ಗ್ರಹತಾರೆಗಳ ಚಲನವಲನಕ್ಕೆ ಸಂಬಂಧಿದ ಮಾಹಿತಿಗಳನ್ನು ಲೆಕ್ಕಹಾಕಿ ತಿಳಿಸುವ ಬರಹ ’ಪಂಚಾಂಗ’ ಕೆಲವೊಮ್ಮೆ ಮನೆಯಲ್ಲಿ ಈ ಪಂಚಾಗವು ಕಳೆದುಹೋಗುವುದುಂಟು!! ಅಂದಮಾತ್ರಕ್ಕೇ ಆಕಾಶದ ನಕ್ಷತ್ರಗಳು ಕಣ್ಮರೆಯಾಗಿಬಿಡುತ್ತವೆಯೇ!?
ಕೆಲವು ಮೇಧಾವಿಗಳು ’ಸಿರಿಭೂವಲಯ ಎಂಬ ಕಾವ್ಯವಿರುವುದೇ ಸುಳ್ಳು! ಅದನ್ನು ಕನ್ನಡ ಅಂಕಿಗಳಲ್ಲಿ ಬರೆಯಲಾಗಿದೆ ಎಂಬುದೂ ಅಸಂಬದ್ಧ ಕಲ್ಪನೆ’ ಎಂದು ಪ್ರಚಾರಮಾಡುತ್ತ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದಿದೆ.
ಆಕಾಶದಲ್ಲಿ ನಮ್ಮ ಕಣ್ಣೆದುರಿಗೇ ಸೂರ್ಯನು ಪ್ರಖರವಾದ ಬೆಳಕುಬೀರುತ್ತ ಪ್ರಕಾಶಿಸುತ್ತಿದ್ದರೂ, ಅದು ಸುಳ್ಳು, ಕೆಲವರು ಹಬ್ಬಿಸುವ ಭ್ರಮೆ ಎಂದು ಜನಸಾಮಾನ್ಯರನ್ನು ನಂಬಿಸಲು ಸಾಧ್ಯವೇ!!??
ಸಿರಿಭೂವಲಯವು ಕೇವಲ ಅಕ್ಷರಗಳಿಂದ ರಚಿತವಾದ ಕಾವ್ಯವಲ್ಲ; ಅದನ್ನು ಅಂಕಿಗಳಲ್ಲೂ ಬರೆಯಲಾಗಿದೆ. ಇದು ಕೇವಲ ಕನ್ನಡಿಗರಿಗೆ ಸೇರಿದಕಾವ್ಯವಲ್ಲ; ಇದೊಂದು ವಿಶ್ವಕಾವ್ಯ ಎಂಬುದನ್ನು ಖಚಿತವಾಗಿ ಸೂಚಿಸಿರುವ ಮಾಹಿತಿಯು ಸಿರಿಭೂವಲಯದಲ್ಲಿ ಅಡಗಿಕುಳಿತಿದೆ!!
ಕಾವ್ಯಾರಂಭದಲ್ಲಿಯೇ ಕವಿಯು ಈ ಮಾಹಿತಿಯನ್ನು ಸೂಚಿಸಿರುವುದನ್ನು ಓದುಗರು ಗಮನಿಸಬಹುದು.. ’ಲಾವಣ್ಯದಂಗಮೈಯ್ಯಾದ ಗೊಮ್ಮಟದೇವ| ಆವಾಗ ತನ್ನ ಅಣ್ಣನಿಗೆ| ಈವಾಗ ಚಕ್ರಬಂಧದಕಟ್ಟಿನೊಳ್ಕಟ್ಟಿ| ದಾವಿಶ್ವಕಾವ್ಯಭೂವಲಯ|| ಎಂದು ಸೂಚಿಸಿರುವುದಿದೆ ಇದಕ್ಕಿಂತ ಸೂಕ್ತವಾದ ಸಾಕ್ಷಿಯನ್ನು ಎಲ್ಲಿಂದ ತರಲು ಸಾಧ್ಯ!!?? ತಮ್ಮ ಸಂಪ್ರದಾಯಕ್ಕೆ ಸಂಬಂಧಿಸಿದ ಇಂಥ ವಜ್ರಗಳ ಗಣಿಯಾದ ಸಿರಿಭೂವಲಯವನ್ನು ಜೈನಸಂಪ್ರದಾಯದ ಮೇಧಾವಿಗಳೇ ಈ ರೀತಿಯಲ್ಲಿ ಅನುಚಿತವಾಗಿ ಅಲ್ಲಗಳೆದರೆ; ಬೇರೆಯವರು ಅದನ್ನು ಕುರಿತು ಏನುತಾನೇ ಹೇಳಲುಸಾಧ್ಯ!!!??
-ಸಿರಿಭೂವಲಯದಸುಧಾರ್ಥಿ.
No comments:
Post a Comment