Friday 9 April 2021

ವೇದ, ವೇದ. ಏನಿದನ್ನು ಕುರಿತ ವಾದ ಪ್ರತಿವಾದ; ವಿವಾದ!? (ಭಾಗ: ೩)

 

ಆಧುನಿಕ ವಿಜ್ಞಾನದ ಇತಿ ಮಿತಿ ಏನು?

ಭೂಮಂಡಲವೊಂದರವಿನಃ ಬೇರಾವ ಗ್ರಹದಲ್ಲೂ  ಮಾನವರ ಜೀವನಕ್ರಮ ಇರುವ ಸಂಭವವಿಲ್ಲ.  ಭೂಮಿಯಮೇಲೆ ಏಕಾಣುಜೀವಿಗಳಿಂ  ಉಂಟಾದ ಜಿವವಿಕಾಸ ಕ್ರಿಯೆಯು  ಜಲಚರಳು; ಭೂಚರಗಳು; ಸಸ್ತನಿಗಳು ಮುಂತಾದ  ಬೇರೆ ಬೇರೆ ಹಂತಗಳಲ್ಲಿ  ಮುಂದುವರೆದು; ಮಂಗಗಳ ಸಂತತಿಯಿಂದ  ಇಂದಿನ ಆಧುನಿಕ ಮಾನವರ ಮೂಲಸಂತತಿಯು  ವಿಕಾಸಗೊಂಡಿತು. ಮಾನವನೂ  ಒಳಗೊಂಡಂತೆ  ಜೀವಜಗತ್ತಿನ  ಜೀವನ ಕ್ರಿಯೆಯಲ್ಲಿ ನಿಸರ್ಗದ ಕೈವಾದವಿದೆ.  ಸ್ತ್ರೀ ಪುರುಷರ  ದೇಹಸಂಪರ್ಕದಿಂದ ನೂತನ ದೇಹದ ಉತ್ಪತ್ತಿಯಾಗುತ್ತದೆ.  ಆಹಾರದ ಸೇವನೆಯ ಮೂಲಕ  ಜೀವ ಜಂತುಗಳು ಜೀವಿಸುತ್ತವೆ.  ಒಂದು ನಿಯಮಿತ ಅವಧಿಯ ನಂತರ ಯಾವುದೇ ಕಾರಣದಿಂದ ಮೆದುಳಿನ ಕ್ರಿಯೆಯು ನಿಂತರೆ, ಜೀವಜಂತುವಿನ ದೇಹಾವಸಾನವಾಗುತ್ತದೆ. ಎಂಬ ಮಾಹಿತಿಯನ್ನು ವಿಜ್ಞಾನವು ತನ್ನ ಅನುಯಾಯಿಗಳಿಗೆ ನೀಡಬಲ್ಲುದಾಗಿದೆ.  ಮರಣದ ಕಾರಣಗಳು, ಆ ಕಾರಣಗಳನ್ನು  ನಿವಾರಿಸುವಮೂಲಕ ಆರೋಗ್ಯದ ಸಂರಕ್ಷಣೆ; ತನ್ಮೂಲಕ ದೀರ್ಘಕಾಲದವರೆಗೆ  ಸಾವನ್ನು ಎದುರಿಸಿ, ಜೀವಂತವಾಗಿರುವ  ಪ್ರಯತ್ನವನ್ನು ವಿಜ್ಞಾನ ಕ್ಷೇತ್ರವು  ಬಹಳ ಉತ್ಸಾಹದಿಂದ ಮುಂದುವರೆಸಿದೆ.  ಮೇಲೆ ಸೂಚಿಸಿದ ಪ್ರಶ್ನೆಗಳಿಗೆ  ಉತ್ತರಿಸುವಲ್ಲಿ ವಿಜ್ಞಾನವು ಇದಕ್ಕಿಂತ ಹೆಚ್ಚಿನ ಮಾಹಿತಿ ನೀಡಲು ಅವಕಾಶವಿಲ್ಲ!

ಆದರೆ, ಇದೇ ಪ್ರಶ್ನೆಗಳಿಗೆ  ಸೂಕ್ತವಾದ ಸಮಾಧಾನವನ್ನರಸಿ, ನಾವು ದೇವರು; ವೇದೋಪನಿಷತ್ತುಗಳನ್ನು  ಆಶ್ರಯಿಸಿದಾಗ, ನಮಗೆ ದೊರೆಯುವ ಸ್ಪಷ್ಟವಾದ, ಸಮರ್ಪಕವಾದ  ಸಮಾಧಾನವು ಬೇರೆಯೇ ಆಗಿರುತ್ತದೆ.

ವಿಜ್ಞಾನವು  ಇದುವರೆವಿಗೂ ಸಾಕಷ್ಟು ಪ್ರಯೋಗಮಾಡಿ, ಹುಡುಕಾಡಿದರೂ, ದೇವರು ಎಂಬ ಶಕ್ತಿಯು ಕಣ್ಣಿಗೆ ಕಂಡಿಲ್ಲ!  ಕೈಗೆ ಸಿಕ್ಕಿಲ್ಲ. ಇನ್ನು ವೇದೋಪನಿಷತ್ತುಗಳ ವಿಚಾರ.  ಹಿಂದಿನವರು ಯಾರೋ  ಹೊಟ್ಟೆಹೊರೆಯಲು  ಬರೆದ ಅವೈಜ್ಞಾನಿಕ ಮಾಹಿತಿಗಳು ಅವುಗಳಲ್ಲಿ ತುಂಬಿವೆ.  ಅವನ್ನೆಲ್ಲ ನಂಬಲು ಸಾಧ್ಯವಿಲ್ಲ.  ಎಂಬುದು  ಇಂದಿನದಿನಗಳಲ್ಲಿ  ಕೆಲವರ ವಾದವಾಗಿರುತ್ತದೆ.  ಇದು ಸರಿಯಾದುದಲ್ಲವೆಂಬುದು ಹಲವರ ಅನುಭವ.

ವೇದೋಪನಿಷತ್ತುಗಳಲ್ಲಿ ಮಾನವಕುಲಕ್ಕೆ ಮಾತ್ರ ಸಂಬಂಧಿಸಿದ ಮಾಹಿತಿಗಳು ತುಂಬಿಲ್ಲ. ಇಡೀ ಜಗತ್ತಿನ ಸೃಷ್ಟಿಕ್ರಮಕ್ಕೆ  ಮರ್ಗದರ್ಶನ ನೀಡುವ ಮಾಹಿತಿಗಳು ಅದರಲ್ಲಿ ಅಡಕವಾಗಿವೆ.  ಇಂದಿನ ಮಾನವತೆಗೆ ಭಂಗತರುವ ಯಾವುದೇ ಅಂಶಗಳೂ ಅವುಗಳಲ್ಲಿ  ಅಡಕವಾಗಿಲ್ಲ.  ವೇದೋಪನಿಷತ್ತುಗಳಲ್ಲಿ  ಸೂಚಿಸಿರುವ ಮಾಹಿತಿಗಳಂತೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಯಾರ್ಜಿತ ಕರ್ಮಫಲಕ್ಕೆ ಅನುಸಾರವಾಗಿಯೇ ಜೀವಿಸಬೇಕಿರುವ ಕಾರಣ: ಹಾಗೂ ಅವನ ಪ್ರತಿಯೊಂದು ಕ್ರಿಯೆಗೂ ಸೂಕ್ತವಾದ ಫಲವನ್ನು ಅವನು ಅನುಭವಿಸಲೇಬೇಕಾದ ಕಾರಣ: ಯಾವುದೇ ಕಾರ್ಯವನ್ನೂ ಅವನು  ಕಡ್ಡಾಯವಾಗಿ ನಿರ್ವಹಿಸಲೇಬೇಕು ಎಂಬ  ನಿರ್ಭಂಧವನ್ನೇನೂ  ವೇದೋಪನಿಷತ್ತುಗಳು ಸೂಚಿಸುವುದೇ ಇಲ್ಲ!!

 ದೇಹದಲ್ಲಿ ಅಂತರ್ಗತವಾಗಿರುವ  ಆತ್ಮದ ಸ್ವರೂಪ; ಅದರ ಉನ್ನತಿ; ಅವನತಿಗಳ  ಹಾದಿಯನ್ನು ಅವುಗಳು ವಿವರಿಸುತ್ತವೆ. ಅದನ್ನು ಅನುಸಾರಿಸುವುದು ಅಥವಾ  ಬಿಡುವುದು ನಮ್ಮ ಸ್ವಾತಂತ್ರ್ಯಕ್ಕೆ ಸೇರಿದ್ದು. ಇವುಗಳನ್ನು ರಚಿಸಿದ್ದು  ದೇವರೆಂಬ ಅಗೋಚರ ಶಕ್ತಿಯೇ ಆಗಿರುವ ಕಾರಣ ಮಾನವರಿಗೆ ಒಳ್ಳೆಯದಾವುದು?  ಕೆಟ್ಟದ್ದಾವುದು?  ಎಂಬುದನ್ನಷ್ಟೇ  ಇವು ಸೂಚಿಸುತ್ತವೆ. ಇವುಗಳಲ್ಲಿ ಯಾವುದೇ ವಿರೋಧ, ದ್ವೇಷ, ದೋಷಗಳನ್ನೂ ನಾವು ಕಾಣಲು ಸಾಧ್ಯವಿಲ್ಲ.

ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು ಹಿಂದಿನ ವೈಜ್ಞಾನಿಕ ಸಿದ್ಧಾಂತಗಳ ತಪ್ಪು ಕಲ್ಪನೆಗಳನ್ನುದೂರಗೊಳಿಸಿ; ನೂತನ ಸಿದ್ಧಾಂತಗಳನ್ನು  ಪ್ರತಿಪಾದಿಸುತ್ತಿರುವುದು ಸರ್ವವಿದಿತ.  ಇಂಥ  ನೂತನ ಸಿದ್ಧಾಂತಗಳು  ಸೂಚಿಸುವ ಮಾಹಿತಿಗಳನ್ನೇ ಒಂದೊಂದಾಗಿ ಪ್ರತಿಪಾದಿಸುವುದರಿಂದ  ನಮಗೆ ಯಾವುದೇ ವಿಚಾರದಲ್ಲಿ ಖಚಿತವಾದ ಮಾಹಿತಿ ಬೇಕಿದ್ದರೂ ನಮ್ಮ ವೇದೋಪನಿಷತ್ತುಗಳು ನೀಡುವ ಮೌಲಿಕವಾದ ಜ್ಞಾನವೇ ಹೆಚ್ಚು ಉಪಯುಕ್ತವಾದುವೆಂಬ ನಂಬಿಕೆಯನ್ನು ನಾವು ಹೊಂದಿರಬೇಕು. ಇಂಥ ನಂಬಿಕೆ ಇಲ್ಲವಾದರೆ; ದೇವರು, ವೇದೋಪನಿಷತ್ತುಗಳು ಮಾತ್ರವಲ್ಲ; ವಿಜ್ಞಾನದ ಸಿದ್ಧಾಂತಗಳನ್ನೂ ಕೂಡ ಯಾರೊಬ್ಬರೂ ಸುಲಭವಾಗಿ  ಅಂಗೀಕರಿಸಲು ಸಾಧ್ಯವಾಗದು.  ಇದಿಷ್ಟು ಮಾಹಿತಿಯ ಹಿನ್ನೆಯಲ್ಲಿ  ಪುನರ್ಜನ್ಮ  ಎಂಬುದನ್ನು  ಕುರಿತು ಸ್ವಲ್ಪ ವಿವರವಾದ ಮಾಹಿತಿಗಳನ್ನು ಅರಿಯುವ ಪ್ರಯತ್ನ ಮಾಡೋಣ.

ಭಾರತೀಯ ಜೀವನಪರಂಪರೆಯಲ್ಲಿ ಮಾನವರ ಜೀವನದೊಂದಿಗೆ ದೇವರು; ಧರ್ಮ; ದೆವ್ವ; ಭೂತ; ಪ್ರೇತ; ಪಿಶಾಚಿ; ಪಾಪ-ಪುಣ್ಯ; ಸ್ವರ್ಗ; ನರಕ ಮುಂತಾದುವುಗಳು  ಹಾಸುಹೊಕ್ಕಾಗಿವೆ.   ಈಗಾಗಲೇ ಸೂಚಿಸಿರುವಂತೆ ಇವುಗಳೆಲ್ಲವೂ ಅಸಂಬದ್ಧ ಕಲ್ಪನೆಗಳು; ಆರ್ಥಹೀನ ನಂಬಿಕೆಗಳು ಎಂಬ ಅಭಿಪ್ರಾಯವು ಹಲವಾರು ಜನಗಳಲ್ಲಿ ಬೆಳೆದುಬಂದಿದೆ. ಸುಮಾರು ನೂರೈವತ್ತು ವರ್ಷಗಳಿಗೆ ಮೊದಲು  ಕ್ರಿಶ್ಚಿಯನ್ ಹಾಗೂ ಇಸ್ಲಾಮ್ ಧರ್ಮದ ಅನುಯಾಯಿಗಳಂತೂ   ಇಂಥ ಕಲ್ಪನೆಗಳು ಹಾಸ್ಯಾಸ್ಪದ ಎಂದೇ  ನಂಬಿದ್ದರು!

ತಮ್ಮ ಧರ್ಮಗಳ ಸಾರಸರ್ವಸ್ವವೆನಿಸಿದ ಬೈಬಲ್ ಹಾಗೂ ಕುರಾನ್ ಗಳಲ್ಲಿ ಪ್ರೇತ, ಪಿಶಾಚಿಗಳ ವಿಚಾರದಲ್ಲಿ ಯಾವುದೇ ಮಾಹಿತಿಯೂ ಇಲ್ಲದುದೇ ಅವರ ಇಂಥ ನಂಬಿಕೆಗೆ ಮೂಲಕಾರಣವಾಗಿತ್ತು.

ಪುನರ್ಜನ್ಮವನ್ನಂತೂ ಸನಾತನಹಿಂದೂಧರ್ಮ ಹಾಗೂ ಅದರ ಶಾಖಾಸಂಪ್ರದಾಯಗಳನ್ನು ಹೊರತುಪಡಿಸಿ, ಉಳಿದಾವ ಮತಧರ್ಮವೂ ಪ್ರತಿಪಾದಿಸಿಲ್ಲ. ಈ ಕಾರಣದಿಂದಾಗಿ ಅನ್ಯ ಧರ್ಮಾನುಯಾಯಿಗಳಿಗೆ  ಪುನರ್ಜನ್ಮದ ವಿಚಾರ ತುಂಬಾ ಹಾಸ್ಯಾಸ್ಪದವಾಗಿತ್ತು.

ಸರ್ವಶಕ್ತನಾದ ಏಸು ಅಥವಾ ಅಲ್ಲಾಹನ ಇಚ್ಛೆಯಯಂತೆ ನಮ್ಮ ತಂದೆ ತಾಯಿಯ ಸಮಾಗಮದಿಂದ ನಾವು ಈ ಭೂಮಿಯಲ್ಲಿ  ಹುಟ್ಟಿದ್ದೇವೆ.  ನಾವು ಮಾಡುವ ಕೆಲಸಕಾರ್ಯಗಳಲ್ಲಿ ಕೆಲವು ಒಳ್ಳೆಯವು- ಕೆಲವು ಕೆಟ್ಟವು ಇರುತ್ತವೆ.  ಕೆಟ್ಟಕೆಲಸಮಾಡಿದರೆ ಪಾಪ ಬರುತ್ತದೆ. ಸಾವಿನನಂತರ ಪಾಪಿಗೆ ಶಾಶ್ವತವಾದ ನರಕವಾಸ ಇರುತ್ತದೆ. ಒಳ್ಳೆಯಕಾರ್ಯ ಮಾಡಿದರೆ, ಪುಣ್ಯಬರುತ್ತದೆ. ಸಾವಿನನಂತರ ಪುಣ್ಯವಂತರು ಸ್ವರ್ಗದಲ್ಲಿ ಶಾಶ್ವತವಾದ ಸುಖವನ್ನು ಅನುಭವಿಸಲು ನೆಲೆಸುತ್ತಾರೆ ಎಂಬುದು ಆ ಮತಧರ್ಮಗಳ ನಂಬಿಕೆ.

ಆದರೆ, ಇದು ಸರಿಯಾದ ತಿಳುವಳಿಕೆಯಲ್ಲ.  ಈ ರೀತಿಯಲ್ಲಿ ನಂಬುವುದರಿಂದ ಹಲವಾರು ಸಮಸ್ಯೆಗಳು  ತಲೆದೋರುತ್ತವೆ.  ಪಾಪಿಗೆ ನರಕ; ಪುಣ್ಯವಂತರಿಗೆ ಸ್ವರ್ಗ ಎಂಬುದು ಮೇಲುನೋಟಕ್ಕೆ  ಸ್ವಲ್ಪಮಟ್ಟಗೆ ಸರಿಯೆನಿಸಬಹುದು.  ಆದರೆ, ಜೀವನದಲ್ಲಿ ಯಾವುದೇ ಪಾಪವನ್ನಾಗಲೀ; ಪುಣ್ಯವನ್ನಾಗಲೀ ಮಾಡದಿರುವವರು; ಪಾಪ ಪುಣ್ಯಗಳೆರಡನ್ನೂ  ಸಮವಾಗಿ ಮಾಡಿರುವವರು; ಸ್ವಲ್ಪಪಾಪ, ತುಂಬಾ ಪುಣ್ಯಮಾಡಿರುವವರು; ತುಂಬಾ ಪಾಪ; ಸ್ವಲ್ಪ ಪುಣ್ಯಮಾಡಿರುವವರು ಇತ್ಯಾದಿ ಹಲವಾರು ವರ್ಗದ ಜನಗಳಿರುವುದರಿಂದ ಅವರಿಗೆಲ್ಲ ಒಂದೇ ಸಲಕ್ಕೆ ಶಾಶ್ವತವಾದ ಸ್ವರ್ಗವಾಗಲೀ, ನರಕವಾಗಲೀ ಸಿಗುವುದು ಸಮಂಜಸವಲ್ಲ. ಈ ರೀತಿಯ ಸಮಸ್ಯೆ ಎದುರಾದಾಗ ಸನಾತನ ಧಾರ್ಮವೊಂದನ್ನುಳಿದು ಮಿಕ್ಕೆಲ್ಲ ಮತ ಸಂಪ್ರದಾಯಗಳೂ  ನಿರುತ್ತರವಾಗುತ್ತವೆ.  ಮಾನವನ  ಪ್ರತಿಯೊಂದು ಕ್ರಿಯೆಗೂ ಅದರ ಯೋಗ್ಯತಾನುಸರವಾಗಿ ಪಾಪ ಅಥವಾ ಪುಣ್ಯವು ಇರುತ್ತದೆ. ಇದನ್ನು ಅವನೇ ಅನುಭವಿಸಬೇಕು.  ಇಂಥ ಪಾಪ ಅಥವಾ ಪುಣ್ಯಗಳ ಫಲವನ್ನನುಭವಿಸಲು ಅವನಿಗೆ ಲಕ್ಷಾಂತರ ಜನ್ಮಗಳ  ಅನುಕೂಲವಿದೆ ಎಂಬ ವಿಚಾರವನ್ನು ಸನಾತನಧರ್ಮವು ಪ್ರತಿಪಾದಿಸುತ್ತದೆ.

ಈ ಸನ್ನಿವೇಶದಲ್ಲಿ ನಾವು ಪುನರ್ಜನ್ಮವನ್ನು ಕುರಿತು ಮುಂದುವರೆಯುವುದಕ್ಕೆ ಮೊದಲು, ದೇವರು; ಸೃಷ್ಟಿಯಕ್ರಮ; ಹಾಗೂ ಮಾನವ ಎಂದರೆ ಯಾರು? ಎಂಬುದನ್ನು ಕುರಿತು ಸ್ವಲ್ಪ ಮಾಹಿತಿಯನ್ನು  ತಿಳಿದಿರಲೇ ಬೇಕಾದುದು ಅನಿವಾರ್ಯ.

ದೇವರುಎಂಬ ವ್ಯಕ್ತಿ ವಿಶೇಷವೊಂದು ಇಲ್ಲವೇ ಇಲ್ಲ. ಎಂದು  ಭೂಮಿಯಲ್ಲಿ  ಕೆಲವಾರು ಜನಗಳು ಕೂಗಾಡಿದರೂ; ಮಾನವರ ಬುದ್ಧಿಶಕ್ತಿಗೆ ನಿಲುಕದ  ಯಾವುದೋ ಒಂದು  ಮಹತ್ತರವಾದ ಶಕ್ತಿ ಇದೆ.  ಈ ಜಗತ್ತಿನಲ್ಲಿ ನಡೆಯುವ ಎಲ್ಲರೀತಿಯ ವಿಸ್ಮಯಕರ ಚಟುವಟಿಕೆಗಳಿಗೆ  ಈ ಮಹತ್ತರವಾದ ಶಕ್ತಿಯೇ ಕಾರಣವಾಗಿರುತ್ತದೆ ಎಂದು ಹಲವಾರು ಮೇಧಾವಿಗಳು ಒಪ್ಪಿಕೊಂಡಿದ್ದಾರೆ.  ಇಂಥ ಅಲೌಕಿಕಶಕ್ತಿಯನ್ನೇ ನಮ್ಮ ವೇದೋಪನಿಷತ್ತುಗಳು ದೇವರುಎಂದು ವರ್ಣಿಸುತ್ತವೆ.  ಈ ದೇವರು ಸರ್ವಶಕ್ತ.  ಸರ್ವಾಂತರ್ಯಾಮಿ. ಸರ್ವಾಧಾರ. ಸರ್ವಕಾರಣ.  ನಿರಾಕಾರ. ನಿರ್ಗುಣ. ಈ ಸರ್ವಶಕ್ತನ ಇಚ್ಛೆಗೆ ಇರುದ್ಧವಾಗಿ ಯಾವುದೂ ನಡೆಯಲಾರದು.

ಮಾನವರಾದ ನಮಗೆ ಇಂದ್ರಿಯಗೋಚರವಾಗುವ ಹಾಗೂ ಅಗೋಚರವಾಗಿರುವ ಹಲವಾರು ಲೋಕಗಳನ್ನು ಒಳಗೊಂಡದ್ದು ಜಗತ್ತು ಎನಿಸುತ್ತದೆ.  ಈ ಜಗತ್ತು ಈಗಿರುವ ಸ್ಥಿತಿಯಲ್ಲಿ ಅಸ್ಥಿತ್ವಕ್ಕೆಬಂದುದನ್ನು ಸೃಷ್ಟಿಎಂದು ಕರೆಯಲಾಗುತ್ತದೆ.  ಈಗ ನಡೆಯುತ್ತಿರುವಂತೆ ಜಗತ್ತಿನ ವ್ಯಾಪಾರಗಳು ನಡೆಯುವುದನ್ನು  ಸ್ಥಿತಿಎನ್ನಲಾಗುತ್ತದೆ.  ಈ ಸ್ಥೂಲರೂಪದ ಜಗತ್ತೆಲ್ಲವೂ ನಾಶವಾಗಿ, ಸೂಕ್ಷ್ಮರೂಪದಲ್ಲಿ ಬ್ರಹ್ಮಾಂಡದೊಳಗೆ  ಅಡಕವಾಗುವುದನ್ನು ಲಯ  ಎನ್ನಲಾಗುತ್ತದೆ.  ಈ ಸೃಷ್ಟಿ, ಸ್ಥಿತಿ, ಲಯಗಳಿಗೆ ಬಂಧಿಸಿದವರೆಲ್ಲರೂ  ಅನುಸರಿಸಲೇ ಬೇಕಾದ  ನಿಯಮಗಳನ್ನು ಧರ್ಮಎನ್ನಲಾಗುತ್ತದೆ.  ಇಂಥ ನಿಯಮಗಳ  ವಿವರಗಳು ತುಂಬಿರುವ ಕೃತಿಯನ್ನು ಶಾಸ್ತ್ರಗಳೆನ್ನಲಾಗುತ್ತದೆ.  ಶಾಸ್ತ್ರಗಳು ಹೇಳುವ ವಿಚಾರಗಳನ್ನೇ ಪುರಾಣಗಳು ಸಮರ್ಥಿಸುತ್ತವೆ.  ಪುರಾಣಗಳಿಗೆ ಉಪನಿಷತ್ತುಗಳು ಆಧಾರವಾಗಿರುತ್ತವೆ.  ಉಪನಿಷತ್ತುಗಳು ಅರಣ್ಯಕಗಳು ಹಾಗೂ ಬ್ರಾಹ್ಮಣಗಳನ್ನು ಅವಲಂಬಿಸಿರುತ್ತವೆ. ಇವುಗಳು ಶೃತಿ; ಸ್ಮೃತಿ ಸ್ವರೂಪದ ವೇದಗಳನ್ನು ಅವಲಂಭಿಸಿರುತ್ತವೆ. ಈ ಕ್ರಮದಲ್ಲಿ ಜಗತ್ತಿನ ಸಕಲ ಧರ್ಮಶಾಸ್ತ್ರಗಳಿಗೂ ಮೂಲದಲ್ಲಿ ವೇದಗಳೇ ಆಧಾರವಾಗಿರುತ್ತವೆ.  ಇಷ್ಟು ಮಹತ್ವಪೂರ್ಣವಾದ ವೇದಗಳು, ಜಗತ್ತು, ಬ್ರಹ್ಮಾಂಡ, ಮುಂತಾದುವುಗಳಿಗೆಲ್ಲ ನಿಯಮಕನಾದ ಭಗವಂತನೇ ಸರ್ವಶಕ್ತ. ಸರ್ವಾಂತರ್ಯಾಮಿ ಎಂದು ಸೂಚಿಸಲಾಗುತ್ತದೆ.

***

ಆತ್ಮ ಹಾಗೂ ಪರಮಾತ್ಮಕ್ಕೆ ಸಂಬಂಧಿಸಿ ಮಾಹಿತಿಗಳು:

ಮಾನವರಾದ  ನಮ್ಮಲ್ಲಿ ಬಾಹ್ಯೇಂದ್ರಿಯಗೋಚರವಾಗುವ ಸ್ಥೂಲಶರೀರಹಾಗೂ  ಆತ್ಮಎಂಬ ಎರಡು  ಮುಖ್ಯಭಾಗಗಳಿವೆ. ಸರ್ವಶಕ್ತವಾದ ಭಗವಂತನನ್ನು  ಪರಮಾತ್ನಎಂದೂ ಸೂಚಿಸಲಾಗುತ್ತದೆ.  ಮಾನವರಾದ ನಮ್ಮ ದೇಹದಲ್ಲಿ ಅಂತರ್ಗತವಾಗಿರುವ ಆತ್ಮವು ಮೂಲದಲ್ಲಿ ಈ ಪರಮಾತ್ಮ ತತ್ವದಿಂದಲೇ  ಹೊರಬಂದ ಸಣ್ಣ ಕಣಗಳಾಗಿರುತ್ತವೆ.  ಸೃಷ್ಟಿಕ್ರಿಯೆಯಲ್ಲಿ ಭಾಗವಹಿಸಿದ ಈ ಆತ್ಮಗಳು  ಪರಮಾತ್ಮತತ್ವದಲ್ಲಿ  ಅವಿಭಾಜ್ಯ ಅಂಗವಾಗಿದ್ದಾಗ ಒಪ್ಪಿಕೊಂಡ ನಿಯಮಗಳಿಗೆ ಅನುಸಾರವಾಗಿಯೇ  ಸೃಷ್ಟಿಯ ಆಟದಲ್ಲಿ  ಭಾಗವಹಿಸುತ್ತವೆ. ಸೃಷ್ಟಿಯ ಆಟದಲ್ಲಿ ನಿಸರ್ಗದ ನಿಯಮಗಳಿಗೆ ಅನುಸಾರವಾಗಿ ತನಗಿಚ್ಚೆಬಂದ ಆನಂದವನ್ನು ಅನುಭವಿಸುವ ಅವಕಾಶಪಡೆದ ಆತ್ಮನು, ಸ್ಥೂಲದೇಹದಲ್ಲಿ  ಆಶ್ರಯಪಡೆದು ವಿವಿಧ ಆನಂದಗಳನ್ನು  ಅನುಭವಿಸಲು ತೆರಳುತ್ತಾನೆ.  ಇಂಥ ಆನಂದಾನುಭವಗಳ ನಂತರ ಮೊದಲಿನಷ್ಟೇ ಪರಿಶುದ್ಧ ಸ್ಥಿತಿಯಲ್ಲಿ  ಪರಮಾತ್ಮ ತತ್ವದಲ್ಲಿ ವಿಲಿನವಾಗುವುದು ಆತ್ಮಗಳ ಜೀವನ ಯಾತ್ರೆಯಮುಖ್ಯ ಗುರಿಯಾಗಿರುತ್ತದೆ.

ಜೀವಾತ್ಮನು ಸಸ್ಯ; ಕ್ರಿಮಿ; ಕೀಟಾದಿ ಜನ್ಮಗಳಲ್ಲಿರುವಾಗ ನಿಸರ್ಗದ ನಿಯಮಗಳು  ಅವುಗಳ  ಜೀವನಕ್ರಮವನ್ನು  ನಿಯಂತ್ರಿಸುತ್ತವೆ.  ಪ್ರಾಣಿಗಳು ಸಾಮಾನ್ಯವಾಗಿ  ಪ್ರಕೃತಿಯ ನಿಯಮಗಳನ್ನು ಮೀರುವುದಿಲ್ಲ. ಇದೇ ಜೀವಾತ್ಮವು ಮಾನವದೇಹವನ್ನು ಆಶ್ರಯಿಸಿದಾಗ, ಈ ನಿಸರ್ಗದ ನಿಯಮಗಳು  ದೇಹದ ಬುದ್ಧಿಶಕ್ತಿಯಾಗಿ  ಮಾರ್ಪಟ್ಟು, ಮಾನವಶರೀರದಲ್ಲಿ  ಅಂತರ್ಗತವಾಗಿ ಅವನಿಗೆ ಮಾನವಧರ್ಮವನ್ನು ತಿಳಿಸುತ್ತವೆ. ಧರ್ಮವು ಮನವನ ಬಾಹ್ಯಸಂಗತಿಗಳನ್ನು  ನಿಯಂತ್ರಿಸಿದರೆ,  ಅವನ ಬುದ್ಧಿಶಕ್ತಿಯು ಅಂತಃಶಕ್ತಿ ಅಥವಾ ಆತ್ಮಸಾಕ್ಷಿಯಾಗಿ ಪರಿವರ್ತಿತವಾಗಿ,  ದೇಹದೊಳಗೇ ನಿರಂತರವಾದ ಅಂತರ್ನಿಯಂತ್ರಕ ವಾಗಿ ವರ್ತಿಸುತ್ತದೆ. ಸಮಯಬಂದಾಗ  ತನ್ನಿಂದಲೇ  ಉಂಟಾಗುವ ತುರ್ತುಪ್ರೇರಣೆಯ ಪಾಲನೆ ಮತ್ತು ಧಾರ್ಮಿಕ ವಿಧಿ-ವಿಧಾನಗಳ  ಅನುಸರಣೆಯಿಂದಾಗಿ ಉನ್ನತಿಹೊಂದಿ,  ಈ ಆತ್ಮಸಾಕ್ಷಿಯು ನಮ್ಮ ದೇಹದಲ್ಲಿ ನಿರಂತರವೂ ಸಮರ್ಥ ರಕ್ಷಕನೂ, ಪರಿಣಾಮಕಾರಿಯಾದ ದೇಹಾಂತರ್ಗತವಾದ  ರ್ಮಾರ್ಗದರ್ಶಿಯೂ ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ಮನವ ಜನಾಂಗಕ್ಕೆ ಇರುವ  ಮಹತ್ತರವಾದ ಸ್ವಾತಂತ್ರ್ಯವಾಗಿದೆ. ಆದರೆ, ಈ ಸ್ವಾತಂತ್ರ್ಯದ  ಬೆನ್ನಿನಲ್ಲೇ ಮಾನವನಿಗೆ  ಅವನುಮಾಡುವ ಪ್ರತಿಯೊಂದು ಕಾರ್ಯಕ್ಕೂ  ಅನುಗುಣವಾದ ಕರ್ಮ ಫಲವನ್ನು ಅನುಭವಿಸಲೇಬೇಕೆಂಬ  ಅನುಲ್ಲಂಘನೀಯವಾದ ಬಂಧನವೂ ಬೆನ್ನುಹತ್ತುತ್ತದೆ!! ಮಾನವನನ್ನು ಹೊರತುಪಡಿಸಿ ಉಳಿದ ಪ್ರಾಣಿಗಳಿಗೆ ಈ ಕರ್ಮಫಲದ ಬಂಧನವಿಲ್ಲ. ಅಂದರೆ, ಆತ್ಮವು ಪ್ರಾಣಿಗಳ ಶರೀರವನ್ನು ಆಶ್ರಯಿಸಿದ್ದಾಗ ಅವು ಆ ಜನ್ಮದಲ್ಲಿ ಮಾಡುವ ಒಳ್ಳೆಯ ಅಥವಾ ಕೆಟ್ಟ ಕರ್ಮಗಳಿಗೆ ಮುಂದಿನ ಜನ್ಮಕ್ಕೆ ದಾಖಲಾಗುವ ಕರ್ಮಫಲಎಂಬುದಿಲ್ಲ!!

ಮಾನವನಿಗೆ ಸಿಕ್ಕಿದ ಸ್ವಾತಂತ್ರ್ಯದ ಸದ್ಬಳಕೆಯಾದಲ್ಲಿ  ಅವನು ಮಾನವತ್ವದಿಂದ ದೈವತ್ವಕ್ಕೇರಿ,  ಅಲ್ಲಿನ ನಿಯಮಗಳನ್ನು ಪಾಲಿಸಿದಲ್ಲಿ  ಸೃಷ್ಟಿಚಕ್ರದ  ಪರಿಧಿಯಿಂದ ಪಾರಾಗಿ ಸರ್ವಶಕ್ತನೊಂದಿಗೆ ಪುನಃ ಸೇರಿಕೊಳ್ಳುವ ಸಾಯುಜ್ಯಮೋಕ್ಷಕ್ಕೆ ಅರ್ಹನಾಗುತ್ತಾನೆ.  ಇಲ್ಲವಾದಲ್ಲಿ  ಪುರಪಿ ಜನನಂ ಪುನರಪಿಮರಣಂ ; ಪುನರಪಿ ಜನನೀ ಜಠರೇ  ಶಯನಂ  ಎಂಬ ವ್ಯರ್ಥವಾದ ಸುತ್ತಾಟವು ತಪ್ಪದೇ, ಎದುರಾಗುತ್ತದೆ! ಈ ರೀತಿಯಲ್ಲಿ ಮಾನವನು ತನ್ನ ಜೀವಿತಾವಧಿಯಲ್ಲಿ ಗಳಿಸಿದ ಕರ್ಮಫಲವನ್ನನುಭವಿಸಲು ಮತ್ತೆ ಮತ್ತೆ ಹುಟ್ಟಿಬರುವುದನ್ನೇ  ಪುನರ್ಜನ್ಮ ಅಥವಾ ಮರುಹುಟ್ಟು ಎಂದು  ಸೂಚಿಸಲಾಗುತ್ತದೆ.  ಜೀವಾತ್ಮನಿಗೆ ದೊರೆಯುವ ಇಂಥ ಪುನರ್ಜನ್ಮವು  ಸಸ್ಯ; ಕ್ರಿಮಿ;  ಕೀಟಾದಿಗಳು, ಪಶು; ಪಕ್ಷಿ ಅಥವಾ ಮಾನವವರ್ಗಗಳಲ್ಲಿ ಯಾವುದಾದರೂ ಆಗಬಹುದು. ಅದು ಆಯಾ ಆತ್ಮಗಳು ಸಂಪಾದಿಸಿದ ಕರ್ಮಫಲಕ್ಕೆ ಅನುಗುಣವಾಗಿರುತ್ತದೆ.                                 

***

ಕಾಲವನ್ನು ವಿಭಾಗಿಸಿಕೊಂಡಿರುವ ಕ್ರಮ:

ಪುನರ್ಜನ್ಮದ ವಿವರಗಳನ್ನರಿಯುವುದಕ್ಕೆ  ಪೂರಕವಾಗಿ ಇದುವರೆವಿಗೂ  ನಾವು  ಹಲವಾರು ಮಾಹಿತಿಗಳನ್ನು ಸೂಕ್ಷ್ಮವಾಗಿ ಅರಿತಿದ್ದಾಯಿತು. ಇದೇ ಕ್ರಮದಲ್ಲಿ  ಆತ್ಮವು  ಪುನರ್ಜನ್ಮಕ್ಕೆ  ಪ್ರವೇಶಿಸುವ ಮೊದಲು ನಮ್ಮ ಈಗಿನ  ಜನ್ಮದ ಜೀವನವು ರೂಪುಗೊಂಡಿರುವುದನ್ನೂ  ಸ್ವಲ್ಪ ಅವಲೋಕಿಸಬೇಕಾದ ಅಗತ್ಯವಿದೆ.

ನಮ್ಮ ತಂದೆ ತಾಯಿಯ ಸಮಾಗಮದಿಂದಾಗಿ  ನಾವು ಹುಟ್ಟಿ, ಬೆಳೆದಿದ್ದೇವೆಂಬ ಸಂಗತಿಯನ್ನು ನಾವು ಅರಿತಿದ್ದೇವೆ. ಇದನ್ನು ವಿಜ್ಞಾನವೂ ಸಮರ್ಥಿಸುತ್ತದೆ.  ನಮ್ಮ ತಂದೆತಾಯಿ, ಅವರ ತಂದೆತಾಯಿ, ಅವರ ತಂದೆತಾಯಿ ಎಂಬ ಕ್ರಮದಲ್ಲಿ ನಾವು  ಹಿನ್ನೆಡೆದರೆ, ನಮ್ಮ ಮೂಲಪುರುಷರು ಯಾರು?  ಎಂಬ  ಸಮಸ್ಯೆ ಬಗೆಹರಿಯದ್ದೆನಿಸುತ್ತದೆ!  ಈ ವಿಚಾರದಲ್ಲಿ ವಿಜ್ಞಾನದ ಹೇಳಿಕೆಯು  ಅಸಂಬದ್ಧವೆನಿಸುತ್ತದೆ. ವೇದೋಪನಿಷತ್ತುಗಳು  ಈ ವಿಚಾರದಲ್ಲಿ ಏನುಹೇಳುತ್ತ ಎಂಬುದನ್ನು ಗಮನಿಸಿದರೆ ಅತ್ಯಂತ ಸಮಂಜಸವಾದ, ಆಶ್ಚರ್ಯಕರವಾದ, ಸ್ವಾಭಾವಿಕವೆನಿಸುವ ಮಾಹಿತಿಗಳನ್ನು ನಾವು ಕಾಣಬಹುದು.

ನಾವು ಜೀವಿಸಿರುವ  ಇಂದಿನಕಾಲವನ್ನು ವಿಜ್ಞಾನಯುಗ  ಎಂದು ಕರೆಯುತ್ತೇವೆ.  ಕಾಲಗಣನೆಯಲ್ಲಿ ಇದೊಂದು ಕ್ರಮ. ಈ ಕಾಲಗಣನೆಯನ್ನು ಕುರಿತಂತೆಯೇ ನಾವು  ಬಹಳಷ್ಟು ಯೋಚಿಸಬೇಕಾದಂಥ ಮಾಹಿತಿಗಳಿರುತ್ತವೆ.

ಕೆಲವೊಂದು ನಿರ್ಧಿಷ್ಟವಾದ ಘಟನೆಗಳನ್ನು ಅನಂತವಾದ ಕಾಲಾವಧಿಯಲ್ಲಿ ಗುರುತಿಸಲು ಅನುಕೂಲವಾಗಲೆಂಬ  ಉದ್ದೇಶದಿಂದ ಅಪ್ರಮೇಯವಾದ (ಯಾರೊಬ್ಬರೂ ಅಳೆಯಲಾಗದ)  ಕಾಲವನ್ನು  ಸಣ್ಣ ಸಣ್ಣ ಅವಧಿಯಾಗಿ ವಿಂಗಡಿಸಿ; ಅಂಥ ಅವಧಿಯಲ್ಲಿ ನಡೆದಿರುವ, ನಡೆಯಬಹುದಾದ ವಿವರಗಳನ್ನು ನಮ್ಮ ಪ್ರಾಚೀನಕಾಲದ ಋಷಿಗಳು ಸೂಚಿಸಿರುವುದಿದೆ. ಈ ಜಗತ್ತಿನಲ್ಲಿ ಮಾನವರಾದ ನಾವೇ ಸರ್ವಶ್ರೇಷ್ಠರೆಂದು  ನಾವು ಭಾವಿಸುತ್ತೇವೆ.  ಆದರೆ, ಇದು ಸರ್ವಥಾ ಯುಕ್ತವಲ್ಲ.  ಜಗತ್ತಿನಲ್ಲಿ ಕ್ಷುದ್ರ ಕ್ರಿಮಿಕೀಟಗಳಿಂದ ಮೊದಲ್ಗೊಂಡು; ದುಷ್ಟಜಂತುಗಳು, ಪಶುಪಕ್ಷಿಗಳು, ವಾನರರು, ಕಾಡುಮನುಷ್ಯರು, ರಾಕ್ಷಸರು, ಯಕ್ಷ, ಕಿನ್ನರ, ಕಿಂಪುರುಷರು, ಗಂಧರ್ವರು,  ದೇವತೆಗಳು, ಚತುರ್ಮುಖ ಬ್ರಹ್ಮರು, ಮುಂತಾದ ಹಲವಾರು ವರ್ಗಗಳ ಜೀವರುಗಳಿದ್ದಾರೆ. ಎಂದು ಶಾಸ್ತ್ರವು ಸೂಚಿಸುತ್ತದೆ.  ಇವರುಗಳಿಗೆ ಸಂಬಂಧಿಸಿದ ಕಾಲಗಣಯೂ ಕೂಡ ಅಗಧವಾದ ಅಂತರದಿಂದ ಕೂಡಿರುತ್ತದೆ.

 ಲೌಕಿಕವಾಗಿ ನಾವು ಬಳಸುತ್ತಿರುವ  ಕಾಲಗಣನೆಯ ಲೆಕ್ಕಾಚಾರವು  ಅತ್ಯಲ್ಪಪ್ರಮಾಣದ್ದು.  ಸೆಂಕೆಂಡ್; ನಿಮಿಷ, ಮುಹೂರ್ತ, ಗಂಟೆ, ದಿನ, ವಾರ, ಪಕ್ಷ, ಮಾಸ, ಋತು, ಅಯನ, ಸಂವತ್ಸರ,  ಶತಮಾನ, ಮುಂತಾದುವುಗಳ ಅವಧಿಯು ಸೀಮಿತವಾದುದು.  ಇವುಗಳ ಪೈಕಿ ಶತಮಾನದ ವರೆಗಿನ ಕಾಲಾವಧಿಯನ್ನು ನಾವು ಪ್ರತ್ಯಕ್ಷವಾಗಿ ಊಹಿಸಿಕೊಳ್ಳಬಹುದು.  ಅಲ್ಲಿಂದ ಮುಂದಕ್ಕೆ ಸಹಸ್ರಮಾನ, ಯುಗ,  ಚತುರ್ಯುಗ,  ಮನ್ವಂತರ, ಕಲ್ಪ  ಪರ ಎಂಬ ಕಾಲಾವಧಿಯನ್ನಂತೂ ಸಾಮಾನ್ಯರಾದ ನಾವುಗಳು ಊಹಿಸಿಕೊಳ್ಳಲೂ ಸಾಧ್ಯವಿಲ್ಲ!!  ಮೇಲೆಸೂಚಿಸಿರುವ ಕಾಲಮಾನಗಳಲ್ಲಿ ಕೆಲವು ಮಾತ್ರ ನಮ್ಮ ಅನುಭವಕ್ಕೆ ದಕ್ಕುತ್ತವೆ. ಉಳಿದವನ್ನು ಕೇವಲ ಗಣಿತಾತ್ಮಕವಾಗಿ ಲೆಕ್ಕಹಾಕಿ ತಿಳಿಯಬೇಕಷ್ಟೇ!!

ಇವೆಲ್ಲ ಲೆಕ್ಕಾಚಾರಗಳನ್ನು ಖಚಿತವಾಗಿ ಸೂಚಿಸಲು ಸಾಧ್ಯವಾದದ್ದು ಹೇಗೆ? ಎಂಬ ಪ್ರಶ್ನೆ ಇಲ್ಲಿ ಎದುರಾಗುವುದು ಸಹಜ.  ಸನಾತನ ಸಂಪ್ರದಾಯದ ಬ್ರಾಹ್ಮಣ ಸಮುದಾಯದಲ್ಲಿ  ದೇವ, ಪಿತೃ, ಋಷಿ ಕರ್ಮಗಳು ಹಾಗೂ ಪ್ರತಿನಿತ್ಯ ಆಚರಿಸಲೇ ಬೇಕಾದ ಸಂಧ್ಯಾವಂದನೆಯ ಕ್ತಿಯೆಗೆ ಮೊದಲು ದೇಶಕಾಲಗಳ ಸಂಕೀರ್ತನೆ ಹಾಗೂ ಕಾರ್ಯವನ್ನು ಕುರಿತು ಸಂಕಲ್ಪಮಾಡುವ ಕ್ರಮವಿದೆ. ಅದರಲ್ಲಿ ಬರುವ ಮಂತ್ರಗಳು ಕಲ್ಪಾರಂಭದಿಂದ ಪ್ರಾರಂಭವಾಗಿ  ಕಾರ್ಯಕ್ರಮದ ದಿನದ ವರೆಗಿನ ದೇಶ ಕಾಲಗಳ ವಿವರಗಳನ್ನು ಸೂಚಿಸುವುದಾಗಿರುತ್ತವೆ.

-ಸಿರಿಭೂವಲಯದಸುಧಾರ್ಥಿ  

 (ಭಾಗ ರಲ್ಲಿ ಮುಂದುವರೆದಿದೆ)

No comments:

Post a Comment