತ್ಯಾಯನೀಂ ನೇತ್ರತ್ರಯಾಯವಷಟ್|
ಕೌಮಾರೀಂಅಸ್ತ್ರಾಯಫಟ್|
ಭೂರ್ಭುವಸ್ಸುವರೋಂಇತಿ ದಿಗ್ವಿಮೋಕಃ|
ಇತಿ ಶ್ರೀಮದಿಂದ್ರಾಕ್ಷೀಸ್ತೋತ್ರಂ ಸಂಪೂರ್ಣಂ.
                                   -ಸಿರಿಭೂವಲಯದಸುಧಾರ್ಥಿ. 

ಪಂಚಾಂಗವು ಕಳೆದು ಹೋದಲ್ಲಿ ನಕ್ಷತ್ರವಿರುವುದು ಸುಳ್ಳೆ!!??


ಗ್ರಹತಾರೆಗಳ ಚಲನವಲನಕ್ಕೆ ಸಂಬಂಧಿದ ಮಾಹಿತಿಗಳನ್ನು ಲೆಕ್ಕಹಾಕಿ ತಿಳಿಸುವ ಬರಹ ’ಪಂಚಾಂಗ’  ಕೆಲವೊಮ್ಮೆ ಮನೆಯಲ್ಲಿ ಈ ಪಂಚಾಗವು ಕಳೆದುಹೋಗುವುದುಂಟು!!  ಅಂದಮಾತ್ರಕ್ಕೇ ಆಕಾಶದ ನಕ್ಷತ್ರಗಳು ಕಣ್ಮರೆಯಾಗಿಬಿಡುತ್ತವೆಯೇ!?
ಕೆಲವು ಮೇಧಾವಿಗಳು ’ಸಿರಿಭೂವಲಯ ಎಂಬ ಕಾವ್ಯವಿರುವುದೇ ಸುಳ್ಳು!  ಅದನ್ನು ಕನ್ನಡ ಅಂಕಿಗಳಲ್ಲಿ ಬರೆಯಲಾಗಿದೆ ಎಂಬುದೂ ಅಸಂಬದ್ಧ ಕಲ್ಪನೆ’ ಎಂದು  ಪ್ರಚಾರಮಾಡುತ್ತ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದಿದೆ. 
ಆಕಾಶದಲ್ಲಿ ನಮ್ಮ ಕಣ್ಣೆದುರಿಗೇ ಸೂರ್ಯನು ಪ್ರಖರವಾದ ಬೆಳಕುಬೀರುತ್ತ ಪ್ರಕಾಶಿಸುತ್ತಿದ್ದರೂ, ಅದು ಸುಳ್ಳು, ಕೆಲವರು ಹಬ್ಬಿಸುವ ಭ್ರಮೆ ಎಂದು ಜನಸಾಮಾನ್ಯರನ್ನು ನಂಬಿಸಲು ಸಾಧ್ಯವೇ!!??
ಸಿರಿಭೂವಲಯವು ಕೇವಲ ಅಕ್ಷರಗಳಿಂದ ರಚಿತವಾದ ಕಾವ್ಯವಲ್ಲ; ಅದನ್ನು ಅಂಕಿಗಳಲ್ಲೂ ಬರೆಯಲಾಗಿದೆ. ಇದು ಕೇವಲ ಕನ್ನಡಿಗರಿಗೆ ಸೇರಿದಕಾವ್ಯವಲ್ಲ; ಇದೊಂದು ವಿಶ್ವಕಾವ್ಯ ಎಂಬುದನ್ನು  ಖಚಿತವಾಗಿ ಸೂಚಿಸಿರುವ ಮಾಹಿತಿಯು  ಸಿರಿಭೂವಲಯದಲ್ಲಿ ಅಡಗಿಕುಳಿತಿದೆ!!
ಕಾವ್ಯಾರಂಭದಲ್ಲಿಯೇ ಕವಿಯು ಈ ಮಾಹಿತಿಯನ್ನು ಸೂಚಿಸಿರುವುದನ್ನು ಓದುಗರು ಗಮನಿಸಬಹುದು.. ’ಲಾವಣ್ಯದಂಗಮೈಯ್ಯಾದ ಗೊಮ್ಮಟದೇವ| ಆವಾಗ ತನ್ನ ಅಣ್ಣನಿಗೆ| ಈವಾಗ ಚಕ್ರಬಂಧದಕಟ್ಟಿನೊಳ್ಕಟ್ಟಿ| ದಾವಿಶ್ವಕಾವ್ಯಭೂವಲಯ|| ಎಂದು ಸೂಚಿಸಿರುವುದಿದೆ ಇದಕ್ಕಿಂತ ಸೂಕ್ತವಾದ ಸಾಕ್ಷಿಯನ್ನು ಎಲ್ಲಿಂದ ತರಲು ಸಾಧ್ಯ!!?? ತಮ್ಮ ಸಂಪ್ರದಾಯಕ್ಕೆ ಸಂಬಂಧಿಸಿದ ಇಂಥ ವಜ್ರಗಳ ಗಣಿಯಾದ ಸಿರಿಭೂವಲಯವನ್ನು ಜೈನಸಂಪ್ರದಾಯದ  ಮೇಧಾವಿಗಳೇ  ಈ ರೀತಿಯಲ್ಲಿ ಅನುಚಿತವಾಗಿ ಅಲ್ಲಗಳೆದರೆ; ಬೇರೆಯವರು ಅದನ್ನು ಕುರಿತು ಏನುತಾನೇ ಹೇಳಲುಸಾಧ್ಯ!!!??
                                                                           -ಸಿರಿಭೂವಲಯದಸುಧಾರ್ಥಿ. 

Tuesday 18 February 2020

ಸಿರಿಭೂವಲಯ ಕಾವ್ಯಕ್ಕಿಂತಲೂ ವ್ಯಾಖ್ಯಾನವೇ ಅಧಿಕವಾಗುತ್ತದೆ!!


”ಅಲ್ಪದರಲ್ಲಿ ಅಪಾರವನ್ನು ಅಡಗಿಸಿಡಬಲ್ಲ ಪ್ರಚಂಡ ಮೇಧಾವಿಗಳ ಕಾವ್ಯ ಸಂಪತ್ತನ್ನು ಸರಳವಾಗಿ ವ್ಯಾಖ್ಯಾನ ಮಾಡಲು ಹೊರಟರೆ. ಅವರ ಕಾವ್ಯದ ಪರಿಧಿಗಿಂತಲೂ ಮಿಗಲಾದ ಬರಹವನ್ನು ರೂಪಿಸುವುದಾಗುತ್ತದೆ! ಸಿರಿಭೂವಲಯದ ವ್ಯಾಖ್ಯಾನಕ್ಕೆ ಕೈಹಾಕುವವರಿಗೂ ಇದೇ ಸಮಸ್ಯೆ ಎದುರಾಗುತ್ತದೆ!!
ಸರ್ವಜ್ಞಸ್ವರೂಪಿಯಾದ ಕುಮುದೇಂದುವಿನ ಸಿರಿಭೂವಲಯಕಾವ್ಯವನ್ನು ಅರ್ಥೈಸುವ ಕಾರ್ಯ ಬಹಳ ಶ್ರಮದ್ದು. ಅಲ್ಲಿ ಧ್ವನಿಸುವ ಮಾಹಿತಿಗಳನ್ನು ಯಥಾವತ್ತಾಗಿ ವಿವರಿಸಬೇಕಾದಲ್ಲಿ ಹಲವೆಡೆ ಹಿಂದಿನ ಹಾಗೂ ಮುಂದಿನ ಸಾಂಗತ್ಯಗಳ ಸಂಬಂಧವನ್ನು ಗಮನಿಸಿ, ವಿವರಣೆ ನೀಡಬೇಕಾಗುತ್ತದೆ.
ಆರೀತಿಯಲ್ಲಿ ಕ್ರಮಬದ್ಧವಾದ ಸಮಸಂಜಸ ವಿವರಣೆಯನ್ನು ನೀಡಲು ಹೋದರೆ, ಕಾವ್ಯಕ್ಕಿಂತಲೂ ವ್ಯಾಖ್ಯಾನವೇ ಅಧಿಕವಾಗುತ್ತದೆ! ಈ ಕಾರಣದಿಂದಾಗಿ ಇಲ್ಲಿ ವಿವರಿಸಿರುವ ಕೆಲವಾರು ಸಾಂಗತ್ಯಪದ್ಯಗಳಿಗೆ  ಸಾಧ್ಯವಿರುವಷ್ಟೂ ಸಂಕ್ಷಿಪ್ತವಾದ- ಪರಿಚಯಕಾರನ ಸೀಮಿತ ಪರಿಧಿಯ ವ್ಯಾಪ್ತಿಯಲ್ಲಿ - ವಿವರಣೆಯನ್ನು ನೀಡಲಾಗಿದೆ.  ಕವಿಯು ಬಳಸಿರುವ ಪದಗಳ ನಾನಾ ರೀತಿಯ ಅರ್ಥಗಳ ಪರಿಚಯವಿರುವವರು ಈ ಕಾರ್ಯದಲ್ಲಿ ಪರಿಪೂರ್ಣತೆಯನ್ನು ತೋರಬಹುದೆಂದು ಸುಧಾರ್ಥಿಯು ಭಾವಿಸಿದ್ದಾನೆ.
                                                            ಸಿರಿಭೂವಲಯದಸುಧಾರ್ಥಿ.  

Monday 17 February 2020

ಸಿರಿಭೂವಲಯದಲ್ಲಿ ಚಿನ್ನತಯಾರಿಸುವ ’ರಸವಿದ್ಯೆ’ ಇರುವುದು ನಿಜವೇ!!??


ಕುಮುದೇಂದುಮುನಿಯ ಸಿರಿಭೂವಲಯಕಾವ್ಯದಲ್ಲಿ ಪಾದರಸದಂಥ ಕ್ಷುದ್ರ ಲೋಹವನ್ನು ಚಿನ್ನವನ್ನಾಗಿ ಪರಿವರ್ತಿಸುವ ರಸಸಿದ್ಧಾಂತವಿದೆ ಯೆಂಬ ಆಕರ್ಷಣೀಯ ವಿಚಾರವು ೧೯೨೮ರ ಸುಮಾರಿನಿಂದಲೂ ಕನ್ನಡದ ವಿದ್ವತ್ ಲೋಕದಲ್ಲಿ ವ್ಯಾಪಿಸಿರುವ ವ್ಯಾಧಿಯಾಗಿತ್ತು!!
ಕುಮುದೇಂದು ಮುನಿಯು ತನ್ನ ಕಾವ್ಯದಲ್ಲಿ  ರಸಸಿದ್ಧಾಂತದ ವಿವರ ನೀಡಿದ್ದಾನೆ. ಅದನ್ನ ಓದಿ ತಿಳಿದುಕೊಂಡುಬಿಟ್ಟರೆ, ಮನೆಯಲ್ಲೇ ಯಥೇಚ್ಛವಾಗಿ ಚಿನ್ನತಯಾರಿಸಿಕೊಂಡು  ಶ್ರೀಮಂತರಾಗಬಹುದೆಂಬ ಭ್ರಮೆ ಅಕ್ಷರಸ್ತರಲ್ಲಿ ಹಬ್ಬಿದ್ದುಂಟು! 
 ಸಿರಿಭೂವಲಯದ ಅಂಕಚಕ್ರಗಳನ್ನು ಹೊಂದಿದ್ದ ದೊಡ್ಡಬೆಲೆ ಧರಣೇಂದ್ರಪಂಡಿತರು ಕಾಲವಶರಾದನಂತರ,  ಅವರ ಸಮೀಪಬಂಧುವಾದ ಬೆಂಗಳೂರು ನಿವಾಸಿ ಯಲ್ಲಪ್ಪಶಾಸ್ತ್ರಿಯವರ ಸುಪರ್ಧಿಗೆ ಈ ಅಂಕಚಕ್ರಗಳ ರಾಶಿಯು  ಹಸ್ತಾಂತರವಾದ ಹಿನ್ನೆಲೆಯಲ್ಲಿಯೂ ಈ ಚಿನ್ನತಯಾರಿಕೆಯ ತಂತ್ರವು’ ಪ್ರಮುಖಪಾತ್ರವಹಿಸಿತ್ತು!
 ಬೆಂಗಳೂರಿನ ಯಲ್ಲಪ್ಪಶಾಸ್ತ್ರಿಗಳ ಸ್ವಾಧೀನದಲ್ಲಿದ್ದ ಈ ಅಂಕಚಕ್ರಗಳನ್ನು  ೧೯೨೮ರ ಸುಮಾರಿನಲ್ಲಿ  ಆಕಸ್ಮಿಕವಾಗಿ ನೋಡಿ, ಅದರ ಸಂಪರ್ಕಕ್ಕೆ ಬಂದ ಕೆ. ಶ್ರೀಕಂಠಯ್ಯನವರೂ  ಖಾಸಗೀ ಪ್ರಯೋಗದ ಮೂಲಕ ದ್ರವರೂಪದ ಪಾದರಸವನ್ನು ಸಂಸ್ಕರಿಸಿ,  ಅದನ್ನು ಒಂದು ಗೋಲಿಯರೂಪಕ್ಕೆ ಪರಿವರ್ಥಿಸಿದ್ದು ಒಂದು ಚಾರಿತ್ರಿಕ ಸಂಗತಿ. ಮುಂದಿನ ಹಂತದ ಪ್ರಯೋಗವನ್ನು ನಿಲ್ಲಿಸಿ,  ಅವರು ಈ ವಿಚಾರದಲ್ಲಿ ತಟಸ್ಥರಾದುದು ಒಂದು ವಿಚಿತ್ರ ಘಟನೆ.
 ಇಂದಿಗೂ ಕೆಲವರಲ್ಲಿ ಈ ಚಿನ್ನತಯಾರಿಸುವ ಭ್ರಮೆ ಉಳಿದಿರುವುದು ನಿಜ!!  ಪ್ರಥಮ ಖಂಡದ ಮೊದಲನೇ ಅಧ್ಯಾಯದ ಮಧ್ಯಂತರದಲ್ಲೇ ಕವಿಯು ಈವಿಚಾರ ಸೂಚಿಸಿರುವುದನ್ನು ಸುಧಾರ್ಥಿಯು  ಗಮನಿಸಿರುವುದಿದೆ. ಸುಧಾರ್ಥಿಯು ಸಿರಿಭೂವಲಯದ ಅಂತರ್ಸಾಹಿತ್ಯವನ್ನು ಯಶಸ್ವಿಯಾಗಿ  ವಿಂಗಡಿಸಿ, ಕಾವ್ಯಾಂತರ್ಗತವಾದ ವಿಸ್ಮಯಕರವಾದ ಹಲವಾರು ಮಾಹಿತಿಗಳನ್ನು ಪ್ರಕಟಿಸುವಮೊದಲೇ ೨೦೦೫-೨೦೧೦ರ ಸುಮಾರಿನಲ್ಲಿ ಹಲವಾರು ಆಸಕ್ತರು ಈವಿಚಾರಕ್ಕಾಗಿ ಸುಧಾರ್ಥಿಯನ್ನು ಸಂಪರ್ಕಿಸಿ ಪರೋಕ್ಷವಾಗಿ ಈ ಬಗ್ಗೆ ವಿಚಾರಿಸಿದ್ದುಂಟು! 
ಸಿರಿಭೂವಲಯಕಾವ್ಯದ ಪ್ರಥಮಖಂಡದ ಪ್ರಾರಂಭದಲ್ಲೇ ಕುಮುದೇಂದು ಮುನಿಯು ಈ ರಸಸಿದ್ಧಾಂತದವಿಚಾರವಾಗಿ ಮಾಹಿತಿ ನೀಡಿರುವುದುಂಟು!! ಆದರೆ ಅದು  ”ಕ್ಷುದ್ರಲೋಹವನ್ನು ಚಿನ್ನವನ್ನಾಗಿ ಪರಿವರ್ತಿಸುವ ’ರಸಸಿದ್ಧಾಂತ’ವಲ್ಲ,  ಹಲವಾರು ಜನ್ಮಗಳಿಂದ ಕಿಲುಬುಗಟ್ಟಿದ ಆತ್ಮವನ್ನು ಪುಟಕ್ಕಿಟ್ಟು  ಚಿನ್ನದಂತೆ ಪರಿಶುದ್ಧಗೊಳಿಸುವ ಪರಮಪದ  ರಸಸಿದ್ಧಾಂತ ” ಎಂದು ಸುಪ್ರಸಿದ್ಧ ವಿದ್ವಾಂಸ ಸ್ವರ್ಗೀಯ ಎಸ್. ಕೆ. ರಾಮಚಂದ್ರರಾಯರು ಸೂಕ್ತವಾಗಿ ವಿವರಿಸಿರುವುದಿದೆ!!
 ಆದಾಗ್ಯೂ ಸಿರಿಭೂವಲಯದಲ್ಲಿ ಪಾದರಸವನ್ನು ಚಿನ್ನವನ್ನಾಗಿ ಪರಿವರ್ತಿಸುವ ’ರಸವಿದ್ಯೆ’ ಯನ್ನು ವಿವರಿಸಿರುವುದು ನಿಜ!  ನಾಗಾರ್ಜುನನೆಂಬ ಚಾರಿತ್ರಿಕ ವ್ಯಕ್ತಿಯು  ಬಹಳ ಸುಲಭವಾಗಿ ಈ ರಸಸಿದ್ಧಾಂತವನ್ನು ಅರಿತಿದ್ದನೆಂಬ ಮಾಹಿತಿಯನ್ನೂ ಕಾವ್ಯದಲ್ಲಿ  ಸೂಚಿಸಲಾಗಿದೆ.
 ಈ ರಸಸಿದ್ಧಾಂತದಲ್ಲಿ ಬೇಕಾಗುವ ಭೂ ಕಮಲ, ಜಲಕಮಲ, ಬೆಟ್ಟದ ಕಮಲಗಳ ವಿಚಾರ ಸೂಚಿಸಲಾಗಿದೆ. ’ಥಣ ಥಣವೆನ್ನುವ ರಸಮಣಿಯೌಷದ|ಗಣಿತವಮ್ ನಾಗಾರ್ಜುನನು| ಕ್ಷಣದೊಳಗರಿದನು ಗುರುವಿಂದಲಾತನು|ಗುಣಿಸುತಲೆಂಟುಕರ್ಮವನು||’  ಎಂದು ಸೂಚಿಸಿರುವುದಿದೆ.
ನಾಗಾರ್ಜುನನಿಗೆ ಕ್ಷಣಮಾತ್ರದಲ್ಲಿ ಈ  ಗಣಿತಾತ್ಮಕವಾದ ರಸಸಿದ್ಧಾಂತವು ವಶವಾಯಿತೆಂದಮೇಲೆ, ನಾವೂ ಪ್ರಯತ್ನಿಸಿ ಸಿದ್ಧಿಪಡೆಯಬಾರದೇಕೆ? ಎಂಬ ಆಲೋಚನೆ ಕೆಲವು ಮೇಧಾವಿಗಳ ಮನಸಿನಲ್ಲಿ ತಲೆಹಾಕುವುದು ಸಹಜ!!  ಆದರೆ, ಅದು  ಅಷ್ಟು ಸುಲಭದ ವಿದ್ಯೆಯಲ್ಲ!!!
 ದೇಹಾಂತರ್ಗತವಾದ ಆತ್ಮಕ್ಕೆ ಜನ್ಮ ಜನ್ಮಾಂತರಗಳಿಂದ ಅಂಟಿಬಂದಿರುವ ಅಷ್ಟಕರ್ಮಗಳ ಗುಣಾಕಾರವನ್ನರಿಯದೇ ; ಅವುಗಳನ್ನು ಶೂನ್ಯಗೊಳಿಸಿದಲ್ಲದೇ ಈ ರಸಸಿದ್ಧಾಂತವು ಕರಗತವಾಗಲಾರದು!  ಇದನ್ನೂ ಮೀರಿ, ಸೂಕ್ತವಾದ ಪರಿಕರಗಳೊಂದಿಗೆ ಪ್ರಯೋಗವು ಯಶಸ್ವಿಯಾದರೂ ಈ ಸಿದ್ಧಿಯ ಫಲ ದುರುಪಯೋಗವಾದಲ್ಲಿ ಸಾಧಕನು ಸರ್ವನಾಶವಾಗುವುದು ನಿಶ್ಚಯವೆಂಬ ಆಧುನಿಕ ಇತಿಹಾಸವೂ ಈ ಕಾವ್ಯಕ್ಕೆ ಸಂಬಂಧಿಸಿದ ಇದುವರೆಗಿನ ವ್ಯವಹಾರದಲ್ಲಿ ಅಡಕವಾಗಿದೆ!!
                                  - ಸಿರಿಭೂವಲಯದಸುಧಾರ್ಥಿ.

Sunday 16 February 2020

ಸಿರಿಭೂವಲಯದಲ್ಲಿ ನಾಟ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಒಂದು ಅಪರೂಪದ ಸಂಸ್ಕೃತ ಸಾಹಿತ್ಯದ ತುಣುಕುತುಣುಕು


ಸಿರಿಭೂವಲಯಕಾವ್ಯದ ಪ್ರಥಮಖಂಡದ ೪೫ ನೇ ಅಧ್ಯಾಯದಿಂದ  ೫೪ನೇ ಅಧ್ಯಾಯದವರೆವಿಗೂ ಪೂರ್ಣಪದ್ಯಗಳ ೪ನೇ ಪಾದದ ಕೊನೆಯಿಂದ ೪ನೇ ಅಕ್ಷರಹಿಡಿದು ಕೆಳಗಿಳಿದಾಗ ದೊರೆಯುವ ಸ್ತಂಬಕಾವ್ಯದ ಅಕ್ಷರ ಸರಪಣಿಯಲ್ಲಿ ಪುನಃ ಅಶ್ವಗತಿಯಲ್ಲಿ ಸಾಗಿದಾಗ ನಾಟ್ಯಶಾಸ್ತ್ರಕ್ಕೆ ಸಂಬಂಧಿಸಿದ ಈ ಸಾಹಿತ್ಯಭಾಗವು ಪ್ರವಹಿಸಿರುವುದನ್ನು ಕಾಣಬಹುದು.
 ಅಲ್ಲಿ ಕೆಲವೊಂದು ಅಕ್ಷರಗಳು ಲೋಪವಾಗಿರುವುದಿದೆ. ಕೆ. ಶ್ರೀಕಂಠಯ್ಯನವರು ಸೂಚಿಸಿರುವ ಪೂರ್ಣಪಾಠದ ಆಧಾರದಲ್ಲಿ ಈ ಭಾಗದ ಸಾಹಿತ್ಯವನ್ನು ಪರಿಷ್ಕರಿಸಲಾಗಿದೆ.
 ಈ ನರ್ತನಶಾಸ್ತ್ರಕ್ಕೆ ಸಂಬಂಧಿಸಿದ ಭಾಗವನ್ನು ವೇದಿಕೆಯಮೇಲೆ ಪ್ರದರ್ಶಿಸಲು ಅಪೇಕ್ಷೆಹೊಂದಿದ ಸುಧಾರ್ಥಿಯು ಹಾಸನದ ಪ್ರಸಿದ್ಧ ನೃತ್ಯ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅಂಬಳೆ ರಾಜೇಶ್ವರಿಯವರ ಗಮನಕ್ಕೆ ಈ ಮಾಹಿತಿಯನ್ನು ತಂದದ್ದಾಯಿತು. ಅವರು ಇದರ ಮಹತ್ವನನ್ನು ಗಮನಿಸಿ ತಮ್ಮ ಶಿಷ್ಯೆಯರಲ್ಲಿ ಒಬ್ಬರಿಗೆ ಸೂಕ್ತ ತರಬೇತಿ ನೀಡಿದರು.
 ೨೦೧೪ರಲ್ಲಿ ಹಾಸನದ ರೋಟರಿಕ್ವಾಂಟಾದವರು ಇಲ್ಲಿನ ಜಿಲ್ಲಾ ಕನಡಸಾಹಿತ್ಯಪರಿಷತ್ತಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ’ಸಿರಿಭೂವಲಯದ ಪರಿಚಯ’ ಕಾರ್ಯಕ್ರಮದಲ್ಲಿ  ಶ್ರೀಮತಿ ರಾಜೇಶ್ವರಿಯವರು  ಸೀಮಿತವಾದ ಪರಿಕರದೊಂದಿಗೆ  ಕುಮಾರಿ ಸೀಮಾ ನಾರಾಯಣ ಅವರಿಂದ ಈ ಕಾವ್ಯಭಾಗದ ನೃತ್ಯಪ್ರದರ್ಶನ ನಡೆಸಿಕೊಟ್ಟರು.  ಅಂದಿನ ನೃತ್ಯ ಕಾರ್ಯಕ್ರಮವು  ಕುಮುದೇಂದು ಮುನಿಯ ಈ ಕಾವ್ಯಭಾಗದ ಸೊಗಸನ್ನು ಪ್ರೇಕ್ಷಕರಿಗೆ ರಂಜನೀಯವಾಗಿ ಪರಿಚಯಿಸುವುದರಲ್ಲಿ ಯಶಸ್ವಿಯಾಯಿತು.  ರಾಜೇಶ್ವರಿಯವರು ಹಾಗೂ ಅವರ ಶಿಷ್ಯೆ ಸೀಮಾನಾರಾಯಣ ಅವರ ಅಭಿಮಾನಕ್ಕೆ ಅನಂತವಂದನೆಗಳು.
 ಇಂಥ ಪ್ರಾಚೀನ ಪರಂಪರೆಯನ್ನು ಪ್ರತಿನಿಧಿಸುವ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ವ್ಯವಸ್ಥೆಗೊಳಿಸಲು   ಇಂದಿನ ಜನರು  ಆಸಕಿವಹಿಸುವುದಿಲ್ಲವೆಂಬುದು ವ್ಯಸನದಸಂಗತಿಯಾಗಿದೆ.
*  *  *
 ಶ್ರೀವಾಸುದೇವಂ ವಸುಪೂಜ್ಯನಾಥಂ|
ಸುದೇವ ಪೂಜ್ಯಂ ಖಗಭತೃ ಪೂಜ್ಯಂ|
ಸದ್ಧರ್ಮಬೀಜಂ ವರ ಬೋಧಬೀಜಂ|
ಸುಶರ್ಮಕಾರಂ ಪ್ರಣಮಾಮಿ ನಿತ್ಯಂ||೧||

ವ್ಯಂತರೀ ಕಿನ್ನರೀ ಸ್ವರ್ಗದೇವಾಮರೀ|
ಭೂಚರೀ ಖೇಚರೀ ಸರ್ವವಿದ್ಯಾಧರೀ|
ಹಾವಭಾವ ವಿಲಾಸ ಸಂಸದಾ ಸುಂದರಾ|
ಣಚ್ಚ ಈಅಪ್ಸರಾ ದಿವ್ಯರೂಪಾಧರಾ||೨||

ಧುಮಿ ಧುಮಿ ಧುಮಿ ಧುಮಿ ಮದ್ದಲಾವಜ್ಜಯಾ|
ದುಮಿ ದುಮಿ ದುಮಿ ದುಮಿ ದೋಂದಲಾಗಜ್ಜಲಾ|
ಝಿಮಿಕಿಟೀ ಝಿಮಿಕಿಟೀ ಘಂಗರೀ ಸುಂದರಾ|
ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೩||

ಭೋಂಭೋಂಭೋಂಭೋಂಭೋಂಭೋಂಶಬ್ದಯಾ ಭುಂಗಲಾ|
ಥೋಂಗಿಣಿ ಥೋಂಗಿಣಿ ಗಜ್ಜಯಾ ಮದ್ದಲಾ|
ತಿಮಿಕಿಟ ತಿಮಿಕಿಟ ತಾಲಶಬ್ದಾಕರಾ|
ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೪||

ರುಣು ರುಣು ರುಣು ರುಣೂ ದಿವ್ಯ ವೀಣಾಸ್ವರಾ|
ದಪಮಧ ಸಮಧಪ ಡೋಲಶಬ್ದಾಕರಾ|
ದಮ ದಮ ದಮ ದಮ ಸದ್ದಮೀ ಕಿನ್ನರಾ|
ಣಚ್ಚಈ ಅಪ್ಸರಾ ದಿವ್ಯರೂಪಾಧರಾ||೫||

ಖಿಣಿ ಖಿಣಿ ಖಿಣಿ ಖಿಣಿ ಕಂಸ ಕಂಸಾಲಯಾ|
ಪಿಮಿ ಪಿಮಿ ಪಿಮಿ ಪಿಮೀ ವಂಶ ವಿಶಾಲಯಾ|
ಝರ ಝರಾ ಝರ ಝರಾ ಝಲ್ಲರೀ ಸುಸ್ವರಾ|
ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೬||

ತೋಂತೋಂತೋಂತೋಂತೋಂತೋಂ ವಾದ್ಯಶ್ರೀಮಂಡಲಾ|
ಭುಂ ಭುಂ ಭುಂ ಭುಂ ಭುಂ ಭುಂ ಶಬ್ದಶೋಭಾಮಲಾ|
ಹುಂ ಹುಂ ಹುಂ ಹುಂ ಹುಂ ಹುಂ ಶಂಖ ಶೋಭಾಕರಾ|
ಣಚ್ಚ ಈ ಅಪ್ಸರಾದಿವ್ಯರೂಪಾಧರಾ||೭||

ಪಂಚಮಂ ಭೈರವ ನಾದಮಲ್ಹಾರಯಾ|
ಥಾಥ ಈ ಥಾಥ ಈ ಪಾದ ಸಂಚಾರಯಾ|
ನಿತ್ಯ ಗಾನಾಸನಾ ದೇವ ಚೇತೋಹರಾ|
ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೮||

ಕರ್ಜಕೈ ರ್ಮೋದಕೈ ಸೇವಸೋಹಾಲಯಾ|
ಪಂಕಜೈ ಶ್ಚಂಪಕೈ ರ್ಜಾತಿಸನ್ಮಾಲಕೈಃ|
ಪೂಜಯೋಜ್ಜೀವರಂದೇವ ಯೋಗೀಶ್ವರಂ|
 ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೯||

ಧರ್ಮಶೋಭಾಕರೇ ಚೈತ್ಯಶ್ರೀಮಂದಿರೇ|
ನರ್ತನಾ ಗೀತ ಗಾನಾ ಸದಾ ಚಕ್ರಿರೇ|
ಕರ್ಪುರೇ ರಾರತೀಭವ್ಯ ಅರ್ತೀಹರಾ|
ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೧೦||

ವಕ್ತ್ರಾಬ್ದೇ ಶಂಖಲಕ್ಷ್ಮೀ: ಕರತಲ
ಕಮಲೇ ಸರ್ವದಾ ದಾನಲಕ್ಷ್ಮೀಃ |
ದೋರ್ದಂಡೇ ವೀರಲಕ್ಷ್ಮೀಹೃದಯ
 ಸರಸಿಜೇ ಭೂತಕಾರುಣ್ಯಲಕ್ಷ್ಮೀಃ||

ಸರ್ವಾಂಗೇಸೌಮ್ಯಲಕ್ಷ್ಮೀರ್ನಿಖಿಲ
ಗುಣಗಣಾಡಂಬರೇ ಕೀರ್ತಿಲಕ್ಷ್ಮೀಃ|
ಖಡ್ಗೇಸೌಂದರ್ಯಲಕ್ಷ್ಮೀರ್ಜಯತು
ಭುವಲಯೇ ಸರ್ವಸಾಂರಾಜ್ಯಲಕ್ಷ್ಮೀಃ||
            -ಸಿರಿಭೂವಲಯದಸುಧಾರ್ಥಿ.

ಜೈನಸಂಪ್ರದಾಯವು ಹುಟ್ಟಿದ್ದೆಲ್ಲಿ?


’ಜೈನಸಂಪ್ರದಾಯವು ಉತ್ತರ ಭಾರತದಿಂದ ಭದ್ರಬಾಹು ಮುನಿಯೊಂದಿಗೆ ಕಳ್ವಪ್ಪುವಿಗೆ ಬರುವಮೂಲಕ ದಕ್ಷಿಣದಲ್ಲಿ ನೆಲೆಯೂರಿತು’ ಎಂಬ ತಪ್ಪು ಕಲ್ಪನೆಯು ಇಂದಿಗೂ ಪ್ರಚಲಿತವಿದೆ! ಆದರೆ,  ಜೈನ ಸಂಪ್ರದಾಯದ ಮೂಲಪುರುಷ  ಆದಿ ತೀರ್ಥಂಕರ ಋಷಭದೇವನೇ ಕರ್ನಾಟಕದ ಮಹಾನ್ ರಿಸಿ. ಈ ಸಂಪ್ರದಾಯದ ಮೂಲಪುರುಷನೇ ಕನ್ನಡದವನಿರಬೇಕಾದರೆ. ಇನ್ನು ಇದು ಉತ್ತರ ಭಾರತದಿಂದ ಕರ್ನಾಟಕಕ್ಕೆ ಬರುವ ವಿಚಾರವೆಲ್ಲಿದೆ!? 
ಋಷಭದೇವನು ತನ್ನ ಪತ್ನಿ ಯಶಸ್ವತೀದೇವಿಯ ಮಗಳಾದ ಬ್ರಾಹ್ಮಿಗೆ ಅವಳ ಅಂಗೈಯ್ಯಲ್ಲಿ ೬೪  ಅಕ್ಷರಗಳನ್ನು ಹೊಸೆದಿತ್ತ  ಕಾವ್ಯ ಭೂವಲಯ|ರಸದಓಂಕಾರ ಭೂವಲಯ| ಯಶದೆಡಗೈಯ್ಯ ಭೂವಲಯ| ರಸ ಮೂರುಗೆರೆಯ ಭೂವಲಯ| ರಿಸಿರಿದ್ಧಿಯರವತ್ನಾಲ್ಕು|ಯಶವುನಾಲ್ಕಾರದು ಹತ್ತು|ರಸಸಿದ್ಧಿಯಾ ಹತ್ತು ಓಂದು ಎಂಬುದಾಗಿ ಸೂಚಿಸುವಮೂಲಕ ಅಂಕಿಗಳು ಪರಸ್ಪರ ಸಂಬಂಧದಿಂದಾಗಿ ಪ್ರತಿಕ್ಷಣವೂ ಬದಲಾಗುವ ಪರಿಯನ್ನು ಕವಿಯು ಸೂಚಿಸಿರುವುದಿದೆ! 
ರಸಸಿದ್ಧಿಯ ’೬೪ ’ ಯಶಸ್ಸಿನ ೬+೪ ಇದು ೧೦. ಇದರಲ್ಲಿ ೧ ರೊಂದಿಗೆ ಸೊನ್ನೆಯುಸೇರಿದಾಗ ಅದು ೧. ಈ ರಿತಿಯಲ್ಲಿ ಗಣಿತಕ್ಕೆ ಸಂಬಂಧಿಸಿ ಸರಳ ಸೂತ್ರಗಳನ್ನು ಸೂಚಿಸುವ ಪ್ರಯತ್ನವನ್ನು ಓದುಗರು ಕಾವ್ಯಾರಂಭದಲ್ಲಿ ಕಾಣಬಹುದು. |
 ಜಗತ್ತಿನ ಸೃಷ್ಠಿ ಸ್ಥಿತಿ ಲಯಗಳೆಲ್ಲವೂ ಗಣಿತಾತ್ಮಕವಾಗಿ  ಸೊನ್ನೆಯಿಂದ (೦) ಹುಟ್ಟಿದ, ಸೊನ್ನೆಸಹಿತವಾದ  ೧ ರಿಂದ ೯ ಅಂಕಿಗಳು ಹಾಗೂ ಅವುಗ ಸಂಯೋಗಭಂಗದ ಲೆಕ್ಕಾಚಾರದಲ್ಲಿ,  ಅವುಗಳ ಗಣಿತಾತ್ಮಕವಾದ ಹಲವಾರು ಪರ್ಯಾಯಗಳಲ್ಲಿ  ಅಡಕವಾಗಿರುವುದೆಂಬ ವಿಚಾರವನ್ನು  ಜೈನಸಂಪ್ರದಾಯದ ತೀರ್ಥಂಕರರು ಹಾಗೂ  ಪ್ರಾಚೀನ ಮುನಿಗಳು ಮತ್ತು ವಿದ್ವಾಂಸರು ಅರಿತವರಾಗಿದ್ದರು.  ಇದಕ್ಕೆ ಸಂಬಂಧಿದ ಆಸಕ್ತಿದಾಯಕ ಮಾಹಿತಿಗಳನ್ನು ಓದುಗರು ಸಿರಿಭೂವಲಯದಲ್ಲಿ ಕಾಣಬಹುದು.
                            -ಸಿರಿಭೂವಲಯದಸುಧಾರ್ಥಿ.     

ಸಿರಿಭೂವಲಯವು ನಿಜವಾದ ಕನ್ನಡಕಾವ್ಯಾಭ್ಯಾಸಿಗಳಿಗೆ ಒಂದು ಕಠಿಣವಾದಸವಾಲು

ಸಿರಿಭೂವಲಯಕಾವ್ಯದ ಅಂತರ್ಸಾಹಿತ್ಯದ ಮೂಲಪಾಠವನ್ನು ಸ್ವರ ವ್ಯಂಜನಗಳನ್ನು ಬಿಡಿಸಿ ಬರೆದಿರುವುದನ್ನ- ಒಟ್ಟುಗೂಡಿಸಿ  ಸಂಯುಕ್ತಾಕ್ಷರ ಕ್ರಮದಲ್ಲಿ ಬರೆದಿರುವುದು ಈ ಕಾವ್ಯದ ಸರಳಪರಿಚಯನೀಡುವಲ್ಲಿ ಸುಧಾರ್ಥಿಯು ಅನುಸರಿಸಿರುವ ಎರಡನೇ ಹೆಜ್ಜೆಯಾಗಿದೆ. 
ಇದನ್ನು ಓದುವುದೂ ಕಷ್ಟವೆಂದು ಭಾವಿಸುವವರಿಗೆ ಸಾಂಗತ್ಯಪದ್ಯಗಳನ್ನು ಪದವಿಭಾಗಮಾಡಿ ಮುದ್ರಿಸಬೇಕಾಗುತ್ತದೆ. ಸಮಸ್ಯೆಯು ಅಲ್ಲಿಗೇ ಮುಗಿಯುವುದಿಲ್ಲ! ಕಠಿಣಪದಗಳಿಗೆ ಅರ್ಥವಿವರಿಸಬೇಕಾಗುತ್ತದೆ.
ಅದಕ್ಕೆ ಸೂಕ್ತವಾದ ಪ್ರಾಚೀನ ಶಬ್ದಕೋಶ ಯಾವುದೂ ಇಲ್ಲ!! ಆ ಕಾರಣದಿಂದಾಗಿ ಓದುಗರು ಈ ಕಾವ್ಯಾಧ್ಯಯನಕ್ಕೆ ಹೆಚ್ಚಿನ ಶ್ರಮವಹಿಸಿ, ತಮ್ಮ ಚಿತ್ತವೃತ್ತಿಗೆ ಸಾಕಷ್ಟು ಕೆಲಸಕೊಡಲೇಬೇಕಾದುದು ಅನಿವಾರ್ಯ.
ಈಕಾವ್ಯದ ವಿಚಾರವಾಗಿ ಸುಮಾರು ಒಂದುದಶಕದಿಂದ ಸಾಕಷ್ಟು ಸರಳಪರಿಚಯನೀಡಿದ್ದರೂ, ಕೋಟ್ಯಾಂತರ ಜನ ಅಕ್ಷರಸ್ತರಿರುವ ಕನ್ನಡನಾಡಿನಲ್ಲಿ ಈ ಜಗತ್ತಿನ ಜ್ಞಾನನಿಧಿಯನ್ನು ನೋಡುವತ್ತ ಆಸಕ್ತಿವಹಿಸಿದರು ಬೆರಳೆಣಿಕೆಗೆ ಸಾಲುವಷ್ಟು ಜನರಿಲ್ಲ!! 
ಆದರೂ ಮುಂದೆಹುಟ್ಟಿಬರುವ ಯಾರಾದರೂ ಮೇಧಾವಿಯ ನೆರವಿಗೆ ಉಪಯುಕ್ತವಾಗಲೆಂಬ ಏಕೈಕ ಉದ್ದೇಶದಿಂದ ಸುಧಾರ್ಥಿಯು ಲೌಕಿಕವಾಗಿ ಯಾವುದೇ ಉಪಯೋಗವಿಲ್ಲದ ಈ ’ಗಾಳಿಗುದ್ದಿ ಮೈನೋಯಿಸಿಕೊಳ್ಳುವ’ ಕಾರ್ಯದಲ್ಲಿ ಲೀನನಾಗಿರುವುದಾಗಿದೆ.
ಯೋಗವಿದ್ದಲ್ಲಿ ಇಂದಿನ ವಿದ್ಯಾವಂತರಲ್ಲಿಯೂ ಕೆಲವರಾದರೂ ಈ ಅಚ್ಚರಿಯ ಕಾವ್ಯಾಧ್ಯಯನದತ್ತ ಆಸಕ್ತಿಹೊಂದಬಹುದು.  ಈ ಕಾರ್ಯವು ಪುರುಷರಿಗಿಂತಲೂ ಮಹಿಳೆಯರಿಂದಲೇ ಹೆಚ್ಚಾಗಿ ನಡೆಯಬೇಕಾದ ಸಾಧನೆಯಾಗಿದೆ.  ಆಸಕ್ತಿ ಇರುವವರು ಪ್ರಯತ್ನಿಸಬಹುದು.   
                                                    -ಸಿರಿಭೂವಲಯದಸುಧಾರ್ಥಿ.

Saturday 15 February 2020

ಸಿರಿಭೂವಲಯವು ಎಲ್ಲರಿಗೂ ದಕ್ಕುವುದೆಷ್ಟು!?


ಪ್ರಿಯ ಓದುಗರೇ, ಮೇಲುನೋಟಕ್ಕೆ ಸಿರಿಭೂವಲಯ ಕಾವ್ಯವು ಅತ್ಯಂತ ಕಠಿಣವಾದ ಕಾವ್ಯವೆಂಬಂತೆ ಕಾಣಿಸಿದರೂ, ಇಲ್ಲಿ ಬಳಕೆಯಾಗಿರುವ ಕನ್ನಡಭಾಷೆಯು ಅತ್ಯಂತಸರಳವೂ,  ಗೂಢಾರ್ಥಸಹಿತವೂ ಆಗಿರುವುದೆಂಬುದರಲ್ಲಿ ಸಂಶಯವಿಲ್ಲ. ಅವುಗಳನ್ನು ತಾಳ್ಮೆಯಿಂದ ಓದಿದಲ್ಲದೇ ಅಲ್ಲಿನ ಭಾವನೆಯು ಓದುಗರಿಗೆ ವೇದ್ಯವಾಗುವುದಿಲ್ಲ!
 ಇದುವರೆವಿಗೆ ಪ್ರಕಟವಾಗಿರುವ  ಕೇವಲ  ನಾನೂರುಪುಟಗಳವ್ಯಾಪ್ತಿಯ  ಮೂಲಸಾಹಿತ್ಯವನ್ನು  ಸರಳವಾಗಿ ಪರಿಚಯಿಸುವಕಾರ್ಯಕ್ಕೇ ಸುಮಾರು ೩೦೦೦ ಪುಟಗಳ ವಿವರಣೆಯಾಯಿತು. ಇದನ್ನೂ ಓದುವ ಶ್ರಮವಹಿಸದ ಕೆಲವು ವಿದ್ವಾಂಸರು ಸಿರಿಭೂವಲಯಕಾವ್ಯ ಹಾಗೂ ಕವಿ ಕುಮುದೇಂದುಮುನಿಯನ್ನೇ ಸಾರಾಸಗಟಾಗಿ ತಿರಸ್ಕರಿಸಿ, ಕವಿ ಹಾಗೂ ಕಾವ್ಯದ ಅಸ್ಥಿತ್ವವನ್ನೇ ನಿರಾಕರಿಸಿದ್ದಾಗಿದೆ!!
ಮೂಲಸಾಹಿತ್ಯದಿಂದ ಅಂತರ್ಸಾಹಿತ್ಯವನ್ನು ಹುಡುಕಿ, ಬೇರ್ಪಡಿಸುವ ಸನ್ನಿವೇಶದಲ್ಲಿ ಸುಧಾರ್ಥಿಯು ತನಗೆ  ಖುಷಿಕೊಟ್ಟ ಕೆಲವು  ಅತ್ಯಂತ ಸ್ವಾರಸ್ಯಕರವೆನಿಸಿದ ಸಾಂಗತ್ಯಗಳಿಗೆ ಮಾತ್ರವೇ ತನ್ನ ಇತಿಮಿತಿಯಲ್ಲಿ ಭಾವಾರ್ಥವನ್ನು ಸೂಚಿಸಿರುವುದಿದೆ. ಆದರೆ,ಅವುಗಳ ಸಮರ್ಪಕವಾದ ವಿಶ್ಲೇಷಣೆಗೆ ಕೈ ಹಾಕದೇ ಕೆಲವರು ’ಈ ಸುಧಾರ್ಥಿಯು ಬರೆದಿರುವುದೆಲ್ಲವೂ ಸ್ವಕಪೋಲಕಲ್ಪಿತಮಾಹಿತಿಗಳು. ಅದರವಿಚಾರವಾಗಿ ಜೈನಸಮುದಾಯದವರು ಹೆಚ್ಚಿನ ಗಮನಕೊಡುವ ಅಗತ್ಯವಿಲ್ಲ’ ಎಂದು ಮೌಖಿಕ ಫರ್ಮಾನು ಹೊರಡಿಸಿರುವುದಿದೆ!!
ಇದು ಸರಿಯಾದ ನಿಲುವೂ? ಅಲ್ಲವೋ ಎಂಬುದನ್ನು ಇಲ್ಲಿನ ಓದುಗರು ಸುಲಭವಾಗಿ ಓದಿತಿಳಿಯಬಹುದಾದ ಪ್ರಸಂಗ ಒಂದನ್ನು ಇಲ್ಲಿ ಸೂಚಿಸಲಾಗಿದೆ. ಓದುಗರು ಅದರತ್ತ ಗಮನಹರಿಸಬೇಕಾಗಿ ವಿನಂತಿ.
೨೧ ನೇ  ಅಧ್ಯಾಯದ ಪೂರ್ಣಪದ್ಯಗಳಲ್ಲಿ ಅಶ್ವಗತಿಯಲ್ಲಿ ಸಾಗಿದಾಗ ದೊರೆಯುವ ಕನ್ನಡ ಪದ್ಯಸಾಹಿತ್ಯದಲ್ಲಿ  ೫೨ ಹಾಗೂ ೫೩ನೇ ಪದ್ಯಗಳಲ್ಲಿ ಕಾಣಬರುವ ಮಾಹಿತಿಯನ್ನು ಗಮನಿಸಿರಿ. ”ರೆದಿಗೆತಮಹೆಚ್ಚಿದವನುಸಾಯಲಮೋಘ| ಓದಿನಿಸಿಲ್ಲದಜನರ|| ಕೇದಿನೊಳಗೆಹುಟ್ಟಿಅಥವಾತಿರಿಯಂಚ|ದಾದನದೊಳ್ಹುಟ್ಟುವವನ್|| ೫೨| ಯೆಯದನರಿಯಬೇಕಾದರೆಗಣಿತದ|ಯೆಯಸಿದ್ಧಾಂತದೊಳ್ಕುಗತಿ||
ಆಯತದಗುಣಕಾರಗಣಕರಿಂದರಿಪಾರ್ಥ|..."  ಎಂಬುದಾಗಿದೆ.
 ಇಲ್ಲಿ ದ್ವಾರಕೆಯ ಕೃಷ್ಣನು ಪಾರ್ಥನಿಗೆ  ಬೋಧಿಸಿದ ಭಗವದ್ಗೀತೆಯ ಮಾಹಿತಿಯನ್ನು ಕುಮುದೇಂದುಮುನಿಯು ಅಮೋಘವರ್ಷನಿಗೆ ವಿವರಿಸುವ ಸನ್ನಿವೇಶದ ಚಿತ್ರಣವಿದೆ.   ’ಜೀವನದಲ್ಲಿ ಜುಗುಪ್ಸೆಯ ತಮೋಗುಣವು ಹೆಚ್ಚಿರುವಾಗ ಸಾಯುವವನು ತನ್ನ ಮರುಹುಟ್ಟಿನಲ್ಲಿ ಅವಿದ್ಯಾವಂತರ ಮನೆಯಲ್ಲಿ, ತಿರುಪೆಯವರಮನೆಯಲ್ಲಿ, ಅಥವಾ ದನವಾಗಿ ಹುಟ್ಟುವನು ಎಂಬುದನ್ನು ಕವಿಯು ಅಮೋಘವರ್ಷನಿಗೆ ವಿವರಿಸಿದ್ದಾನೆ. ಇದನ್ನು ತಿಳಿಯಬೇಕಾದರೆ, ಗಣಿತ ಹಾಗೂ ಗಣಿತಜ್ಞರಿಂದ ತಿಳಿಯಬೇಕು ಪಾರ್ಥ’ ಎಂಬುದು ಇದರ  ಭಾವಾರ್ಥ . ಇದಕ್ಕಿಂತಸರಳವಾಗಿ ಈ ಮಾಹಿತಿಯನ್ನು ಸೂಚಿಸಲು ಸಾಧ್ಯವೇ? ಯೋಚಿಸಿರಿ.
 ನಾಲ್ಕು ಸಾಲಿನ ಎರಡು ಸಾಂಗತ್ಯಗಳ  ವಿಚಾರವನ್ನು ವಿವರಿಸುವಲ್ಲಿ ಇಷ್ಟು ಬರೆಯಬೇಕಿರುತ್ತದೆ. ಹೀಗೆ ಪ್ರತಿಯೊಂದು ಸಾಂಗತ್ಯಪದ್ಯಕ್ಕೂ ಭಾವಾರ್ಥವನ್ನು ಸೂಚಿಸುವುದಕ್ಕೆ ಹೊರಟರೆ, ಎಷ್ಟು ಬರೆಯಬೇಕಾಗುತ್ತದೆ ಎಂಬುದನ್ನು ಯೋಚಿಸಬೇಕು.
ಹಾಗೊಮ್ಮೆ ಬರೆದರೂ ಅದನ್ನು ಓದುವವರಾರು?  ಬರೆದಿರುವುದು ಸರಿಯೋ ತಪ್ಪೋ ಎಂದು ವಿಮರ್ಶಿಸುವವರಾರು?
ಇದೊಂದು ತೀರ ಸಣ್ಣ ಪ್ರಸಂಗ ಇಂಥವು ಸಿರಿಭೂವಲಯದಲ್ಲಿ ಲಕ್ಷಾಂತರ!! ಈಗ ಪ್ರಕಟವಾಗಿರುವ ಸುಮಾರು ೨೦೦೦೦  ಪದ್ಯಗಳಲ್ಲಿ ಪ್ರಾತಿನಿಧಿಕವೆನಿಸುವ ಕೆಲವಾರು  ಪದ್ಯಗಳ ಭಾವಾರ್ಥವನ್ನು ಈ ಕ್ರಮದಲ್ಲಿ ನಿರೂಪಿಸಿರುವುದು ವಾಸ್ತವವೋ? ಸ್ವಕಪೋಲಕಲ್ಪಿತವೋ? ಎಂಬುದನ್ನು ಪ್ರಜ್ಞಾವಂದರಾದ ಓದುಗರು ನಿರ್ಧರಿಸಬೇಕು.
 ಸಿರಿಭೂವಲಯ ಕಾವ್ಯವನ್ನೂ, ಅದನ್ನುಕುರಿತ ಸರಳಪರಿಚಯವನ್ನೂ ಮನಸೋಇಚ್ಛೆ ಅಲ್ಲಗಳೆಯುವವರು ಅವರ ಜೀವಮಾನದಲ್ಲಿ ಇಂಥ ಕಾವ್ಯವನ್ನು ಓದುವುದಿರಲೀ; , ಅದರ ಸರಳಪರಿಚಯವನ್ನು ಓದಲೂ ಸಾಧ್ಯವಾಗದೆಂದು ಸುಧಾರ್ಥಿಯು ಖಚಿತವಾಗಿ ಹೇಳಬಲ್ಲವನಾಗಿದ್ದಾನೆ.
                                            -ಸಿರಿಭೂವಲಯದಸುಧಾರ್ಥಿ.

ಸಿರಿಭೂವಲಯ ಕಾವ್ಯಾಂತರ್ಗತವಾದ ಮಾಹಿತಿಯನ್ನು ನಿರ್ಲಕ್ಷಿಸುವುದು ಸರಿಯೇ!?


 ಮಾನ್ಯಖೇಟದದೊರೆ ಜಿನಭಕ್ತನಾಗಿದ್ದ ಅಮೋಘವರ್ಷಾಂಕನ ರಾಜ್ಯದಲ್ಲಿ ಬೆರೆ ಬೇರೆ ಜನಪದ ಸಮೂಹವೆಲ್ಲದರಲ್ಲಿಯು ಧರ್ಮವು ಕ್ಷೀಣಿಸುತ್ತ ಬರುವಾಗ, ಈ ಸಿರಿಭೂವಲಯವೆಂಬ ಸರ್ವ ಧರ್ಮ ಸಮನ್ವಯಿಯಾದ ಕಾವ್ಯವು ರಚೆನೆಯಾಗಿರುವ ಮಾಹಿತಿಯನ್ನು  ಕುಮುದೇಂದುಮುನಿಯು ತನ್ನ ಕಾವ್ಯದಲ್ಲಿ ನಿರೂಪಿಸಿರುವುದಿದೆ. ನೋಡಿ: " ಣಾಣಾಜನಪದವೆಲ್ಲದರೊಳುಧರ್ಮ|ತಾನು ಕ್ಷೀಣಿಸಿ ಬರ್ಪಾಗ| ತಾನ್ ಅಲ್ಲಿ ಮಾನ್ಯಖೇಟದದೊರೆ ಜಿನಭಕ್ತ|ತಾನು ಅಮೋಘವರ್ಷಾಂಕ||" 
ಈ ಮಾಹಿತಿಯು ಕಾವ್ಯರಚನೆಯಾಗಿರುವ ಸ್ಥಳ ಹಾಗೂ ಕಾಲವನ್ನು ಕುರಿತ ಖಚಿತವಾದ ಮಾಹಿತಿಯಾಗಿದೆ.  ಅಮೋಘವರ್ಷನು ಜೈನಸಂಪ್ರದಾಯವನ್ನು ಅನುಸರಿಸುತ್ತಿದ್ದವನೆಂಬ ಚಾರಿತ್ರಿಕ ಮಾಹಿತಿಯತ್ತಲೂ ಕಾವ್ಯವು ಬೆಳಕುಬೀರಿದೆ. ಹಾಗಿದ್ದೂ ಇಂದಿನ ವಿದ್ವಾಂಸರು ಶ್ರಮವಹಿಸಿ ಕಾವ್ಯವನ್ನು ಓದದೆಯೇ  ಕವಿ, ಕಾವ್ಯ, ಕಾವ್ಯರಚನೆಯಕಾಲ, ದೇಶ ಮುಂತಾದ ವಿಚಾರಗಳಲ್ಲಿ ತಮ್ಮ ಸಂಶಯವನ್ನು ಪ್ರಧಾನವಾಗಿಸಿ ಬರೆದಿರುವುದು ಈ ಕಾವ್ಯಕ್ಕಿಂತಲೂ ಹಿಚ್ಚಿನ ಅಚ್ಚರಿಯ ವಿಚಾರವಾಗಿದೆ!!!
ಇದರಿಂದಾಗಿ ಕವಿಗಾಗಲೀ ಕಾವ್ಯಕ್ಕಾಗಲೀ ಯಾವುದೇ ಕುಂದೂ ಇರುವುದಿಲ್ಲ! ಆದರೆ, ಮುಂದೆ ಯಾರಾದರೂ ಸಾಮರ್ಥ್ಯಶಾಲಿಯು ಈ ಕಾವ್ಯವನ್ನು ಕುರಿತು ಸಮಗ್ರವಾದ ಮಾಹಿತಿಯನ್ನೂ ನೀಡಿ, ಪರಿಚಯಿಸುವ ಕಾರ್ಯಕ್ಕೆ  ಹೋದಲ್ಲಿ ಇಂಥವರ ಬರಹಗಳು ಅವನ ದಾರಿತಪ್ಪಿಸುವುದು ಖಚಿತ.
                                                          -ಸಿರಿಭೂವಲಯದಸುಧಾರ್ಥಿ. 

Thursday 13 February 2020

ಸಿರಿಭೂವಲಯದಲ್ಲಿ ಕನ್ನಡ ಭಗವದ್ಗೀತೆಯ ಸೊಬಗು ಭಾಗ.೧.


ಪ್ರಿಯ ಓದುಗರೇ, ಈ ಲೇಖನವನ್ನು ಓದುವುದಕ್ಕೆ ಮೊದಲು ನಿಮಗೆ ಪ್ರಾಸ್ತಾವಿಕವಾಗಿ ಸಿರಿಭೂವಲಯವನ್ನು ಕುರಿತು ಒಂದೆರಡು ಮಾಹಿತಿಗಳನ್ನು ತಿಳಿಸುವ ಅವಶ್ಯಕತೆ ಇದೆ.
ಸಿರಿಭೂವಲಯಕಾವ್ಯದ ಕೆಲವೊಂದು ಭಾಗ ಹಾಗೂ ಅದರ ಸಂಶೋಧನೆಗೆ ಸಂಬಂಧಿಸಿದ ಸಂಶೋಧನೆಯ ದಾಖಲೆಗಳನ್ನು ಭಾರತಸರ್ಕಾರದ ಪ್ರಾಚ್ಯಪತ್ರಾಗಾರ ಇಲಾಖೆಯವರು ಮೈಕ್ರೋಫಿಲಂ ರೂಪದಲ್ಲಿ ಸಂರಕ್ಷಿಸದೇ ಹೋಗಿದ್ದಲ್ಲಿ; ಇಂದಿನ ವಿಜ್ಞಾನಯುಗದ ವಿದ್ಯಾವಂತ  ವಿದ್ವಾಂಸರು ’ಇಂಥದೊಂದು ಅಚ್ಚರಿಯ ಕಾವ್ಯ ಇರುವುದೇ ಸುಳ್ಳು. ಇದೊಂದು ಕಟ್ಟುಕಥೆ’ ಎಂದೇ ನಿಶ್ಚಯಿಸುತ್ತಿದ್ದರು!! ಹಾಗೆ ಪ್ರಚಾರಮಾಡಿದ್ದೂ ಉಂಟು!!
ಈ ಅಚ್ಚರಿಯಕಾವ್ಯವನ್ನುಕುರಿತ ಸರಳಪರಿಚಯಕೃತಿ ’ಸರ್ವಭಾಷಾಮಯೀಭಾಷಾ ಸಿರಿಭೂವಲಯಸಾರ’ ೨೦೧೦ರಲ್ಲಿ  ಪ್ರಕಟವಾದನಂತರವೂ ಇಂಥ ಪ್ರಸಿದ್ಧ ವಿದ್ವಾಂಸರು ’ಇದೆಲ್ಲವೂ ಸ್ವಕಪೋಲಕಲ್ಪಿತ ಮಾಹಿತಿಗಳು. ಕುಮುದೇಂದುಮುನಿಯಾರು? ಸಿರಿಭೂವಲಯ ಎಲ್ಲಿದೆ!? ಎಂದು ಉಡಾಫೆಯ ಮಾತುಗಳನ್ನಾಡಿದ್ದುಂಟು!!
ಈಗ ಅಂಥವರ ಬಾಯಿಯನ್ನು ಭದ್ರವಾಗಿ ಮುಚ್ಚುವಂತ ಸಾವಿರಾರು ಪುಟಗಳ ಮಾಹಿತಿಗಳು ಪ್ರಕಟವಾಗಿವೆ!!!
ಸಿರಿಭೂವಲಯದಲ್ಲಿ ಇದುವರೆವಿಗೆ ಬೆಳೆಕಿಗೆಬಂದಿರುವ  ಅಂತರ್ಸಾಹಿತ್ಯಗಳಪೈಕಿ ’ಭಗವದ್ಗೀತೆ’ಯು ಹೆಚ್ಚಿನ ಗಮನ ಸೆಳೆಯುವಂಥದು.
ಇದಕ್ಕೆ ಸಂಬಂಧಿಸಿದ ಹಲವಾರು ವಿಸ್ಮಯಕಾರಿಯಾದ ಮಾಹಿತಿಗಳನ್ನು ಸಂಗ್ರಹಿಸಿ,  ಒಂದು ಕಿರುಹೊತ್ತಿಗೆಯನ್ನೇ ೨೦೧೨ರಲ್ಲಿ ಪ್ರಕಟಿಸಲಾಗಿದೆ. ಆ ಕಿರುಹೊತ್ತಿಗೆ ಪ್ರತಿಗಳು ಈಗ ಉಪಲಬ್ಧವಿಲ್ಲ. ಇಂದಿನ ಓದುಗರಿಗೂ ಅದರಲ್ಲಿನ ಮಾಹಿತಿಗಳು ದೊರೆಯುವಂತಾಗಲೆಂಬ ಉದ್ದೇಶದಿಂದ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.
೧೯೫೩ರ ಸುಮಾರಿನಲ್ಲಿ ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ ಪ್ರಥಮ ಅಕ್ಷರ ಅವತರಣಿಕೆಯು ಪ್ರಕಟವಾದಾಗ. ನಾಡಿನ ವಿದ್ವಾಂಸರೆಲ್ಲರೂ ಅದರ ವಿರುದ್ಧ ವಾಗ್ಯುದ್ಧಸಾರಿದ್ದರು!
ಮೈಸೂರುವಿಶ್ವವಿದ್ಯಾಲಯದ ಸುಪ್ರಸಿದ್ಧ ಇತಿಹಾಸ ಪ್ರಧ್ಯಾಪಕರಾಗಿದ್ದ ಡಾ|| ಎಸ್. ಶ್ರೀಕಂಠಶಾಸ್ತ್ರಿಗಳವರುಮಾತ್ರ. ಅತ್ಯಂತ ಕ್ಲಿಷ್ಟ ಶೈಲಿಯ ಈ ಕಾವ್ಯದ ಪ್ರಕಟಿತಭಾಗವನ್ನು ಓದಿ, ಅದನ್ನು ಕುರಿತು ಪ್ರಾಮಾಣಿಕವಾಗಿ ಮೆಚ್ಚುಗೆ ಸೂಚಿಸಿದ ಏಕೈಕ ವಿದ್ವಾಂಸರಾಗಿದ್ದಾರೆ!! ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತೆಯನ್ನು ಕುರಿತು ಈ ಮಹನೀಯರು ಸಾಕಷ್ಟು ವಿಸ್ತಾರವಾದ  ಅನಿಸಿಕೆಗಳನ್ನು ಸೂಚಿಸಿರುವುದಿದೆ.
ಸಿರಿಭೂವಲಯಕಾವ್ಯದ ಸಂಶೋಧನೆಗೆ ಸಂಬಂಧಿಸಿದಂತೆ ಇಲ್ಲದ ಇತಿಹಾಸ ಸೃಷ್ಟಿಸುವ ಕಾರ್ಯವು ೧೯೫೩ಕ್ಕೆ ಮೊದಲೇ ಒಂದುರೀತಿಯಲ್ಲಿ ವ್ಯವಸ್ಥಿತವಾಗಿ ನಡೆದಿತ್ತು! ಇದರ ಮುಂದುವರೆದಭಾಗವಾಗಿ ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನವು ನಾಡಿನ ಹಲವಾರು ಪ್ರಸಿದ್ಧ ವಿದ್ವಾಂಸರ ಪ್ರತ್ಯಕ್ಷ, ಪರೋಕ್ಷ ಬೆಂಬಲದಿಂದ ಮತ್ತೆ ಇಲ್ಲದ ಇತಿಹಾಸವನ್ನು ಪುನರ್ ರೂಪಿಸುವ ಸಾಹಸಕ್ಕೆ ಕೈಹಾಕಿ ಮುಂದುವರೆದರೂ,  ’ಸಿರಿಭೂವಲಸಾರ’ದ ಖಚಿತಮಾಹಿತಿಗಳ ಕಾರಣದಿಂದಾಗಿ ಆ ಪ್ರಯತ್ನವು ವಿಫಲವಾಯಿತು. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಒದುಗರು ’ಸಿರಿಭೂವಲಸಾರ’ದಲ್ಲಿ ನೋಡಬಹುದು.
ಇವೆಲ್ಲ ಪ್ರಸಂಗಗಳ ವಿವರಗಳನ್ನೂ ಬದಿಗಿರಿಸಿ, ಈ ಲೇಖನದಲ್ಲಿ ’ಭಗವದ್ಗೀತೆ’ ಗೆ ಸಂಬಂಧಿಸಿದಂತೆ ಗಮನವನ್ನು ಕೇಂದ್ರೀಕರಿಸಲಾಗಿದೆ.
ಈ ಭಗವದ್ಗೀತೆಗೆ ಸಂಬಂಧಿಸಿದ ಮಹಿತಿಯನ್ನು ಸರಳವಾಗಿ, ಸ್ಪಷ್ಟವಾಗಿ,  ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಸ್ವಾರಸ್ಯಕರವಾಗಿ ವಿವರಿಸುವಮೂಲಕ  ಸಿರಿಭೂವಲಯದ ಸಾಮರ್ಥ್ಯವನ್ನು ಓದುಗರಿಗೆ ಮನವರಿಕೆ ಮಾಡಿಕೊಡಬೇಕೆಂಬುದು ಇಲ್ಲಿನ ಪ್ರಮುಖ ಉದ್ದೇಶ.
ಸಿರಿಭೂವಲಯದಲ್ಲಿ  ಜಯಾಖ್ಯಾನಾಂತರ್ಗತವಾದ ಸಂಸ್ಕೃತಭಾಷೆಯ ಭಗವದ್ಗೀತೆಯಲ್ಲಿರುವುದು ೧೬೨ ಶ್ಲೋಕಗಳು. ಕುಮುದೇಂದುವು ಸಿರಿಭೂವಲಯದಲ್ಲಿ ನೀಡಿರುವ ಪಂಚಭಾಷೆಯ ವ್ಯಾಖ್ಯಾನದಲ್ಲಿ ಕನ್ನಡಭಾಷೆಯಲ್ಲೇ ಹಲವಾರು  ಸಾಂಗತ್ಯಪದ್ಯಗಳು ಉಗಮವಾಗಿವೆ! ಅವುಗಳ ಪೈಕಿ ಕೆಲವೊಂದು  ಸಾಂಗತ್ಯಪದ್ಯಗಳ ಸರಳ ಪರಿಚಯವನ್ನು ಮಾತ್ರ ಇಲ್ಲಿ ನೀಡಲಾಗಿದೆ.
ಸಿರಿಭೂವಲಯದ ಈ ಭಾಗದಲ್ಲಿ ಕಾಣಬರುವ ಭಾಷಾಸೊಬಗು, ಬರಹದ ಶೈಲಿ, ನಿರೂಪಣೆಯ ಸೊಬಗು, ಸಂದರ್ಭ ಸಹಜವಾದ ಪದಗಳ ಬಳಕೆಯು ಓದುಗನ್ನು ಸೆರೆಹಿಡಿಯುವುದು ನಿಶ್ಚಯ. ಇದೆಲ್ಲವನ್ನೂ ಗಮನಿಸಿದಮೇಲಾದರೂ ಓದುಗರ ಆಂತರ್ಯದಲ್ಲಿಇಂಥ ಸರಳಸುಂದರವಾದ  ಕಾವ್ಯವು ’ಕಬ್ಬಿಣದಕಡಲೆ’ ಎನಿಸಿಕೊಂಡದ್ದು ಹೇಗೆ!?  ಎಂಬ ಭಾವನೆಯು ಉಗಮವಾದರೆ, ಈ ಸರಳಪರಿಚಯದ ಕಾರ್ಯ ಯಶಸ್ವಿಯಾದಂತೆ. (ಮುಂದುವರೆಯುವುದು)
                                                                                                                   -ಸಿರಿಭೂವಲಯದಸುಧಾರ್ಥಿ.

ಸಿರಿಭೂವಲಯದಲ್ಲಿ ಕನ್ನಡ ಭಗವದ್ಗೀತೆಯ ಸೊಬಗು. ಭಾಗ:೨


ಬ್ರಹ್ಮ, ವಿಷ್ಣು, ಮಹೇಶ್ವರೆಂಬ ದೇವತಾವಿಶೇಷಗಳು ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳ ಹೊಣೆ ಹೊತ್ತಿರುವವು. ಇವುಗಳಪೈಕಿ ಶಿವ ಹಾಗೂ ವಿಷ್ಣುವು ಲೋಕಕ್ಯಾಣಾರ್ಥವಾಗಿ ಹಲವಾರು ಅವತಾರಗಳನ್ನು ಧರಿಸಿರುವುದುಂಟು.   ಭೂಮಿಯಮೇಲೆ ಇಂಥ ಅವತಾರಗಳು ಸಂಭವಿಸಿದಾಗ, ಈ ಶಿವ ಹಾಗೂ ವಿಷ್ಣುನಿನ ನೈಜ ಶಕಿಯು  ಸಂಕುಚಿತಗೊಂಡು, ಅವರು ಇಲ್ಲಿನ ನರಮನುಷ್ಯರಂತೆಯೇ, ಪ್ರಕೃತಿಯ ನಿಯಮಗಳಿಗನುಸಾರವಾಗಿ ವ್ಯವಹರಿಸಬೇಕಾಗುತ್ತದೆ. ಇದು ಈ ಲೋಕದ ಜನಸಾಮಾನ್ಯರಿಗೆ ಅರಿವಿರಬೇಕಾದ ಸಂಗತಿ.
ಇಂಥ ಅವತಾರ ಪುರುಷರಿಗೆ,  ದೈವಾಂಶ ಸಂಭೂತರಿಗೆ  ತಮ್ಮ ಪೂರ್ವದ ಸ್ಮರಣೆಯಿದ್ದರೂ ಅವರು ಅದನ್ನು ಪ್ರಕಟಿಸುವುದಿಲ್ಲ.  ಸಾಮಾನ್ಯವಾಗಿ ಪೂರ್ವಜನ್ಮದ ನೆನಪುಹೊಂದಿರುವವರು ಬಹಳ ಅಪರೂಪ. ಅಂಥವರನ್ನು ’ಜಾತಸ್ಮರರು’ ಎಂದು ಸೂಚಿಸಲಾಗುತ್ತದೆ.
ಭಾಗವತದಲ್ಲಿ ಕೃಷ್ಣನ  ಪೂರ್ವಜನ್ಮದ  ಹಲವಾರು ವೃತ್ತಾಂತಗಳನ್ನು ತಿಳಿಸಿರುವುದಿದೆಯಾದರೂ ಅವನನ್ನು ’ಜಾತಸ್ಮರ’ ಎಂದು ಸೂಚಿಸುವುದಿಲ್ಲ!! ಕಾರಣ  ಅವನು ಮಹಾನ್ ’ಯೋಗಪುರುಷ’ ನಾಗಿದ್ದ. ಅಪರೂಪಕ್ಕೆ ಒಮ್ಮೆ ಕೆಲವರು ಜಾತಸ್ಮರರಾಗುವುದುಂಟು. ( ಇಂಥವರಿಗೆ ಹುಟ್ಟಿನೊಂದಿಗೇ ತಮ್ಮ ಹಿಂದಿನ ಜನ್ಮದ ಸ್ಮರಣೆ ಇರುತ್ತದೆ) ಭಗವದ್ಗೀತೆಯಲ್ಲಿ ಪಾರ್ಥನನ್ನ ಕುರಿತು ದ್ವಾರಕೆಯ ಶ್ರೀಕೃಷ್ಣನು ಉಪದೇಶನೀಡುವಾಗ ಇಂಥ ಹಲವಾರು ಪ್ರಸಂಗಗಳು ಬರುತ್ತವೆ.  ಅವುಗಳ ಸೊಬಗನ್ನು ನೀವು ಮುಂದೆ ಪ್ರತ್ಯಕ್ಷ ಕಾಣಲಿರುವಿರಿ.
ಕುರುಕ್ಷೇತ್ರದಲ್ಲಿ ಕೌರವ-ಪಾಂಡವರನಡುವಿನ ’ಮಹಾಭಾರತಯುದ್ಧ’ದ ಕ್ಷಣಗಣನೆಯು ನಡೆದಿದೆ.  ಕೌರವರ ೧೧ ಅಕ್ಷೌಹಿಣಿ ಸೇನೆಯ ಎದುರು ಪಾಂಡವರ ೭ ಅಕ್ಷೌಹಿಣಿ ಸೇನೆಯು ಎದುರುನಿಂತು ಸಮರೋತ್ಸಾಹದಿಂದ ಚಡಪಡಿಸುತ್ತಿದೆ. ದ್ವಾರಕೆಯ ಶ್ರೀಕೃಷ್ಣನ ಸಾರಥ್ಯದಲ್ಲಿ ರಣಾಂಗಣವನ್ನು ಪ್ರವೇಶಿಸಿದ ಪಾರ್ಥನಿಗೆ ತನ್ನೆದುರು ನಿಂತ ಸೇನೆಯಲ್ಲಿ ಕಾಣಿಸಿದ ಬಂಧುಬಾಂಧವರನ್ನು ನೋಡಿದಕೂಡಲೇ  ರಣೋತ್ಸಾಹವು ಮುದುಡಿಹೋಗುತ್ತದೆ.
 ಇವರನ್ನೆಲ್ಲ ಯುದ್ಧದಲ್ಲಿ ಘಾಸಿಗೊಳಿಸಿ, ಕೊಲೆಮಾಡಿ , ಸಂಪಾದಿಸುವ ರಾಜ್ಯದ ಸಿರಿಗಿಂತಲೂ ತನಗೆ  ದಿಗಂಬರರಾಜ್ಯವೇ ಇದ್ದರೂ ಸಾಕು ಎನಿಸುತ್ತದೆ. ಅದನ್ನೇ ಕೃಷ್ಣನಿಗೆ ತಿಳಿಸುತ್ತಾನೆ.
 ಆಗ ಕೃಷ್ಣನು ’ಕುರುಕ್ಷೇತ್ರದಲ್ಲಿ ಶತೃವಿನ ಸಂಹಾರವಾದಮೇಲೆತಾನೇ ಅಂತರಂಗದಲ್ಲಿರುವ ಕಸವೆಂಬ ಶತೃವನ್ನು ಗೆಲ್ಲುವುದು? ಯಶಸ್ಸಿನ ಶತೃವನ್ನು ಮೊದಲು ನಾಶಮಾಡು, ಆಮೇಲೆ ಕಸವೆಂಬ ಶತೃವಿನ ನಾಶಮಾಡುವೆಯಂತೆ. ವನವಾಸಮಾಡುವಾಗ ತಪಸ್ಸಿನ ಆಶೆಬರಲಿಲ್ಲ! ಆಗ ಒಳ್ಳೆಯ ಗುಣಗಳೆಲ್ಲವೂ ಕೀಳಾಗಿ ಕಾಣುತ್ತಿತ್ತು. ಕಣದಶತೃವಾದ ಜಳ್ಳನ್ನು ಗಾಳಿಯಲ್ಲಿ ತೂರಿ, ಗಟ್ಟಿಯಾದ ಕಾಳನ್ನು ಬುದ್ಧಿಯವಶಕ್ಕೆ ನೀಡಿ,  ತಪಸ್ಸಿಗೆ ತೆರಳಿ ಗುರುಗಳೇ! ಎಂದು ಕೃಷ್ಣನು ಪಾರ್ಥನನ್ನು ಸಲುಗೆಯಿಂದ ಕೆಣಕುತ್ತಾನೆ!!
 ಈ ಸಲುಗೆಯ ಸಂಭೋಧನೆಯು ಇಂದಿಗೂ ಉಳಿದುಬಂದಿದೆ!! ಆತ್ಮೀಯಗೆಳೆಯರು ಮತನಾಡುವಾಗ ಪರಸ್ಪರರನ್ನು ’ಗುರು’ ಎಂದು ಸಂಬೋಧಿಸುವುದು ಸರ್ವವೇದ್ಯ. ಕುಮುದೇಂದು ಮುನಿಯೂ ತನ್ನ ಕಾವ್ಯದಲ್ಲಿ ಇಂಥ ಪರಿಸರವನ್ನು ನಿರ್ಮಿಸಿದ್ದಾನೆ!! ನೋಡಿ:
”ಸರುವಬಾಂಧವರನೋಯಿಸಿಬರ್ಪರಾಜ್ಯದಿಂ| ಸಿರಿದೈಗಂಬರಿರಾಜ್ಯ|ವಿರಲೆನಗೆಂದಾಗಪಾರ್ಥಗೆಕೃಷ್ಣನು| ಕುರುಕ್ಷೇತ್ರದೊಳರಿಹನನ||ವಶವಾದಮೇಲಲ್ಲವೇಅಂತರಂಗದ|ಕಸವೆಂಬ ಅರಿಯಗೆಲ್ವಂಕ|ಯಶದರಿಹನನನೀನಾಗು ಮತ್ತಾಮೇಲೆ| ಕಸದರಿಹನನವಪ್ಪಂಗ|| ವನದೊಳ್ ಹೊಕ್ಕಾಗ ತಪದಾಶೆಬರಲಿಲ್ಲ|ಗುಣವಲ್ಲಕೀಳ್ದಾದುದರಿಕ್| ಕಣದಶತೃವನುಜಳ್ಳನುತೂರಿ| ಕಾಳನುಜ್ಞಾನಕಿತ್ತುತಪಕೈದುಗುರು||”
ಯುದ್ಧಮಾಡುವ ವಿಚಾರದಲ್ಲಿ ನೀನ್ನ ಹರುಷವನ್ನೂ ವಿಷಾದವನ್ನೂ ನನಗೆ ಒಪ್ಪಿಸಿಬಿಡು. ಈ ಯುದ್ಧವು ಕುರುವಂಶದವರ ಅನ್ಯಾಯಗಳ ಪ್ರತಿರೂಪವಯ್ಯಾ.  ಅಧ್ಯಾತ್ಮವನ್ನು ಬೆರೆಸಿ, ಮಮಕಾರವಿರದ ಬುದ್ಧಿಯನ್ನು ಕಾಪಾಡುವವನೇ  ಈಗ ನಿನ್ನ ಕ್ಷಾತ್ರತ್ವವನ್ನು ಮೆರೆಸಬೇಕಯ್ಯಾ.
”ಹರುಷವಿಷಾದಗಳನುನನಗೊಪ್ಪಿಸು|ಕುರುವಂಶದನ್ಯಾಯಗಳರೂ|ಪುರುಹಯ್ಯಕ್ಷಾತ್ರವಮೆರೆಸಯ್ಯಾಧ್ಯತ್ಮ| ಬೆರೆಸಿನಿರ್ಮಮಬುದ್ಧಿವರದ|| ಎಂದು ಪಾರ್ಥನಿಗೆ ಸೂಚಿಸುತ್ತಾನೆ.
 ಅಣತಮ್ಮಂದಿರನ್ನು ಒಂದುಗೂಡಿಸಲು ಮಾಡುತ್ತಿರುವ ಯುದ್ಧವಿದು. ಜೈನಧರ್ಮದವರು, ಶೈವರು, ವೈಷ್ಣವರು, ವ್ಯಾಪಾರಿಗಳು, ಜಗಳವಾಡದಲೇ ಬದುಕುವ ಕುಣಿಯುವ ಅಂಕಗಳ ಯುದ್ಧವಿದು. ಗಟ್ಟಿಯಾದ ಧರ್ಮಶಾಸನದಯಶಸ್ಸಿದು. ಎಂದು ಸೂಚಿಸುತ್ತಾನೆ.
”ಅನುಜರನು ಒಂದುಗೂಡಿಸಲುಮಾಡುವಯುದ್ಧ|ಜಿನಧರ್ಮಹರಿಹರವಣಿಕ|ಶಣಸದೆಬಾಳಲುಕುಣಿಕಂಕದಯುದ್ಧ|
ಘನಧರ್ಮಶಾಸನಯಶರೈಸಾ|| ಎಂದು ಹೇಳುತ್ತಾನೆ.
 ಹರುಷದಿಂದ ಕೇಳದೇ ಇರುವವರಿಗೆ ಏನನ್ನಾದರೂ ಹೇಳುವಾಗಸ್ಥಿರವಾದ ಬುದ್ಧಿ ಇರಬೇಕು. ಇಲ್ಲವಾದರೆ, ಪ್ರಸಂಗದ ರೀತಿ ಅರ್ಥವಾಗುವುದಿಲ್ಲ. ಈ ಲೋಕದ ಅಹಿಂಸೆಯನ್ನು ಬಿಟ್ಟು, ಶತೃವನ್ನು ನಾಶಮಾಡುವುದೇ ಒಳ್ಳೆಯದಲ್ಲವೇ.
”ಹರುಷದೊಳ್ಕೇಳದನೊರೆವಾಗಸ್ಥಿರಬುದ್ಧಿ|ಇರಬೇಕಲ್ಲದೊಡೆಅಸರದ|ಪರಿಯರ್ಥವಾಗದುಭವದಹಿಂಸೆಯಬಿಟ್ಟು| ಅರಿಯಕೊಲುವುದೆಶ್ರೇಯವಲಾ|| ಎಂದು ಕೃಷ್ಣನು ವಿವೇಕ ಹೇಳುತ್ತಾನೆ. (ಮುಂದುವರೆಯುತ್ತದೆ)
                                                                                                            -ಸಿರಿಭೂವಲಯದಸುಧಾರ್ಥಿ

ಸಿರಿಭೂವಲಯದಲ್ಲಿ ಕನ್ನಡ ಭಗವದ್ಗೀತೆಯ ಸೊಬಗು ಭಾಗ:೩.


ನನಗೆ ಯಾವುದೇ ಧರ್ಮೋಪದೇಶವೂಬೇಡ,  ಯಾರ ಆಪ್ತವಚನವೂ ಬೇಡ. ನನ್ನ ಅಂತರಾತ್ಮದ ಹೇಳಿಕೆಯಂತೆ ವರ್ತಿಸುತ್ತೇನೆ  ಎನ್ನುವುದಕ್ಕೆ ನೀನೇನು ಮದನನಂತೆ ತ್ಯಾಗಮಡುವ ಬುದ್ಧಿಯಿಂದ ಮೃದುಯುದ್ಧಮಾಡುವುದಕ್ಕಾಗಿ ನಾನು ಬಂದಿದ್ದೇನೆ ಎನ್ನುವೆಯೇನು!? ಹಾಗಿದ್ದಲ್ಲಿ  ಹೃದಯಲ್ಲಿ ಕುಳಿತಿರುವವನು ನಾನು ಎಂಬುದನ್ನು ತಿಳಿದುಕೋ! ಎಂದು ಕೃಷ್ಣ ಎಚ್ಚರಿಸುತ್ತಾನೆ.
”ಯದೆಯೊಳುಹೊಕ್ಕಂತೆನಡೆಸಲುನೀನೇನು|ಮೃದುಯುದ್ಧಗೈಯ್ಯುವುದಕಾಗಿ|ಮದನನಂದದೆತ್ಯಾಗದರಿವುಬಂದಿರೆನಾನು|ಹೃದಯದೊಳುಕುಳಿತೆನು ಅರಿಕ್|| ಎಂದು ಹೇಳುತ್ತಾನೆ.
ಆಗಲೇ ಎದೆಯೊಳಗೆ ಗೆಲುವಿನ ಅನುಮಾನದ ತಿಕ್ಕಟ ಪ್ರಾರಂಭವಾಗಿದೆಯೇನು!?  ದಿಕ್ಕು .ಅಶುಭದ ಮಣಿಯಾಗಿದೆಯೇನು?  ಭೂಮಿಯಲ್ಲಿ ದಾಯಾದಿಗಳು ಇರಬೇಕೆಂಬ ಆಶೆ ಕೆಲವರಿಗಿರುತ್ತದೆ. ಧರ್ಮರಾಯನೇನಾದರೂ  ಆದಾರಿಯನ್ನು ಹಿಡಿದಿದ್ದಾನೆಯೇನು!? ಕೇಳುತ್ತಾನೆ ಕೃಷ್ಣ.
ಮಸೆಯುವುದೆ ಎದೆಯೊಳುಗೆಲುವಿನೊಳನುಮಾನ|ದಿಸೆಯುನಚೈತದವಿಮಣಿ|ರಸೆಯೊಳುದಯಾದರಿರಲೆಂಬನನಾಶೆ| ದಿಸೆಯುಧರ್ಮಜನರೀತಿಯದೆನ್|| ಎಂದು ಪಾರ್ಥನನ್ನು ಕೆಣಕುತ್ತಾನೆ. ಮುಂದುವರೆದು..
ಆಳವಾದ ಮಡುವಿನ ನೀರು ತುಂಬಾ ತಣ್ಣಗಿರುತ್ತದೆ. ಸದಾಕಲವೂ ಅದರಲ್ಲೇ ಸ್ನಾನಮಾಡುತ್ತಿರುವ ಮೀನು ತುಂಬಾ ಕೋಪಕ್ಕೊಳಗಾಗಿದೆಯಂತೆ! ಇಂಥ ನೀರಿನಲ್ಲಿ ಸ್ನಾನಮಾಡುವುದು ಹಿತವಲ್ಲ. ಸುಮ್ಮನೆ ಕುರುಕ್ಷೇತ್ರದ  ಕೊಲೆಯ ಹಾಡಿಗೆ ಸಮ್ಮತಿಸಯ್ಯಾ  ಪಾರ್ಥಾ. ಎಂದು ಹೇಳುತ್ತಾನೆ ದ್ವಾರಕೆಯ ಕೃಷ್ಣ.
”ಮಸತೆಯಮೀನುಸದಾಸ್ನಾನಮಾಡುತ|ಖತಿಗೊಳಗಾಗಿದೆಯಂತೆ|ಹಿತವಲ್ಲಜಲಸ್ನಾನಕುರುಕ್ಷೇತ್ರ|ಗೀತದನುಮತಿಸಯ್ಯಹಂತಪಾರ್ಥ||
ನಾನು ನಾನು ಎಂಬ ರಣವನ್ನು ತಣ್ಣಗೆಮಾಡಿ, ಇದೇ ನನ್ನ ಕೊನೆಯಜನ್ಮವೆಂದು ತಿಳಿದು,  ದೇಹದ ಯುದ್ಧದಲ್ಲಿ ಭೂಮಿಯನ್ನು ಸಂಪಾದಿಸಿ, ಪಾಲಿಸಿ, ಕೊನೆಗೆ ಅದನ್ನು ಬಿಟ್ಟು ಧಣಿ ಎನಿಸಿಕೊಳ್ಳಬೇಕು. ಇದನ್ನು ನೀನು ತಿಳಿದುಕೋ.
ಎಂದು ಎಚ್ಚರಿಸುತ್ತಾನೆ.
”ನನರಣವಾರಿಸಿಕೊನೆಯಜನ್ಮವಹೊಂದೆ|ತನುವಿನಯುದ್ಧದೊಳುಧರಣೀ|ಮಣಿಯನರ್ಜಿಸಿಪಾಲಿಸಿಕೊನೆಗದಬಿಟ್ಟು|ಧಣಿಯಾಗುವುದುಇಂತರಿನೀ|| ಎಂದು ಕೃಷ್ಣನು ಹೇಳಿದರೆ, ಪಾರ್ಥನು ಜಗತ್ತಿನ ಸೃಷ್ಟಿಸ್ಥಿತಿಲಯಗಳ ವಿಚಾರ ಕುರಿತು ಪ್ರಶ್ನಿಸುತ್ತಾನೆ! ಅದನ್ನು ಕುರಿತು ಕೃಷ್ಣನು..
ಅಯ್ಯೋ ಅದನ್ನೇನಯ್ಯಾ ಹೇಳುವುದು?  ಇವರು ಅವರು ನಾವು ಎಲ್ಲರೂ ತುಂಬ ಪರಿಚಯವಿರುವ ಒಂದೇ ಕ್ಷೇತ್ರದ ಹೃದಯದೊಳಗಿದ್ದು ಮತ್ತೆ ಮತ್ತೆ ತಿರುತಿರುಗಿ ಬಂದು ಅದನ್ನೇ ಹೊಂದುತ್ತೇವೆಂಬುದನ್ನು ತಿಳಿದುಕೊಳ್ಳಯ್ಯಾ. ಎಂದು ಸೂಚಿಸುತ್ತಾನೆ.
”ಮದಪೇಳುವುದೇನುಇವರವರ್ನಾವೆಲ್ಲ|ಸದರದಿಓಂದೇಕ್ಷೇತ್ರದರ| ಹೃದಯದೊಳಿರ್ದುತಿರುತಿರುಗಿಬಂದು| ಅದದನೆಹೊಂದುವೆವರಿಯಾ|| ಎಂಬುದಾಗಿ ಜಗತ್ತಿನ ನಿಜವಾದ ಸ್ವರೂಪವನ್ನು ಕುರಿತು ಹೇಳುತ್ತಾನೆ..
ಜಗತ್ತಿನಲ್ಲಿರುವುದೆಲ್ಲ ಅರ್ಧಸುಖದವಸ್ತು, ಅರ್ಧ ದುಃಖದವಸ್ತು ಎಂಬುದನ್ನು ತಿಳಿದುಕೊ. ಇದನ್ನು ಮರೆಯದೇ ಬಾಳುವುದೇ ಪರಿಪೂರ್ಣಜೀವನ. ಆದ್ದರಿಂದ ಅರ್ಧವನ್ನಾಶಿಸುವುದೇ ಈ ಭೂಮಿಯಲ್ಲಿರುವ ಫಲ. (ಇಲ್ಲಿ ಕವಿಯು ಸುಖ-ದುಃಖ, ಪಾಪ-ಪುಣ್ಯ, ಲಾಭ-ನಷ್ಟ, ಹಗಲು- ರಾತ್ರಿ, ಒಳ್ಳೆಯದು-ಕೆಟ್ಟದ್ದು, ನೀತಿ-ಅನೀತಿ, ಸ್ವರ್ಗ- ನರಕ, ಮುಂತಾದ ದ್ವಂದ್ವಗಳೆಲ್ಲವೂ ಭೂಮಿಯಲ್ಲಿ ಅರ್ಧರ್ಧದಂತೆ ಸಮವಾಗಿವೆ. ಅದರಲ್ಲಿ ಎಲ್ಲರಿಗೂ ಸಮಪಾಲಿದೆ ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ಸೂಚಿಸಿರುವುದಿದೆ! ಆದರೂ ಅರಿವಿಲ್ಲದ ಜನರು ಜಗತ್ತಿನಲ್ಲಿ ನಮ್ಮಷ್ಟು ಕಷ್ಟಪಡುವವರು ಯಾರೂ ಇಲ್ಲ! ಜಗತ್ತಿನ ಕಷ್ಟವೆಲ್ಲವೂ ನಮ್ಮಪಾಲಿಗೇ ಬಂದಿದೆ. ಉಳಿದವರೆಲ್ಲರೂ ಸುಖವಾಗಿದ್ದಾರೆ ಎಂದು ಗೋಳಾಡುವುದಿದೆ! ಇದೆಲ್ಲವೂ ತಮ್ಮ ಪೂರ್ವಾರ್ಜಿತದ ಕರ್ಮಫಲ ಎಂಬುದನ್ನು ಮಾತ್ರ ಎಲ್ಲರೂ ಮರೆತುಬಿಡುತ್ತಾರೆ )
ಅರೆರಾಶಿಯಲ್ಲವೆಜಗದಸೌಖ್ಯವಸ್ತು|ಅರೆರಾಶಿದುಃಖವಸ್ತುವರಿ| ಮರೆಯದೆಬಾಳಗವಕೆಪರಿಪೂರ್ಣವದರಿಂದ| ಅರೆಯನಾಶಿಪಲಭವದುನಂ|| (ಮುಂದುವರೆಯುತ್ತದೆ)
                                             -ಸಿರಿಭೂವಲಯದಸುಧಾರ್ಥಿ.

ಸಿರಿಭೂವಲಯದಲ್ಲಿ ಕನ್ನಡ ಭಗವದ್ಗೀತೆಯ ಸೊಬಗು.ಭಾಗ:೪.


ಕೆಲವು ಹೆಂಗಸರು ಬಡವನನ್ನೇ ಮದುವೆಯಾಗಿ ಸುಖಪಡುತ್ತೇನೆ ಎಂಬ ಘೋರವಾದ ಆಶೆಯನ್ನು ಮುಡುಪಾಗಿರಿಸುತ್ತಾರೆ.  ಆದರೆ,  ಬಡವನನ್ನೇ ಸೇರಿದಮೇಲೆ, ಸುಖವಿಲ್ಲದವಳಾದ ಆಕೆ ಗೋಳಾಡುವಂತೆ ಶೂರನಿಗೂ ಕ್ರೂರವಾದ ದುಃಖವೆಂಬುದನ್ನು ಅರಿಯಬೇಕು.  ಎಂದು ವಿವೇಕ ಹೇಳುತ್ತಾನೆ.
ನಾರಿದರಿದ್ರನಸೇರಿಸುಖಿಪೆನೆಂಬ|ಘೋರವಾದಾಶೆಯಮುಡುಪು|ಸೇರಲುಸುಖವಳಿದವಳುಶೋಕಿಪತೆರಶೂರನು ಕ್ರೂರದುಃಖ್ವರಿಬ||
ಯಾವುದೇ ಕೆಲಸವನ್ನು ತಾನಾಗಿಯೇ ಮಾಡುವವನು, ಮಾಡಿಸುವವನು ಮಾಡುವವರು ಗುಣದೊಡನೆ ಸೇರಿರುತ್ತಾರೆ.  ಯಾವಾಗಲೂ ದೊಡ್ಡದಾದ ಕರ್ಮದಲ್ಲಿ ನಿರತರಾಗಿರಬೇಕಮ್ಮಾ! ಇದನ್ನು ಜಿನದೇವ ನೇಮಿಯು ಪರ್ವತದಷ್ಟು ಹೇಳಿದ್ದಾನೆ. ( ಸಾಮಾನ್ಯವಾಗಿ ಆತ್ಮೀಯಗೆಳೆಯರು ತಮ್ಮ ಮಾತಿನಲ್ಲಿ ಲೀನರಾದಾಗ ಬಹಳ ಪ್ರೀತಿಯಿಂದ ’ ಲೋ ನನ್ನ ಮಾತು ಕೇಳಮ್ಮ’  ಎಂದು ಗಂಡನ್ನು  ಹೆಣ್ಣಿನಂತೆಯೂ,  ’ನನ್ನಮಾತು ಕೇಳಪ್ಪಾ’ ಎಂದು ಹೆಣ್ಣನ್ನು ಗಂಡಿನಂತೆಯೂ ಓಲೈಸುವುದು ಸಾರ್ವಕಾಲಿಕ ಪದ್ಧತಿ! ಇಂದಿಗೂ ಈ ಕ್ರಮವಿದೆ!  ಮಹಾಭಾರತದ ಯುದ್ಧ ಸಮಯದಲ್ಲೂ ಇದು ಇತ್ತೆಂಬುದನ್ನು ಕುಮುದೇಂದುಮುನಿಯು ಈ ಸಂದರ್ಭದಲ್ಲಿ ಪ್ರಯೋಗಿಸಿ ತೋರಿಸಿದ್ದಾನೆ!!!)
”ತಾನಾಗಿಮಾಡುವನುಮಾಡಿಸುವನುಮಾಳ್ಪುದ|ಗುಣವನೊಡಂಬಡುವವರ್ ಸ|ಘನಯೋಗ್ಯಕರ್ಮದೊಳ್ ತೊಡಗಿರಬೇಕಮ್ಮ|ಜಿನದೇವನೇಮಿಪೇಳ್ದನಗಜ||
ಕರ್ಮಾಷ್ಟಕದಕಥೆಯನ್ನೇ ಜಪಿಸುವ ಕಾವ್ಯಾಂಗವು ಎಲ್ಲವನ್ನೂ ತೋರಿಸುತ್ತದೆ.  ಈ ಕರ್ಮಾಷ್ಟಕದ ವರ್ಣದಲ್ಲಿ ಋಗ್ಮಂತ್ರದವರು ಸೂಚಿಸುವ ’ಸಾಯುಜ್ಯಮೋಕ್ಷ’ದವಚನವಿದೆ. ಎಂದು ಕೃಷ್ಣನು ಸೂಚಿಸುತ್ತಾನೆ.
”ಕವಮುಂದೆಯೋಷ್ಟಗಾಥಾಜಪೇಕಾವ್ಯಾಂಗ|ದವತಾರವದುಸರ್ವದರ್ಶಿ|ಯವುಕರ್ಮಾಷ್ಟಕವರ್ಣದೆ ಋಗ್ ಮಂತ್ರ|ದವರನಿರ್ಜರೆಮೋಕ್ಷವಚ||
ದೇಶದಮಹಾವ್ರತದವರರಿದ ನಿಶ್ಚಲಸ್ಥಿತಿ. ಜಯಕಾವ್ಯದಲ್ಲಿ ಧ್ಯಾನಿಸಿದಾಗ ಜ್ಞಾನದಭಾಗ ವೇದಯುತವಾದ ಪರಮಪದ ವಾಗುತ್ತದೆ. ವ್ಯಾಸರ ಜಯಭಾರತಗೀತೆಯು ಋಗ್ವೇದದ ವಸ್ತುವಾಗಿದೆ.  ಎಂಬ ಸಾರ್ವಕಾಲಿಕ ಸತ್ಯವನ್ನು ಕವಿಯು ಇಲ್ಲಿ ಸೂಚಿಸಿದ್ದಾನೆ.
”ತ್ ಯುದೇಶಮಹಾವ್ರತದದವರಿದನಿಶ್ಚಲ|ಜಯದೆಧ್ಯಾನಿಸೆ ಜ್ಞಾನವಿಭವೇ|ದಯುತಪರಮಪದವಹುದುವ್ಯಾಸರಕಾವ್ಯ| ಜಯಭಾರತಗೀತೆಋಗ್ವಸ್ತು||               
ಈ ಮಾಹಿತಿಗಳು ಜಯಾಖ್ಯಾನಕ್ರಮದಲ್ಲಿ ಪ್ರಾಪ್ತವಾದ ಋಗ್ಮಂತ್ರಾಂನ್ತವರಿತ ನಿರ್ಮಲವಾದ ಜನ್ಮ ವೃಷಭದ್ವಜ ನಂದಿಯ ಕಮಲಸರೋವರದ ದಡಲ್ಲಿ ಕುಳಿತು ಸಂಪಾದಿಸಿದ ಸಂಪತ್ತು ಎಂಬುದಾಗಿ ಕವಿ ಕುಮುದೇಂದೇಂದುವು ಅಮೋಘವರ್ಷನಿಗೆ ಕೃಷ್ಣನ ಭವದ್ಗೀತೆಯ ವಿಚಾರವನ್ನು ತಿಳಿಸುತ್ತಿದ್ದಾನೆ.
”ಗಮನಿಸಲಿಂತುಈದ್ರವ್ಯಜಯಾಖ್ಯಾನ|ಕ್ರಮಪ್ರಪ್ತಋಗ್ಮಂತ್ರಾಣ್ತವರಿತ|ದಮಲಪಾಹುಡವೃಷಭದ್ವಜನಂದಿಯ| ಕಮಲಸರೋವರದ ದಡದ||
ದಕ್ಷಿಣದೇಶದವರನ್ನು ದ್ರಾವಿಡರೆಂದು ಸೂಚಿಸುವುದು, ಕೇವಲ ಕಣ್ಣು, ಕಿವಿ, ಮೂಗು, ನಾಲಿಗೆಯಂಥ ರಸನೇಂದ್ರಿಯಗಳಲ್ಲಿ ಮುಳುಗಿದ್ದ ಇವರಿಗೆ ಅಸದೃಶವಾದ ಶಾಸ್ತ್ರಗಳನ್ನು ತೋರಿಸಿ ವಶಗೊಳಿಸಿಕುಂಡೆವೆಂಬುವವರ ಅರಿವನ್ನು ಅರಿಯೆಂದು ಬಿಸುಡುವುದು ಕುರುಕ್ಷೇತ್ರವನ್ನು ವಶಪಡಿಸಿಕೊಂಡಂತೆ. ಎಂದು ಪಾರ್ಥನಿಗೆ ಕೃಷ್ಣನು ಸೂಚಿಸುತ್ತಾನೆ. ಮಧ್ಯ ಏಷ್ಯಾದಿಂದ ಬಂದ ’ಆರ್ಯರೆಂಬ’ ಮೇಧಾವಿ ಜನಾಂಗವು ದಕ್ಷಿಣಭಾರತೀಯರಿಗೆ ಜ್ಞಾನದಾನಮಾಡಿ   ಉದ್ಧರಿಸಿದರೆಂಬ ಸುಳ್ಳು ಮಾಹಿತಿಯು ಕೇವಲ ಬ್ರಿಟಿಷರ ಕಾಲದಿಂದ ಪ್ರಾರಂಭವಾದ ವ್ಯಾಧಿಯಲ್ಲ!! ಈ ವ್ಯಾಧಿಯು ಮಹಾಭಾರತ ಯುದ್ಧದ ಕಾಲದಲ್ಲೂ ಇಲ್ಲಿ ವ್ಯಾಪಿಸಿತ್ತೆಂಬುದನ್ನು ಸುಮಾರು ೧೨೦೦ ವರ್ಷಗಳ ಹಿಂದೆಯೇ ಕುಮುದೇಂದುಮುನಿಯು ತನ್ನ ಕಾವ್ಯದಲ್ಲಿ ಖಚಿತವಾಗಿ ಸೂಚಿಸಿರುವುದಿದೆ!!
ಕೆಲವೊಂದು ಸುಳ್ಳುಮಾಹಿತಿಗಳು ಸಾವಿರಾರುವರ್ಷಗಳು ಕಳೆದರೂ ಜನಜೀವನದಲ್ಲಿ ಪ್ರಚಾರದಲ್ಲುಳಿಯುವಷ್ಟು ಪ್ರಭಾವಶಾಲಿಯಾಗಿರುತ್ತವೆಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ!
”ರಸನೇಂದ್ರಿಯವಸದೊಳಗಿರ್ದ|ದಸ್ಯುಗಳ್ಗಸದೃಶಶಾಸ್ತ್ರವತೋರಿ|ವಶಗೊಳಿಸುವುದವರರಿವನುಅರಿಯೆಂದು| ಬಿಸುಡುವುದುಕುರುಕ್ಷೇತ್ರವಶಕ||
ಒಂದೇಅಕ್ಷರವು ಒಂದೊಂದೇ ಅಕ್ಷರವಣ್ಣ. ನಿಂದು ಬಂದಿದೆ ಇದು ಹಿಂದಿನಿಂದ ಇರುವ ವರ. ಕಂದದೇ ಕುಂದದೇ ನಿಂತಿರುವ ಋಗ್ವೇದದ್ದಲ್ಲಿ ಓಂದೊಂದೇ ಅಕ್ಷರವನ್ನು ಹರಡಲಾಗಿದೆ.  ಪಕ್ಕದಲ್ಲಿ ಸಡಿಲಬಿಟ್ಟರೆ, ಪ್ರಬಲನಾದ ಶತೃವು ಪ್ರಾಣಿಯಂತೆ ಸಾಯುವ ರೌದ್ರಾಂಕಸ. ಪ್ರಾಣಿಗಳು ಮನುಷ್ಯರಾಗುವರೀತಿಯಲ್ಲಿ. ಈ ಯುದ್ಧವು ಶತೃವಿಗೆ ಅಂತರಂಗದಲ್ಲಿಯೇ ಗೆಲುವು. ಹುಲಿಗೆ (ಅಂದರೆ ಪಾರ್ಥನಿಗೆ) ಜ್ಞಾನೋದಯವಾಗುವುದು ಮಗನ ರಕ್ತವನ್ನು ಹೀರುವ ಸಮಯದಲ್ಲಿ.  ಅಮಿತಾರಿಮುನಿಯಿಂದ ದೊರೆತ  ಅಜ್ಞಾನದ ಕುಶ್ರುತಾಂಕವು ಕಳೆದಂತೆ ಆ ಕರ್ಣನು ಗೆಲ್ಲುತ್ತಾನೆ, ಎಂದು ಕೃಷ್ಣನು ಪಾರ್ಥನನ್ನು ಎಚ್ಚರಗೊಳಿಸುತ್ತಾನೆ. ನೋಡಿ:
ಓಂದೇಅಕ್ಷರವುಒಂದೊಂದೇಅಕ್ಷರವಣ್ಣ|ನಿಂದುಬಂದಿದೆಯನಾದಿವರ| ಕಂದದೆಕುಂದದೇನಿಂದಋಗ್ವೇದದೆ| ಓದೊಂದೇಅಕ್ಷರಹರವಿ||
ಬಗಳಳಕಗದುನಾಳೆಪ್ರಬಲಶತ್ರು|ಮಿಗದಂತೆಸಾಯ್ವರೌದ್ರಾಂಕಸ| ಹಗೆಗಂತರಂಗದಗೆಲ್ಲುವುದೀಅಂಕ| ಮಿಗವುಮನವನಪ್ಪಬಗೆಯು||
ಹುಲಿಗೆಜ್ಞಾನೋದಯಸುತನರಕ್ತವಪೀರ್ವ|ಘಳಿಗೆಯೊಳದಮಿತಾರಿಮುನಿಯಿಂ|ವಲಿಸಿತಜ್ಞಾನಕುಶ್ರುತಾಂಕ| ಕಳೆದಂತೆಗೆಲುವಕರ್ಣನವ||
ನೇಮಿತೀರ್ಥಂಕರನು ತನ್ನ ಉಸಿರಾಟದ ಕೊನೆಯಲ್ಲಿ ಕೃಷ್ಣನವಶಕ್ಕಿತ್ತಿದ್ದ ಭಗವದ್ಗೀತೆಯನ್ನು ಜಯದ ಹಿಂಸೆಯಯುದ್ಧದೊಳಗೆ ಕೃಷ್ಣನು ಅದನ್ನು ಪಾರ್ಥನಿಗೆ ಉಪದೇಶಿಸುತ್ತಾನೆ. ಈಶ್ವರನ ರೀತಿಯಲ್ಲಿ ಬಾಳುವುದಕ್ಕೆ ನಾಲ್ಕನೆಯಜ್ಞಾನವಿರಬೇಕು ಎಂಬುದು ಸರಲವಾದ ದನಿ. ಸರುವವೆಂದರೆ, ಹದಿನೆಂಟುರಾಜ್ಯಾಂಗವನ್ನು ನಿರ್ವಹಿಸುವಾಗಲೂ ಇದರ ಅಂಶವಿರುತ್ತದೆ. ಲೌಕಾಂತಿಕರಾದ ಬ್ರಹ್ಮರ್ಷಿವರರು ನೇಮಿಗೆ ತಿಳಿಸಿಕೊಟ್ಟ ಹಿತನುಡಿಗಳನ್ನು ಕೇಳಿ ನನ್ನ ಚೈತನ್ಯದ ಅತಿಶಯವನ್ನು ನಾನು  ತಿಳಿದುಕೊಂಡೆ. ಎಂದು ಕೃಷ್ಣನು ತನ್ನ ಜ್ಞಾನದ ಮೂಲವನ್ನು ಪಾರ್ಥನಿಗೆ ತಿಳಿಸುತ್ತಾನೆ.  ನೋಡಿ: (ಮುಂದುವರೆಯುವುದು)
                                                                                                                     -ಸಿರಿಭೂವಲಯದಸುಧಾರ್ಥಿ. 

ಸಿರಿಭೂವಲಯದಲ್ಲಿ ಕನ್ನಡಭಗವದ್ಗೀತೆಯ ಸೊಬಗು. ಭಾಗ:೫


ಯಶದಹಿಂಸೆಯಯುದ್ಧದೊಳಗಿತ್ತನದುಬಂದು|ಹದನಾಗಿನೇಮಿಯುತಮ್ಮ| ಶ್ವಸನತ್ಯಾಗದಿಕುರುಕ್ಷೇತ್ರದಿಕೃಷ್ಣನ| ವಶಕೀಯೆಭಗವದ್ಗೀತೆ||
ಹರನಂತುಬಾಳ್ವುದಕೆನಾಲ್ಕನೆಯಜ್ಞಾನ|ವಿರಬೇಕುಸರಲಮರ್ಗದನೀ|ಸರುವವೆಂದರೆಹದಿನೆಂಟುರಾಜ್ಯಾಂಗವ|ಪೊರೆವಾಗಲೂಇದರಂಶ||
ವತರಣದೊಳುನೇಮಿಗೊರೆದಲೌಕಾಂತಿಕ|ನುತರಾದಬ್ರಹ್ಮರ್ಷಿವರರ|ಹಿತನುಡಿಗಳಕೇಳಿನನ್ನಯ| ಚೈತನ್ಯದತಿಶಯನಾನು ಅರಿತೆ||
ಈ ಲೋಕದ ಕಷ್ಟಕಳೆಯುವವನಾಗುವುದೇ ಸ್ವಂತದ ಅಭಿಪ್ರಾಯವೆಂದರಿ ಪಾರ್ಥ.  ಒಳ್ಳೆಯದಲ್ಲದ ಮಾತನಾಡುವವರ ಅವಿವೇಕವೆಂಬುದುದೇ ಪರಮತವೆಂದುತಿಳಿದು ನೀನು ವಿವೇಕಿಯಾಗಯ್ಯಾ.
ತನ್ನತನವನ್ನ, ಜಾತಿಯನ್ನ ಬಿಡದಿರುವುದೇ ತನ್ನಜಾತಿಯೆನಿಸುತ್ತದೆ. ಇದು ಮಮಕಾರ. ಇದು ಉನ್ನತವಾಗಿದೆ. ಇನ್ನು ಆರು ದ್ರವ್ಯಗಳೆನ್ನುವಾಗ ಎಲ್ಲವೂ ಜಾತಿಯೆನಿಸುತ್ತದೆ.
ಬೇಸರದ ಅಜ್ಞಾನ ಹೆಚ್ಚಿದವನು ಸತ್ತರೆ ಅಮೋಘ, ಸ್ವಲ್ಪವೂ ವಿದ್ಯಾವಂತರಲ್ಲದ ದಡ್ಡರಮನೆಯ ಪಾತಿಯಲ್ಲಿ ಹುಟ್ಟತ್ತಾನೆ. ಅಥವಾ ತಿರಿದುಣ್ಣುವ ದನದಲ್ಲಿ ಹುಟ್ಟುತ್ತಾನೆ ಎಂದು ಕುಮುದೇಂದುವು ಅಮೋಘವರ್ಷನಿಗೆ ತಿಳಿಸುತ್ತಾನೆ. ನೋಡಿ.
"ಭವಹರನಪ್ಪುದೆಸ್ಸಮತವೆಂದರಿಪಾರ್ಥ| ಸಿವವಲ್ಲದನುಡಿಯವರ||
ಅವಿವೇಕವೆಂಬದೆಪರಮ|ತವರಿಯಯ್ಯಸವಿವೇಕಿಯುನೀನಾತರುತ||   
ತನ್ನತ್ವವನ್ಮತನ್ನಜಾತಿಯಬಿಡದಿಪಾಮಿವೆ|ತನ್ನೊಳೆಜಾತಿಗಳಮಮ||
ಉನ್ನತವಾಗಿದೆಇನ್ನಾರುದ್ರವ್ಯವ|ದೆನ್ನುವಾಗೆಲ್ಲವುಜಾತಿ||             
ರೆದಿಗೆತಮಹೆಚ್ಚಿದವನುಸಾಯಲಮೋಘ| ಓದಿನಿಸಿಲ್ಲದಜನರ||
ಕೇದಿನೊಳಗೆಹುಟ್ಟಿಅಥವಾತಿರಿಯಂಚ|ದಾದನದೊಳ್ಹುಟ್ಟುವವನ್||”   
’ಅಸಿಆಉಸಾ’ ಎಂಬುದು ಜೈನಸಂಪ್ರದಾಯದ ಪಂಚಪರವೇಷ್ಟಿ ಎಂದು ಪ್ರಸಿದ್ಧವಾಗಿರುವ ಐದು ಮಂತ್ರಗಳಸಮೂಹ. ಕುರುಕ್ಷೇತ್ರವು ವಶವಾದರೆ ಈ ಮಂತ್ರಸಮೂಹವು ಸಿದ್ಧಿಸುತ್ತದೆ.  ಇದು ರಸನೇಂದ್ರಿಯ. ಆದಿಕಾಲದಿಂದ ಇಂದಿನವರೆವಿಗಿನ ಹಸಿವನ್ನುಅಡಗಿಸುತ್ತ ರಸಸಿದ್ಧಿಯ ಪರಮಾಮೃತವಾಗುವುದು ರಾತ್ರಿಗೆ
ಸೋದರಿಕೆಯಕಾರಣಯುದ್ಧಕ್ಕೆ ಹದರಿಕೆಯಲ್ಲವೆ? ಇದು ಹಗೆತನವಲ್ಲ ಮಿತ್ರಾ! ಧರ್ಮದಜಗತ್ತಿಗೆಲ್ಲ ಧರ್ಮರಾಯನಗಲಿಲ್ಲವೆಂದರೆ ಅದು ದೊಡ್ಡಸ್ತಿಕೆಯಾಗುವುದೇ ಹೇಳು!  ಇಲ್ಲಿ ಶತೃತ್ವಕ್ಕೂ ಸ್ನೇಹಕ್ಕೂ ಜಾಗವೆಲ್ಲಿದೆ!? ಎಂದು ಕೃಷ್ಣನು ಯುದ್ಧಕ್ಕೆ ಪಾರ್ಥನ  ಮನವೊಲಿಸುತ್ತಾನೆ. ನೋಡಿ:
ಕುರುಕ್ಷೇತ್ರವಶವಾದರೆಪಾರ್ಥಅಸಿಆಉಸಾಅಂಕಸಿದ್ಧಮ್||ರಸನೇಂದ್ರಿಯವದು||
ಆದಿಯನಾದಿಹಸಿವಡಗು|ತರಸಸಿದ್ಧಿಪರಮಾಮೃತನಿಶಗೆ||           
ದೀಯಾದಿಕಾರಣರಣಕೆಹೆದರಿಕೆಇಹುದೆಲ್ಲಹ|ಗೆಯಲ್ಲವದುಮಿತ್ರ||
ಧರ್ಮಜಗಕೆಲ್ಲಧರ್ಮಜನಾಗಲಿಲ್ಲವೆಂದೆನೆದ್ವಧಾರೆಯಘನಘನವೆಪೇಳುಹಗೆಕೆಳೆಗೆಲ್ಲಿವೆಸ್ಥಾನ||
ಕುರುಕ್ಷೇತ್ರದಧರ್ಮಯುದ್ಧದಲ್ಲಿ ಯೋಗೀಶ್ವರನಾದ ಶ್ರೀಕೃಷ್ಣನು ನರನಿಗೆ ಹೇಳಿದಆದ್ಯಂತವೂ ತೀರ್ಥಂಕಪುಣ್ಯಬಂಧವನ್ನು ತರಲೀ.
ಮದಹತ್ತಿದವರಿಗೆಲ್ಲ ಮದವನ್ನಳಿಸುವ ಕಾರ್ಯವನ್ನು ವಿಧ್ಯೆಯನ್ನು ತಿಳಿಯದವನು ತಿಳಿದುಕೊಂಡ.  ಹೃದಯವಿಲ್ಲದ ದೇಹವನ್ನೇಕೆ ರಕ್ಷಿಸುತ್ತೀಯೆ? ಪ್ರೀತಿಯಬಯಕೆಯದು ಹೊಟ್ಟೆಯಕಿಚ್ಚು!
ವೇದದಹಿಂಸೆಯಮೃತವು ಸರಿಯೆಂಬ ದಯೆವರ್ಜಿತನು ಇಲ್ಲಿರಬಾರದು ದ್ವಾಪರಯುಗವು ಕೊನೆಗೊಂಡಿದೆ. ಕಲಿಯ ಉತ್ಪತ್ತಿಯ ಯುದ್ಧ ಎಂದು ಕೃಷ್ಣನು ತಿಳಿಸುತ್ತಾನೆ. ನೋಡಿ:
ತರಲಿತೀರ್ಥಂಕರಪುಣ್ಯಬಂಧವ|ಸಿರಿಕೃಷ್ಣಯೋಗೀಶ್ವರಮವಬರಲು||
ಕುರುಕ್ಷೇತ್ರಧರ್ಮಧ್ವರದೊಳು|ನರನಿಗೆಪೇಳಿದತತ್ವಾಮೃತದಾದ್ಯಂತವಾ||   
ಮದತಳೆದವರ್ಗೆಲ್ಲಮದವಳಿಸುವಕಾರ್ಯ|ವಿಧ್ಯನರಿಯದವನರಿತ||
ಹೃದಯವಿಲ್ಲದದೇಹವನೇಕೆರಕ್ಷಿಪೆ|ಮುದದಬಯಕೆಯದುಕರುಬ||     
ವೇದದಹಿಂಸೆಯಮೃತಸರಿಯೆಮ್|ಬದಯೆಯವರ್ಜಿಪನಿರಬಾರದಿ||
ಲ್ಲಿದ್ವಾಪರಕೊನೆಗೊಂಡಿಹಪರಕಲಿಯುತ್ಪತ್ತಿಯುದ್ಧ||
ಆರನೇ ಅಂಕಿಯಲ್ಲಿ ದೆ. ಅದರಿಂದ ಯುಗಪರಿವರ್ತನೆಯಾಗುತ್ತದೆ. ಧರ್ಮಯುದ್ಧದ ತರ್ಕಕದನಕೋಲಾಹಲ ಇಪ್ಪತ್ತುಸಾವಿರ ಮೃದುಲಯುದ್ಧದಕ್ಷರಾಂಕದ ಬಾಗಿಲು.             
ಸ್ವರ್ಗದ ಮೂರುರತ್ನಗಳ ಸಂಯುಕ್ತ್ವಧಾರಣೆ. ಯುಗಪರಿವರ್ತನೆಯಜಯ. ಪ್ರಾಣಿಗಳು ಸಿಂಹವಾಗಿ,  ರಾಕ್ಷಸನು ಮಾನವನಾಗಿ ಯುಗದ ಶುದ್ಧೀಕರಣವಾಗಬೇಕಿದೆ.
ಎಂಬತ್ನಾಲ್ಕುಲಕ್ಷ ಜನ್ಮಗಳ ಹುಟ್ಟು,ಜ್ಞಾನ, ಸಾಗಿದದಾರಿ, ಬಯಕೆ ಇವುಗಳೆಲ್ಲವನೂ   ತಿಳಿದುಕೊಳ್ಳುವುದೇನನ್ನ ವಿಶ್ವರೂಪವಿದು ನರ ಎಂದು ಕೃಷ್ಣನು ಪಾರ್ಥನಿಗೆ ತಿಳಿಸುತ್ತಾನೆ. ( ಪ್ರಚಲಿತವಿರುವ ’ವಿಶ್ವರೂಪದರ್ಶನ’ದಲ್ಲಿ ನಾವು ಕಾಣುವುದೇ ಬೇರೊಂದು ರೀತಿಯ ಚಿತ್ರಣ! ಇಲ್ಲಿ ಕೃಷ್ಣನು ಪಾರ್ಥನಿಗೆ ತಿಳಿಯಹೇಳುವುದೇ ಬೇರೊಂದು ರೀತಿಯ ವಿಶ್ವರೂಪದರ್ಶನ! ಇವುಗಳನ್ನು ತುಲನೆಮಾಡಿನೋಡಿದಲ್ಲಿ ಸಿರಿಭೂವಲಯಾಂತರ್ಗತ ಜಯಕಾವ್ಯದ ’ವಿಶ್ವರೂಪದರ್ಶನ’ವೇ ಹೆಚ್ಚು ತರ್ಕಬದ್ಧವೆನಿಸುತ್ತದೆ! ನೋಡಿ:
ಸಿರಿಯಾರರಲಿಯುಗಪರಿವರ್ತನವದರಿಂದ|ಧರ್ಮಯುದ್ಧಯತರ್ಕದನ||
ಕೋಲಾಹಲವಿಂಶತಿಸಾವಿರಮೃದುಲಯುದ್ಧದಾಕ್ಷರಾಂಕಟ||         
ಸುಗಮೂರುರತ್ನದಸಂಯುಕ್ತ್ವವಧಾರಣೆ|ಯುಗಪರಿವರ್ತನೆಯಜಯ||
ಮಿಗಸಿಂಹವಾಗಿದಾನವನುಮಾನವನಾಗಿ| ಯುಗಶುದ್ಧೀಕರಣದಪದಪ|| 
ದೆಮ್ಬತ್ನಾಲ್ಕುಲಕ್ಷಗಳಪಾಹುಡಗಳಸಎ|ಜನ್ಮಜ್ಞಾನಮಾರ್ಗಣೆಯಾ||
ವಿವಶವೆಲ್ಲವನರಿವುದನನ್ನಯವಿಶ್ವರೂಪವಿದುನರ||             
ನಾವು ವಾಸಿಸುವಮನೆಯು ಜಿನನದೇಹವಾಗಿರುವಾಗ ಸುಂದರತೆಯಾನುಭವ.  ವಿಶ್ವರೂಪದ ತುದಿಯ ವಿನಯಾವತಾರದ ಶ್ರೀ ಜ್ಞಾನಗಂಗೆಯ ಉತ್ಪತ್ತಿಯು ಚೆನ್ನಾಗಿ ಕಾಣಿಸುವ  ಹಿಮವಂತಪರ್ವತದಶಿಖರ.
ಸೊರಗುವುದನ್ನು ಬಿಡು. ನಾನೂ ಅನಾದಿದಿಸೆಯವನು. ’ಅದು’ಅನಾದಿದಿಸೆ . ಅಲ್ಲಿ ನಾನಿದ್ದೆ. ಅದರರೀತಿಯಲ್ಲೇ ಅರಸರುಗಳಹಾದಿಯೂ ಅನಾದಿಯೆಂದು ತಿಳಿಯಬೇಕು. ಎಂದು ಕೃಷ್ಣನು ತಿಳಿಸುತ್ತಾನೆ. ನೋಡಿ:
ಮನೆಜಿನದೇಹವಾಗಿರುವಾಗಸೌಷ್ಟವ|ದನುಭವವಿಶ್ವರೂಪಾಗ್ರೇ||
ವಿನಯಾವತಾರಶ್ರೀಜ್ಞಾನಗಂಗೋತ್ಪತ್ತಿಸುನಯಾಗ್ರಹಿಮವಂತಪರ್ವಸ||   
ಸೊರಗುವುದುಬಿಡುನಾನೂಅನಾದಿಯದಿಶೆಯ|ದರತತ್ಅನಾದಿದ್ದೇಸೆಯೊಳು||
ನಾನಿದ್ದೆಅದರಂತೆಅರಸರದಿಶೆಯುಅನಾದಿಯೆಂದರಿಯದೆ|| 
ಎಲ್ಲರೂ ಸೇರಿಯುಗಯುಗಾಂತರದಲ್ಲಿ ಜೈನಕ್ಷೇತ್ರದಕಾಲವನ್ನು ಹುಡುಕುತ್ತ ಕಷ್ಟಕ್ಕೆ ಸಿಲುಕಿ ಆದಿ ಅನಾದಿಯ ಉಪವಾಸವನ್ನರಿಯದೆ ಸುಜ್ಞತೆಯನ್ನು ಮನದಲ್ಲಿ ಭಾವಿಸಿ, ಆತ್ಮಕ್ಕೆ ಮೋಕ್ಷದಪ್ರಯಾಣವೆಂದು ಸಾಗಿರುವುದೇ ನಿಜದಂಕವಾಗಿದೆ.  ಸಮ ಹಾಗೂ ವಿಷಮಾಂಕದ ಎಣಿಕೆಯನ್ನೂ ಅರಿಯದಿರುವ ಶತೃ ನಮ್ಮನ್ನೇನುಮಾಡಲು ಬರುತ್ತಾನೆ!? 
 ನೆಮ್ಮದಿಯಗಿರುವವರಗೀತರ್ಥದ ಪದವುಕೊನೆಯಾಗಿರುವಗುಣವರ್ಣನೆಯಿರುವ ಸಂತೋಷದಿಂದೊಡಗೂಡಿದ ಗಣಿಯೊಳಗಿರುವ ರತ್ನವನ್ನು ಮೇಲಕ್ಕೆ ತರಬೇಕಾದರೆ, ಮಣಿಅ ಆಶೆಯುಳ್ಳವನಾಗಿರಬೇಕು. ಕರುವುತಾಯಿಯಗರ್ಭದಿಂದ ಹೊರಬಂದಮೇಲೆ  ತಾನು ಮೊಲೆಯನ್ನು ತಿನ್ನುತ್ತಾ ಹೆಚ್ಚು ಶೋಭೆಯಿಂದಿದ್ದು, ಹಾಲಿನ ಅಮಲು ಏರಿದಮೇಲೆ ತಾನು ಹಸಿರನ್ನು ತಿನ್ನುವಂತೆ
 ಮನದಲ್ಲಿ ಅದೇ ತುಂಬಿರುವರಿಂದ ಹಿಂದಕ್ಕೆ ಹೋಗದೇ ಅದರಿಂದ ಹಿಂದಕ್ಕೆ ಬರದಿರುವ ವಿಧಿಯತಾಣವನ್ನು ಗೆಲ್ಲುವ ಸಾಧನೆಯ ಅನಂತಪದವಿಯನ್ನು ಹುಡುಕಬೇಕು ಅರ್ಜುನ .
ಮದ್ಯ ರಸ ಜಲ ಉರಿಯುವಬೆಂಕಿ ಗಾಳಿ ತರಪಿನಕಾಶದ ಸೂರ್ಯನುಮಾಡಿರುವ ಮನಸ್ಸು ಅದರ ಬುದ್ಧಿಯಲ್ಲಿ ಹುಟ್ಟಿದ ಅಹಂಕಾರವು ನನ್ನ ಪ್ರಕೃತಿಯ ಎಂಟು ಅಂಗಗಳು. ಎಂದು ಕೃಷ್ಣನು ಸೂಚಿಸುತ್ತಾನೆ.  ನೋಡಿ:               
ಶಿಪಳಿದೆಲ್ಲರುಕೂಡಿಯುಗಯುಗಾಂತರದೊಳ್|ಕ್ಷಪಕ್ಷೇತ್ರದಕಾಲವರೆಸುತ್ತ||
ಉಪಸರ್ಗಕೆಡೆಯಾಗಿಆದಿಅನಾದಿಯ|ಉಪವಾಸವರಿಯದೆಸುಜ್ಞ|| ಮನದೆಭಾವಿಸಿಆತ್ಮಗೆಮೋಕ್ಷದ| ಗಮನವದುವೆನಿಜದಂಕಸಮ|ಸಮವಿಷಮಾಂಕದೆಣಿಕೆಯರಿಯದಶತೃ| ನಮಗೇನುಮಾಡಲುಬರುವಾ||
ತಣಿಯುತರಃಪದಂತದ್ಗೀತಾರ್ಥದ|ಗುಣವರ್ಣನರಯಿಹಸರಸ|ಗಣಿಯೊಳುರ್ವರತ್ನವಮೇಲಕೆತ್ತಲು|   ಮಣಿಯಾಶೆಯುಳ್ಳವರುಬ್ಬೆ||ಆಬವಿಗರ್ಭದಿಂದುದಿಸಿದಮೇಲದು|ಆಬಂದುಮೊಲೆಯತಿನ್ನುತತಿ| ಶೋಭೆಯೊಳಿರ್ದುಹಾಲಿನಮಲೇರಿದಮೇಲೆ|  ತಾಬಂದುಹಸುರುತಿಂಬಂತೆ||
ಧದೆತುಂಬಿದದರಿಂದಹಿಂದಕೆಹೋಗದೆ|ಅದರಿಂದಹಿಂದಕೆಬರದ|ವಿಧಿಯತಾಣವಗೆಲ್ವಸಾಧಿಯನಂತದ| ಪದವಿಯಹುಡುಕಬೇಕುನರ||ಶರೆರಸಜಲ ಉರಿವಬೆಂಕಿಯುಗಾಳಿ|ತರಪಿನಾಕಾಶದರ್ಕನುಮಾ| ಡಿರೆಮನವದರಬುದ್ಧಿಯೊಳ್ಪುಟ್ಟಿದಹಂ| ಕಾರಶಸರಿನನ್ನಪ್ರಕೃತಿಎಂಟಂಗ||
ಎರಡೂವರೆದ್ವೀಪದೊಳಗೆ ಜಂಬೂದ್ವೀಪ.ಅದರ ದಕ್ಷಿಣಭಾರತಕ್ಕೆ  ವಿವರವಾಗಿ  ಕೃಷ್ಣನು ಅರ್ಜುನನಿಗೆ ಇತ್ತ  ೧೬೩ ಸವಿ  ಅಂಕಗಳಂಚು ಎಂದು ಈ ಭಗವದ್ಗೀತೆಯನ್ನು ಕುರಿತು ಕವಿಯು ಹೇಳಿದ್ದಾನೆ.   
ಷವೆರಡೂವರೆದ್ವೀಪದೊಳಗೆಜಂಬೂದ್ವೀಪ|ಅವರದಕ್ಷಿಣಭಾರತಕ್ಕೆ|ವಿವರದಿಕೃಷ್ಣನರ್ಜುನಗಿತ್ತರವತ್ಮೂರು| ಸವಿನೂರುಗಳಂಕದಂಚ|| ಇದಿಷ್ಟು ಕವಿ ಕುಮುದೇಂದುಮುನಿಯ ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತೆಯ ಕನ್ನಡ ವ್ಯಾಖ್ಯಾನದ ಸಂಕ್ಷಿಪ್ತ ಪರಿಚಯ.
*  *  *
ಆಲ್ಬರೂನಿ ಎಂಬ ವಿದ್ವಾಂಸನೊಬ್ಬನು ೭೦೦ ಶ್ಲೋಕಗಳ ಭಗವದ್ಗೀತೆಯನ್ನು ಪರ್ಷಿಯನ್ ಭಾಷೆಗೆ ತರ್ಜುಮೆಮಾಡಿರುವ ಮಾಹಿತಿಯಿದೆ. ಅಂದಮೇಲೆ ಈ ’ಭಗವದ್ಗೀತೆಯು’ ಮೊದಲಿನಿಂದಲೂ ಜಗತ್ತಿನ ಬೇರೆ ಬೇರೆ ಪ್ರದೇಶಗಳ ವಿದ್ವಜ್ಜನರ ಗಮನಸೆಳೆದಿದ್ದ ಉನ್ನತ ಸಾಹಿತ್ಯವಾಗಿತ್ತೆಂಬುದು ಸರ್ವವೇದ್ಯ.  ಆದರೂ, ೨೦೧೨ರ ಸುಮಾರಿನಲ್ಲಿ ರಾಷ್ಯಾದೇಶದ  ಒಂದುಪ್ರಾಂತ್ಯದ ಸರ್ಕಾರವು ’ಭಗವದ್ಗೀತೆ’ ಯನ್ನು ಕಾನೂನು ಮೋಲಕ ನಿಷೇಧಿಸುವ ಆಲೋಚನೆ ಪ್ರಕಟಿಸಿತು!
 ಇವರ ಮನೋಧರ್ಮಕುರಿತು ದ್ವಾರಕೆಯ ಕೃಷ್ಣನು ಭಗವದ್ಗೀತೆಯಲ್ಲಿ ”ಶೀತದೇಶದ ಜನರ ಅರಿವ ಅರಿವೆಂದರಿಯಲಾಗದು ಅರಿಯೆಂದು ತಿಳಿದು ಇರಿ’  ಎಂದು ಪಾರ್ಥನಿಗೆ ಉಪದೇಶಿಸಿರುವುದು ಸಿರಿಭೂವಲಯದಲ್ಲಿದೆ!!  ಅಂದರೆ, ನಮ್ಮ ಪ್ರಾಚೀನರಲ್ಲಿ ಬಹಳಷ್ಟುಜನ ತ್ರಿಕಾಲಜ್ಞಾನಿಗಳು ಇರುತ್ತಿದ್ದರೆಂಬುದರಲ್ಲಿ ಸಂದೇಹವಿಲ್ಲ!!
ಭಗವದ್ಗೀತೆಯು ಮಾನವಜೀವನದ ಕೈದೀವಿಗೆ. ದುಃಖದಲ್ಲಿ ಮುಳುಗಿದವರಿಗೆ ಚೈತನ್ಯ ನೀಡುವ ಅಮೃತ’  ಎಂಬ ನಂಬಿಕೆಯು ಬಹಳ ಹಿಂದಿನಿಂದಲೂ ಇದೆ. ಹಿಂದೆಲ್ಲ ಎಳೆಪ್ರಾಯದಲ್ಲಿ ವಿಧವೆಯಾದ ಹೆಣ್ಣುಮಕ್ಕಳು  ತಮ್ಮ ದುಃಖವನ್ನು ಮರೆಯಲು ಭಗವದ್ಗೀತೆಯನ್ನು ಓದಬೇಕೆಂದು ಹಿರಿಯರು ಸಲಹೆ ನೀಡುತ್ತಿದ್ದರು. ಇಂಥ ಸಲಹೆನೀಡುತ್ತಿದ್ದವರನ್ನು ’ವಿಚಾರಶಾಲಿಗಳು’  ಛೇಡಿಸುತ್ತಿದ್ದುದನ್ನು ನಾನು ಕಂಡಿದ್ದೇನೆ. ”ಪ್ರಾಯದಲ್ಲಿ ಗಂಡನನ್ನು ಕಳೆದುಕೊಂಡವಳಿಗೆ ಬೇಕಿರುವುದು  ಬೇರೊಬ್ಬ ಜೀವನಸಂಗಾತಿಯ ಬೆಚ್ಚನೆಯ ಅಪ್ಪುಗೆಯೇ ಹೊರತು; ಗೊಡ್ಡು ವೇದಾಂತದ ಭಗವದ್ಗೀತೆಯಲ್ಲ’ ಎಂಬುದು ಅಂಥವರ  ವಾದವಾಗಿರುತ್ತಿತ್ತು.  ಭಗವದ್ಗೀತೆಯ ಓದಿನಿಂದ, ಮನನದಿಂದ ತಮ್ಮ ಮನದಾಳದ ನೋವನ್ನು ಸಮೂಲವಾಗಿ; ಖಚಿತವಾಗಿ ಕಿತ್ತೊಗೆದು, ದುಃಖವನ್ನು ಪರಿಹರಿಸಿಕೊಂಡವರು ಇಂಥ ವಾದವನ್ನು ಒಪ್ಪಲು ಸಾಧ್ಯವಿರುವುದಿಲ್ಲ.  ಈ ರೀತಿಯ ವಾದ- ಪ್ರತಿವಾದಗಳೆಲ್ಲವೂ ಅವರವರ ಆಂತರಿಕ ಸಂಸ್ಕಾರವನ್ನು ಅವಲಂಬಿಸಿರುತ್ತದೆ. (ಮುಕ್ತಾಯವಾಯಿತು)
                                                              ಸಿರಿಭೂವಲಯದಸುಧಾರ್ಥಿ.

Wednesday 12 February 2020

ಸಿರಿಭೂವಲಯದಲ್ಲಿ ಋಗ್ಮಂತ್ರವಿರುವುದೆಲ್ಲಿ??



ಯಾವುದೇ ಸಾಹಿತ್ಯಭಾಗವಾಗಲೀ ಇಂದು ನಾವು ಸರಳವಾಗಿ ಓದಲು ಸಾಧ್ಯವಿರುವ ಲಿಪಿಕ್ರಮದಲ್ಲೇ ಸಿರಿಭೂವಲಯದಲ್ಲಿ  ದೊರೆಯುವುದಿಲ್ಲವೆಂಬ ವಿಚಾರವನ್ನು ಈಗಾಗಲೇ ಹಲವಾರುಸಲ ಸೂಚಿಸಿದ್ದಾಗಿದೆ.
ಮೂಲಕಾವ್ಯದಲ್ಲಿ ಈ ಮಾಹಿತಿಗಳು ಬಹಳ ರಹಸ್ಯವಾಗಿ ಅಡಗಿರುತ್ತವೆ. ಅವುಗಳನ್ನು ಕ್ರಮಬದ್ಧವಾಗಿ ಹುಡುಕಿ ಪ್ರತ್ಯೇಕಿಸಿ, ನಮ್ಮ ಇಂದಿನ ಲಿಪಿಕ್ರಮಕ್ಕೆ ಅನುಗುಣವಾಗಿ ಜೋಡಿಸಿಕೊಂಡಾಗಮಾತ್ರವೇ ನಮಗೆ ಯಾವುದೇ ಸಾಹಿತ್ಯಭಾಗವು ಗೋಚರವಾಗುತ್ತದೆ!!! ಇಲ್ಲವಾದಲ್ಲಿ ಅವು ಮೂಲರೂಪದಲ್ಲೇ  ಇದ್ದಲ್ಲಿ ಅಡಗಿಕುಳಿತಿರುತ್ತವೆ!! ಯಾರಕಣ್ಣಿಗೂ ಕಾಣಿಸುವುದಿಲ್ಲ!!
ಕೆಲವರು ಸಿರಿಭೂವಲಯದಲ್ಲಿ ಋಗ್ವೇದದ ಮಂತ್ರಗಳು ಎಲ್ಲಿವೆ ತೋರಿಸಿ? ಎಂದು ಪ್ರಶ್ನಿಸುವುದಿದೆ! ಅವು ಎಲ್ಲಿವೆ? ಎಂಬುದನ್ನು ಸುಧಾರ್ಥಿಯಲ್ಲ, ಕುಮುದೇಂದುಮುನಿಯೇ ಸರಳವಾಗಿ ಖಚಿತವಾಗಿ ಸೂಚಿಸಿರುವುದಿದೆ. ಆಸಕ್ತಿ ಇರುವವರು  ಸಿರಿಭೂವಲಯಸಾಗರದಲ್ಲಿ ಮುಳುಗಿ ಅದನ್ನು ಪತ್ತೆಮಾಡಿ, ಗುರುತಿಸಿ, ಗಮನಿಸಬಹುದು!!
ಸಿರಿಭೂವಲಯದ ಅಂತರ್ಸಾಹಿತ್ಯವು ಬೇರೆಬೇರೆ ’ಬಂಧಗಳು’ ,  ’ಅಶ್ವಗತಿ ’ ಹಾಗೂ  ’ಸ್ತಂಬಕಾವ್ಯ’ ರೂಪದಲ್ಲಿ ಉಗಮವಾಗುವುದನ್ನು ಕುರಿತು ಈಗಾಗಲೇ ವಿವರಿಸಲಾಗಿದೆ.  ಸ್ತಂಬಕಾವ್ಯರೂಪದ ಅಂತರ್ಸಾಹಿತ್ಯ ತೆಗೆಯುವಲ್ಲಿ ’ಶ್ರೇಣಿ’ಗಳ ಲೆಕ್ಕಾಚಾರವು ಪ್ರಮುಖವಾಗಿರುತ್ತದೆ.
 ಈ ಶ್ರೇಣಿಗಳು ಒಂದೇ ಅಧ್ಯಾಯದಲ್ಲಿರಬಹುದು, ಅಥವಾ ಹಲವಾರು ಅಧ್ಯಾಯಗಳಲ್ಲಿ ಪ್ರವಹಿಸಿರಬಹುದು. ಸಾಹಿತ್ಯವನ್ನು ಆಧರಿಸಿ ಅದರ ಜಾಡನ್ನು ಗುರುತಿಸಬೇಕಾಗುತ್ತದೆ.  ಪ್ರಕೃತ ಇಲ್ಲಿ ಋಗ್ಮಂತ್ರಗಳು ದೊರೆಯುವ ಸ್ಥಳವನ್ನು ಕುರಿತು ಕುಮುದೇಂದುಮುನಿಯು  ’’ಶ್ರೇಣಿಯನಿಳಿದು, ಏರಿ, ಬಲಭಾಗದಲ್ಲಿ ಅದರ ಅಂಕಿಗಳು ನಾಗಬಂಧದಲ್ಲಿ,  ಇತರಕೆಲವು ಬಂಧಗಳಲ್ಲಿ ಬೇರೆಬೇರೆ ಭಾಷೆಗಳಲ್ಲಿ ಹರಡಿಕೊಂಡು ಹುದುಗಿದೆ” ಎಂದು ಖಚಿತವಾಗಿ ಸೂಚಿಸಿರುವುದಿದೆ.
ಅವುಗಳನ್ನು ಹುಡುಕಿ ಪ್ರತ್ಯೇಕಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಬೇಕಿದ್ದಲ್ಲಿ ಋಗ್ಮಂತ್ರಗಳ ಪರಿಚಯವಿರುವವರು,  ಸೂಕ್ತ ಸಿದ್ಧತೆಯೊಂದಿಗೆ ಈ ಗಣಿಯೊಳಗಿಳಿದು ಹುಡುವಕಾರ್ಯ ನಡೆಸಬೇಕಿದೆ!!  ಬೇಕಿರುವವರು ಹುಡುಕಬಹುದು, ಬೇಡದವರು ಬಿಡಬಹುದು. ಇಲ್ಲಿ ಯಾರಿಗೂ ಯಾವುದೇ ರೀತಿಯ ಒತ್ತಾಯವು ಖಂಡಿತವಾಗಿಯೂ ಇಲ್ಲ!!
 (೨೪ನೇ ಅಧ್ಯಾಯದ ಅಶ್ವಗತಿಯ ಅಂತರ್ಸಾಹಿತ್ಯದ ೧೯ನೇ ಪದ್ಯನೋಡಿರಿ)   
                - ಸಿರಿಭೂವಲಯದಸುಧಾರ್ಥಿ.

Tuesday 11 February 2020

ಸಂಧ್ಯಾವಂದನೆ ಯಾರಿಗೆ?

ಸನಾತನ ಸಂಪ್ರದಾಯದಲ್ಲಿ ಬ್ರಾಹ್ಮಣರು ತ್ರಿಕಾಲ ಸಂಧ್ಯಾವಂದನೆಯನ್ನಾಚರಿಸುವುದು ಪದ್ಧತಿಯಾಗಿತ್ತು. ಈಗ ಬಹುಪಾಲು ’ದಶಗಾಯತ್ರೀಜಪ’ ದಮಟ್ಟಿಗೇ ಈ ಪದ್ಧತಿಯು ಸೀಮಿತವಾಗಿದೆ! ಅದೂ ಇಲ್ಲದೇ ಇರುವವರೂ ಇರಬಹುದು!! ಪರಿಸರ ಹೀಗಿರುವಲ್ಲಿ  ’ನಾವು ವೇದಸಂಪ್ರದಾಯವನ್ನು ಒಪ್ಪುವುದಿಲ್ಲ’ ಎಂದು ಬಹಿರಂಗವಾಗಿಯೇ ಘೋಷಿಸುವ  ಜೈನಸಂಪ್ರದಾಯದವರು ಈ ಸಂಧ್ಯಾವಂದನೆಯ ಕ್ರಿಯೆಯನ್ನು ಆಚರಿಸುವರೋ ಇಲ್ಲವೋ ಎಂದು ಖಚಿತವಾಗಿ ಹೇಳಲಾಗದು.
 ಆದರೂ ೧೨೦೦ ವರ್ಷಗಳ ಹಿಂದಿನವನಾದ ಕುಮುದೇಂದುಮುನಿಯು ತನ್ನ ಸಿರಿಭೂವಲಯ ಕಾವ್ಯದಲ್ಲಿ ಈ ಸಂಧ್ಯಾವಂದನೆಯ ಕ್ರಮವು ಜೈನಸಮುದಾಯದಲ್ಲಿಯೂ ಪ್ರಚಲಿತವಿದ್ದ ಮಾಹಿತಿಯನ್ನು ಖಚಿತವಾಗಿ ಸೂಚಿಸಿರುವುದಿದೆ!! ಇದನ್ನು ಯಾರಾದರೂ ’ಈ ಮಾಹಿತಿಯು ತಪ್ಪು. ಇದು ಸುಧಾರ್ಥಿಯ ಸ್ವಕಪೋಲ ಕಲ್ಪಿತ ಬರಹ ’ಎಂದು ವಾದಿಸುವುವುದಾದಲ್ಲಿ, ಅದಕ್ಕೆ ಉತ್ತರಿಸಿ, ಅವರಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯ ನನಗಿಲ್ಲ!!
 ಕಾವ್ಯದ ಅಧ್ಯಯನ ಸಮಯದಲ್ಲಿ ನಾನು ಕಂಡ ಮಾಹಿತಿಯನ್ನು ಯಥಾವತ್ತಾಗಿ ಇಲ್ಲಿ ನಿರೂಪಿಸಿದ್ದೇನೆ. ಅದನ್ನು ಗ್ರಹಿಸಿ, ಸಮ್ಮತಿಸುವುದೂ ಬಿಡುವುದು ಯಾವುದೇ ಸಮುದಾಯದ ಓದುಗರಿರಲೀ ಬಿಟ್ಟ ಸಂಗತಿ. ಸಿರಿಭೂವಲಯದಲ್ಲಿ  ಅಂತರ್ಗತವಾದ ಮಹಿತಿಗಳ ಕಿಂಚಿತ್ ಪರಿಚಯಕ್ಕಾಗಿ ಈ ಬರಹವೇ ಹೊರತು, ಯಾವುದೇ ರೀತಿಯ ವಾದ- ಪ್ರತಿವಾದಳಿಗೂ ಸುಧಾರ್ಥಿಯು ಆಸಕಿಹೊಂದಿಲ್ಲ.
*   *   *
ಸಿರಿಭೂವಲಯ ಕಾವ್ಯದ ಅಧ್ಯಾಯ ೩೬ ರಿಂದ  ಅಧ್ಯಾಯ ೪೦ರವರೆವಿಗೆ ಪೂರ್ಣಪದ್ಯಗಳ ೨ನೇ ಪಾದದ ಕೊನೆಯಕ್ಷರಗಳನ್ನು  ಜೋಡಿಸಿಕೊಳ್ಳುತ್ತಾ ಕೆಳಮುಖವಾಗಿ ಸಾಗಿದಾಗ ದೊರೆಯುವ ಅಕ್ಷರಗಳ ಸರಪಣಿಯಲ್ಲಿ  ಗಮನಿಸಿದರೆ: ಈ ಕೆಳಕಂಡ ಜೈನಸಂಪ್ರದಾಯದ ಸಂಧ್ಯಾವಂದನ ಮಂತ್ರದ ಪಾಠವು ಉಗಮವಾಗುತ್ತದೆ. 
ಅಥಸಂಧ್ಯಾವಂದನಾ
ಅಪವಿತ್ರಪವಿತ್ರೋವಾಸರ್ವಾವಸ್ಥಾಗತೋಪಿವಾ
ಯಸ್ಮರೇಪರಮಾತ್ಮಾನಂಸಬಾಹ್ಯಾಭ್ಯಂತರೇಶುಚಿಃ
ಅಪವಿತ್ರಃಪವಿತ್ರೋವಾಸುಸ್ತಿತ್ಯೋದುಸ್ಥಿತೋಪಿವಾ|
ಧ್ಯಾಯೇಪಂಚನಮೋಕಾರಸರ್ವಪಾಪಃಪ್ರಮುಚ್ಯತೇ|
ಸರ್ವವೇದೇಷುಯತ್ಪುಣ್ಯಂಸರ್ವತೀರ್ಥೇಷುಯತ್ಫಲಂ|
ತತ್ಫಲಂಸಮವಾಪ್ನೋತಿಸ್ತುತ್ವಾದೇವಂಜಿನೇಶ್ವರಃ|
ವಾಸನಾದ್ವಾಸುದೇವಸ್ಯವಾಸಿತಂತೋಜಗತ್ರಯಂ|
ಸರ್ವಭೂತನಿವಾಸೋಸಿನೇಮಿಕೃಷ್ಣನಮೋಸ್ತುತೇ|
ನಮೊಸ್ತ್ವನಂತಾಯಸಹಸ್ರಮೂರ್ಥಯೇಸಹಸ್ರಪಾದಾಕ್ಷಿಶಿರೋರುಬಾಹವೇ|
ಸಹಸ್ರನಾಮ್ನೇಪುರುಷಾಯಶಾಶ್ವತೇಸಹಸ್ರಕೋಟಿಯುಗಧಾರಿಣೇನಮಃ|
ಆಸತ್ಯಲೋಕದಾಶೆಷಾಲೋಕಾಲೋಕವಾತತ್ರೀಣ್ಯೇಸನ್ತಿಬ್ರಾಹ್ಮಣಾ|
ದೇವಾಸ್ತೇಭ್ಯೋತಾಕಾನ್ತಿಕೇನಮಃ ವನ್ದೇಗುರೂಣಾಂಚರಣಾರವಿಂದೇ|
ಸಂದರ್ಶಿತಸ್ವಾತ್ಮಸುಖಾವಬೋಧೇಜನಸ್ಯೇಜ್ಞಾಗಲಿಕಾಯಮಾನೇ|
ಸಂಸಾರಹಾಲಾಹಲಮೋಹಶಾನ್ತೈವನ್ದೇಗುರುಪದದ್ವನ್ದ್ವಮ್|
ವಾಜ್ಞ್ ಮಾನಸಗೋಚರಂಧರ್ಮಶುಕ್ಲಪ್ರಭಾಮೀಶ್ರಮತಕ್ರ್ಯಂತ್ರೈಪುರಂಮಹಃ|
ಅಚಿಂನ್ತ್ಯಮವ್ಯಕ್ತತಮನಂತಮವ್ಯಯಂವಿಭುಂಪ್ರಭುಂ|
ಭಾವಿತಭೂತಭಾವಕಂತ್ರೈಲೋಕ್ಯವಿಸ್ತಾರವಿಹಾರತಾರಕಂ| ಹರಿಂಪ್ರಪಸನೋಸ್ಮಿಗತಿಂಮಹಾತ್ಮನಾಪಾರಾಶರ್ಯವಚಸ್ಸರೋಜಮಮಲಂ|
ಗಾಥಾರ್ಥಗಂಧೋತ್ತಟಂವಾನಾಖ್ಯಾನಸಕೇಸರಂಜಿನತಥಾಸದ್ಭಾನುನಾಬೋಧಿತಂ|
ಲೋಕೇಸಜ್ಜನಷಟ್ಪದೈರಹರಹಃಪೇಪೀಯಮಾನಂಮದಾ|
ಭೂಯಾದ್ಭೂವಲಯಾಕ್ಷರಂಸಲಲಿತಂಗಾಯತ್ರೀಋಗ್ವಂಶತಂ| (ಅ.೪೦)
(೪೨ನೇ ಅಧ್ಯಾಯದಿಂದ ೪೫ನೇ ಅಧ್ಯಾಯದ  ೨ನೇ ಪಾದದ ಕೊನೆಯಿಂದ ೪ನೇ ಅಕ್ಷರಲ್ಲಿ ಕೆಳಕ್ಕೆ ಸಾಗಿದಾಗ ದೊರೆಯುವ ಅಕ್ಷರಗಳಸರಪಣಿಯಲ್ಲೂ ಈ ಸಂಧ್ಯಾವಂದನ ಮಂತ್ರಭಾಗವು ಪ್ರವಹಿಸಿದೆ. ಅವನ್ನು ಇಲ್ಲಿ ಸೂಚಿಸಿಲ್ಲ)--
ಪುನಃ ೪೮ನೇ ಅಧ್ಯಾಯದಿಂದ ೫೯ನೇ ಅಧ್ಯಾಯದವರೆವಿಗೆ ಪೂರ್ಣ ಪದ್ಯಗಳ ಎರಡನೇ ಪಾದದ ಕೊನೆಯಕ್ಷರ ಮೇಲಿನಿಂದ ಕೆಳಕ್ಕೆ ಸಾಗಿದಾಗ:
ವರ್ತಮಾನ ಸಂವತ್ಸರೇ ಅಯನೇ ಋತೌ ಮಾಸೆ ಪಕ್ಷೇ ತಿಥೌ ನಾಸೋ (ಥೋ?)ವಂಶೇ ಉಚ್ಚಗೋತ್ರ ಸೂತ್ರ ಪ್ರವರ ಋಗ್ಶಾಖಾ ವಿಶಿಷ್ಠೇ ಪ್ರಶಸ್ತ ನಕ್ಷತ್ರತಾರಕಾ ಯೋಗ ಕರಣ ಹೋರಾ ದ್ರೇಕ್ಕಾಣ ಮುಹೂರ್ತ ಧಗ್ದಯುಕ್ತಾ ಯಾಂ ದೇವದತ್ತ ನಾಮಧೇಯೋಹಂ ಮಮಬಂಧುಹತ್ಯಾ ಅ.೪೮
 ದಿ ಸರ್ವಪಾಪಕ್ಷಯಾರ್ಥಂ ಮಮಸಂಘಕೃತ ಸರ್ವ ಪಾಪ ಕ್ಷಯಾರ್ಥಂ ವರ್ಣಶುದ್ಧ್ಯರ್ಥಂ ಆಯುರಾರೋಗ್ಯ ಐಶ್ವರ್ಯಾದಿ ಪಶ್ಚಿಮ ಸಲ್ಲೇಖನಾಂತ ಸಮಸ್ತ ಇಹಪರಸುಖಸೊಧ್ಯರ್ಥಂ ದುಃಖಶಾಂತ್ಯರ್ಥಂ ಸಮಸ್ತ ಮಂಗಲಪಾಹು ಅ.೪೯.
ಡ ಸಿದ್ಯರ್ಥಂ ತ್ರಿಕಾಲ ಸಂಧ್ಯಾಚರಣಂ ಕರಿಷ್ಯೆ ಇತಿ ಸಂಕಲ್ಪಹಃ ಅಥಾಚಮನಂ ಪ್ರಾಣಾವಾಯಂಯ ಮಮ ಉಪಾತ್ತ ಪಾಪಪುಣ್ಯಕ್ಷಯದ್ವಾರಾ ಶ್ರೀ ತ್ರಿಜಗತ್ಪರಮೇಶ್ವರ ಪ್ರೀತ್ಯರ್ಥಂ ತ್ರಿಕಾಲ ಸಂಧ್ಯಾರ್ಘ್ಯಪ್ರಧಾನಂ ಕರಿಷ್ಯೇ ಓಂ ಭೂರ್ಭುವಃ ಓಂ ಸುವಹಃ ಓಂ ಹ್ರೀಂ ಝ್ವೀಂ ಕ್ಷ್ವೀಂ ವಂ ಮಂ ಹಂ  ಸಂ ತಂ ಪಂ ದ್ರಾಂ ದ್' ಅ.೫೦.
'ರೀಂ ಹಂ ಸಃ ಮಃ ಸ್ವಾಹಾ ಅಥ ಪ್ರಾಣಾಯಾಮಃ ಓಂ ಭೂರ್ಭುವಸ್ಸುವಗ ಓಂ ಣಮೋ ಅರಹಂತಾಣಂ ಓಂತತ್ಸವಿತುರ್ವರೇಣ್ಯಂ ಓಂ ಣಮೋಸಿದ್ಧಾಣಂ ಭರ್ಗೋ ದೇವಸ್ಯಧೀಮಹಿ ಓಂ 'ಣಟಗ್ಇರಿಯಾದವ' ಎಂದಿದೆ ಇದು ( ಓಂ 'ಣಮೋ ಆಯಿರಿಯಾಣಂ' ಎಂದಾಗಬೇಕು) ಧಿಯೋ ಯೋನಃ ಓಂಣಮೋ ಉವಜ್ಝಾಯಾಣಂ ಪ್ರಚೋದಯಾತ್  ಓಂ ಣ ಅ.೫೧.
ಮೋಳ್ಳೋಏಸವ್ವಸಾಹೂಣಂ ಏವಂತ್ರಿಃ ಅಸಾವಾದಿತ್ಯೋ ಬ್ರಹ್ಮ ಓಂ ಹ್ರೀಂ ಸ್ನಾನ ಸ್ಥಾನ ಭೂಃ ಶುದ್ಧಯತುಸ್ವಾಹಾ ಓಂ ಹ್ರಾಂ ಹ್ರೀಂ ಹ್ರೂಂ ಹ್ರೌಂ ಹ್ರಃ ಗಾಯತ್ರೀನ್ ಅಸಿಆಉಸಾ ಅನಾದಿಮೂಲ ಋಗ್ಮಂತ್ರಮಿದಂ ಸಮಸ್ತ ಗಂಗಾಸಿಂಧ್ವಾದಿ ನದನದೀತೀ ಅ.೫೨
ರ್ಥಜಲಂಸವಿತು ಸ್ವಾಹಾ ಝಂ ಠಂ ಸ್ವರಾವೃತಂ ತೋಯಮಂಡಲ ತ್ರೈವೇಷ್ಠಿತಂ ತೋಯೋ ನ್ಯಸ್ಯಾಗ್ರತರ್ಜನ್ಯಾತೇನಾನು ಸ್ನಾನಮಾಚತರ್ಧ ಚಂದ್ರಘಟೀರೂಪಂ ಚತುಃ ಪತ್ರಾಂಬುಜಾನ್ಹ ವಿಲಾನ್ತನಾಂ ತಾಬ್ತ ದಿಕ್ಕೋಣಂ ಪಂಚಾಗಸ್ಥಲಮಂಡಲ. ಅ.೫೩
ಂ ವಂ ಪಂ ಇತಿ ಬೀಜಂ ಕೋಣ ಚತುಷ್ಕೇಲಿಖಿಕ್ವಾ ಓಂ ಯ ರ ಲ ವ ಶ ಷ ಸ ಹ ಂ(ಅಂ) ಃಅಹ್) ಃ(ಕಹ್) ಃಃ (ಫಹ್) ಅಮುಷ್ಯ ಪ್ರಾಣಾ ಇಹಪ್ರಾಣಾ ಇಹಮಂತ್ರ ಯಂತ್ರ ತಂತ್ರಾಣಾಂ ಕಾಯವಾಚಗ್ಮನಃ ಚಕ್ಷ ಶ್ರೋತ್ರ ತ್ವಕ್ ಜಿಹ್ವಾ ಘ್ರಾಣ ಪ್ರಾಣಾ ಶ್ಚಿರಮತ್ರತಿಷ್ಠಂತುಸ್ವಾಹಾ ಝ್ವ ಲಂ ಹ್ವ ಅ.೫೪
ಃ ಪಃ ಇತಿ ಸುರಭಿಮುದ್ರಾಬೀಜಾನಿ ಇತಿ ಮುದ್ರಾಃ ಚಕ್ಷುರ್ವೋಂ ಶಾಂತಿ  ಗಾಯತ್ರೀ ಸುಪ್ರತಿಷ್ಠಿತಾ ಏತೇ ಮುದ್ರಾನಜಾನಾತಿ ಗಾಯತ್ರೀ ನಿಷ್ಫಲಂಭವೇತ್ ಯಥಾಶಕ್ತಿ ಗಾಯತ್ರೀ ಜಪಂ ಕರಿಷ್ಯೇ ಓಂಅಮೃತೇ ಅಮೃತೋದ್ಭವೇ ಅಮೃತವರ್ಷಿಣೀ ಅಮೃತಂ ಸ್ರಾವಯೇ ಸ್ರಾವಯ ಸವಿತ್ರೀ ಸಂ ಸಂ ಕ್ಲೀಂ ಕ್ಲೀಂ ಬ್ಲೂಂ ಬೂಂ ದ್ರಾಂ ದ್ರೀಂ ದ್ರಾವಯ ದ್ರಾವಯ ಹಂ ಅ.೫೫
ರುಂ ಝ್ವೀಂ ಕ್ಷ್ವೀಂ ಹಂಸಿ ಹಂಸಃ ಅಸಿಆಉಸಾ ಸರ್ವಮಿದ ಮಮೃತಂಭವತು ಸ್ವಾಃ ಇತಮೃತೀ ಕರಣಂ ಓಂ ಹ್ರೀಂ ಸರ್ವಕರ್ಮ ಮಲಂ ಪ್ರಕ್ಷಾಲ್ಯ ಕ್ಷಾಲಯಸ್ವಾಹಾ ಸ್ನಾನಂ ಓಂ ಓಂ ಓಂ ಹ್ರೀಂ ಝ್ವೀಂ ಝ್ವೀಂ ಕ್ಷ್ವೀಂ ವಂ ಮಂ ಹಂ ಸಂ ಅ.56.
ತಂ ಪಂ ದ್ರಾಂ ದ್ರೀಂ ಹಂಸಿ ಹಂಸಃ ಸ್ವಾಹಾ ಓಂ ಅ ಆ ಸಾ ಜಲಂ ಮಾರ್ಜನಂ ಕರೋಮಿಸ್ವಾಹಾ ಮಮದುರಿತಸಂತಾ ಪಾಪನೋ ದೋಸ್ತು ಸ್ವಾಹಾ ಇತಿ ತ್ರಿವಾರಂ ಪುನಸ್ಸ್ನಾನಂ ಓಂ ಝಾಂ ವಂ ಹ್ವಃ ಸ್ವಾಹಾ ಇತಿದಿಗಂಜಲಿಃ ಓಂ ಹ್ರೀಂ ಅ ಸಿ ಆ ಉ ಸಾ ಜಲಪ್ರದಾ ಅ.೫೭
ನಂ ಓಂ ಹ್ರಾಂ ಓಹಿ ಜಿಣಾಣಃ ಸ್ವಾಹಾ ಓಂ ಹ್ರೀಂ ಸ್ವವ ಅರ್ಹದ್ಭ್ಯಃ ಸ್ವಾಹಾ ಓಂ ಹ್ರೂಂ ಸಿದ್ಧೇಭ್ಯಃ ಸ್ವಾಹಾ ಓಂ ಹ್ರೇಂ ಸೂರಿಭ್ಯಃ ಸ್ವಾಹಾ ಓಂ ಹ್ರೈಂ ಪಾಠಕೇಭ್ಯಃ ಸ್ವಾಹಾ ಓಂ ಹ್ರೌಂ ಸರ್ವಸಾಧುಭ್ಯಃ ಸ್ವಾಹಾ ಓಂ ಹ್ರಹಃ ಜಿನಧರ್ಮಭ್ಯಃ ಸ್ವಾಹಾ ಓಂ ಹ್ರೂಂ ಜಿನಚೈತ್ಯೇಭ್ಯಃ ಸ್ವಾಹಾ ಓಂ ಹ್ರೇಂ ಜಿನಚೈತ್ಯಾಲಯಾದಿ ಸರ್ವ ಅ.೫೮ರ್ಮೇ
ಆಪಾಗ್ನಿ ರ್ವಾಯು ವನಸ್ಪತ್ಯಂತರ್ಗತ ಅಮೃತೇ ನಾವ್ತಾಂ ಪೂರಿಂ ಬ್ರಂಹಾಯತ ಯಗ್ದರ್ಶನೇಭ್ಯಃ ಸ್ವಾಹಾ ಓಂ ಹ್ರೋಂ ಸಂಯಜ್ಞಾನೇಭ್ಯಃ ಸ್ವಾಹಾ ಓಂ ಹ್ರೌಂ ಸಂಯಕ್ಚಾರಿತ್ರೇಭ್ಯಃ ಸ್ವಾಹಾ ಓಂ ಹ್ರಂ ಸಮ್ಯಕ್ತಪೋಭ್ಯಃ ಸ್ವಾಹಾ ಓಂ ಹ್ರಹಃ ಅಸ್ಮದ್ ಸಮಸ್ತವಿದ್ಯಾಗುರುಭ್ಯಃ ಸ್ವಾಹಾ ಆಚಮ್ಯ ಶಾಂತಿಶ್ಶಾಂತಿಶ್ಶಾಂತಿಃ|| ಅ.೫೯. 
*   *    *
ಮಹಾಭಾರತದ ಅನುಶಾಸನಿಕ ಪರ್ವದಲ್ಲಿ ಭೀಷ್ಮ-ಯುಧಿಷ್ಠಿರ ಸಂವಾದದ ವಿಷ್ಣುಸಹಸ್ರನಾಮದಲ್ಲಿ ಬರುವ ಇಲ್ಲಿನ ಕೆಲವುಶ್ಲೋಕಗಳನ್ನು  ವೈದಿಕ ಸಂಪ್ರದಾಯದ ಸಂಧ್ಯಾ ವಂದನೆಯ ಅಂತ್ಯದಲ್ಲಿ ನದಿ, ಮುನಿ, ದೇವ, ಋಷಿವಂದನೆ ಮಾಡುವಲ್ಲಿಯೂ ಉಪಯೋಗಿಸಲಾಗುತ್ತಿದೆ. ಸರ್ವವೇದೇಷುಯತ್ಪುಣ್ಯಂಸರ್ವತೀರ್ಥೇಷುಯತ್ಫಲಂತತ್ಫಲಂಸಮವಾಪ್ನೋಸ್ತುತ್ವಾದೇವಂ ಜನಾರ್ಧನಂ ಎಂದಿರುವಲ್ಲಿ ಜನಾರ್ಧನನ ಬದಲಿಗೆ ಜಿನೇಶ್ವರಃ ಎಂಬ ಪಾಠಾಂತರ ವಿದೆ. ವಾಸನಾದ್ವಾಸುದೇವಸ್ಯವಾಸಿತಂತೋಜಗತ್ರಯಂಸರ್ವಭೂತನಿವಾಸೋಸಿವಾಸುದೇವ ನಮೋಸ್ತುತೇ ಎಂದಿರುವಲ್ಲಿ 'ನೇಮಿಕೃಷ್ಣ ನಮೋಸ್ತುತೇ' ಎಂಬ ಪಾಠಾಂತರವಿದೆ. ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ಮೂವರು ದೇವತಾ ವಿಶೇಷಗಳೂ ಒಂದೇ ಆಗಿದೆ. 'ಏಕದೈವ ಯಜಮಾನ್ಯ' ಎಂಬ ವೇದೋಕ್ತ ಸೂಕ್ತಿಯನ್ನು ಅಕ್ಷರಶಃ ಪ್ರತಿಪಾದಿಸಿರುವ ಸರ್ವಧರ್ಮ ಸಮನ್ವಯಿಯಾದ ಕುಮುದೇಂದುಮುನಿಯು ಸಹಜವಾಗಿಯೇ ಈ ಪಾಠಾಂತರಗಳನ್ನು ರೂಪಿಸಿದ್ದಾನೆ. ಯಾವ ಯಾವ ಫಲಪ್ರಾಪ್ತಿಗಾಗಿ ಸಂಧ್ಯಾವಂದನೆಯನ್ನಾಚರಿಸಬೇಕೆಂಬ ವಿವರವನ್ನು ಗಮನಿಸಿದಾಗ, ನಿಜಕ್ಕೂ ಅರ್ಹರಾದ ಯಾರೊಬ್ಬರಿಗೂ ಸಂಧ್ಯಾವಂದನೆಯನ್ನು ದೂರವಿರಿಸುವ  ಇಚ್ಛೆಯಾಗುವುದಿಲ್ಲ!
 ’ಇಂದಿನ ಸಾಮಾಜಿಕ ಪರಿಸರದಲ್ಲಿ ಇಂಥ ಅರ್ಥಹೀನ ಆಚರಣೆಗಳು ಹಾಸ್ಯಾಸ್ಪದ’ ಎಂದು ಭಾವಿಸುವ ಮೇಧಾವಿಗಳಿಗೆ ನಮ್ಮಲ್ಲಿ ಕೊರತೆಯಿಲ್ಲ. ಮನೋಬಲವನ್ನು ಹೆಚ್ಚಿಸುವುದು , ಇಚ್ಛಾಶಕ್ತಿಯನ್ನು  ಹೆಚ್ಚಿಸುವುದು,  ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವುದು ಹಾಗೂ ಎಂಥ ಪ್ರಕ್ಷುಬ್ಧ ಪರಿಸ್ಥಿತಿಯಲ್ಲೂ ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳುವುದರಿಂದ ಆಗುವ  ಫಲವನ್ನು ಯಾರೊಬ್ಬರೂ ಊಹಿಸಿಕೊಳ್ಳಲಗದ್ದು. 
ಇದರೊಂದಿಗೇ ಗಾಯತ್ರೀಜಪ ಮಾಡುವಲ್ಲಿ ’ಮುದ್ರಾಜ್ಞಾನ’ ವಿರಬೇಕು’ ಇಲ್ಲವಾದಲ್ಲಿ ಅದು ನಿಷ್ಫಲ’ ಎಂಬ ಎಚ್ಚರಿಕೆಯನ್ನೂ ನಾವು ಗಮನದಲ್ಲಿರಿಸಿಕೊಳ್ಳಬೇಕು! ಇದನ್ನು ಇತ್ತೀಚಿನಯಾರೂ ಪುರೋಹಿತರು ರೂಪಿಸಿದ ನಿಯಮೆವೆಂದು ಯಾರೂ ಉದಾಸೀನಮಾಡುವಂತಿಲ್ಲ!! ೧೨೦೦ ವರ್ಷಗಳ ಹಿಂದಿನ ಕಾಲಾವಧಿಗೆ ಸೇರಿದ ಸಿರಿಭೂವಲಯದಲ್ಲಿ ಇದರ ವಿಚಾರವಾಗಿ ಇರುವ ಮಾಹಿತಿಯನ್ನು ಸುಲಭವಾಗಿ ಉಪೇಕ್ಷಿಸುವುದು ಯುಕ್ತವಲ್ಲ. 
ಸಿರಿಭೂವಲಯದಲ್ಲಿ ಕಾಣಬರುವ ಇಂಥ ಮಂತ್ರಗಳ ಅರ್ಥ, ತಾತ್ಪರ್ಯಗಳನ್ನು ಸಮರ್ಪಕವಾಗಿ ಅರಿತನಂತರವಾದರೂ, ಸನಾತನಸಂಸ್ಕೃತಿ ಹಾಗೂ ಜೈನ ಸಂಸ್ಕೃತಿಯ ನಡುವಣ ಪ್ರಾಚೀನ ಸಂಬಂಧವನ್ನು ಅರ್ಥಮಾಡಿಕೊಳ್ಳುವ  ವಿವೇಕವು ಉಭಯ ಸಂಸ್ಕೃತಿಯವರಲ್ಲೂ ಉಗಮವಾಗುವ ಅಗತ್ಯವಿದೆ.
- ಸಿರಿಭೂವಲಯದಸುಧಾರ್ಥಿ. 

Monday 10 February 2020

ಸಿರಿಭೂವಲಯದಲ್ಲಿ ಜೀವದ ಸ್ವರೂಪವನ್ನು ನಮ್ಮ ಪ್ರಾಚೀನರು ಬಲ್ಲವರಿದ್ದರು.

***ನೀವು ಒಪ್ಪದಿದ್ದರೂಚಿಂತೆಯಿಲ್ಲ. ಒಮ್ಮೆ ಓದಿನೋಡಿ****
   
’ಆಧುನಿಕ ವಿಜ್ಞಾನದ ಸಾಧನೆಗಳನ್ನು ಮೀರಿಸಿದ  ಪ್ರತ್ಯಕ್ಷ ಪ್ರಯೋಗದ ಮಾಹಿತಿಗಳು ನಮ್ಮ ಪೂರ್ವಿಕರಿಗೆ ತಿಳಿದಿತ್ತು’ ಎಂದು ಯಾರಾದರೂ ಹೇಳಿದರೆ, ಇಂದಿನ ವಿಜ್ಞಾನದ ಆರಾಧಕರಿಗೆ ಪಿತ್ತಕೆರಳುತ್ತದೆ!  ಹುಚ್ಚರಂತೆ ಕಚ್ಚಲು ಮೇಲೆಬೀಳುತ್ತಾರೆ!! ಸೂಕ್ಷ್ಮ ಜೀವಾಣುಗಳ ದರ್ಶನವಾಗಬೇಕಾದರೆ ತುಂಬ ಉತ್ಕೃಷ್ಟವಾದ ಸೂಕ್ಷ್ಮದರ್ಶಕಯಂತ್ರವಿರಬೇಕೆಂಬುದು ಸಾಮಾನ್ಯವಾಗಿ ಎಲ್ಲರ ಭಾವನೆ.
ಇಂದಿನ ವಿಜ್ಞಾನಿಗಳಿಗೆ ಸೂಕ್ತ ಯಂತ್ರೋಪಕರಣಗಳಿಲ್ಲದೇ ಯಾವ ಪ್ರಯೋಗವೂ ಸಾಧ್ಯವಿಲ್ಲ! ಆದರೆ, ನಮ್ಮ ಪ್ರಾಚೀನ ಋಷಿಮುನಿಗಳಿಗೆ ಇಂಥ ಯಾವುದೇ ಯಂತ್ರೋಪಕರಣಗಳ ಅಗತ್ಯವೂ ಇಲ್ಲದೇ ಅವರು ಈ ಜಗತ್ತಿನ- ಮಾತ್ರವಲ್ಲ- ಲೋಕ ಲೋಕಾಂತರಗಳ ಅಣು- ಹಾಗೂ ಮಹಾನ್ - ಮಾಹಿತಿಯನ್ನೂ ಖಚಿತವಾಗಿ ತಿಳಿಯಬಲ್ಲವರಾಗಿದ್ದರು ಎಂದು ಹೇಳಿದರೆ ಆ ಹೇಳಿಕೆಯನ್ನು ಮಾನ್ಯಮಾಡುವುದಿರಲೀ;  ಗಮನಿಸುವ ಸೌಜನ್ಯವೂ ಅವರಲ್ಲಿರುವುದಿಲ್ಲ!!!
ಈಗ ಸೂಕ್ಷ್ಮದರ್ಶಕಕ್ಕೆ ಸಂಬಂಧಿಸಿದ ಒಂದು ವಿಚಾರ ಕುರಿತು ಕುಮುದೇಂದುಮುನಿಯ ಸಿರಿಭೂವಲಯವು ಏನು ಹೇಳುತ್ತದೆ ಎಂಬುದನ್ನು ಸ್ವಲ್ಪ ಗಮನಿಸೋಣ.  
ನಮ್ಮ ಶರೀರಾಂತರ್ಗತವಾದ ’ಜೀವಾತ್ಮವು’  ಅತ್ಯಂತ ಸೂಕ್ಷ್ಮವಾದುದು.  ಈ ಆತ್ಮದ ಸ್ವರೂಪವನ್ನು ವಿವರಿಸುವಾಗ ರೂಪರಸಸ್ಪರ್ಶಗಂಧಾದಿಗಳಿಂದ ಅದನ್ನು ಗುರುತಿಸಲು ಸಾಧ್ಯವಿಲ್ಲ-ಆತ್ಮಕ್ಕೆ ಬಣ್ಣವಿಲ್ಲ; ರುಚಿಯಿಲ್ಲ; ಆಕಾರವಿಲ್ಲ; ಕಣ್ಣಿಂದ ನೋಡಲಾಗದು; ಕೈಯಿಂದ ಮುಟ್ಟಲಾಗದು, ಮೂಗಿನಿಂದ ವಾಸನೆಯನ್ನು ತಿಳಿಯಲಾಗದು ಎಂಬ ಖಚಿತವಾದ ವಿವರಣೆಗಳನ್ನೊಳಗೊಂಡ ಉಪನಿಷತ್ತಿನ ಶುದ್ಧಕನ್ನಡ ರೂಪಾಂತರವನ್ನು ನಾವು ಸಿರಿಭೂವಲಯದಲ್ಲಿ ಕಾಣಬಹುದು. 
೩೫ನೇ ಅಧ್ಯಾಯದಪೂರ್ಣ ಪದ್ಯಗಳ ಮೊದಲನೇ ಪಾದದ ಕೊನೆಯಿಂದ ನಾಲ್ಕನೇ ಅಕ್ಷರವನ್ನು ಮೇಲಿನಿಂದ ಕೆಳಕ್ಕೆ ಸಾಗುತ್ತ ಜೋಡಿಸಿಕೊಂಡು, ಮೂರನೇ ಅಕ್ಷರವನ್ನು ಕೆಳಗಿನಿಂದ ಮೇಲಕ್ಕೆ ಸಾಗುತ್ತ ಜೋಡಿಸಿಕೊಂಡು, ಎರಡನೇ ಅಕ್ಷರವನ್ನು ಮೇಲಿನಿಂದ ಕೆಳಕ್ಕೆ ಸಾಗುತ್ತ ಜೋಡಿಸಿಕೊಂಡು, ಪಾದದ ಕೊನೆಯ ಅಕ್ಷರವನ್ನು ಕೆಳಗಿನಿಂದ ಮೇಲಕ್ಕೆ ಸಾಗುತ್ತ ಜೋಡಿಸಿಕೊಂಡು ಜೋಡಿನಾಗರಬಂಧದಲ್ಲಿ ಸಾಗಿದಾಗ:           
'ಭಾವದಿಂ ಬಾಳುವ ಸರ್ವಜೀವದ್ರವ್ಯವಿಹುದು ಹೇಳು ಸಾಧಾರಣ ಶೀಲದೋಳೆರಡು ಮಾರ್ಗದಲಿ ಕಾಲವಕಳೆವ ಈಜೀವದ ದ್ರವ್ಯವಂ ಪೇಳುವ ಕಾವ್ಯಭೂವಲಯ ಜೀವದ್ರವ್ಯದೊಳ್ ಷಡ್ಲೇಶೆಯಿದ್ದರೆ ನಾವದ ಕಣ್ಣಿಂದಕಂಡು ಜೀವನು ಕಪ್ಪು ಕೆಂಪೆನಬಹುದಾಗಿತ್ತು ಜೀವನೊಳಿಲ್ಲವುಬಣ್ಣ ಯಶದ ಜೀವನು ಸಿಹಿ ಒಗರುಪ್ಪು ಕಹಿಯಾದಿ ರಸದೊಳೆಳ್ದಿ' (ಬಲಬದಿಯಕ್ಷರದಿಂದಮೇಲಕ್ಕೆ) ರೆ ನಾಲಗೆಯಿಂ ರಸವನೆಕ್ಕುತ ಕಂಡುಹಿಡಿಯಲು ಬಹುದಿತ್ತು ರಸಗಳಿಲ್ಲವು ಜೀವಗಳೊಳು ಕಮಲಾದಿ ವಿದ್ದರೆ ಸಮನಿಸಿಮುದು ಬಹುದು ಸಾರಜೀವ ನೊಳಿಲ್ಲ ವಾಸನೆ ರಸ ಬಣ್ಣ ದಾರಿ ಮೂಗ್ ನಾಲಗೆ ಕಣ್ಣು ಸೇರವು ಜೀವದ್ರವ್ಯವಹುದು ಕುವದಾರಿಯೊಳೆಲ್ಲ ಸಾಯುವುವುಏ' (ಬಲಬದಿಯಕ್ಷರದಿಂದಕೆಳಕ್ಕೆ) 'ನೆಂಬಿ ಜೀವನೊಳ್ ಮೃದುವು ಕರ್ಕಶವಾದಿ ನಾನಾಸ್ಪರ್ಶಗಳೆಂಬುದವ ನೊಳೇನಿಲ್ಲವದರಿಂದ ಮುಟ್ಟಲಾಗುವುದಿಲ್ಲ ಶ್ರೀನಿವಾಸನನು ಜೀವಜೀವನನು ಜಿನಮತದಂತೆ ಜೀವನಲಿ ಸದದಿಲ್ಲವು ಚಿನುಮಯಜೀವನಂ ಅದರಿಂದ ನುಮಾನದಿಂಬಡಿದರೆ ಸಿಗದಿಹ ಜೀವನ ನುಭವದೊಳಗೆ ಸದದಿಲ್ಲ’ ಎಂಬ ವಿವರದೊಂದಿಗೆ  ಸಂಸ್ಕೃತಭಾಷೆಯೊಂದಿಗೆ ಬೆರೆತ ಬೇರಾವುದೋ ಭಾಷೆಯಲ್ಲಿ ಎರಡುಶ್ಲೋಕಗಳು ಉಗಮವಾಗುತ್ತವೆ.
ಇಲ್ಲಿಯೂ ಅಷ್ಟೇ. ಕವಿಯು ಸೂಚಿಸದಿರುವ ಯಾವುದೋ ವಿಚಾರವನ್ನು ಸ್ವಕಪೋಲ ಕಲ್ಪಿತವಾಗಿ ಇಲ್ಲಿ ಸುಧಾರ್ಥಿಯು ನಮೂದಿಸಿಲ್ಲ. ಇಲ್ಲಿನ ವಿವರಣೆಯನ್ನು ಗಮನಿಸಿದಮೇಲಾದರೂ, ನಮ್ಮ ಪ್ರಾಚೀನರ ಸರ್ವಜ್ಞತ್ವವನ್ನು ಸೂಕ್ತವಾಗಿ ಗ್ರಹಿಸುವ ಬುದ್ಧಿ ಇಂದಿನವರಿಗೆ ಬಂದೀತೆಂದು ಭಾವಿಸಬಹುದು.  ಇಂಥ ಮಾಹಿತಿಗಳ ಕಾರಣಕ್ಕಾಗಿಯೇ ಸುಧಾರ್ಥಿಯು ಸಿರಿಭೂವಲಯವನ್ನು ’ಕನ್ನಡದವೇದ’ ಎಂದು ಪರಿಗಣಿಸಿದ್ದಾನೆ.  ವೇದದಲ್ಲಿಲ್ಲದ್ದು ಬೇರೆಲ್ಲಿಯೂ ಇಲ್ಲವೆಂದು ಬಲ್ಲವರ ನಿಲುವು. ಸಿರಿಭೂವಲಯವೂ ಇದೇ ಹಾದಿಯದು ಇಲ್ಲಿ ಎಲ್ಲವೂ ಸಮಾವೇಶವಾಗಿವೆ!!!!
                                                                                                    -ಸಿರಿಭೂವಲಯದಸುಧಾರ್ಥಿ. 

ಸಮತಾವಾದದ ಉಗಮ ಎಲ್ಲಿಂದಾದುದು??


ಜಗತ್ತಿನಲ್ಲಿ ಕಾರ್ಲ್ ಮಾರ್ಕ್ಸ್, ಲೆನಿನ್ ಮುಂತಾದವರಿಂದ  ಸಮತಾವಾದವು ಹುಟ್ಟಿ ಬೆಳೆಯಿತೆಂಬ ವಿಚಾರ ಚರಿತ್ರೆಯಾಗಿ ಪ್ರಚಲಿತವಿದೆ! ಆದರೆ ಈ ಸಮತಾವಾದವು ದ್ವಾರಕೆಯ ಶ್ರೀ ಕೃಷ್ಣನ ಕಾಲಕ್ಕೆ ಮೊದಲೇ ತಲೆಯೆತ್ತಿದ್ದ ಒಂದು ಸಾಮಾಜಿಕ ಪ್ರತಿಭಟನೆಯಾಗಿತ್ತು!!
ವೇದೋಕ್ತಜೀವನಪಥದಲ್ಲಿ ಪ್ರತಿಯೊಬ್ಬರೂ ತಮಗೆ ವಿದಿತವಾದ ಕ್ರಮದಲ್ಲಿ ಜೀವನಸಾಗಿಸುತ್ತ, ಸಮಾಜದ ಏಳಿಗೆಯಲ್ಲಿ ಭಾಗವಹಿಸುವ ಕ್ರಮವಿದೆ.   ದುಡಿದವರು ಸಂಪತ್ತನ್ನು ಹೊಂದಿ ತಾವೂ ನೆಮ್ಮದಿಯಿಂದಿದ್ದು, ಉಳಿದವರ ನೆಮ್ಮದಿಗೂ ನೆರವಾಗುವ ಕ್ರಮವಿತ್ತು. ಆದರೆ ಸಮತಾವದದ ನೀತಿಯಲ್ಲಿ ಉಳ್ಳವರನ್ನು ಗುರುತಿಸಿ, ತಮ್ಮ ತೋಳ್ಬಲದಿಂದ ಅವರನ್ನು ಬೀದಿಗೆ ತಂದು ತಮಗೆ ಬೇಕಾದವರಿಗೆ ಸಂಪತ್ತನ್ನು ಹಂಚುವುದು ಸಮತಾವಾದದ ನೀತಿ!!
ಚೈನಾ, ರಷ್ಯಾ, ಸೈಬೀರಿಯಾ ಮುಂತಾದ ಶೀತದೇಶಗಳಲ್ಲಿ ಪ್ರಚಲಿತವಿದ್ದ  ಇಂಥ ಜೀವನ ಪದ್ಧತಿ , ಹಾಗೂ ಅವರ ಸಾಮಾಜಿಕ ತಿಳುವಳಿಕೆಯು ಸಮಂಜಸವಲ್ಲ ಎಂಬುದನ್ನು ಕೃಷ್ಣನು ಪಾರ್ಥನಿಗೆ ಸೂಚಿಸುವ ಸನ್ನಿವೇಶವೊಂದು ಸಿರಿಭೂವಲಯದಲ್ಲಿ ಕಾಣಬರುತ್ತದೆ!
 ಅಂದರೆ ನಾಲ್ಕುಸಾವಿರ ವರ್ಷಗಳಿಗೂ ಹಿಂದಿನಿಂದಲೇ ಜಗತ್ತಿನಲ್ಲಿ ಈ ಸಮತಾವಾದಿಗಳ (ಕಮ್ಮಿನಿಷ್ಟೆಯರ) ಉಗಮವಾಗಿತ್ತೆಂಬುದನ್ನು  ಇಂದಿನ ಜಗತ್ತು ಅರಿಯಬೇಕಿದೆ!!
 ”ಶೀತದೇಶದ ಜನರ ಅರಿವ ಅರಿವೆಂದರಿಯಲಾಗದು ಅರಿಯೆಂದು ತಿಳಿದು ಇರಿ’ ಎಂಬ ಕೃಷ್ಣನ ಉಪದೇಶವು ಸಿರಿಭೂವಲಯದಲ್ಲಿದೆ. ಅಂದರೆ ’ಜೀವನಸಾಗಿಸುವ ದಿಸೆಯಲ್ಲಿ ಶೀತದೇಶದಜನರು ಅನುಸರಿಸುವ ಕ್ರಮ ಸರಿಯಲ್ಲ;  ಅದನ್ನು ತಿಳುವಳಿಕೆ ಎಂದು ನಿರ್ಧರಿಸಲಾಗದು, ಅದನ್ನು ’ಜೀವವಿರೋದಿ ತಿಳುವಳಿಕೆ’ ಎಂದು ತಿಳಿದು  ನಾಶಮಡಬೇಕು’ ಎಂಬುದು ಯೋಗೀಶ್ವರನಾದ ಕೃಷ್ಣನ ಉಪದೇಶವಾಗಿದೆ.
ಆದರೆ ನಾಲ್ಕುಸಾವಿರ ವರ್ಷಕ್ಕೂ ಹೆಚ್ಚು ಸಮಯಕಳೆದರೂ ಅಂದಿನಿಂದ ಇಂದಿನವರೆವಿಗೂ ಜಗತ್ತಿನಲ್ಲಿ ಈ ಕಮ್ಮಿನಿಷ್ಟೆಯವರ ಕುತಂತ್ರವನ್ನು ನಂಬಿ ಜೀವನವನ್ನು ವ್ಯರ್ಥಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿಲ್ಲ!!
ಭಾರತದ ಚರಿತ್ರೆಯಲ್ಲಂತೂ ಶೋಕೀಲಾಲ ನೆಹರೂ  ಇಲ್ಲಿನ ಕೇರಳದ ಕೃಷ್ಣ ಮೆನನ್ನನಂಥ ದೇಶದ್ರೋಹಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ,  ಜಾತ್ಯಾತೀತವೆಂಬ ಭೂತದ ನೆನ್ನೇರಿ, ಭಾರತವನ್ನು ಅಧೋಗತಿಗೆ ಇಳಿಸಿದ್ದು ಸರ್ವ ವಿದಿತ. ದೇವರಾಜ ಅರಸರು ’ಉಳುವವನಿಗೇ ಭೂಮಿ’ ಎಂಬ ಘೋಷಣೆಲ್ಲಿ,  ’ಭೂಸುಧಾರಣೆ’ ಕಾನೂನಿನ  ನೆಲೆಯಲ್ಲಿ ದುರ್ಬಲರಾದ ಸಾವಿರಾರು ಜನ ಭೂಮಾಲೀಕರನ್ನು ನೆಲಸಮಮಾಡಿ  ದೇಶೋದ್ಧಾರಮಾಡಿದ್ದಾಯಿತು. ಇಂದಿನ ಕಾಂಗ್ರೆಸ್ ಭ್ರಮಾಧೀನರೂ ಇದೇ ಹಾದಿಯಲ್ಲಿ ಸಾಗುತ್ತ ತಮ್ಮನ್ನೂ, ದೇಶವನ್ನೂ ಆಳವಾದ ಕಂದಕದಲ್ಲಿ ಬೀಳಿಸುತ್ತಿದ್ದಾರೆ.
ಇದನ್ನು ಅನುಭವಿಸುವುದು ಈ ದೇಶದ ಜನಸಾಮಾನ್ಯರಿಗೆ ಅನಿವಾರ್ಯ!!  ಕಾರಣ ಅನ್ಯಾಯವನ್ನು ವಿರೋಧಿಸಿ, ದೇಶದ, ಧರ್ಮದ ರಕ್ಷಣೆಮಾಡುವ ಚೈತನ್ಯವೇ ಇವರಲ್ಲಿ ನಾಶವಾಗಿ ಪೌರುಷಹೀನರಾದ ನಪುಂಸಕರಂತೆ ವರ್ತಿಸುವುದೇ ಬಹುಪಾಲು ಜನರ ಜೀವನಮಾರ್ಗವಾಗಿದೆ
 ಇಂಥ ಪ್ರಜೆಗಳಿಂದ ರೂಪಿತವಾಗುವ ಆಡಳಿತ ವ್ಯವಸ್ಥೆಯು  ದೇಶದ ಹಿತ ಕಾಪಾಡಲು ಹೇಗೆ ಸಾಧ್ಯ!!?? ಈ ಕಾರಣದಿಂದಾಗಿಯೇ ದೇಶದಲ್ಲಿ ಮೋದಿವಿರೋಧಿಗಳ ಕೈ ಮೇಲಾಗಲು ಅವಕಾಶವಾಗುತ್ತಿದೆ.  ಜನತೆ ಎಚ್ಚೆತ್ತರೆ ಇದನ್ನು ಬದಲಿಸುವುದು ಅಸಾಧ್ಯವೇನಲ್ಲ.  ವಿವೇಕಿಗಳು ತಾಳ್ಮೆಯಿಂದ ಈ ಕಾರ್ಯ ಸಾಧಿಸಬೇಕಿದೆ.
           ಸಿರಿಭೂವಲಯದಸುಧಾರ್ಥಿ.

Sunday 9 February 2020

ಸಿರಿಭೂವಲಯವು ಸೂಚಿಸುವ ಜೀವನದ ಹಾದಿ


ಜಗತ್ತಿನಲ್ಲಿ ವ್ಯಕ್ತಿಜೀವನವು ಧರ್ಮ ಕರ್ಮಗಳ ಸೊಂಯೋಗದ ಫಲವಾಗಿದೆ!  ಯೋಗ ಭೋಗಗಳ ಒಕ್ಕೂಟವಾಗಿದೆ. ಧರ್ಮವನ್ನು ಬದಿಗಿರಿಸಿ, ಕರ್ಮದಲ್ಲೇ ಮುಳುಗಿದರೆ ಅಪಾಯ! ಕರ್ಮವನ್ನು ನಿರಾಕರಿಸಿ ಧರ್ಮದಲ್ಲೇ ಐಕ್ಯವಾದರೂ ಅಪಾಯತಪ್ಪಿದ್ದಲ್ಲ!!  ಭೋಗದಲ್ಲೇ ಆಸಕ್ತರಾಗಿ ಯೋಗವನ್ನು ಬದಿಗಿರಿಸಿದರೂ ಕಷ್ಟು; ಭೋಗವನ್ನು ತೊರೆದು ಯೋಗದಲ್ಲೇ ಮುಳುಗಿದರೂ  ಸರಿಯಿರದು!  ಯೋಗ ಭೋಗಗಳನ್ನು ಸಮನ್ವಯಗೊಳಿಸಿಕೊಳ್ಳುವುದು ಅವಶ್ಯಕ.
ಧರ್ಮಕರ್ಮಗಳು; ಯೋಗಭೋಗಗಳು ಜೀವನದ ಅವಿಭಾಜ್ಯ ಅಂಗಗಳೆಂದೂ, ಅವುಗಳನ್ನು ಸಮನ್ವಯಗೊಳಿಸಿಕೊಳ್ಳುವುದು ಸಾರ್ಥಕಜೀವನಕ್ಕೆ ಅನಿವಾರ್ಯವೆಂದೂ ಸಿರಿಭೂವಲಯವು ಸಮರ್ಥಿಸುತ್ತದೆ. "ಸರ್ವಾರ್ಥಸಿದ್ಧಿಸಂಪದದನಿರ್ಮಲಕಾವ್ಯ|ಧರ್ಮವಲೌಕಿಕಗಣಿತ|ನಿರ್ಮಮ ಬುದ್ಧಿಯನವಲಂಬಿಸಿರುವರ| ಧರ್ಮಾನುಯೋಗದವಸ್ತು|| ಧರ್ಮಸಮನ್ವಯಕಾವ್ಯ|ಧರ್ಮಸಮನ್ವಯಗಣಿತ| ಮುಂತಾದ ಪದ್ಯಗಳಮೂಲಕ ಗಣಿತಶಾಸ್ತ್ರದ ’ಸಂಖ್ಯಾತ’  ’ಅಸಂಖ್ಯಾತ’  ’ಅನಂತಾಂಕ’  ’ಉತ್ಕೃಷ್ಟದನಂತ’  ಮುಂತಾದ ಗಣಿತಾಂಕಗಳ ಸ್ಥಾನನಿರ್ದೇಶನದ ತಾಂತ್ರಿಕ ಪದಗಳನ್ನು ಸೂಚಿಸಲಾಗಿದೆ. ಅಧ್ಯಾಯದ ಅಂತ್ಯಭಾಗದಲ್ಲಿ  ’ಆದಿಮದ ’ಅ’ಕ್ಷರಮಂಗಲ| ನವ ಆ ಅ ಅ ಅ ಅ ಅ ಅ ಅ ಅ| ಎಂದು ಸೂಚಿಸಿದ್ದು,  ೫೯ನೇ ಅಧ್ಯಾಯದಲ್ಲೂ ಕೊನೆಯಕ್ಷರದ ಸ್ತಂಬಕಾವ್ಯದಲ್ಲಿ  ಈರೀತಿ ಒಂಬತ್ತು ’ಅ’ ಕಾರಗಳನ್ನು ಸೂಚಿಸಿರುವುದು ಕಾಣಬರುತ್ತದೆ.
                               -ಸಿರಿಭೂವಲಯದಸುಧಾರ್ಥಿ.

Saturday 8 February 2020

ಸಂಸ್ಕೃತಭಾಷೆ ಕುರಿತು ಸಿರಿಭೂವಲಯದ ಮಾಹಿತಿ

’ಗೀರ್ವಾಣಿ’ ಎಂಬುದು ’ಸಂಸ್ಕೃತ’ ಭಾಷೆಯ ಇನ್ನೊಂದು ಹೆಸರು.  ಗೀರುಗಳನ್ನೇ ಹೆಚ್ಚಾಗಿ ಬಳಸುವ ಲಿಪಿ ’ದೇವನಾಗರಿ ಲಿಪಿ’   ಈಕಾರಣದಿಂದಾಗಿ ’ಸಂಸ್ಕೃತಭಾಷೆಗೆ’  ಗೀರ್ವಾಣ ಎಂಬ ಹೆಸರೂ ಪ್ರಚಲಿತವಿದೆ.
ಸಂಸ್ಕೃತವೆಂದರೆ, ’ಸಂಸ್ಕರಿಸಲ್ಪಟ್ಟದ್ದು’ ಎಂದರ್ಥ.  ಹಲವಾರು ಪ್ರಾಚೀನಭಾಷೆಗಳ ಸಾರವನ್ನು ಸಂಗ್ರಹಿಸಿ ಈ ಭಾಷೆಯನ್ನು ಸಂಸ್ಕರಿಸಲಾಗಿದೆ.  ಇದು ಅತ್ಯಂತ ಸರಳವಾದ ಹಾಗೂ ಸೂಕ್ಷ್ಮವಾದ ಸಮರ್ಥಭಾಷೆಯಾಗಿದೆ.
 ಪ್ರಾಕೃತ, ಕನ್ನಡ, ಬೆಂಗಾಲಿ,  ಬ್ರಜ್,  ಗ್ರೀಕ್, ಲ್ಯಾಟೀನ್, ಪರ್ಷಿಯನ್ ಮುಂತಾದ ಏಳೆಂಟು  ಭಾಷೆಗಳನ್ನು ಸಂಸ್ಕರಿಸಿದ ಭಾಷೆಯೇ ’ಸಂಸ್ಕೃತ;’ ಎಂಬ ವಿಚಾರವನ್ನು ಪಂ|| ತಾರಾನಾಥರು ಪ್ರತಿಪಾದಿಸಿದ್ದ ಮಾಹಿತಿ ಇದೆ.
 ಎಲ್ಲಜೀವರಾಶಿಗಳೂ ಆಡುವ ಮಾತುಗಳು ಬೇರೆ ಬೇರೆಯಾಗಿರುತ್ತದೆಯೇ ಹೊರತು ಅದು ಗೀರ್ವಾಣಿಯಲ್ಲ ಎಂಬ ಹೇಳಿಕೆಯು ಸಿರಿಭೂವಲಯದಲ್ಲೇ ಉಕ್ತವಾಗಿರುವುದನ್ನು ಭಾಷಾಶಾಸ್ತ್ರಿಗಳು ಗಮನಿಸಬೇಕು.  ಸಂಸ್ಕೃತಭಾಷೆಯ ಮೂಲದವಿಚಾರವಾಗಿ  ಪಂಡಿತ ತಾರಾನಾಥರ ನಿಲುವನ್ನುಕುರಿತು fbನಲ್ಲಿ ಈಹಿಂದೆ  ಸೂಚಿಸಲಾಗಿದೆ.
ಅದೊಂದು ಆಧಾರರಹಿತ ಕಲ್ಪನೆಯೆಂದು ಯಾರೊಬ್ಬರೂ ಅತ್ತ ಗಮನಹರಿಸದಿರಬಹುದು!  ಆದರೆ, ಈ ಮಾಹಿತಿಗೆ ಸಿರಿಭೂವಲಯದಲ್ಲೂ ಕುರುಹು ಸಿಗುವುದನ್ನು ಕಾಣಬಹುದು.
ರಸವಿಹಸ್ವರಜತಿಗಳ ಗಮನ ವಿರುವ ಗೀರ್ವಾಣಿ, ,(ಸಂಸ್ಕೃತಭಾಷೆಯ ಸೊಗಸಿನ ಸಹಜವರ್ಣನೆ)  ಯಶಸ್ಸು ಒಲಿದವರ ಅಂಕಿಗಳು ಇವೆಲ್ಲವೂ ಪ್ರಾಚೀನವಾದುವೆಂಬುದನ್ನು ಕೃಷ್ಣನು ಪಾರ್ಥನಿಗೆ ಸೂಚಿಸುವ ಪ್ರಸಂಗವಿದಾಗಿದೆ. 
”ವೇದಗಳು ಲಿಖಿತವಾಗಿರುವುದು  ದೇವನಾಗರಿಲಿಪಿಯನ್ನು ಬಳಸಿರುವ ಸಂಸ್ಕೃತಭಾಷೆಯಲ್ಲಲ್ಲಾ, ಅದಕ್ಕೆ ಅದರದೇ ಆದ ’ಗೂಢಲಿಪಿಯೊಂದಿತ್ತು’’ ಎಂಬುದು ಸಿರಿಭೂವಲಯಕ್ಕೆ ಸಂಬಂಧಿಸಿದಂತೆ  ಒಂದು ದಾಖಲೆಯ ಕಾರ್ಯನಿರ್ವಹಿಸಿರುವ ಗೋಕರ್ಣಮೂಲದ ಮಂತ್ರದ್ರಷ್ಟಾರ ಮಹರ್ಷಿ ದೇವರಾತರ ನಿಲುವಾಗಿತ್ತು.
  ೧೨೦೦ ವರ್ಷಗಳಹಿಂದೆ ಕುಮುದೇಂದುಮುನಿಯೂ ಇದಕ್ಕೆ ಸನಿಹವಾದ ಹೇಳಿಕೆಯಮೂಲಕ ಈ ಮಾಹಿತಿಯನ್ನು ಸಮರ್ಥಿಸಿರುವುದನ್ನು ಇಲ್ಲಿ ಓದುಗರು ಗಮನಿಸಬಹುದು. ಈ ವಿಚಾರವನ್ನು ಇಲ್ಲಿ ವಿವರಿಸುತ್ತಿರುವುದು ಯಾರನ್ನೂ ಒಪ್ಪಿಸುವುದಕ್ಕಲ್ಲಾ!!  ಮನವರಿಕೆಯಾದವರು ಒಪ್ಪಬಹುದು, ಇಲ್ಲದವರು ಬಿಡಬಹುದು! ಅದು ಅವರವರ ಇಚ್ಛೆಗೆಬಿಟ್ಟ ಸಂಗತಿ.
 ಇದು  ಆಸಕ್ತರಿಗೆ ಗೂಗಲ್ಲಿನಲ್ಲಾಗಲೀ ವಿಕಿಪಿಡಿಯಾದಲ್ಲಾಗಲೀ , ಬೇರೆಲ್ಲೇ ಆಗಲೀ  ಹುಡುಕಿದಾಗ ಸಿಗುವ ಮಾಹಿತಿಯಲ್ಲ!!   ಹಿಮಾಲಯದ ಪ್ರಶಾಂತವಾದ ದುರ್ಗಮವಾದ ಗುಹೆಗಳಲ್ಲಿ ಮಹಾತ್ಮರು ರಕ್ಷಿಸಿಟ್ಟಿರುವ ಪ್ರಾಚೀನ ಸಾಹಿತ್ಯಕೃತಿಗಳಲ್ಲಿಮಾತ್ರ ದೊರೆಯುವ ಮಾಹಿತಿ ಎಂಬುದನ್ನು  ನೆನಪಿನಲ್ಲಿಡಬೇಕಿದೆ. ಇಲ್ಲಿ  ಬೇಕಿದ್ದಲ್ಲಿ ಸಿರಿಭೂವಲಯದ ಒಳಹೊಕ್ಕು ನೋಡಬೇಕಷ್ಟೇ!!!!
 (೨೪ನೇ ಅಧ್ಯಾಯದ ಅಶ್ವಗತಿಯ ಅಂತರ್ಸಾಹಿತ್ಯದ ೧೫ನೇ ಪದ್ಯನೋಡಿರಿ) 
                                                                                 -  ಸಿರಿಭೂವಲಯದಸುಧಾರ್ಥಿ.

Monday 3 February 2020

ಸಿರಿಭೂವಲಯದಲ್ಲಿ ಅಣುವಿಜ್ಞಾನ


ಅಣು; ಪರಮಾಣು ಮುಂತಾದ ಅಣುವಿಜ್ಞಾನಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದಗಳು ಜಗತ್ತಿನಲ್ಲಿ ಅಣುವಿಜ್ಞಾ ಕುರಿತ ಮಾಹಿತಿಗಳ ಪ್ರಸಾರದನಂತರ ಪ್ರಚಲಿತವಾದ, ಹೊಸದಾಗಿ ಎರಕಹೊಯ್ಯಲಾದ ಪದಗಳು ಎಂಬ ಭ್ರಮೆ ನಮ್ಮಲ್ಲಿ ಹಲವರನ್ನು ಆವರಿಸಿದೆ!  ಇದು ಸರಿಯಲ್ಲ.
ಪಾಶ್ಚಾತ್ಯಜಗತ್ತಿನಲ್ಲಿ ಆಧುನಿಕ ಭೌತಶಾಸ್ತ್ರವು ಕಣ್ಣುಬಿಡುವದಕ್ಕೆ ಮೊದಲೇ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಈ ಪಾರಿಭಾಷಿಕ ಪದಗಳು ಪ್ರಾಚೀನ ಭಾರತೀಯರಲ್ಲಿ ಪ್ರಚಲಿತವಿತ್ತು.
 ಜಗತ್ತಿನೆಲ್ಲೆಡೆಯೂ ಕಾಣಬರುವ ’ನೀರಿನ’ ಸಂಯೋಜನೆಯನ್ನುಕುರಿತು ಆಧುನಿಕ ವಿಜ್ಞಾನಿಗಳು ’ಎರಡುಜಲಜನಕದ ಕಣಗಳು ಹಾಗೂ ಒಂದು ಆಮ್ಲಜನಕದ ಕಣವು ಸೇರಿದ ರೂಪವೇ ’ನೀರು’ ಎಂದು ಸೂಚಿಸುವುದು ಸರಿಯಷ್ಟೆ. (H2O)  ಅಣುವಿಜ್ಞಾನಕ್ಕೆ ಸಂಬಂಧಿಸಿದ ಈ ಮಾಹಿತಿಯನ್ನುಕುರಿತು ಹಾಗೂ ಇದಕ್ಕಿಂತ ವಿಶೇಷವಾದ ಹಲವಾರು ಮಾಹಿತಿಗಳನ್ನು ಕುರಿತು,  ಜೊತೆಗೆ ಈ ಅಣು ಪರಮಾಣುಗಳ ಬೇರೆ ಬೇರೆ ಪ್ರಮಾಣಗಳ ವಿಂಗಡಣೆ ಹಾಗೂ ಸಂಯುಕ್ತರೂಪವನ್ನು ಕುರಿತು ಬೇರೆ ಬೇರೆ ಹೆಸರುಗಳನ್ನು ಬಳಸಿ ಸೂಚಿಸಿರುವುದನ್ನು ಕುಮುದೇಂದು ಮುನಿಯು ಸಿರಿಭೂವಲಯದಲ್ಲಿ  ೧೨೦೦ ವರ್ಷಗಳ ಹಿಂದೆಯೇ ಸೂಚಿಸಿರುವುದಿದೆ!! ನೋಡಿರಿ: ”ಅಣುವೆಂದು ಪರಮಾಣುವೆಂದುಪುದ್ಗಲವನು| ಗಣಿಸುವಾಗಿರುವಂಕವೆಷ್ಟು| ಅಣುವಿನಗುಣವೇನು| ಅಣುವಿನಕ್ಷಣವೇನು| ಅಣುವುನೀರೊಳಗೆಷ್ಟು| ಅನಲವಾಯುಗಳೆಷ್ಟು|  ನೆನೆದುಸುಡದ ಅಣುವೆಷ್ಟು|” ಎಂಬುದಾಗಿ ಹಲವಾರು ಪದ್ಯಗಳರೂಪದಲ್ಲಿ ಈ ಅಣುವಿಜ್ಞಾನ ಕುರಿತ ಸೂಕ್ಷ್ಮಾತಿ ಸೂಕ್ಷ್ಮವಾದ ಮಾಹಿತಿಗಳನ್ನು ಸೂಚಿಸಿರುವುದಿದೆ.  ಇಲ್ಲಿ ಅಂಕಗಳು ಹಾಗೂ ವಸ್ತುಗಳಲ್ಲಿರುವ ಸೂಕ್ಷ್ಮಕಣಗಳಾದ ’ಅಣು, ಪರಮಾಣುಗಳ’  ವಿಚಾರ ವಿವರಿಸಿರುವುದು ಅಚ್ಚರಿ ಮೂಡಿಸುತ್ತದೆ.  ನೀರಿನಲ್ಲಿರುವ ಅಣುಗಳೆಷ್ಟು? ಬೆಂಕಿ ಹಾಗೂ ಗಾಳಿಯಲ್ಲಿರುವ ವಿಧಗಳೆಷ್ಟು?  ನೀರಿನಲ್ಲಿ ನೆನೆಯದ; ಬೆಂಕಿಯಲ್ಲಿ ಸುಟ್ಟುಹೋಗದಿರುವ  ಅಣುಗಳು ಎಷ್ಟೆಂಬ ವಿಚಾರವಾಗಿ ಇಲ್ಲಿ ಪ್ರಸ್ಥಾಪಿಸಿರುವುದನ್ನು ಪ್ರತ್ಯಕ್ಷವಾಗಿ ಕಾಣಬಹುದಾಗಿದೆ.
ವಸ್ತುಗಳ ಗುಣಲಕ್ಷಣಗಳು ಯಾವಾಗಲೂ ಬದಲಾಗುತ್ತಿರುತ್ತದೆ. ಆದರೂ ಅವು ಕೆಡುವುದಿಲ್ಲ. ಹಾಲು ಮೊಸರಾಗುತ್ತದೆ, ಮೊಸರು ಮಜ್ಜಿಗೆ ಹಾಗೂ ಬೆಣ್ಣೆಯಾಗಿ ಬದಲಾಗುತ್ತದೆ. ಬೆಣ್ಣೆಯು ತುಪ್ಪವಾಗಿ ಬದಲಾಗುತ್ತದೆ ಇತ್ಯಾದಿ. ಈ ರೀತಿಯಲ್ಲಿ ಕೆಡದೇ ಇರುವಂಥ ಅಣು- ಪರಮಾಣುಗಳ ಸಂಖ್ಯೆ ಎಷ್ಟಿವೆ? ಕಾಲವೆಂಬುದರ ಪ್ರಮಾಣವನ್ನು ಇದುವರೆವಿಗೂ ಯಾರೂ ಅಳತೆಮಾಡಿ ಅದು ಇಷ್ಟು ವ್ಯಾಪ್ತಿಯದೆಂದು ಹೇಳಿದವರು ಯಾರೂ ಇಲ್ಲ! ಆದರೂ ಅದರ ಗಣನೆಯನ್ನು ಹೇಳುವ ಕ್ರಮಯಾವುದು? ಎಂದು ಸಿರಿಭೂವಲಯದಲ್ಲಿ ಪ್ರಶ್ನಿಸಲಾಗಿದೆ. ನೋಡಿ:
ಅನುಗಾಲವು ಬದಲಾಗುತಿದ್ದರೂಕೆಡದಿಹ| ಅಣುಪರಮಾಣುಗಳೆಷ್ಟು| ಕೊನೆಮೊದಲಿಲ್ಲದಕಾಲವನಳೆಯುವ|
ಗಣನೆಯ ಪೇಳುವುದೆಂತು||
ಸಾಮಾನ್ಯವಾಗಿ ಅಕ್ಕಿ ಗಿರಣಿಗಳಲ್ಲಿ ಭತ್ತವನ್ನು ಮೋಟೆಗಟ್ಟಳೆ ಸುರಿದು ಅಕ್ಕಿಯನ್ನು ತಯಾರಿಸಲಾಗುತ್ತದೆ. ಬಹಳ ಹಿಂದಿನಕಾಲದಲ್ಲಿ ಈ ಕ್ರಮವಿರಲಿಲ್ಲ. ಒರಳು ಕಲ್ಲಿನಲ್ಲಿ ಭತ್ತವನ್ನುಹಾಕಿ, ಅದನ್ನು ಒನಕೆಯಿಂದ ಕುಟ್ಟಿ ಅಕ್ಕಿಯನ್ನು ತಯಾರಿಸಲಾಗುತ್ತಿತ್ತು!
ಹೆಚ್ಚು ಅಕ್ಕಿ ತಯಾರಿಸಬೇಕಿದ್ದಲ್ಲಿ ಒನಕೆಯ ಬದಲಿಗೆ ಒರಳಿನಲ್ಲಿ ಏತವನ್ನು ಅಳವಡಿಸಲಾಗುತ್ತಿತ್ತು. ಈ ರೀತಿ ಕುಟ್ಟಿ ತಯಾರಿಸಿದ ಅಕ್ಕಿಗೆ ’ಕೊಟ್ಟಣದಕ್ಕಿ’ ಎಂಬ ಹೆಸರಿತ್ತು. ಈ ಕ್ರಮದಲ್ಲಿ ಭತ್ತದ ಮೇಲಿನ ಹೊಟ್ಟನ್ನು ಮಾತ್ರ ಬೇರ್ಪಡಿಸಲಾಗುತ್ತಿತ್ತು. ಬತ್ತದೊಳಗಿನ ಅಕ್ಕಿಯು ನಸುಗೆಂಪುಬಣ್ಣದ್ದಾಗಿರುತ್ತದೆ. ಇದರಿಂದ ತಯಾರಿಸಿದ ಅನ್ನದಲ್ಲಿ ಹೆಚ್ಚಿನ ಪೋಷಕಾಂಶಗಳಿರುತ್ತಿತ್ತು. ರೋಗ ನಿರೋಧಕಶಕ್ತಿ ಹೆಚ್ಚಿರುತ್ತಿತ್ತು.
ಆದರೆ, ಈ ಅಕ್ಕಿಯನ್ನು ಬೇಯಿಸಿ ಮಾಡಿದ ಅನ್ನವು ಬಿಸಿಯಾಗಿರುವಾಗ ತಿನ್ನಲು ಸುಲಭವಾಗಿರುತ್ತಿತ್ತು. ಅನ್ನದ ಬಿಸಿ ಆರಿ ತಣ್ಣಗಾದಮೇಲೆ ಅದನ್ನು ತಿನ್ನುವುದು ಶ್ರಮದಕಾರ್ಯವಾಗಿತ್ತು! ಕಾಲಕ್ರಮದಲ್ಲಿ ಅಕ್ಕಿಯಮೇಲಿರುವ ಈ ನಸುಗೆಂಪು ಬಣ್ಣದ ತೌಡನ್ನು ಬೇರ್ಪಡಿಸಿ, ಅನ್ನವನ್ನು ಮೃದುಗೊಳಿಸುವ ಕ್ರಮ ರೂಢಿಗೆಬಂದಿತು.
ಹೊರಮೈಯ್ಯಿನಮೇಲಿರುವ ಹೊಟ್ಟನ್ನು ಕಳೆದುಕೊಂಡು, ಬಿಳಿಯಕಣ್ಣಕ್ಕೆ ತಿರುಗಿದ ಅಕ್ಕಿಯು ವ್ಯಕ್ತಿಯ ಶರೀರದ ಪೋಷಣೆಗೆ ಅತ್ಯಗತ್ಯವಾದ ಆಹಾರ ಸತ್ವವನ್ನು ಕಳೆದುಕೊಂಡಿತು! ಭತ್ತವನ್ನು ಕುಟ್ಟಿ, ತೌಡೆಲ್ಲವನ್ನೂ ನುಚ್ಚಕ್ಕಿಯಿಂದ ಬೇರ್ಪಡಿಸಿದನಂತರ ಅದನ್ನು ದನಕರುಗಳ ಆಹಾರವಾಗಿ ಬಳಸುವ ಕ್ರಮ ರೂಢಿಗೆ ಬಂದಿತು. ಪುಷ್ಟಿದಾಯಕವಾದ ಈ ಅಕ್ಕಿಯ ತೌಡನ್ನು ಸೇವಿಸುವ ದನಕರುಗಳು ಆರೋಗ್ಯಶಾಲಿಯಾದರೆ, ಸತ್ವಹೀನವಾದ ಅಕ್ಕಿಯನ್ನು ತಿನ್ನುವ ಮನುಷ್ಯರು ರೋಗದ ಮೊಟ್ಟೆಗಳಾದರು!! ಅಪೌಷ್ಟಿಕತೆಗೆ ಸಂಬಂಧಿಸಿದ ಹಲವಾರು ರೋಗರುಜಿನಗಳಿಗೆ ಮಾನವ ಶರೀರವು ಆಶ್ರಯತಾಣವಾಯಿತು! ಈ ವಿಚಾರ ಹಾಗಿರಲೀ, ಈಗ ಇದಕ್ಕೆ ಸಂಬಂಧಿಸಿದ ಅಣುವಿಜ್ಞಾನವನ್ನು ಕುರಿತ ಮಾಹಿತಿಯನ್ನು ಗಮನಿಸೋಣ.
ಮೇಲೆ ಸೂಚಿಸಿದಂತೆ ಭತ್ತವನ್ನು ಕುಟ್ಟಿದಾಗ, ದೊರೆಯುವ ಅಕ್ಕಿಯ ಲೆಕ್ಕ, ಆರೀತಿ ಅಕ್ಕಿಯನ್ನು ತಯಾರಿಸುವಾಗ ದೊರೆಯುವ ತೌಡಿನ ಲೆಕ್ಕ, ಈರೀತಿ ದೊರೆಯುವ ತೌಡನ್ನು ದನಕರುಕಳಿಗೆ ಉಣಿಸಿದಾಗ, ಉತ್ಪಾದನೆಯಾಗುವ ಹಾಲಿನ ಪ್ರಮಾಣ ಇತ್ಯಾದಿಗಳ ಲೆಕ್ಕವನ್ನು ಕರಾರುವಾಕ್ಕಾಗಿ ನೀಡುವ ಅಣುವಿಜ್ಞಾನವನ್ನು ಕುರಿತ ಮಾಹಿತಿಯು ಸಿರಿಭೂವಲಯದಲ್ಲಿ ಅಡಕವಾಗಿದೆ. ನೋಡಿ:
ಅಕ್ಕಿಯಕುಟ್ಟಲುಬರುವತೌಡೆಲ್ಲರ| ಚಿಕ್ಕನುಚ್ಚಕ್ಕಿಯಿಂಬಿಡಿಸಿ| ಅಕ್ಕಪಕ್ಕದಹಸುಕರುಗಳಿಗುಣಿಸುವ| ಅಕ್ಕಿಯಲೆಕ್ಕವದೆಂತು||
ಈ ಲೆಕ್ಕಾಚಾರವು ಇಲ್ಲಿಗೇ ಮುಗಿಯುವುದಿಲ್ಲ!! ಒಂದು ಅಗುಳು ಅನ್ನವನ್ನು ತಿಂದಾಗ ನಮ್ಮ ಶರೀರಕ್ಕೆ ಅದರಿಂದ ಒದಗುವ ಶಕ್ತಿಯ ಪ್ರಮಾಣವೆಷ್ಟು ಎಂಬುದನ್ನು ಪ್ರೀತಿಯಿಂದ ಹೇಳುವುದು ಹೇಗೆ? ಅನ್ನ ಹಾಗೂ ಚಿನ್ನದಲ್ಲಿ ಇರುವ ಭೇದದ ಮರ್ಮವನ್ನು ಚೆನ್ನಾಗಿ ಹೇಳುವುದು ಹೇಗೆ? ಎಂದೂ ಸಿರಿಭೂವಲಯವು ಸೂಚಿಸಿರುವುದಿದೆ! ನೋಡಿ:
” ಅನ್ನದಕಾಳೊಂದರಿಂಬಹಶಕ್ತಿಯ| ನನ್ನಿಯಿಂಪೇಳುವುದೆಂತು| ಅನಚಿನಗಳಲ್ಲಿರುವಭೇದದಮರ್ಮವ| ಚೆನ್ನಾಗಿಪೇಳುವುದೆಂತು||”
ಪದಾರ್ಥದ ಗಣಿತಾತ್ಮಕವಾದ ಲೆಕ್ಕಾಚಾರದಲ್ಲಿ ಬರುವ ಊಹೆ/ಅನುಮಾನ/ ಸಂದೇಹಗಳು ಲೆಕ್ಕವಿಡಲಾಗದಷ್ಟು ಇರುತ್ತವೆ! ಅಣುವಿನಲ್ಲಿ ಅಡಗಿರುವ ಜೀವ ವಿಜ್ಞಾನವನ್ನು ಹೇಳುವುದಕ್ಕೆ ಸಾಕಷ್ಟು ಕಾಲಾವಕಾಶಬೇಕಿರುತ್ತದೆ. ಅದನ್ನು ಒಂದು ಕ್ಷಣದಲ್ಲಿ ಹೇಳಾಲಾಗದು ಎಂದು ಸಿರಿಭೂವಲಯವು ಖಚಿತವಾಗಿ ಸೂಚಿಸಿರುವುದಿದೆ! ನೋಡಿ:
”ಗಣಿತಪ್ರಾರೂಪಣೆಯೊಳುಬರ್ಪದ್ರವ್ಯದ|ಗಣನೆಯನಂತವಿಕಲ್ಪ| ಅಣುವಿನೊಳಗಿರ್ಪಜೀವವಿಜ್ಞಾನವ| ಕ್ಷಣದೊಳ್ ಪೇಳಲಶಕ್ಯ||” ಇಂಥ ವಿಚಾರಗಳ ಸಾಕಷ್ಟು ಮಾಹಿತಿಗಳು ೯ ಖಂಡಗಳ ಸಿರಿಭೂವಲಯದ ಪ್ರಥಮಖಂಡದ ೫೯ ಅಧ್ಯಾಯಗಳ ಅಂತರ್ಸಾಹಿತ್ಯದಲ್ಲೇ ಸಾಕಷ್ಟು ಪ್ರಮಾಣದಲ್ಲಿ ಉಗಮವಾಗಿರುವುದನ್ನು ಕಂಡದ್ದಾಗಿದೆ. ಇವಾವುದೂ ಸಿರಿಭೂವಲಯದ ಸರಳ ಪರಿಚಯಕಾರನ ಸ್ವಕಪೋಲಕಲ್ಪಿತ ವಿಚಾರಗಳಲ್ಲವೆಂಬುದು ಖಚಿತ!
ಇದರೊಂದಿಗೆ ಇಲ್ಲಿ ಇನ್ನೂಒಂದು ಮಾಹಿತಿಯನ್ನು ಗಮನಿಸುವು ಅಗತ್ಯವಿದೆ.   ವೈದ್ಯಕೀಯಶಿಕ್ಷಣ ಪಡೆಯಲು ಹೋಗುವವರಿಗೆ ಗಣಿತಶಾಸ್ತ್ರ;  ಅಣುವಿಜ್ಞಾನದ  ಸಮರ್ಪಕ ಪರಿಚಯವಿರಲೇಬೇಕಾದುದು ಅಗತ್ಯವೆಂಬ ಮಾಹಿತಿಯನ್ನು ಆಧುನಿಕ ವಿಜ್ಞಾನಿಗಳು ರೂಪಿಸಿದ್ದೆಂದು ಕೆಲವರು ಭಾವಿಸಬಹುದು. ಆದರೆ ಈ ವಿಚಾರವನ್ನೂ ಸಿರಿಭೂವಲಯದ ಕವಿಯು ತನ್ನ ಕಾವ್ಯದಲ್ಲಿ ಸೂಚಿಸಿರುವುದಿದೆ!! ನೋಡಿ: ”ಗುಣವೃದ್ಧಿಯಾಗುವಗಣಿತವನರಿಯದೆ|ಅಣುಪರಮಾಣುಗಳ|ಅಣಕದಿಂಪುಟ್ಟುವವಿಪರೀತರೋಗದಾ|ಎಣಿಕೆಯನರಿಯಲಶಕ್ಯ||” ಎಂದು ಖಚಿತವಾಗಿ ನಮೂದಿಸಲಾಗಿದೆ!!  ಅಂದಮೇಲೆ ವೈದ್ಯಕೀಯದ ಅಧ್ಯಯನಮಾಡುವವರಿಗೆ ಗಣಿತ ಹಾಗೂ ಅಣುವಿಜ್ಞಾನದ ಪರಿಚಯವು ಅತ್ಯಗತ್ಯವೆಂಬ ಮಾಹಿತಿಯು ಪ್ರಾಚೀನಭಾರತೀಯರಿಗೆ ತಿಳಿದಿತ್ತೆಂಬುದರಲ್ಲಿ ಸಂದೇಹಕ್ಕೆ ಅವಕಾಶವೇಇಲ್ಲ!!! ಓದುಗರ ತಲೆಯಲ್ಲಿ ಇದನ್ನು ಕುರಿತು ಇನ್ನೂ ಸಂದೇಹವಿದ್ದಲ್ಲಿ ಮೂಲಕೃತಿಯಲ್ಲೇ ಈ ಮಾಹಿತಿಯ ವಿವರವನ್ನು ನೋಡಿ ಪರಿಶೀಲಿಸಬಹುದಾಗಿದೆ.
                                                                                                            -ಸಿರಿಭೂವಲಯದಸುಧಾರ್ಥಿ.

Sunday 2 February 2020

ಸಿರಿಭೂವಲಯದ ಕಟ್ಟಡಗಳ ಸೊಬಗು!!!

 ಇಂದ್ರಭವನಗಳ ರಚನೆ ಹಾಗೂ ವಿಸ್ತಾರ ಗೊತ್ತೆ!!??

ಆಧುನಿಕ ಪರಿಸರದಲ್ಲಿ ಜಗತ್ತಿನಾದ್ಯಂತವೂ ಸುಂದರವಾದ ಕಟ್ಟಡಗಳು ನಿರ್ಮಾಣವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇಂಥ ಕಟ್ಟಡಗಳ ನಿರ್ಮಾಣವು ಭಾರತಲ್ಲಿಯೂ ಕಾಣಬರುತ್ತಿದೆ. ಈ ಕಟ್ಟಡಗಳ ಒಳಾಂಗಣದ ಹಾಗೂ ಹೊರಾಂಗಣದ  ಅಲಂಕಾರಕ್ಕಾಗಿ ಹಲವಾರು ವಿನ್ಯಾಸಗಳ ಗಾಜಿನ  ಬೃಹತ್ ಹಲಗೆಗಳನ್ನು ಬಳಸುವುದು, ಅವುಗಳಿಗೆ ಅನುಗುಣವಾದ ನಯವಾದ ಗಾರೆಯಕೆಲಸದ ಕುಶಲತೆ ಇತ್ಯಾದಿಗಳು ಊಹಾತೀತವಾಗಿ ಬಳಕೆಗೆ ಬಂದಿರುವುದು ಸರಿಯಷ್ಟೇ.
ಗಾಜಿನ ತಯಾರಿಕೆಯ ಇತಿಹಾಸದಲ್ಲಿ ಬೆಲ್ಜಿಯಂದೇಶವು ಹೆಚ್ಚು ಪ್ರಸಿದ್ಧಿ ಪಡೆದಿದೆ.  ಗಾಜಿನ ಹಲಗೆಗೆಳಲ್ಲಿ- ವಿಶೇಷವಾಗಿ ಕನ್ನಡಿಗಳಲ್ಲಿ- ಗಾಳಿಯನ್ನು ಬಳಸಿ ನಿರೂಪಿಸುವ ಕಲಾಕೌಶಲ್ಯವು ಬಹಳ ಮನಮೋಹಕವಾಗಿರುವುದೂ ನಿಶ್ಚಯ!
 ಈ ರೀತಿಯ ಕೌಶಲ್ಯವು ಇಂದಿನ ಆಧುನಿಕ ವಿಜ್ಞಾನದ  ಆವಿಷ್ಕಾರದ ಫಲ ಎಂಬುದರಲ್ಲಿ ಇಂದಿನವರಿಗೆ ಯಾವುದೇ ರೀತಿಯ ಸಂಶಯವಿರುವುದಿಲ್ಲ!  ಆದರೆ, ಇದೆಲ್ಲವನ್ನೂ ಮೀರಿಸಿದ ಕೌಶಲ್ಯವು ಪ್ರಾಚೀನಭಾರತೀಯರಿಗೆ ಕರಗತವಾಗಿತ್ತೆಂದರೆ ಅದನ್ನು ಯಾರೂ ನಂಬಲಾರರು!!
ಇಂದಿನ ಕಟ್ಟಡನಿರ್ಮಾಣ ತಂತ್ರಜ್ಞಾನವು ಎಷ್ಟು ಮುಂದುವರೆದಿದೆಯೆಂದರೆ, ಮುಗಿಲಿಗೆ ಮುತ್ತಿಕ್ಕುವಂತೆ ಗಗನದತ್ತ ತಲೆಎತ್ತಿದ ಕಟ್ಟಡಗಳ ನಿರ್ಮಾಣವು ಬಹಳ ಬಿರುಸಿನ ಪೈಪೋಟಿಯಿಂದ ಮುಂದುವರೆದು ನಗರ ಪ್ರದೇಶಗಳಲ್ಲಿ ಕಟ್ಟಡಗಳೆಲ್ಲವೂ ಗಗನದಲ್ಲೇ ತೇಲುವಂತೆ ಭಾಸವಾಗುವುದು ಸಹಜ.
 ಇದೆಲ್ಲ ಭ್ರಮೆಯೂ ಎಷ್ಟೇ ಅದ್ಭುತವೆನಿಸಿದರೂ, ಈ ಕಟ್ಟಡಗಳ ಬುನಾದಿಗೆ ಭೂಮಿಯೇ ಆಧಾರವೆಂಬುದನ್ನು ಯಾರೂ ಅಲ್ಲಗಳೆಯಲಾಗದು!!  ಆದರೆ, ಸಿರಿಭೂವಲಯದಲ್ಲಿ ವರ್ಣಿತವಾಗಿರುವ  ಕಟ್ಟಡಗಳ ಪರಿ ಈ ರೀತಿಯದಲ್ಲ!! ಗಗನದಲ್ಲಿ ಹವಾರು ಲೋಕಗಳಿರುವುದನ್ನೂ,  ಅವುಗಳಲ್ಲಿ ನಿರ್ಮಾಣವಾಗಿರುವ ಊಹಾತೀತವಾದ ಕಟ್ಟಡಗಳ ಭವ್ಯತೆಯನ್ನೂ ವಿಸ್ತಾರವನ್ನೂ  ಸಿರಿಭೂವಲಯದಲ್ಲಿ ಕುಮುದೇಂದುಮುನಿಯು ವರ್ಣಿಸಿರುವುದಿದೆ!!
ಅಂದಿನ ಕಟ್ಟಡನಿರ್ಮಾಣಶೈಲಿಯ ವಿವರಗಳನ್ನು ಗಮನಿಸಿದಾಗ, ೧೨೦೦ ವರ್ಷಗಳಹಿಂದೆಯೂ ಕನ್ನಡಿಯ (ದರ್ಪಣ) ಬಳಕೆಇತ್ತೆಂಬುದು ಖಚಿತವಾಗುತ್ತದೆ. ಈಗಲೂ ಕನ್ನಡಿಯಲ್ಲಿ ಗಾಳಿಯನ್ನು ಬಳಸಿ ಸುಂದರವಾದ ಚಿತ್ರಗಳನ್ನು ಬಿಡಿಸುವ ಕಲೆಯು ಜೀವಂತವಾಗಿದೆ.  ಕಟ್ಟಡದ ನಿರ್ಮಾಣದಲ್ಲಿ ಇಂಥ ಗಾಜಿನಕನ್ನಡಿಯಂತೆ ನುಣುಪಾಗಿರುವ ನೆಲವನ್ನು ರಚನೆ ಮಾಡುತ್ತಿದ್ದರೆಂಬುದು ಹಾಗೂ ಅಂದಿನವರ ಕಟ್ಟಡನಿರ್ಮಾಣದ ಕೌಶಲ್ಯವು ಎಷ್ಟು ಉನ್ನತವಾಗಿದ್ದಿತೆಂಬುದು ಅಚ್ಚರಿಯ ವಿಚಾರವಾಗಿದೆ.
ಇಂದಿನ ಕಟ್ಟಡನಿರ್ಮಾಣದ ಸಾಮಗ್ರಿಗಳ ವಿಚಾರ ಬಂದಾಗ ಅಲ್ಲಿ ಕಲ್ಲು, ಗಾರೆ/ಸಿಮೆಂಟ್,  ಇಟ್ಟಿಗೆ , ಮರಳು ಮುಂತಾದುವು  ಅನಿವಾರ್ಯವಾದವಾಗಿರುತ್ತವೆ. ಆದರೆ  ಸಿರಿಭೂವಲಯದ ’ ದೇವನಿವಾಸ’ ಹಾಗೂ ’ಇಂದ್ರಭವನಗಳ’  ನಿರ್ಮಾಣದಲ್ಲಿ ಚಿನ್ನ, ಬೆಳ್ಳಿ, ವಜ್ರ ಹಾಗೂ ನವರತ್ನಗಳ ಬಳಕೆಯು ತೀರ ಸಾಮಾನ್ಯವಾದುದು!!!
 ಇವುಗಳ ನಿರ್ಮಾಣಕ್ಕೆ  ತಳಪಾಯ ಹಾಕಲು ಭೂಮಿಯ ಆಧಾರವೂ ಬೇಕಿಲ್ಲ!!  ಇವೆಲ್ಲವೂ ನಿರ್ಮಾಣವಾಗಿರುವುದು ಬಾಹ್ಯಾಕಾಶದಲ್ಲಿ ಎಂಬುದನ್ನು ನಾವು ಗಮನದಲ್ಲಿರಿಸಿಕೊಳ್ಳಬೇಕು!!!
 ಈ ವಿವರಣೆಯನ್ನು ಓದುತ್ತಿರುವಂತೆಯೇ ನಿಮ್ಮ ಅಂತರಂಗದಲ್ಲಿ ಇವೆಲ್ಲವೂ ಕೇವಲ ಕಲ್ಪನೆಯ ಮಾಹಿತಿಗಳು ಎಂಬ ಹುಸಿನಗೆಯ ಭಾವನೆ ಉಂಟಾಗಿದೆಯೆಂಬುದು ನನಗೆ ಅರಿವಿದೆ. ಆದರೂ ಕಾವ್ಯಾಂತರಂಗದಲ್ಲಿ ಅಡಗಿದ್ದು ತನ್ನ ಒಳಗಣ್ಣಿಗೆ ಕಾಣಿಸಿದ ಮಾಹಿತಿಯನ್ನು ಇಲ್ಲಿ ವಿವರಿಸುವುದು ಈ ಕಾವ್ಯದ ಪರಿಚಯಕಾರನಿಗೆ ಅನಿವಾರ್ಯವಾದುದು.  ಇದನ್ನು ಒಪ್ಪಿಕೊಂಡು ನಂಬುವುದು ಅಥವಾ ನಂಬದಿರುವುದು ಓದುಗರ ಇಚ್ಛೆಗೆಬಿಟ್ಟ ಸಂಗತಿ. ಇದೊಂದು ರೀತಿಯ ವಿಲಕ್ಷಣವಾದ ಮಾಹಿತಿ (Fantastic) ಎಂದು ಬೇಕಾದರೂ ನೀವು ಇದನ್ನು ನಿರ್ಧರಿಸಬಹುದು.  ಏನೇ ಆಗಲೀ  ಸಿರಿಭೂವಲಯಕಾವ್ಯದಲ್ಲಿ ಇದಕ್ಕೆ ಸಂಬಂಧಿಸಿದ ಖಚಿತವಾದ ವಿವರಣೆಗಳು ತುಂಬಿರುವುದು ನಿಶ್ಚಯ. ನೋಡಿ:
”ಣವರತ್ನದಿಂದಶೋಭಿತವಾದಭವನದೆ|ಅವೆರಡೂಭಾಗದಲಿಪ್ರವರದ ಭರಭಾಗ ಹದಿನಾರುಸಾವಿರಯೋಜನವಿಹವು||
ಅಸುರರಿಗೆ ೬೪ ಲಕ್ಷಭವನಗಳು, ನಾಗಕುವರರಿಗೆ ೮೪ಲಕ್ಷಭವನಗಳು,ಸುಪರ್ಣರಿಗೆ೭೨ ಲಕ್ಷ, ಣವದೀಪಕುವರರ್ಗೆಪ್ಪತ್ತಾರುಲಕ್ಷ,..  ಇತ್ಯಾದಿಗಳ ಲೆಕ್ಕಹೇಳಿ,  ಧರಣಾನಂದ, ವೇಣುಧಾರಿ, ವಸಿಷ್ಟ, ಜಲಕಾಂತ, ಮಹಾಘೋಷ ,ಹರಿಕಾಂತ, ಮಿತವಾಹನ, ಮುಂತಾದ ಹಲವಾರು ಇಂದ್ರರ ಹೆಸರು ಸೂಚಿಸಿ,  ಅವರಿಗಾಗಿರುವ ಹಲವಾರು ಲಕ್ಷ ಇಂದ್ರಭವನಗಳ ವಿವರನೀಡಲಾಗಿದೆ!!
ಇವುಗಳನ್ನೆಲ್ಲ ಲೆಕ್ಕಹಾಕಿ ಒಟ್ಟುಗೂಡಿಸಿ, ಅದನ್ನು ಕುರಿತು ಒಟ್ಟು ಏಳುಕೋಟಿ ಎಪ್ಪತ್ತೆರಡು ಲಕ್ಷ ಭನಗಳಿರುವುದೆಂದು ಸೂಚಿಸಲಾಗಿದೆ!! ನೋಡಿ: ’ಪಿಡಿದಿರುವನೆಲ್ಲಕೂಡಲುಏಳುಕೋಟಿಯಕಡೆಗೆ| ಎಪ್ಪತ್ತೆರಡುಲಕ್ಷಗಳು| ಪೊಡವಿಯ ಇಂದ್ರಭವನಗಳಿಹವು| ಬಿಡದೆಲೆಕ್ಕಗಳಮ್’|| ಈ ರೀತಿಯಲ್ಲಿ ಸೂಚಿಸಿರುವ ಇಂದ್ರಭವನಗಳ ಲೆಕ್ಕವು  ಸರಿಯೋ? ತಪ್ಪೋ?? ಎಂಬುದನ್ನು ಪರೀಕ್ಷಿಸುವುಇದಕ್ಕಾದರೂ ಕುತೂಹಲಿಗಳು ಇಲ್ಲಿನ ಲೆಕ್ಕವನ್ನು ಪರಿಶೀಲಿಸಬೇಕು!
 ಇದು ಅಂತರಿಕ್ಷದಲ್ಲಿ ಭವನಗಳು ಎಷ್ಟಿವೆಯೆಂಬುದನ್ನು ಕುರಿತು ಲೆಕ್ಕವಾಯಿತು.  ಇನ್ನು ಇವುಗಳು ನಿರ್ಮಾಣವಾಗಿರುವ ನಿವೇಶದ ಒಟ್ಟು ವಿಸ್ತೀರ್ಣವು  ಎಷ್ಟಿರಬಹುದು!? ಕಾವ್ಯದಲ್ಲಿ ಹದಿನಾರು ಸಾವಿರ ಯೋಜನಗಳೆಂದು ಸೂಚಿಸಲಾಗಿದೆ!!   ( ಒಂದು ಯೋಜನ ದೂರವು  ಸುಮಾರು ೧೨  ಮೈಲುಗಳಿಗೆ ಸಮ)  ವಿಸ್ಥೀರ್ಣದಲ್ಲಿ ಒಂದು ಯೋಜನವೆಂದರೆ ಅದು ೧೪೪ ಚದರ ಮೈಲಿಗಳಾಗುತ್ತದೆ!  ಅಲ್ಲಿಗೆ ಈ ಭವನಗಳ ಒಟ್ಟು ವಿಸ್ತೀರ್ಣವು ಎಷ್ಟು ? ಎಂಬುದನ್ನು ಕುರಿತು ನಿಮಗೆ ಬಿಡುವಾದಾಗ ಲೆಕ್ಕಹಾಕಿರಿ!!!
ಅಸುರರಿಗೆ ೬೪ಲಕ್ಷಭವನಗಳೆಂದು ಸೂಚಿಸಿರುವುದು ಸಾರಿಯಷ್ಟೇ. ಅವರುಗಳಿರುವ ಅವನಿಯು ’ಚಿತ್ರಾಪೃಥ್ವಿಯ’ ಕೆಳಗಿರುವುದೆಂದು ಸೂಚಿಸಲಾಗಿದೆ.
 ’ಚಿತ್ರಾಪೃಥ್ವಿಯ’ ಕೆಳಗಿರುವ ಅವನಿಯಲ್ಲಿ ಅಲ್ಪರು ಅಧಿಕರೆಂದು ಹೇಳಲಾಗಿದೆ. ಇಲ್ಲಿಂದ ೨ ಸಾವಿರ ಯೋಜನದ ಕೆಳಗೆ ಇದಕ್ಕೆ ಸೇರದಂತಿರುವ ೪೨ಸಾವಿರ ಯೋಜನದ ಕೆಳಗೆ ಮಹರ್ಧಿಕರಿರುತ್ತಾರೆ! ಆಕಡೆ ಕೆಳಗೆ ಒಂದು ಲಕ್ಷಯೋಜನದ ಅಡಿಯಲ್ಲಿ  ಮೂರಾರ್ಧಿಧಾರಕರ ನಿವಾಸಗಳಿರುತ್ತವೆ.
 ಅವುಗಳೆಲ್ಲವೂ ವಿಸ್ತಾರವಾದ ಚತುಷ್ಕೋಣ ರೂಪದಲ್ಲಿರುವುವೆಂದೂ, ಅವುಗಳು  ವಜ್ರಮಯವಾದ ದ್ವಾರಗಳಿಂದ ಶೋಭಿಸುವ ಅವನಿಯ ಕಾವ್ಯ ಭೂವಲಯ ಎಂದು ವಿವರಿಸಲಾಗಿದೆ.
 ಒಟ್ಟು ೧೪೪೦೦೦ ಯೋಜನಗಳ ವ್ಯಾಪ್ತಿಯಲ್ಲಿ ಈ ಚಿತ್ರಾಪೃಥ್ವಿ, ಮಹರ್ಧಿಕರು ಹಾಗೂ ಮೂರಾರ್ಧಿಧಾರಕರ ವಸತಿ ಪ್ರದೇಶವು ಹರಡಿಕೊಂಡಿದ್ದರೆ, ಅದರ ವಿಸ್ಥಾರವು ಎಷ್ಟಾಗುವುದೆಂಬುದನ್ನು ಊಹಿಸಿಕೊಳ್ಳಬೇಕು!!!
ಪ್ರಿಯ ಓದುಗರೇ, ಸಿರಿಭೂವಲಯಕಾವ್ಯದ ಈಭಾಗದಲ್ಲಿ ವಿವರಿಸಿರುವ ಮಾಹಿತಿಯು ಕೇವಲ ಕವಿಕಲ್ಪನೆ ಎಂದು ಉಪೇಕ್ಷಿಸಲಾಗದು.ಆಕಾಶದ ವಿಸ್ತಾರವು ಎಷ್ಟಿರುವುದೆಂಬುದನ್ನು ಮಾನವಮಾತ್ರದವರು ಇದುವರೆವಿಗೂ ಅಳೆಯಲಾಗಿಲ್ಲವೆಂಬುದು ಸರ್ವವಿದಿತ.  ಮಂಗಳಗ್ರಹಕ್ಕೆ ಬಾರತವು ಕಳೆಸಿದ ಅತ್ಯಂತವೇಗವಾಗಿ ಚಲಿಸಿದ ಬಾಹ್ಯಾಕಾಶನೌಕೆಯು ಅಲ್ಲಿಗೆ ತಲುಪಲು ೩೬೫ ದಿನಗಳ ಸಮಯ ಹಿಡಿಯಿತು! ಅಂದರೆ ಅಷ್ಟು ದೂರದ ಪ್ರಯಾಣವಾಯಿತು. ಇಲ್ಲಿ ಸರ್ವಜ್ಞಸ್ವರೂಪಿಯಾದ ಕುಮುದೇಂದುಮುನಿಯು ಇವೆಲ್ಲ ಕಟ್ಟಡಗಳು ವ್ಯಾಪಿಸಿರುವ ಅನೂಹ್ಯವಾದ ನಗರಗಳ ವೈಭವವನ್ನು ಒಂದು ಅಂದಾಜಿನ ರೂಪದಲ್ಲೇ ಆಗಿರಲೀ  ಲೆಕ್ಕಹಾಕಿ ಅದನ್ನು ಯೋಜನದ ಮಾನದಲ್ಲಿ ಸೂಚಿಸಿರುವುದನ್ನು ಊಹಿಸಿಕೊಳ್ಳಲೂ ನಮಗೆ ಸಾಧ್ಯವಾಗದು.
ಕವಿಯು ನೀಡಿರುವ ಈ ಲೆಕ್ಕಾಚಾರವು ಅವನ ಯೋಗಬಲದ ಪ್ರಯಾಣದಿಂದ ಪ್ರತ್ಯಕ್ಷವಾಗಿ ಕಂಡ ಪರಿಸರದ ಚಿತ್ರಣವೆಂಬುದನ್ನು ನಿರಾಕರಿಸಲಾಗದು.
 ಒಂದು ಯೋಜನವೆಂದರೆ ನಮ್ಮ ಒಂದು ಮಿಲಿಮೀಟರಿಗೆ ಸಮಾನವೆಂಬ ಲೆಕ್ಕಾಚಾರದಲ್ಲಿ ಈ ಅದ್ಭುತ ಬಡಾವಣೆಯ ನಕ್ಷೆ ತಯಾರಿಸಿದರೆ, ಅದರ ಸ್ವರೂಪವು ಹೇಗಿರಬಹುದೆಂಬುದನ್ನು ಶಕ್ತಿಯಿರುವವರು ಚಿತ್ರಿಸಿ ತೋರಿಸಬಹುದಲ್ಲವೇ!!??
 ಭೂಮಿಯ ಆಧಾರವೇ ಇಲ್ಲದೆ ಗಗನದಲ್ಲಿ ನಿರ್ಮಿತವಾಗಿರುವ ಈ ವೈಭವೋಪೇತವಾದ ಬೃಹತ್ ಇಂದ್ರಭವನಗಳ ರಚನೆಗೆ ಬಳಕೆಯಾಗಿರುವ ಸಾಮಗ್ರಿಯು ಕೇವಲ ಕಲ್ಲು, ಇಟ್ಟಿಗೆ, ಗಾರೆಯಲ್ಲ.  ನವರತ್ನಕೆತ್ತಿದ ಹಾಸುಗಲ್ಲುಗಳು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.  ಮತ್ತು ಈ ಇಂದ್ರಭವನಗಳ ನೆಲವು  ’ನವರತ್ನಕೆತ್ತಿದ ಹಸೆಯ ದರ್ಪಣದಂತೆ ಹೊಳೆವ ನೆಲ ’ ಎಂಬ ವರ್ಣನೆಯು ನಿಜಕ್ಕೂ ಕವಿ ಕಲ್ಪನೆಯಲ್ಲ!!
ನಭೋಮಂಡಲದಲ್ಲಿ ಯಾವುದೇ ಆಧಾರವಿಲ್ಲದೇ ಇಂದ್ರಭವನಗಳನ್ನು ನಿರ್ಮಿಸುವುದು  ಹುಚ್ಚುಕಲ್ಪನೆ ಎಂದು ನಿರಾಕರಿಸಲಾಗದು!  ಆಧುನಿಕ ವಿಜ್ಞಾನವು ನಭೋಮಂಡಲಕ್ಕೆ ಕೃತಕ ಉಪಗ್ರಹಗಳನ್ನು  ಕಳಿಸಿ ಅಲ್ಲಿ ಸ್ಥಿರಕ್ಷೆಯಲ್ಲಿ ಸೇರಿಸುವಮೂಲಕ ಈ ಸಾಧನೆಯನ್ನು  ಸಾಕ್ಷಾತ್ಕರಿಸಿದ್ದಾಗಿದೆ!
ಇನ್ನು ಅಷ್ಟೊಂದು ವೈಭವೋಪೇತವಾದ ಇಂದ್ರಭವನಗಳ ನಿರ್ಮಾಣಕ್ಕೆ ಅಗತ್ಯವಾದ ಹಣಕಾಸಿನ ವ್ಯವಸ್ಥೆಗೂ  ಚಿಂತಿಸುವ ಅಗತ್ಯವಿಲ್ಲ!! ಜಗತ್ತಿನ ವಿಚಾರಬೇಡ, ಭಾರತದ ವಿಚಾರಬೇಡ, ನಮ್ಮ ಕರ್ನಾಟಕದ ರಾಜಕಾರಣಿಗಳು, ಅಧಿಕಾರಿಗಳು, ಉದ್ದಿಮೆದಾರರು ಸರ್ಕಾರಕ್ಕೆ ವಂಚಿಸಿ ಸಂಗ್ರಹಿಸಿಕೊಂಡಿರುವ ಸಂಪತ್ತಿನ ಪ್ರಮಾಣವನ್ನೇ ಸರಿಯಾಗಿ ಲೆಕ್ಕಹಾಕಿಕೊಳ್ಳಿ ಅದು ಇಂಥ ಮಹಾ ಇಂದ್ರಭವನಗಳ ನಗರ ನಿರ್ಮಾಣಕ್ಕೆ ಸಾಕಾಗಿ ಮಿಗುವಷ್ಟಾಗುತ್ತದೆ!!
 ಕುಶಲಕರ್ಮಿಗಳ ವಿಚಾರ ಬಂದಾಗ ಸ್ವಲ್ಪ ಸಮಸ್ಯೆ ಕಾಣಿಸಬಹುದು, ಭಾರತದಲ್ಲಿರುವ ಜಗತ್ಪ್ರಸಿದ್ಧವಾದ  ಸಾವಿರಾರು ದೇವಾಲಯಗಳ ಕುಸುರಿಕೆಲಸವನ್ನು ಮಾಡಿದಂಥ  ಶ್ರದ್ಧಾವಂತ ಪ್ರಾಮಾಣಿಕ ಕುಶಲಕರ್ಮಿಗಳು ಈಗ ಸಿಗದಿರಬಹುದು. ಈಗಿನ ಕುಶಲಕರ್ಮಿಗಳಿಗೆ ಮಾಡಲು ಉದ್ಯೋಗಬೇಕು, ವೆಚ್ಚಕ್ಕೆ ಹಣಬೇಕು! ಆದರೆ ಶ್ರಮವಹಿಸಿ ಕೆಲಸಮಾಡುವುದುಮಾತ್ರ ಯಾರಿಗೂ ಬೇಡದ ಸಂಗತಿ!! ಆದರೆ  ಈರೀತಿಯಲ್ಲಿ ಶ್ರಮವಹಿಸಿ ದುಡಿಯುವ ಕುಶಲಕರ್ಮಿಗಳು ಹಿಂದೆ  ಹೇರಳವಾಗಿದ್ದರು ಎಂಬುದಕ್ಕೆ  ಪ್ರತ್ಯಕ್ಷ ಸಾಕ್ಷಿಗಳು ಉಳಿದಿವೆ.
ಈ ವಿಚಾರಗಳ ಹಿನ್ನೆಲೆಯಲ್ಲಿ ನೀವು ಈ ಪರಿಚಯಲೇಖನದ ಮಾಹಿತಿಗಳನ್ನು ನಂಬಬಹುದು ಅಥವಾ ನಿರಾಕರಿಸಬಹುದು. ಕುಮುದೇಂದುಮುನಿಯ ಸಿರಿಭೂವಲಯವು ಇದನ್ನೆಲ್ಲ ವಿವರಿಸಿರುವುದಂತೂ ನಿಶ್ಚಯ.  ಇದು ಸುಧಾರ್ಥಿಯ ಸ್ವಕಪೋಲಕಲ್ಪಿತಮಾಹಿತಿಗಳಂತೂ ಅಲ್ಲ!!!
                                                    -ಸಿರಿಭೂವಲಯದಸುಧಾರ್ಥಿ.  

Saturday 1 February 2020

ಶಾಸ್ತ್ರ ಮತ್ತು ವಿಜ್ಞಾನ


ಹಿಂದೆಲ್ಲ ನಮ್ಮ  ಸಾಮಾಜಿಕ ಜೀವನದಲ್ಲಿ ಶಾಸ್ತ್ರ ಮತ್ತು ಸಂಪ್ರದಾಯಗಳನ್ನು ಕುರಿತ ಮಾತುಗಳು ಕೇಳಿಬರುತ್ತಿದ್ದುವು. ಈಗ ಕಾಲಬದಲಾಗಿದೆ. ವ್ಯಕ್ತಿಜೀವನದ ಎಲ್ಲ ಕ್ಷೇತ್ರಗಳಲ್ಲೂ  ಆಧುನಿಕ ವಿಜ್ಞಾನವು ಆಕ್ರಮಣಮಾಡಿ; ಅವುಗಳನ್ನು ತನ್ನ ವಶಕ್ಕೆ ಪಡೆದಿದೆ.! ನಾವು ಮಾತನಾಡುವಾಗ ಬಳಸುವ ಪ್ರತಿಯೊಂದು ಪದಕ್ಕೂ ಹಲವಾರು ಅರ್ಥಗಳಿರುತ್ತವೆ. ಸಂದರ್ಭಕ್ಕೆ ಅನುಗುಣವಾಗಿ ಪ್ರತಿಯೊಂದು ಪದಕ್ಕೂ ನಾವು ಅರ್ಥವನ್ನು ಅನ್ವಯಿಸಿಕೊಳ್ಳಬೇಕಾಗುತ್ತದೆ.

ಶಾಸ್ತ್ರ ಎಂಬ ಪದಕ್ಕೆ ಸಂಪ್ರದಾಯ; ನಿಯಮ; ವಿಜ್ಞಾನ; ಮುಂತಾದ ಅರ್ಥಗಳಿವೆ. ವಿಜ್ಞಾನ ಎಂಬ ಪದಕ್ಕೆ ಶಾಸ್ತ್ರ; ಕ್ರಮಬದ್ಧವಾದ ತಿಳುವಳಿಕೆ; ವಿಶೇಷವಾದ ಜ್ಞಾನ; ಎಂಬ ಅರ್ಥವಿವರಣೆ ಇದೆ. ಆಂಗ್ಲಭಾಷೆಯಲ್ಲಿ ಸೈನ್ಸ್ ಎಂಬ ಪದಕ್ಕೆ ನಾಲೆಡ್ಜ್; (ತಿಳುವಳಿಕೆ) ಸಿಸ್ಟಮೆಟಿಕ್ ನಾಲೆಡ್ಜ್ (ಕ್ರಮಬದ್ಧವಾದ ತಿಳುವಳಿಕೆ) ಎಂಬ ಅರ್ಥವಿವರಣೆ ಇದೆ. ವಿಜ್ಞಾನಶಾಸ್ತ್ರ ಎಂಬ ಅರ್ಥವೂ ಬಳಕೆಯಲ್ಲಿದೆ. ಅಂದಮೇಲೆ; ಶಾಸ್ತ್ರ ಹಾಗೂ ವಿಜ್ಞಾನ ಎರಡೂ ಒಂದೇ ಎಂದಾಯಿತು! ಶಾಸ್ತ್ರವೆಂಬುದು ಭಾರತೀಯರು ಕಲ್ಪಿಸಿಕೊಂಡಿರುವ ಮೂಢನಂಬಿಕೆಗಳ ಕಂತೆ ಪುರಾಣವಾಗಿದೆ. ಆದರೆ, ವಿಜ್ಞಾನವೆಂಬುದು ಪಾಶ್ಚಿಮಾತ್ಯರು ಅಪಾರ ಬುದ್ಧಿಶಕ್ತಿಯಿಂದ ಪ್ರತ್ಯಕ್ಷ ಪ್ರಯೋಗಗಳ ಮೂಲಕ ಕಂಡುಕೊಂಡ ಸತ್ಯ ಸಂಗತಿಗಳಾಗಿವೆ ಎಂಬುದು ಸಾಮಾನ್ಯವಾಗಿ ವಿಜ್ಞಾನಾರಾಧಕರ ಭ್ರಮೆಯಾಗಿರುತ್ತದೆ.

ಶಾಸ್ತ್ರವನ್ನು ನಂಬಿದವರು; (ಶಾಸ್ತ್ರಿಗಳು) ವಿಜ್ಞಾನವನ್ನು ಅರಿತವರು (ವಿಜ್ಞಾನಿಗಳು) ಇಬ್ಬರೂ ಮಾತನ್ನು ನಿರಾಕರಿಸುವುದಿಲ್ಲ. ಆದರೆ ಇಂದಿನ ವಿಜ್ಞಾನದ ಆರಾಧಕರುಮಾತ್ರ ಯಾವಕಾರಣಕ್ಕೂ ಇವೆರಡೂ ಒಂದೇ ಎಂಬ ಮಾತನ್ನು ಒಪ್ಪುವುದೇ ಇಲ್ಲ! ಅವರ ದೃಷ್ಟಿಯಲ್ಲಿ ಪ್ರಾಚೀನ ಭಾರತದ ಶಾಸ್ತ್ರಜ್ಞಾನವು ಪ್ರಯೋಜನವಿಲ್ಲದುದು; ವಿಜ್ಞಾನ; ವ್ಶೆಜ್ಞಾನಿಕ ಎಂದರೆ ಸರ್ವಶಕ್ತವಾದ ಹೆಚ್ಚಿನ ಮೌಲ್ಯವುಳ್ಳ ವಿಚಾರ ಎಂದಾಗಿರುತ್ತದೆ!!

ಶಾಸ್ತ್ರಗಳು  ಸೂಚಿಸುವ ಮಾಹಿತಿಗಳಿಗೆ ನಮ್ಮ ಪ್ರಾಚೀನ ಋಷಿ ಮುನಿಗಳು ತಮ್ಮ ಏಕಾಗ್ರ ಚಿತ್ತದ  ತಪಸ್ಸಿನ ಮೂಲಕ ಪ್ರತ್ಯಕ್ಷವಾಗಿ ಕಂಡ ಅನುಭವವು ಆಧಾರವಾಗಿರುತ್ತದೆ. ಇವುಗಳಿಗೆಲ್ಲ ವೇದಗಳೇ ಮೂಲ ಆಕರವಾಗಿರುತ್ತದೆ. ವಿಜ್ಞಾನಕ್ಕೆ ವಿಜ್ಞಾನಿಗಳ ಸತತವಾದ ಪ್ರಯೋಗ ಹಾಗೂ ಇಂಥ ಪ್ರಯೋಗಗಳ ವಿವರ ಮತ್ತು ಅದರ ಪರಿಣಾಮಗಳನ್ನು ಕುರಿತ ಟಿಪ್ಪಣಿಗಳು ಮುಂದಿನವರಿಗೆ ಮೂಲ ಆಕರವಾಗುತ್ತವೆ.  ಶಾಸ್ತ್ರಗಳಿಗೆ ಮೂಲವಾದ ಸನಾತನ ಧರ್ಮವು ಅನಾದಿ ಅನಂತ. ಇದರ ಹೇಳಿಕೆಗಳನ್ನು ಯಾರೂ ಅಲ್ಲಗಳೆದು ಬದಲಿಸುವಂತಿಲ್ಲ. ವಿಜ್ಞಾನವು ಕೇವಲ 300-400 ವರ್ಷಗಳ ಈಚಿನ ಹಸುಗೂಸುಗಳು. ಇದರ ಹೇಳಿಕೆಗಳನ್ನು ಕಾಲಕ್ರಮದಲ್ಲಿ ಮುಂದಿನ ಮೇಧಾವಿಯು ನಿರಾಕರಿಸಿ ನೂತನವಾದ ಸಮರ್ಪಕವಾದ ಹೊಸ ವಿಚಾರವನ್ನು ಪ್ರತಿಪಾದಿಸಬಹುದು. (ವಿದ್ಯುದುಪಕರಣಗಳು; ದೂರವಾಣಿ; ದೂರಸಂಪರ್ಕ ಇತ್ಯಾದಿಗಳಲ್ಲಿ ನೂತನ ಆವಿಷ್ಕಾರದಿಂದ ಊಹಾತೀತವಾದ ಬದಲಾವಣೆಗಳಾಗಿರುವುದು ಸಹಜ ಸಂಗತಿ) ಆದರೆ, ವೇದಶಾಸ್ತ್ರ್ರಗಳಲ್ಲಿ ರೀತಿಯ ಹೊಸವಿಚಾರಗಳ ಪ್ರತಿಪಾದನೆಗೆ ಅವಕಾಶವೇ ಇಲ್ಲ!

ಪಂಚಭೂತಗಳಿಂದ ರೂಪುಗೊಂಡಿರುವ ಶರೀರವು ಶಾಶ್ವತವಾದುದಲ್ಲ. ಒಂದು ನಿರ್ದಿಷ್ಟ ಅವಧಿಯನಂತರ ಅದು ನಾಶವಾಗುವುದು ನಿಶ್ಚಿತ. ಆದರೆ ಶರೀರದಲ್ಲಿ ಅಂತರ್ಗತವಾಗಿರುವ ಆತ್ಮವು ಶಾಶ್ವತವಾದುದು. ಎಂದಿಗೂ ಇದು ನಾಶವಾಗುವ ವಸ್ತುವಲ್ಲ. ಆದರೆ ಇದು ನಮ್ಮ್ಮ ಕಣ್ಣಿಗೆ ಕಾಣಿಸುವ ವಸ್ತುವಲ್ಲ! ಶಾಸ್ತ್ರವು ಆತ್ಮದ ಇರವನ್ನು ಕಂಡುಕೊಂಡಿದೆ. ಶರೀರ ಹಾಗೂ ಆತ್ಮದ ನೆಮ್ಮದಿಗೆ; ಉನ್ನತಿಗೆ  ಅತ್ಯಗತ್ಯವಾದ ಮಾರ್ಗದರ್ಶನವನ್ನು ಶಾಸ್ತ್ರವು ಮಾಡುತ್ತದೆ. ಶರೀರವು ಕಣ್ಣಿಗೆ ಪ್ರತ್ಯಕ್ಷವಾಗಿ ಕಾಣುತ್ತದೆ. ಪ್ರತ್ಯಕ್ಷವಾಗಿ ಕಾಣುವುದನ್ನು ಮಾತ್ರವೇ ವಿಜ್ಞಾನವು ನಂಬುತ್ತದೆ. ಅದಕ್ಕೆ ಅಗತ್ಯವಾದ ಸೌಲಭ್ಯಗಳನ್ನು ನಿrmiಸಲು ಪ್ರಯೋಗಗಳನ್ನು ನಡೆಸಿ; ನೂತನವೆನಿಸುವ  ಹಲವಾರು ಸಾಧನ ಸಲಕರಣೆಗಳನ್ನು ರೂಪಿಸಿಕೊಡುತ್ತದೆ! ಆದರೆ, ಕಣ್ಣಿಗೆ ಕಾಣಿಸದ ಆತ್ಮದ ನೆಮ್ಮ್ಮದಿಗೆ, ಉನ್ನತಿಗೆ ವಿಜ್ಞಾನವು ಯಾವುದೇ ಮಾರ್ಗದರ್ಶನ ಮಾಡಲೂ ಶಕ್ತವಾಗಿಲ್ಲ!

ಆಧುನಿಕ ವಿಜ್ಞಾನವು ರೂಪಿಸಿರುವ ಅತ್ಯಾಧುನಿಕ ಸಾಧನ ಸಲಕರಣೆಗಳೆಲ್ಲವನ್ನೂ ಮೀರಿಸಿದ ಸೌಲಭ್ಯವನ್ನು ಪ್ರಾಚೀನ ಶಾಸ್ತ್ರ್ರಗಳ ಪರಿಣತರು ತಿಳಿದಿದ್ದರು. ಪಾರಮಾರ್ಥಕವಾಗಿ ಅವುಗಳು ನಿರುಪಯೋಗಿಯೆಂದು ಅವರು ಅವುಗಳನ್ನು ತ್ಯಜಿಸಿದ್ದರು. ಅವರ ಹೇಳಿಕೆಗಳ ಮೂಲಾಧಾದಲ್ಲಿಯೇ ಆಧುನಿಕ ವಿಜ್ಞಾನದ ತಳಪಾಯ ನಿಂತಿದೆ. ಕಾಲಕ್ರಮದಲ್ಲಿ ವಿಜ್ಞಾನದ ವಿಚಾರದಲ್ಲಿ ಮೇಧಾವಿಗಳಾದವರು ಅದನ್ನು ಪ್ರಾಯೋಗಿಕವಾಗಿ ಸಾಕ್ಷಾತ್ಕರಿಸಿಕೊಂಡಿದ್ದಾರೆ. ಅವರ ಮುಂದಿನ ಮೇಧಾವಿಗಳು ಅದನ್ನು ಇನ್ನೂ ಹೆಚ್ಚಾಗಿ ಅಭಿವೃದ್ಧಿ ಪಡಿಸುತ್ತಿರುವುದು  ನಿಜವಾದ ಸಂಗತಿಯಾಗಿದೆ.

ಮಾಹಿತಿಯನ್ನು ಖಚಿತವಾಗಿ ವಿವರಿಸುವ ಪ್ರಾಚೀನ ಸಾಹಿತ್ಯಕೃತಿಗಳು ನಮ್ಮ ಕನ್ನಡಭಾಷೆಯಲ್ಲಿಯೇ ಇನ್ನೂ ಜೀವಂತವಾಗಿವೆ. ಅವುಗಳನ್ನು ಶ್ರಮವಹಿಸಿ, ಅಧ್ಯಯನಮಾಡಿ ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ. ಸಮರ್ಪಕವಾಗಿ ಕಾರ್ಯ ನಡೆದಲ್ಲಿ ಶಾಸ್ತ್ರಕ್ಕೂ ವಿಜ್ಞಾನಕ್ಕೂ ಒಂದು ಹೊಸ ಅರ್ಥವ್ಯಾಪ್ತಿಯು ದಕ್ಕುತ್ತದೆ.

ಇದು ಕೇವಲ ವಾದಕ್ಕಾಗಿ ಸೂಚಿಸುವ ವಿಚಾರವಲ್ಲ. ಇಂದಿನ ವಿಜ್ಞಾನಿಗಳ ಅನುಭವ ಹಾಗೂ ಮಾಹಿತಿಗಳಿಗೆ ಮಾನ್ಯತೆ ನೀಡುವಂತಯೇ ಶಾಸ್ತ್ರ್ರಗಳು ನೀಡುವ ಮಾಹಿತಿಗಳ ವಿವರಗಳಿಗೂ ಮಾನ್ಯತೆ ನೀಡುವ ಮನೋಭಾವ ನಮ್ಮಲ್ಲಿ ಬೆಳೆಯಬೇಕಾಗಿದೆ. ಶಾಸ್ತ್ರ ಹಾಗೂ ವಿಜ್ಞಾನ ಎಂಬ ಎರಡು ಪದಗಳ ಅರ್ಥವೂ ಒಂದೇ ಆಗಿರುವುದರಿಂದ ಅದನ್ನು ನಿರಾಕರಿಸಲು ಸಾಧ್ಯವಿಲ್ಲ.

- ಸುಧಾರ್ಥಿ, ಹಾಸನ
*  *