ಸಿರಿಭೂವಲಯಕಾವ್ಯದ ಪ್ರಥಮಖಂಡದ ೪೫ ನೇ ಅಧ್ಯಾಯದಿಂದ ೫೪ನೇ ಅಧ್ಯಾಯದವರೆವಿಗೂ ಪೂರ್ಣಪದ್ಯಗಳ ೪ನೇ ಪಾದದ ಕೊನೆಯಿಂದ ೪ನೇ ಅಕ್ಷರಹಿಡಿದು ಕೆಳಗಿಳಿದಾಗ ದೊರೆಯುವ ಸ್ತಂಬಕಾವ್ಯದ ಅಕ್ಷರ ಸರಪಣಿಯಲ್ಲಿ ಪುನಃ ಅಶ್ವಗತಿಯಲ್ಲಿ ಸಾಗಿದಾಗ ನಾಟ್ಯಶಾಸ್ತ್ರಕ್ಕೆ ಸಂಬಂಧಿಸಿದ ಈ ಸಾಹಿತ್ಯಭಾಗವು ಪ್ರವಹಿಸಿರುವುದನ್ನು ಕಾಣಬಹುದು.
ಅಲ್ಲಿ ಕೆಲವೊಂದು ಅಕ್ಷರಗಳು ಲೋಪವಾಗಿರುವುದಿದೆ. ಕೆ. ಶ್ರೀಕಂಠಯ್ಯನವರು ಸೂಚಿಸಿರುವ ಪೂರ್ಣಪಾಠದ ಆಧಾರದಲ್ಲಿ ಈ ಭಾಗದ ಸಾಹಿತ್ಯವನ್ನು ಪರಿಷ್ಕರಿಸಲಾಗಿದೆ.
ಈ ನರ್ತನಶಾಸ್ತ್ರಕ್ಕೆ ಸಂಬಂಧಿಸಿದ ಭಾಗವನ್ನು ವೇದಿಕೆಯಮೇಲೆ ಪ್ರದರ್ಶಿಸಲು ಅಪೇಕ್ಷೆಹೊಂದಿದ ಸುಧಾರ್ಥಿಯು ಹಾಸನದ ಪ್ರಸಿದ್ಧ ನೃತ್ಯ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅಂಬಳೆ ರಾಜೇಶ್ವರಿಯವರ ಗಮನಕ್ಕೆ ಈ ಮಾಹಿತಿಯನ್ನು ತಂದದ್ದಾಯಿತು. ಅವರು ಇದರ ಮಹತ್ವನನ್ನು ಗಮನಿಸಿ ತಮ್ಮ ಶಿಷ್ಯೆಯರಲ್ಲಿ ಒಬ್ಬರಿಗೆ ಸೂಕ್ತ ತರಬೇತಿ ನೀಡಿದರು.
೨೦೧೪ರಲ್ಲಿ ಹಾಸನದ ರೋಟರಿಕ್ವಾಂಟಾದವರು ಇಲ್ಲಿನ ಜಿಲ್ಲಾ ಕನಡಸಾಹಿತ್ಯಪರಿಷತ್ತಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ’ಸಿರಿಭೂವಲಯದ ಪರಿಚಯ’ ಕಾರ್ಯಕ್ರಮದಲ್ಲಿ ಶ್ರೀಮತಿ ರಾಜೇಶ್ವರಿಯವರು ಸೀಮಿತವಾದ ಪರಿಕರದೊಂದಿಗೆ ಕುಮಾರಿ ಸೀಮಾ ನಾರಾಯಣ ಅವರಿಂದ ಈ ಕಾವ್ಯಭಾಗದ ನೃತ್ಯಪ್ರದರ್ಶನ ನಡೆಸಿಕೊಟ್ಟರು. ಅಂದಿನ ನೃತ್ಯ ಕಾರ್ಯಕ್ರಮವು ಕುಮುದೇಂದು ಮುನಿಯ ಈ ಕಾವ್ಯಭಾಗದ ಸೊಗಸನ್ನು ಪ್ರೇಕ್ಷಕರಿಗೆ ರಂಜನೀಯವಾಗಿ ಪರಿಚಯಿಸುವುದರಲ್ಲಿ ಯಶಸ್ವಿಯಾಯಿತು. ರಾಜೇಶ್ವರಿಯವರು ಹಾಗೂ ಅವರ ಶಿಷ್ಯೆ ಸೀಮಾನಾರಾಯಣ ಅವರ ಅಭಿಮಾನಕ್ಕೆ ಅನಂತವಂದನೆಗಳು.
ಇಂಥ ಪ್ರಾಚೀನ ಪರಂಪರೆಯನ್ನು ಪ್ರತಿನಿಧಿಸುವ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ವ್ಯವಸ್ಥೆಗೊಳಿಸಲು ಇಂದಿನ ಜನರು ಆಸಕಿವಹಿಸುವುದಿಲ್ಲವೆಂಬುದು ವ್ಯಸನದಸಂಗತಿಯಾಗಿದೆ.
* * *
ಶ್ರೀವಾಸುದೇವಂ ವಸುಪೂಜ್ಯನಾಥಂ|
ಸುದೇವ ಪೂಜ್ಯಂ ಖಗಭತೃ ಪೂಜ್ಯಂ|
ಸದ್ಧರ್ಮಬೀಜಂ ವರ ಬೋಧಬೀಜಂ|
ಸುಶರ್ಮಕಾರಂ ಪ್ರಣಮಾಮಿ ನಿತ್ಯಂ||೧||
ವ್ಯಂತರೀ ಕಿನ್ನರೀ ಸ್ವರ್ಗದೇವಾಮರೀ|
ಭೂಚರೀ ಖೇಚರೀ ಸರ್ವವಿದ್ಯಾಧರೀ|
ಹಾವಭಾವ ವಿಲಾಸ ಸಂಸದಾ ಸುಂದರಾ|
ಣಚ್ಚ ಈಅಪ್ಸರಾ ದಿವ್ಯರೂಪಾಧರಾ||೨||
ಧುಮಿ ಧುಮಿ ಧುಮಿ ಧುಮಿ ಮದ್ದಲಾವಜ್ಜಯಾ|
ದುಮಿ ದುಮಿ ದುಮಿ ದುಮಿ ದೋಂದಲಾಗಜ್ಜಲಾ|
ಝಿಮಿಕಿಟೀ ಝಿಮಿಕಿಟೀ ಘಂಗರೀ ಸುಂದರಾ|
ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೩||
ಭೋಂಭೋಂಭೋಂಭೋಂಭೋಂಭೋಂಶಬ್ದಯಾ ಭುಂಗಲಾ|
ಥೋಂಗಿಣಿ ಥೋಂಗಿಣಿ ಗಜ್ಜಯಾ ಮದ್ದಲಾ|
ತಿಮಿಕಿಟ ತಿಮಿಕಿಟ ತಾಲಶಬ್ದಾಕರಾ|
ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೪||
ರುಣು ರುಣು ರುಣು ರುಣೂ ದಿವ್ಯ ವೀಣಾಸ್ವರಾ|
ದಪಮಧ ಸಮಧಪ ಡೋಲಶಬ್ದಾಕರಾ|
ದಮ ದಮ ದಮ ದಮ ಸದ್ದಮೀ ಕಿನ್ನರಾ|
ಣಚ್ಚಈ ಅಪ್ಸರಾ ದಿವ್ಯರೂಪಾಧರಾ||೫||
ಖಿಣಿ ಖಿಣಿ ಖಿಣಿ ಖಿಣಿ ಕಂಸ ಕಂಸಾಲಯಾ|
ಪಿಮಿ ಪಿಮಿ ಪಿಮಿ ಪಿಮೀ ವಂಶ ವಿಶಾಲಯಾ|
ಝರ ಝರಾ ಝರ ಝರಾ ಝಲ್ಲರೀ ಸುಸ್ವರಾ|
ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೬||
ತೋಂತೋಂತೋಂತೋಂತೋಂತೋಂ ವಾದ್ಯಶ್ರೀಮಂಡಲಾ|
ಭುಂ ಭುಂ ಭುಂ ಭುಂ ಭುಂ ಭುಂ ಶಬ್ದಶೋಭಾಮಲಾ|
ಹುಂ ಹುಂ ಹುಂ ಹುಂ ಹುಂ ಹುಂ ಶಂಖ ಶೋಭಾಕರಾ|
ಣಚ್ಚ ಈ ಅಪ್ಸರಾದಿವ್ಯರೂಪಾಧರಾ||೭||
ಪಂಚಮಂ ಭೈರವ ನಾದಮಲ್ಹಾರಯಾ|
ಥಾಥ ಈ ಥಾಥ ಈ ಪಾದ ಸಂಚಾರಯಾ|
ನಿತ್ಯ ಗಾನಾಸನಾ ದೇವ ಚೇತೋಹರಾ|
ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೮||
ಕರ್ಜಕೈ ರ್ಮೋದಕೈ ಸೇವಸೋಹಾಲಯಾ|
ಪಂಕಜೈ ಶ್ಚಂಪಕೈ ರ್ಜಾತಿಸನ್ಮಾಲಕೈಃ|
ಪೂಜಯೋಜ್ಜೀವರಂದೇವ ಯೋಗೀಶ್ವರಂ|
ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೯||
ಧರ್ಮಶೋಭಾಕರೇ ಚೈತ್ಯಶ್ರೀಮಂದಿರೇ|
ನರ್ತನಾ ಗೀತ ಗಾನಾ ಸದಾ ಚಕ್ರಿರೇ|
ಕರ್ಪುರೇ ರಾರತೀಭವ್ಯ ಅರ್ತೀಹರಾ|
ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೧೦||
ವಕ್ತ್ರಾಬ್ದೇ ಶಂಖಲಕ್ಷ್ಮೀ: ಕರತಲ
ಕಮಲೇ ಸರ್ವದಾ ದಾನಲಕ್ಷ್ಮೀಃ |
ದೋರ್ದಂಡೇ ವೀರಲಕ್ಷ್ಮೀಹೃದಯ
ಸರಸಿಜೇ ಭೂತಕಾರುಣ್ಯಲಕ್ಷ್ಮೀಃ||
ಸರ್ವಾಂಗೇಸೌಮ್ಯಲಕ್ಷ್ಮೀರ್ನಿಖಿಲ
ಗುಣಗಣಾಡಂಬರೇ ಕೀರ್ತಿಲಕ್ಷ್ಮೀಃ|
ಖಡ್ಗೇಸೌಂದರ್ಯಲಕ್ಷ್ಮೀರ್ಜಯತು
ಭುವಲಯೇ ಸರ್ವಸಾಂರಾಜ್ಯಲಕ್ಷ್ಮೀಃ||
-ಸಿರಿಭೂವಲಯದಸುಧಾರ್ಥಿ.
No comments:
Post a Comment