’ಗೀರ್ವಾಣಿ’ ಎಂಬುದು ’ಸಂಸ್ಕೃತ’ ಭಾಷೆಯ ಇನ್ನೊಂದು ಹೆಸರು. ಗೀರುಗಳನ್ನೇ ಹೆಚ್ಚಾಗಿ ಬಳಸುವ ಲಿಪಿ ’ದೇವನಾಗರಿ ಲಿಪಿ’ ಈಕಾರಣದಿಂದಾಗಿ ’ಸಂಸ್ಕೃತಭಾಷೆಗೆ’ ಗೀರ್ವಾಣ ಎಂಬ ಹೆಸರೂ ಪ್ರಚಲಿತವಿದೆ.
ಸಂಸ್ಕೃತವೆಂದರೆ, ’ಸಂಸ್ಕರಿಸಲ್ಪಟ್ಟದ್ದು’ ಎಂದರ್ಥ. ಹಲವಾರು ಪ್ರಾಚೀನಭಾಷೆಗಳ ಸಾರವನ್ನು ಸಂಗ್ರಹಿಸಿ ಈ ಭಾಷೆಯನ್ನು ಸಂಸ್ಕರಿಸಲಾಗಿದೆ. ಇದು ಅತ್ಯಂತ ಸರಳವಾದ ಹಾಗೂ ಸೂಕ್ಷ್ಮವಾದ ಸಮರ್ಥಭಾಷೆಯಾಗಿದೆ.
ಪ್ರಾಕೃತ, ಕನ್ನಡ, ಬೆಂಗಾಲಿ, ಬ್ರಜ್, ಗ್ರೀಕ್, ಲ್ಯಾಟೀನ್, ಪರ್ಷಿಯನ್ ಮುಂತಾದ ಏಳೆಂಟು ಭಾಷೆಗಳನ್ನು ಸಂಸ್ಕರಿಸಿದ ಭಾಷೆಯೇ ’ಸಂಸ್ಕೃತ;’ ಎಂಬ ವಿಚಾರವನ್ನು ಪಂ|| ತಾರಾನಾಥರು ಪ್ರತಿಪಾದಿಸಿದ್ದ ಮಾಹಿತಿ ಇದೆ.
ಎಲ್ಲಜೀವರಾಶಿಗಳೂ ಆಡುವ ಮಾತುಗಳು ಬೇರೆ ಬೇರೆಯಾಗಿರುತ್ತದೆಯೇ ಹೊರತು ಅದು ಗೀರ್ವಾಣಿಯಲ್ಲ ಎಂಬ ಹೇಳಿಕೆಯು ಸಿರಿಭೂವಲಯದಲ್ಲೇ ಉಕ್ತವಾಗಿರುವುದನ್ನು ಭಾಷಾಶಾಸ್ತ್ರಿಗಳು ಗಮನಿಸಬೇಕು. ಸಂಸ್ಕೃತಭಾಷೆಯ ಮೂಲದವಿಚಾರವಾಗಿ ಪಂಡಿತ ತಾರಾನಾಥರ ನಿಲುವನ್ನುಕುರಿತು fbನಲ್ಲಿ ಈಹಿಂದೆ ಸೂಚಿಸಲಾಗಿದೆ.
ಅದೊಂದು ಆಧಾರರಹಿತ ಕಲ್ಪನೆಯೆಂದು ಯಾರೊಬ್ಬರೂ ಅತ್ತ ಗಮನಹರಿಸದಿರಬಹುದು! ಆದರೆ, ಈ ಮಾಹಿತಿಗೆ ಸಿರಿಭೂವಲಯದಲ್ಲೂ ಕುರುಹು ಸಿಗುವುದನ್ನು ಕಾಣಬಹುದು.
ರಸವಿಹಸ್ವರಜತಿಗಳ ಗಮನ ವಿರುವ ಗೀರ್ವಾಣಿ, ,(ಸಂಸ್ಕೃತಭಾಷೆಯ ಸೊಗಸಿನ ಸಹಜವರ್ಣನೆ) ಯಶಸ್ಸು ಒಲಿದವರ ಅಂಕಿಗಳು ಇವೆಲ್ಲವೂ ಪ್ರಾಚೀನವಾದುವೆಂಬುದನ್ನು ಕೃಷ್ಣನು ಪಾರ್ಥನಿಗೆ ಸೂಚಿಸುವ ಪ್ರಸಂಗವಿದಾಗಿದೆ.
”ವೇದಗಳು ಲಿಖಿತವಾಗಿರುವುದು ದೇವನಾಗರಿಲಿಪಿಯನ್ನು ಬಳಸಿರುವ ಸಂಸ್ಕೃತಭಾಷೆಯಲ್ಲಲ್ಲಾ, ಅದಕ್ಕೆ ಅದರದೇ ಆದ ’ಗೂಢಲಿಪಿಯೊಂದಿತ್ತು’’ ಎಂಬುದು ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಒಂದು ದಾಖಲೆಯ ಕಾರ್ಯನಿರ್ವಹಿಸಿರುವ ಗೋಕರ್ಣಮೂಲದ ಮಂತ್ರದ್ರಷ್ಟಾರ ಮಹರ್ಷಿ ದೇವರಾತರ ನಿಲುವಾಗಿತ್ತು.
೧೨೦೦ ವರ್ಷಗಳಹಿಂದೆ ಕುಮುದೇಂದುಮುನಿಯೂ ಇದಕ್ಕೆ ಸನಿಹವಾದ ಹೇಳಿಕೆಯಮೂಲಕ ಈ ಮಾಹಿತಿಯನ್ನು ಸಮರ್ಥಿಸಿರುವುದನ್ನು ಇಲ್ಲಿ ಓದುಗರು ಗಮನಿಸಬಹುದು. ಈ ವಿಚಾರವನ್ನು ಇಲ್ಲಿ ವಿವರಿಸುತ್ತಿರುವುದು ಯಾರನ್ನೂ ಒಪ್ಪಿಸುವುದಕ್ಕಲ್ಲಾ!! ಮನವರಿಕೆಯಾದವರು ಒಪ್ಪಬಹುದು, ಇಲ್ಲದವರು ಬಿಡಬಹುದು! ಅದು ಅವರವರ ಇಚ್ಛೆಗೆಬಿಟ್ಟ ಸಂಗತಿ.
ಇದು ಆಸಕ್ತರಿಗೆ ಗೂಗಲ್ಲಿನಲ್ಲಾಗಲೀ ವಿಕಿಪಿಡಿಯಾದಲ್ಲಾಗಲೀ , ಬೇರೆಲ್ಲೇ ಆಗಲೀ ಹುಡುಕಿದಾಗ ಸಿಗುವ ಮಾಹಿತಿಯಲ್ಲ!! ಹಿಮಾಲಯದ ಪ್ರಶಾಂತವಾದ ದುರ್ಗಮವಾದ ಗುಹೆಗಳಲ್ಲಿ ಮಹಾತ್ಮರು ರಕ್ಷಿಸಿಟ್ಟಿರುವ ಪ್ರಾಚೀನ ಸಾಹಿತ್ಯಕೃತಿಗಳಲ್ಲಿಮಾತ್ರ ದೊರೆಯುವ ಮಾಹಿತಿ ಎಂಬುದನ್ನು ನೆನಪಿನಲ್ಲಿಡಬೇಕಿದೆ. ಇಲ್ಲಿ ಬೇಕಿದ್ದಲ್ಲಿ ಸಿರಿಭೂವಲಯದ ಒಳಹೊಕ್ಕು ನೋಡಬೇಕಷ್ಟೇ!!!!
(೨೪ನೇ ಅಧ್ಯಾಯದ ಅಶ್ವಗತಿಯ ಅಂತರ್ಸಾಹಿತ್ಯದ ೧೫ನೇ ಪದ್ಯನೋಡಿರಿ)
- ಸಿರಿಭೂವಲಯದಸುಧಾರ್ಥಿ.

No comments:
Post a Comment