ಯಶದಹಿಂಸೆಯಯುದ್ಧದೊಳಗಿತ್ತನದುಬಂದು|ಹದನಾಗಿನೇಮಿಯುತಮ್ಮ| ಶ್ವಸನತ್ಯಾಗದಿಕುರುಕ್ಷೇತ್ರದಿಕೃಷ್ಣನ| ವಶಕೀಯೆಭಗವದ್ಗೀತೆ||
ಹರನಂತುಬಾಳ್ವುದಕೆನಾಲ್ಕನೆಯಜ್ಞಾನ|ವಿರಬೇಕುಸರಲಮರ್ಗದನೀ|ಸರುವವೆಂದರೆಹದಿನೆಂಟುರಾಜ್ಯಾಂಗವ|ಪೊರೆವಾಗಲೂಇದರಂಶ||
ವತರಣದೊಳುನೇಮಿಗೊರೆದಲೌಕಾಂತಿಕ|ನುತರಾದಬ್ರಹ್ಮರ್ಷಿವರರ|ಹಿತನುಡಿಗಳಕೇಳಿನನ್ನಯ| ಚೈತನ್ಯದತಿಶಯನಾನು ಅರಿತೆ||
ಈ ಲೋಕದ ಕಷ್ಟಕಳೆಯುವವನಾಗುವುದೇ ಸ್ವಂತದ ಅಭಿಪ್ರಾಯವೆಂದರಿ ಪಾರ್ಥ. ಒಳ್ಳೆಯದಲ್ಲದ ಮಾತನಾಡುವವರ ಅವಿವೇಕವೆಂಬುದುದೇ ಪರಮತವೆಂದುತಿಳಿದು ನೀನು ವಿವೇಕಿಯಾಗಯ್ಯಾ.
ತನ್ನತನವನ್ನ, ಜಾತಿಯನ್ನ ಬಿಡದಿರುವುದೇ ತನ್ನಜಾತಿಯೆನಿಸುತ್ತದೆ. ಇದು ಮಮಕಾರ. ಇದು ಉನ್ನತವಾಗಿದೆ. ಇನ್ನು ಆರು ದ್ರವ್ಯಗಳೆನ್ನುವಾಗ ಎಲ್ಲವೂ ಜಾತಿಯೆನಿಸುತ್ತದೆ.
ಬೇಸರದ ಅಜ್ಞಾನ ಹೆಚ್ಚಿದವನು ಸತ್ತರೆ ಅಮೋಘ, ಸ್ವಲ್ಪವೂ ವಿದ್ಯಾವಂತರಲ್ಲದ ದಡ್ಡರಮನೆಯ ಪಾತಿಯಲ್ಲಿ ಹುಟ್ಟತ್ತಾನೆ. ಅಥವಾ ತಿರಿದುಣ್ಣುವ ದನದಲ್ಲಿ ಹುಟ್ಟುತ್ತಾನೆ ಎಂದು ಕುಮುದೇಂದುವು ಅಮೋಘವರ್ಷನಿಗೆ ತಿಳಿಸುತ್ತಾನೆ. ನೋಡಿ.
"ಭವಹರನಪ್ಪುದೆಸ್ಸಮತವೆಂದರಿಪಾರ್ಥ| ಸಿವವಲ್ಲದನುಡಿಯವರ||
ಅವಿವೇಕವೆಂಬದೆಪರಮ|ತವರಿಯಯ್ಯಸವಿವೇಕಿಯುನೀನಾತರುತ||
ತನ್ನತ್ವವನ್ಮತನ್ನಜಾತಿಯಬಿಡದಿಪಾಮಿವೆ|ತನ್ನೊಳೆಜಾತಿಗಳಮಮ||
ಉನ್ನತವಾಗಿದೆಇನ್ನಾರುದ್ರವ್ಯವ|ದೆನ್ನುವಾಗೆಲ್ಲವುಜಾತಿ||
ರೆದಿಗೆತಮಹೆಚ್ಚಿದವನುಸಾಯಲಮೋಘ| ಓದಿನಿಸಿಲ್ಲದಜನರ||
ಕೇದಿನೊಳಗೆಹುಟ್ಟಿಅಥವಾತಿರಿಯಂಚ|ದಾದನದೊಳ್ಹುಟ್ಟುವವನ್||”
’ಅಸಿಆಉಸಾ’ ಎಂಬುದು ಜೈನಸಂಪ್ರದಾಯದ ಪಂಚಪರವೇಷ್ಟಿ ಎಂದು ಪ್ರಸಿದ್ಧವಾಗಿರುವ ಐದು ಮಂತ್ರಗಳಸಮೂಹ. ಕುರುಕ್ಷೇತ್ರವು ವಶವಾದರೆ ಈ ಮಂತ್ರಸಮೂಹವು ಸಿದ್ಧಿಸುತ್ತದೆ. ಇದು ರಸನೇಂದ್ರಿಯ. ಆದಿಕಾಲದಿಂದ ಇಂದಿನವರೆವಿಗಿನ ಹಸಿವನ್ನುಅಡಗಿಸುತ್ತ ರಸಸಿದ್ಧಿಯ ಪರಮಾಮೃತವಾಗುವುದು ರಾತ್ರಿಗೆ
ಸೋದರಿಕೆಯಕಾರಣಯುದ್ಧಕ್ಕೆ ಹದರಿಕೆಯಲ್ಲವೆ? ಇದು ಹಗೆತನವಲ್ಲ ಮಿತ್ರಾ! ಧರ್ಮದಜಗತ್ತಿಗೆಲ್ಲ ಧರ್ಮರಾಯನಗಲಿಲ್ಲವೆಂದರೆ ಅದು ದೊಡ್ಡಸ್ತಿಕೆಯಾಗುವುದೇ ಹೇಳು! ಇಲ್ಲಿ ಶತೃತ್ವಕ್ಕೂ ಸ್ನೇಹಕ್ಕೂ ಜಾಗವೆಲ್ಲಿದೆ!? ಎಂದು ಕೃಷ್ಣನು ಯುದ್ಧಕ್ಕೆ ಪಾರ್ಥನ ಮನವೊಲಿಸುತ್ತಾನೆ. ನೋಡಿ:
ಕುರುಕ್ಷೇತ್ರವಶವಾದರೆಪಾರ್ಥಅಸಿಆಉಸಾಅಂಕಸಿದ್ಧಮ್||ರಸನೇಂದ್ರಿಯವದು||
ಆದಿಯನಾದಿಹಸಿವಡಗು|ತರಸಸಿದ್ಧಿಪರಮಾಮೃತನಿಶಗೆ||
ದೀಯಾದಿಕಾರಣರಣಕೆಹೆದರಿಕೆಇಹುದೆಲ್ಲಹ|ಗೆಯಲ್ಲವದುಮಿತ್ರ||
ಧರ್ಮಜಗಕೆಲ್ಲಧರ್ಮಜನಾಗಲಿಲ್ಲವೆಂದೆನೆದ್ವಧಾರೆಯಘನಘನವೆಪೇಳುಹಗೆಕೆಳೆಗೆಲ್ಲಿವೆಸ್ಥಾನ||
ಕುರುಕ್ಷೇತ್ರದಧರ್ಮಯುದ್ಧದಲ್ಲಿ ಯೋಗೀಶ್ವರನಾದ ಶ್ರೀಕೃಷ್ಣನು ನರನಿಗೆ ಹೇಳಿದಆದ್ಯಂತವೂ ತೀರ್ಥಂಕಪುಣ್ಯಬಂಧವನ್ನು ತರಲೀ.
ಮದಹತ್ತಿದವರಿಗೆಲ್ಲ ಮದವನ್ನಳಿಸುವ ಕಾರ್ಯವನ್ನು ವಿಧ್ಯೆಯನ್ನು ತಿಳಿಯದವನು ತಿಳಿದುಕೊಂಡ. ಹೃದಯವಿಲ್ಲದ ದೇಹವನ್ನೇಕೆ ರಕ್ಷಿಸುತ್ತೀಯೆ? ಪ್ರೀತಿಯಬಯಕೆಯದು ಹೊಟ್ಟೆಯಕಿಚ್ಚು!
ವೇದದಹಿಂಸೆಯಮೃತವು ಸರಿಯೆಂಬ ದಯೆವರ್ಜಿತನು ಇಲ್ಲಿರಬಾರದು ದ್ವಾಪರಯುಗವು ಕೊನೆಗೊಂಡಿದೆ. ಕಲಿಯ ಉತ್ಪತ್ತಿಯ ಯುದ್ಧ ಎಂದು ಕೃಷ್ಣನು ತಿಳಿಸುತ್ತಾನೆ. ನೋಡಿ:
ತರಲಿತೀರ್ಥಂಕರಪುಣ್ಯಬಂಧವ|ಸಿರಿಕೃಷ್ಣಯೋಗೀಶ್ವರಮವಬರಲು||
ಕುರುಕ್ಷೇತ್ರಧರ್ಮಧ್ವರದೊಳು|ನರನಿಗೆಪೇಳಿದತತ್ವಾಮೃತದಾದ್ಯಂತವಾ||
ಮದತಳೆದವರ್ಗೆಲ್ಲಮದವಳಿಸುವಕಾರ್ಯ|ವಿಧ್ಯನರಿಯದವನರಿತ||
ಹೃದಯವಿಲ್ಲದದೇಹವನೇಕೆರಕ್ಷಿಪೆ|ಮುದದಬಯಕೆಯದುಕರುಬ||
ವೇದದಹಿಂಸೆಯಮೃತಸರಿಯೆಮ್|ಬದಯೆಯವರ್ಜಿಪನಿರಬಾರದಿ||
ಲ್ಲಿದ್ವಾಪರಕೊನೆಗೊಂಡಿಹಪರಕಲಿಯುತ್ಪತ್ತಿಯುದ್ಧ||
ಆರನೇ ಅಂಕಿಯಲ್ಲಿ ದೆ. ಅದರಿಂದ ಯುಗಪರಿವರ್ತನೆಯಾಗುತ್ತದೆ. ಧರ್ಮಯುದ್ಧದ ತರ್ಕಕದನಕೋಲಾಹಲ ಇಪ್ಪತ್ತುಸಾವಿರ ಮೃದುಲಯುದ್ಧದಕ್ಷರಾಂಕದ ಬಾಗಿಲು.
ಸ್ವರ್ಗದ ಮೂರುರತ್ನಗಳ ಸಂಯುಕ್ತ್ವಧಾರಣೆ. ಯುಗಪರಿವರ್ತನೆಯಜಯ. ಪ್ರಾಣಿಗಳು ಸಿಂಹವಾಗಿ, ರಾಕ್ಷಸನು ಮಾನವನಾಗಿ ಯುಗದ ಶುದ್ಧೀಕರಣವಾಗಬೇಕಿದೆ.
ಎಂಬತ್ನಾಲ್ಕುಲಕ್ಷ ಜನ್ಮಗಳ ಹುಟ್ಟು,ಜ್ಞಾನ, ಸಾಗಿದದಾರಿ, ಬಯಕೆ ಇವುಗಳೆಲ್ಲವನೂ ತಿಳಿದುಕೊಳ್ಳುವುದೇನನ್ನ ವಿಶ್ವರೂಪವಿದು ನರ ಎಂದು ಕೃಷ್ಣನು ಪಾರ್ಥನಿಗೆ ತಿಳಿಸುತ್ತಾನೆ. ( ಪ್ರಚಲಿತವಿರುವ ’ವಿಶ್ವರೂಪದರ್ಶನ’ದಲ್ಲಿ ನಾವು ಕಾಣುವುದೇ ಬೇರೊಂದು ರೀತಿಯ ಚಿತ್ರಣ! ಇಲ್ಲಿ ಕೃಷ್ಣನು ಪಾರ್ಥನಿಗೆ ತಿಳಿಯಹೇಳುವುದೇ ಬೇರೊಂದು ರೀತಿಯ ವಿಶ್ವರೂಪದರ್ಶನ! ಇವುಗಳನ್ನು ತುಲನೆಮಾಡಿನೋಡಿದಲ್ಲಿ ಸಿರಿಭೂವಲಯಾಂತರ್ಗತ ಜಯಕಾವ್ಯದ ’ವಿಶ್ವರೂಪದರ್ಶನ’ವೇ ಹೆಚ್ಚು ತರ್ಕಬದ್ಧವೆನಿಸುತ್ತದೆ! ನೋಡಿ:
ಸಿರಿಯಾರರಲಿಯುಗಪರಿವರ್ತನವದರಿಂದ|ಧರ್ಮಯುದ್ಧಯತರ್ಕದನ||
ಕೋಲಾಹಲವಿಂಶತಿಸಾವಿರಮೃದುಲಯುದ್ಧದಾಕ್ಷರಾಂಕಟ||
ಸುಗಮೂರುರತ್ನದಸಂಯುಕ್ತ್ವವಧಾರಣೆ|ಯುಗಪರಿವರ್ತನೆಯಜಯ||
ಮಿಗಸಿಂಹವಾಗಿದಾನವನುಮಾನವನಾಗಿ| ಯುಗಶುದ್ಧೀಕರಣದಪದಪ||
ದೆಮ್ಬತ್ನಾಲ್ಕುಲಕ್ಷಗಳಪಾಹುಡಗಳಸಎ|ಜನ್ಮಜ್ಞಾನಮಾರ್ಗಣೆಯಾ||
ವಿವಶವೆಲ್ಲವನರಿವುದನನ್ನಯವಿಶ್ವರೂಪವಿದುನರ||
ನಾವು ವಾಸಿಸುವಮನೆಯು ಜಿನನದೇಹವಾಗಿರುವಾಗ ಸುಂದರತೆಯಾನುಭವ. ವಿಶ್ವರೂಪದ ತುದಿಯ ವಿನಯಾವತಾರದ ಶ್ರೀ ಜ್ಞಾನಗಂಗೆಯ ಉತ್ಪತ್ತಿಯು ಚೆನ್ನಾಗಿ ಕಾಣಿಸುವ ಹಿಮವಂತಪರ್ವತದಶಿಖರ.
ಸೊರಗುವುದನ್ನು ಬಿಡು. ನಾನೂ ಅನಾದಿದಿಸೆಯವನು. ’ಅದು’ಅನಾದಿದಿಸೆ . ಅಲ್ಲಿ ನಾನಿದ್ದೆ. ಅದರರೀತಿಯಲ್ಲೇ ಅರಸರುಗಳಹಾದಿಯೂ ಅನಾದಿಯೆಂದು ತಿಳಿಯಬೇಕು. ಎಂದು ಕೃಷ್ಣನು ತಿಳಿಸುತ್ತಾನೆ. ನೋಡಿ:
ಮನೆಜಿನದೇಹವಾಗಿರುವಾಗಸೌಷ್ಟವ|ದನುಭವವಿಶ್ವರೂಪಾಗ್ರೇ||
ವಿನಯಾವತಾರಶ್ರೀಜ್ಞಾನಗಂಗೋತ್ಪತ್ತಿಸುನಯಾಗ್ರಹಿಮವಂತಪರ್ವಸ||
ಸೊರಗುವುದುಬಿಡುನಾನೂಅನಾದಿಯದಿಶೆಯ|ದರತತ್ಅನಾದಿದ್ದೇಸೆಯೊಳು||
ನಾನಿದ್ದೆಅದರಂತೆಅರಸರದಿಶೆಯುಅನಾದಿಯೆಂದರಿಯದೆ||
ಎಲ್ಲರೂ ಸೇರಿಯುಗಯುಗಾಂತರದಲ್ಲಿ ಜೈನಕ್ಷೇತ್ರದಕಾಲವನ್ನು ಹುಡುಕುತ್ತ ಕಷ್ಟಕ್ಕೆ ಸಿಲುಕಿ ಆದಿ ಅನಾದಿಯ ಉಪವಾಸವನ್ನರಿಯದೆ ಸುಜ್ಞತೆಯನ್ನು ಮನದಲ್ಲಿ ಭಾವಿಸಿ, ಆತ್ಮಕ್ಕೆ ಮೋಕ್ಷದಪ್ರಯಾಣವೆಂದು ಸಾಗಿರುವುದೇ ನಿಜದಂಕವಾಗಿದೆ. ಸಮ ಹಾಗೂ ವಿಷಮಾಂಕದ ಎಣಿಕೆಯನ್ನೂ ಅರಿಯದಿರುವ ಶತೃ ನಮ್ಮನ್ನೇನುಮಾಡಲು ಬರುತ್ತಾನೆ!?
ನೆಮ್ಮದಿಯಗಿರುವವರಗೀತರ್ಥದ ಪದವುಕೊನೆಯಾಗಿರುವಗುಣವರ್ಣನೆಯಿರುವ ಸಂತೋಷದಿಂದೊಡಗೂಡಿದ ಗಣಿಯೊಳಗಿರುವ ರತ್ನವನ್ನು ಮೇಲಕ್ಕೆ ತರಬೇಕಾದರೆ, ಮಣಿಅ ಆಶೆಯುಳ್ಳವನಾಗಿರಬೇಕು. ಕರುವುತಾಯಿಯಗರ್ಭದಿಂದ ಹೊರಬಂದಮೇಲೆ ತಾನು ಮೊಲೆಯನ್ನು ತಿನ್ನುತ್ತಾ ಹೆಚ್ಚು ಶೋಭೆಯಿಂದಿದ್ದು, ಹಾಲಿನ ಅಮಲು ಏರಿದಮೇಲೆ ತಾನು ಹಸಿರನ್ನು ತಿನ್ನುವಂತೆ
ಮನದಲ್ಲಿ ಅದೇ ತುಂಬಿರುವರಿಂದ ಹಿಂದಕ್ಕೆ ಹೋಗದೇ ಅದರಿಂದ ಹಿಂದಕ್ಕೆ ಬರದಿರುವ ವಿಧಿಯತಾಣವನ್ನು ಗೆಲ್ಲುವ ಸಾಧನೆಯ ಅನಂತಪದವಿಯನ್ನು ಹುಡುಕಬೇಕು ಅರ್ಜುನ .
ಮದ್ಯ ರಸ ಜಲ ಉರಿಯುವಬೆಂಕಿ ಗಾಳಿ ತರಪಿನಕಾಶದ ಸೂರ್ಯನುಮಾಡಿರುವ ಮನಸ್ಸು ಅದರ ಬುದ್ಧಿಯಲ್ಲಿ ಹುಟ್ಟಿದ ಅಹಂಕಾರವು ನನ್ನ ಪ್ರಕೃತಿಯ ಎಂಟು ಅಂಗಗಳು. ಎಂದು ಕೃಷ್ಣನು ಸೂಚಿಸುತ್ತಾನೆ. ನೋಡಿ:
ಶಿಪಳಿದೆಲ್ಲರುಕೂಡಿಯುಗಯುಗಾಂತರದೊಳ್|ಕ್ಷಪಕ್ಷೇತ್ರದಕಾಲವರೆಸುತ್ತ||
ಉಪಸರ್ಗಕೆಡೆಯಾಗಿಆದಿಅನಾದಿಯ|ಉಪವಾಸವರಿಯದೆಸುಜ್ಞ|| ಮನದೆಭಾವಿಸಿಆತ್ಮಗೆಮೋಕ್ಷದ| ಗಮನವದುವೆನಿಜದಂಕಸಮ|ಸಮವಿಷಮಾಂಕದೆಣಿಕೆಯರಿಯದಶತೃ| ನಮಗೇನುಮಾಡಲುಬರುವಾ||
ತಣಿಯುತರಃಪದಂತದ್ಗೀತಾರ್ಥದ|ಗುಣವರ್ಣನರಯಿಹಸರಸ|ಗಣಿಯೊಳುರ್ವರತ್ನವಮೇಲಕೆತ್ತಲು| ಮಣಿಯಾಶೆಯುಳ್ಳವರುಬ್ಬೆ||ಆಬವಿಗರ್ಭದಿಂದುದಿಸಿದಮೇಲದು|ಆಬಂದುಮೊಲೆಯತಿನ್ನುತತಿ| ಶೋಭೆಯೊಳಿರ್ದುಹಾಲಿನಮಲೇರಿದಮೇಲೆ| ತಾಬಂದುಹಸುರುತಿಂಬಂತೆ||
ಧದೆತುಂಬಿದದರಿಂದಹಿಂದಕೆಹೋಗದೆ|ಅದರಿಂದಹಿಂದಕೆಬರದ|ವಿಧಿಯತಾಣವಗೆಲ್ವಸಾಧಿಯನಂತದ| ಪದವಿಯಹುಡುಕಬೇಕುನರ||ಶರೆರಸಜಲ ಉರಿವಬೆಂಕಿಯುಗಾಳಿ|ತರಪಿನಾಕಾಶದರ್ಕನುಮಾ| ಡಿರೆಮನವದರಬುದ್ಧಿಯೊಳ್ಪುಟ್ಟಿದಹಂ| ಕಾರಶಸರಿನನ್ನಪ್ರಕೃತಿಎಂಟಂಗ||
ಎರಡೂವರೆದ್ವೀಪದೊಳಗೆ ಜಂಬೂದ್ವೀಪ.ಅದರ ದಕ್ಷಿಣಭಾರತಕ್ಕೆ ವಿವರವಾಗಿ ಕೃಷ್ಣನು ಅರ್ಜುನನಿಗೆ ಇತ್ತ ೧೬೩ ಸವಿ ಅಂಕಗಳಂಚು ಎಂದು ಈ ಭಗವದ್ಗೀತೆಯನ್ನು ಕುರಿತು ಕವಿಯು ಹೇಳಿದ್ದಾನೆ.
ಷವೆರಡೂವರೆದ್ವೀಪದೊಳಗೆಜಂಬೂದ್ವೀಪ|ಅವರದಕ್ಷಿಣಭಾರತಕ್ಕೆ|ವಿವರದಿಕೃಷ್ಣನರ್ಜುನಗಿತ್ತರವತ್ಮೂರು| ಸವಿನೂರುಗಳಂಕದಂಚ|| ಇದಿಷ್ಟು ಕವಿ ಕುಮುದೇಂದುಮುನಿಯ ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತೆಯ ಕನ್ನಡ ವ್ಯಾಖ್ಯಾನದ ಸಂಕ್ಷಿಪ್ತ ಪರಿಚಯ.
* * *
ಆಲ್ಬರೂನಿ ಎಂಬ ವಿದ್ವಾಂಸನೊಬ್ಬನು ೭೦೦ ಶ್ಲೋಕಗಳ ಭಗವದ್ಗೀತೆಯನ್ನು ಪರ್ಷಿಯನ್ ಭಾಷೆಗೆ ತರ್ಜುಮೆಮಾಡಿರುವ ಮಾಹಿತಿಯಿದೆ. ಅಂದಮೇಲೆ ಈ ’ಭಗವದ್ಗೀತೆಯು’ ಮೊದಲಿನಿಂದಲೂ ಜಗತ್ತಿನ ಬೇರೆ ಬೇರೆ ಪ್ರದೇಶಗಳ ವಿದ್ವಜ್ಜನರ ಗಮನಸೆಳೆದಿದ್ದ ಉನ್ನತ ಸಾಹಿತ್ಯವಾಗಿತ್ತೆಂಬುದು ಸರ್ವವೇದ್ಯ. ಆದರೂ, ೨೦೧೨ರ ಸುಮಾರಿನಲ್ಲಿ ರಾಷ್ಯಾದೇಶದ ಒಂದುಪ್ರಾಂತ್ಯದ ಸರ್ಕಾರವು ’ಭಗವದ್ಗೀತೆ’ ಯನ್ನು ಕಾನೂನು ಮೋಲಕ ನಿಷೇಧಿಸುವ ಆಲೋಚನೆ ಪ್ರಕಟಿಸಿತು!
ಇವರ ಮನೋಧರ್ಮಕುರಿತು ದ್ವಾರಕೆಯ ಕೃಷ್ಣನು ಭಗವದ್ಗೀತೆಯಲ್ಲಿ ”ಶೀತದೇಶದ ಜನರ ಅರಿವ ಅರಿವೆಂದರಿಯಲಾಗದು ಅರಿಯೆಂದು ತಿಳಿದು ಇರಿ’ ಎಂದು ಪಾರ್ಥನಿಗೆ ಉಪದೇಶಿಸಿರುವುದು ಸಿರಿಭೂವಲಯದಲ್ಲಿದೆ!! ಅಂದರೆ, ನಮ್ಮ ಪ್ರಾಚೀನರಲ್ಲಿ ಬಹಳಷ್ಟುಜನ ತ್ರಿಕಾಲಜ್ಞಾನಿಗಳು ಇರುತ್ತಿದ್ದರೆಂಬುದರಲ್ಲಿ ಸಂದೇಹವಿಲ್ಲ!!
ಭಗವದ್ಗೀತೆಯು ಮಾನವಜೀವನದ ಕೈದೀವಿಗೆ. ದುಃಖದಲ್ಲಿ ಮುಳುಗಿದವರಿಗೆ ಚೈತನ್ಯ ನೀಡುವ ಅಮೃತ’ ಎಂಬ ನಂಬಿಕೆಯು ಬಹಳ ಹಿಂದಿನಿಂದಲೂ ಇದೆ. ಹಿಂದೆಲ್ಲ ಎಳೆಪ್ರಾಯದಲ್ಲಿ ವಿಧವೆಯಾದ ಹೆಣ್ಣುಮಕ್ಕಳು ತಮ್ಮ ದುಃಖವನ್ನು ಮರೆಯಲು ಭಗವದ್ಗೀತೆಯನ್ನು ಓದಬೇಕೆಂದು ಹಿರಿಯರು ಸಲಹೆ ನೀಡುತ್ತಿದ್ದರು. ಇಂಥ ಸಲಹೆನೀಡುತ್ತಿದ್ದವರನ್ನು ’ವಿಚಾರಶಾಲಿಗಳು’ ಛೇಡಿಸುತ್ತಿದ್ದುದನ್ನು ನಾನು ಕಂಡಿದ್ದೇನೆ. ”ಪ್ರಾಯದಲ್ಲಿ ಗಂಡನನ್ನು ಕಳೆದುಕೊಂಡವಳಿಗೆ ಬೇಕಿರುವುದು ಬೇರೊಬ್ಬ ಜೀವನಸಂಗಾತಿಯ ಬೆಚ್ಚನೆಯ ಅಪ್ಪುಗೆಯೇ ಹೊರತು; ಗೊಡ್ಡು ವೇದಾಂತದ ಭಗವದ್ಗೀತೆಯಲ್ಲ’ ಎಂಬುದು ಅಂಥವರ ವಾದವಾಗಿರುತ್ತಿತ್ತು. ಭಗವದ್ಗೀತೆಯ ಓದಿನಿಂದ, ಮನನದಿಂದ ತಮ್ಮ ಮನದಾಳದ ನೋವನ್ನು ಸಮೂಲವಾಗಿ; ಖಚಿತವಾಗಿ ಕಿತ್ತೊಗೆದು, ದುಃಖವನ್ನು ಪರಿಹರಿಸಿಕೊಂಡವರು ಇಂಥ ವಾದವನ್ನು ಒಪ್ಪಲು ಸಾಧ್ಯವಿರುವುದಿಲ್ಲ. ಈ ರೀತಿಯ ವಾದ- ಪ್ರತಿವಾದಗಳೆಲ್ಲವೂ ಅವರವರ ಆಂತರಿಕ ಸಂಸ್ಕಾರವನ್ನು ಅವಲಂಬಿಸಿರುತ್ತದೆ. (ಮುಕ್ತಾಯವಾಯಿತು)
ಸಿರಿಭೂವಲಯದಸುಧಾರ್ಥಿ.
No comments:
Post a Comment