ಭಾರತಸರ್ಕಾರವು ತನ್ನ ಅಧಿಕಾರವ್ಯಾಪ್ತಿಗೆ ಬರುವ ಭೂಮಿಯನ್ನೆಲ್ಲ ಕರಾರುವಾಕ್ಕಾಗಿ ಅಳತೆಮಾಡಿ ದಾಖಲೆ ಹೊಂದಲು ಭೂಮಾಪಕರ ತಂಡವನ್ನು ಹೊಂದಿದೆ. ಈತಂಡದ ಶಾಖೆಗಳು ಪ್ರತಿಯೊಂದು ರಾಜ್ಯದಲ್ಲೂ ಇರುತ್ತವೆ. ಎಲ್ಲಜಿಲ್ಲೆಗಳ ಪ್ರತಿಯೊಂದು ಗ್ರಾಮದ ಭೂಮಿಯ ಅಳತೆಗೆ ಸಂಬಂಧಿಸಿ ಮಾಹಿತಿಯನ್ನೂ ಈ ಭೂಮಾಪನ ಇಲಾಖೆಯು ಹೊಂದಿರುತ್ತದೆ.
ಇಷ್ಟು ವಿಶಾಲವಾದ ದೇಶದ ವನ್ನು ಅಳತೆಮಾಡುವ ದಿಶೆಯಲ್ಲಿ ಈ ಭೂಮಾಪನ ಇಲಾಖೆಯ ಮೋಜಿಣಿದಾರರು (ಸರ್ವೇಯರ್ ಗಳು) ಹಲವಾರು ಸಾಧನ ಸಲಕರಣೆಗಳನ್ನು ಬಳಸುವುದು ಸರ್ವವೇದ್ಯ. ಇಲ್ಲಿ ಬಳಕೆಯಾಗುವ ಸಲಕರಣೆಗಳ ಪೈಕಿ , ’ಗೂಟ’ ’ಶಲಾಕೆ’ ’ಸೂಚಕಗಳು’ ’ಮೇಟಿ’ಮುಂತಾದ ಅಳತೆಯ ಸಾಧನಗಳ ಹೆಸರೂ ಸಿರಿಭೂವಲಯದಲ್ಲಿ ಪ್ರವೇಶಿಸಿರುವುದುಂಟು!!
ನೋಡಿ: ಕೋಟ್ಯಾನುಕೋಟಿ ಸಾಗರದಳತೆಯ ಗೂಟ ಶಲಾಕೆ ಸೂಚಿಗಳ ಮೇಟಿಯಪದ, ಣವಕಾರಮಂತ್ರದೆಬಹ ಪಾಟಿ ಅಕ್ಷರಗಳ ಲೆಕ್ಕಗಳಮ್”|| ಎಂಬುದಾಗಿ ಸೂಚಿಸಲಾಗಿದೆ! ಅಂದರೆ, ಭೂಮಾಪನಮಾಡುವ ಕ್ರಿಯೆಯು ೧೨೦೦ ವರ್ಷಗಳಿಗೆ ಹಿಂದಿನಿಂದಲೂ ಭಾರತದಲ್ಲಿ ಪ್ರಚಲಿತವಿತ್ತೆಂಬುದಕ್ಕೆ ಇಲ್ಲಿ ಖಚಿತವಾದ ಸುಳಿವು ಸಿಗುತ್ತದೆ. ಇದೂ ಕೂಡ ಸಿರಿಭೂವಲಯಕಾವ್ಯಾಂತರ್ಗತವಾದ ಮಾಹಿತಿಯೇ ವಿನಃ. ಕಾವ್ಯದ ಸರಳ ಪರಿಚಯಕಾರನ ಕೈವಾಡವೇನಿಲ್ಲ!!!
-ಸಿರಿಭೂವಲಯದಸುಧಾರ್ಥಿ.
No comments:
Post a Comment