***ನೀವು ಒಪ್ಪದಿದ್ದರೂಚಿಂತೆಯಿಲ್ಲ. ಒಮ್ಮೆ ಓದಿನೋಡಿ****
’ಆಧುನಿಕ ವಿಜ್ಞಾನದ ಸಾಧನೆಗಳನ್ನು ಮೀರಿಸಿದ ಪ್ರತ್ಯಕ್ಷ ಪ್ರಯೋಗದ ಮಾಹಿತಿಗಳು ನಮ್ಮ ಪೂರ್ವಿಕರಿಗೆ ತಿಳಿದಿತ್ತು’ ಎಂದು ಯಾರಾದರೂ ಹೇಳಿದರೆ, ಇಂದಿನ ವಿಜ್ಞಾನದ ಆರಾಧಕರಿಗೆ ಪಿತ್ತಕೆರಳುತ್ತದೆ! ಹುಚ್ಚರಂತೆ ಕಚ್ಚಲು ಮೇಲೆಬೀಳುತ್ತಾರೆ!! ಸೂಕ್ಷ್ಮ ಜೀವಾಣುಗಳ ದರ್ಶನವಾಗಬೇಕಾದರೆ ತುಂಬ ಉತ್ಕೃಷ್ಟವಾದ ಸೂಕ್ಷ್ಮದರ್ಶಕಯಂತ್ರವಿರಬೇಕೆಂಬುದು ಸಾಮಾನ್ಯವಾಗಿ ಎಲ್ಲರ ಭಾವನೆ.
ಇಂದಿನ ವಿಜ್ಞಾನಿಗಳಿಗೆ ಸೂಕ್ತ ಯಂತ್ರೋಪಕರಣಗಳಿಲ್ಲದೇ ಯಾವ ಪ್ರಯೋಗವೂ ಸಾಧ್ಯವಿಲ್ಲ! ಆದರೆ, ನಮ್ಮ ಪ್ರಾಚೀನ ಋಷಿಮುನಿಗಳಿಗೆ ಇಂಥ ಯಾವುದೇ ಯಂತ್ರೋಪಕರಣಗಳ ಅಗತ್ಯವೂ ಇಲ್ಲದೇ ಅವರು ಈ ಜಗತ್ತಿನ- ಮಾತ್ರವಲ್ಲ- ಲೋಕ ಲೋಕಾಂತರಗಳ ಅಣು- ಹಾಗೂ ಮಹಾನ್ - ಮಾಹಿತಿಯನ್ನೂ ಖಚಿತವಾಗಿ ತಿಳಿಯಬಲ್ಲವರಾಗಿದ್ದರು ಎಂದು ಹೇಳಿದರೆ ಆ ಹೇಳಿಕೆಯನ್ನು ಮಾನ್ಯಮಾಡುವುದಿರಲೀ; ಗಮನಿಸುವ ಸೌಜನ್ಯವೂ ಅವರಲ್ಲಿರುವುದಿಲ್ಲ!!!
ಈಗ ಸೂಕ್ಷ್ಮದರ್ಶಕಕ್ಕೆ ಸಂಬಂಧಿಸಿದ ಒಂದು ವಿಚಾರ ಕುರಿತು ಕುಮುದೇಂದುಮುನಿಯ ಸಿರಿಭೂವಲಯವು ಏನು ಹೇಳುತ್ತದೆ ಎಂಬುದನ್ನು ಸ್ವಲ್ಪ ಗಮನಿಸೋಣ.

ನಮ್ಮ ಶರೀರಾಂತರ್ಗತವಾದ ’ಜೀವಾತ್ಮವು’ ಅತ್ಯಂತ ಸೂಕ್ಷ್ಮವಾದುದು. ಈ ಆತ್ಮದ ಸ್ವರೂಪವನ್ನು ವಿವರಿಸುವಾಗ ರೂಪರಸಸ್ಪರ್ಶಗಂಧಾದಿಗಳಿಂದ ಅದನ್ನು ಗುರುತಿಸಲು ಸಾಧ್ಯವಿಲ್ಲ-ಆತ್ಮಕ್ಕೆ ಬಣ್ಣವಿಲ್ಲ; ರುಚಿಯಿಲ್ಲ; ಆಕಾರವಿಲ್ಲ; ಕಣ್ಣಿಂದ ನೋಡಲಾಗದು; ಕೈಯಿಂದ ಮುಟ್ಟಲಾಗದು, ಮೂಗಿನಿಂದ ವಾಸನೆಯನ್ನು ತಿಳಿಯಲಾಗದು ಎಂಬ ಖಚಿತವಾದ ವಿವರಣೆಗಳನ್ನೊಳಗೊಂಡ ಉಪನಿಷತ್ತಿನ ಶುದ್ಧಕನ್ನಡ ರೂಪಾಂತರವನ್ನು ನಾವು ಸಿರಿಭೂವಲಯದಲ್ಲಿ ಕಾಣಬಹುದು.
೩೫ನೇ ಅಧ್ಯಾಯದಪೂರ್ಣ ಪದ್ಯಗಳ ಮೊದಲನೇ ಪಾದದ ಕೊನೆಯಿಂದ ನಾಲ್ಕನೇ ಅಕ್ಷರವನ್ನು ಮೇಲಿನಿಂದ ಕೆಳಕ್ಕೆ ಸಾಗುತ್ತ ಜೋಡಿಸಿಕೊಂಡು, ಮೂರನೇ ಅಕ್ಷರವನ್ನು ಕೆಳಗಿನಿಂದ ಮೇಲಕ್ಕೆ ಸಾಗುತ್ತ ಜೋಡಿಸಿಕೊಂಡು, ಎರಡನೇ ಅಕ್ಷರವನ್ನು ಮೇಲಿನಿಂದ ಕೆಳಕ್ಕೆ ಸಾಗುತ್ತ ಜೋಡಿಸಿಕೊಂಡು, ಪಾದದ ಕೊನೆಯ ಅಕ್ಷರವನ್ನು ಕೆಳಗಿನಿಂದ ಮೇಲಕ್ಕೆ ಸಾಗುತ್ತ ಜೋಡಿಸಿಕೊಂಡು ಜೋಡಿನಾಗರಬಂಧದಲ್ಲಿ ಸಾಗಿದಾಗ:
'ಭಾವದಿಂ ಬಾಳುವ ಸರ್ವಜೀವದ್ರವ್ಯವಿಹುದು ಹೇಳು ಸಾಧಾರಣ ಶೀಲದೋಳೆರಡು ಮಾರ್ಗದಲಿ ಕಾಲವಕಳೆವ ಈಜೀವದ ದ್ರವ್ಯವಂ ಪೇಳುವ ಕಾವ್ಯಭೂವಲಯ ಜೀವದ್ರವ್ಯದೊಳ್ ಷಡ್ಲೇಶೆಯಿದ್ದರೆ ನಾವದ ಕಣ್ಣಿಂದಕಂಡು ಜೀವನು ಕಪ್ಪು ಕೆಂಪೆನಬಹುದಾಗಿತ್ತು ಜೀವನೊಳಿಲ್ಲವುಬಣ್ಣ ಯಶದ ಜೀವನು ಸಿಹಿ ಒಗರುಪ್ಪು ಕಹಿಯಾದಿ ರಸದೊಳೆಳ್ದಿ' (ಬಲಬದಿಯಕ್ಷರದಿಂದಮೇಲಕ್ಕೆ) ರೆ ನಾಲಗೆಯಿಂ ರಸವನೆಕ್ಕುತ ಕಂಡುಹಿಡಿಯಲು ಬಹುದಿತ್ತು ರಸಗಳಿಲ್ಲವು ಜೀವಗಳೊಳು ಕಮಲಾದಿ ವಿದ್ದರೆ ಸಮನಿಸಿಮುದು ಬಹುದು ಸಾರಜೀವ ನೊಳಿಲ್ಲ ವಾಸನೆ ರಸ ಬಣ್ಣ ದಾರಿ ಮೂಗ್ ನಾಲಗೆ ಕಣ್ಣು ಸೇರವು ಜೀವದ್ರವ್ಯವಹುದು ಕುವದಾರಿಯೊಳೆಲ್ಲ ಸಾಯುವುವುಏ' (ಬಲಬದಿಯಕ್ಷರದಿಂದಕೆಳಕ್ಕೆ) 'ನೆಂಬಿ ಜೀವನೊಳ್ ಮೃದುವು ಕರ್ಕಶವಾದಿ ನಾನಾಸ್ಪರ್ಶಗಳೆಂಬುದವ ನೊಳೇನಿಲ್ಲವದರಿಂದ ಮುಟ್ಟಲಾಗುವುದಿಲ್ಲ ಶ್ರೀನಿವಾಸನನು ಜೀವಜೀವನನು ಜಿನಮತದಂತೆ ಜೀವನಲಿ ಸದದಿಲ್ಲವು ಚಿನುಮಯಜೀವನಂ ಅದರಿಂದ ನುಮಾನದಿಂಬಡಿದರೆ ಸಿಗದಿಹ ಜೀವನ ನುಭವದೊಳಗೆ ಸದದಿಲ್ಲ’ ಎಂಬ ವಿವರದೊಂದಿಗೆ ಸಂಸ್ಕೃತಭಾಷೆಯೊಂದಿಗೆ ಬೆರೆತ ಬೇರಾವುದೋ ಭಾಷೆಯಲ್ಲಿ ಎರಡುಶ್ಲೋಕಗಳು ಉಗಮವಾಗುತ್ತವೆ.
ಇಲ್ಲಿಯೂ ಅಷ್ಟೇ. ಕವಿಯು ಸೂಚಿಸದಿರುವ ಯಾವುದೋ ವಿಚಾರವನ್ನು ಸ್ವಕಪೋಲ ಕಲ್ಪಿತವಾಗಿ ಇಲ್ಲಿ ಸುಧಾರ್ಥಿಯು ನಮೂದಿಸಿಲ್ಲ. ಇಲ್ಲಿನ ವಿವರಣೆಯನ್ನು ಗಮನಿಸಿದಮೇಲಾದರೂ, ನಮ್ಮ ಪ್ರಾಚೀನರ ಸರ್ವಜ್ಞತ್ವವನ್ನು ಸೂಕ್ತವಾಗಿ ಗ್ರಹಿಸುವ ಬುದ್ಧಿ ಇಂದಿನವರಿಗೆ ಬಂದೀತೆಂದು ಭಾವಿಸಬಹುದು. ಇಂಥ ಮಾಹಿತಿಗಳ ಕಾರಣಕ್ಕಾಗಿಯೇ ಸುಧಾರ್ಥಿಯು ಸಿರಿಭೂವಲಯವನ್ನು ’ಕನ್ನಡದವೇದ’ ಎಂದು ಪರಿಗಣಿಸಿದ್ದಾನೆ. ವೇದದಲ್ಲಿಲ್ಲದ್ದು ಬೇರೆಲ್ಲಿಯೂ ಇಲ್ಲವೆಂದು ಬಲ್ಲವರ ನಿಲುವು. ಸಿರಿಭೂವಲಯವೂ ಇದೇ ಹಾದಿಯದು ಇಲ್ಲಿ ಎಲ್ಲವೂ ಸಮಾವೇಶವಾಗಿವೆ!!!!
-ಸಿರಿಭೂವಲಯದಸುಧಾರ್ಥಿ.

No comments:
Post a Comment