’ಜೈನಸಂಪ್ರದಾಯವು ಉತ್ತರ ಭಾರತದಿಂದ ಭದ್ರಬಾಹು ಮುನಿಯೊಂದಿಗೆ ಕಳ್ವಪ್ಪುವಿಗೆ ಬರುವಮೂಲಕ ದಕ್ಷಿಣದಲ್ಲಿ ನೆಲೆಯೂರಿತು’ ಎಂಬ ತಪ್ಪು ಕಲ್ಪನೆಯು ಇಂದಿಗೂ ಪ್ರಚಲಿತವಿದೆ! ಆದರೆ, ಜೈನ ಸಂಪ್ರದಾಯದ ಮೂಲಪುರುಷ ಆದಿ ತೀರ್ಥಂಕರ ಋಷಭದೇವನೇ ಕರ್ನಾಟಕದ ಮಹಾನ್ ರಿಸಿ. ಈ ಸಂಪ್ರದಾಯದ ಮೂಲಪುರುಷನೇ ಕನ್ನಡದವನಿರಬೇಕಾದರೆ. ಇನ್ನು ಇದು ಉತ್ತರ ಭಾರತದಿಂದ ಕರ್ನಾಟಕಕ್ಕೆ ಬರುವ ವಿಚಾರವೆಲ್ಲಿದೆ!?
ಋಷಭದೇವನು ತನ್ನ ಪತ್ನಿ ಯಶಸ್ವತೀದೇವಿಯ ಮಗಳಾದ ಬ್ರಾಹ್ಮಿಗೆ ಅವಳ ಅಂಗೈಯ್ಯಲ್ಲಿ ೬೪ ಅಕ್ಷರಗಳನ್ನು ಹೊಸೆದಿತ್ತ ಕಾವ್ಯ ಭೂವಲಯ|ರಸದಓಂಕಾರ ಭೂವಲಯ| ಯಶದೆಡಗೈಯ್ಯ ಭೂವಲಯ| ರಸ ಮೂರುಗೆರೆಯ ಭೂವಲಯ| ರಿಸಿರಿದ್ಧಿಯರವತ್ನಾಲ್ಕು|ಯಶವುನಾಲ್ಕಾರದು ಹತ್ತು|ರಸಸಿದ್ಧಿಯಾ ಹತ್ತು ಓಂದು ಎಂಬುದಾಗಿ ಸೂಚಿಸುವಮೂಲಕ ಅಂಕಿಗಳು ಪರಸ್ಪರ ಸಂಬಂಧದಿಂದಾಗಿ ಪ್ರತಿಕ್ಷಣವೂ ಬದಲಾಗುವ ಪರಿಯನ್ನು ಕವಿಯು ಸೂಚಿಸಿರುವುದಿದೆ!
ರಸಸಿದ್ಧಿಯ ’೬೪ ’ ಯಶಸ್ಸಿನ ೬+೪ ಇದು ೧೦. ಇದರಲ್ಲಿ ೧ ರೊಂದಿಗೆ ಸೊನ್ನೆಯುಸೇರಿದಾಗ ಅದು ೧. ಈ ರಿತಿಯಲ್ಲಿ ಗಣಿತಕ್ಕೆ ಸಂಬಂಧಿಸಿ ಸರಳ ಸೂತ್ರಗಳನ್ನು ಸೂಚಿಸುವ ಪ್ರಯತ್ನವನ್ನು ಓದುಗರು ಕಾವ್ಯಾರಂಭದಲ್ಲಿ ಕಾಣಬಹುದು. |
ಜಗತ್ತಿನ ಸೃಷ್ಠಿ ಸ್ಥಿತಿ ಲಯಗಳೆಲ್ಲವೂ ಗಣಿತಾತ್ಮಕವಾಗಿ ಸೊನ್ನೆಯಿಂದ (೦) ಹುಟ್ಟಿದ, ಸೊನ್ನೆಸಹಿತವಾದ ೧ ರಿಂದ ೯ ಅಂಕಿಗಳು ಹಾಗೂ ಅವುಗ ಸಂಯೋಗಭಂಗದ ಲೆಕ್ಕಾಚಾರದಲ್ಲಿ, ಅವುಗಳ ಗಣಿತಾತ್ಮಕವಾದ ಹಲವಾರು ಪರ್ಯಾಯಗಳಲ್ಲಿ ಅಡಕವಾಗಿರುವುದೆಂಬ ವಿಚಾರವನ್ನು ಜೈನಸಂಪ್ರದಾಯದ ತೀರ್ಥಂಕರರು ಹಾಗೂ ಪ್ರಾಚೀನ ಮುನಿಗಳು ಮತ್ತು ವಿದ್ವಾಂಸರು ಅರಿತವರಾಗಿದ್ದರು. ಇದಕ್ಕೆ ಸಂಬಂಧಿದ ಆಸಕ್ತಿದಾಯಕ ಮಾಹಿತಿಗಳನ್ನು ಓದುಗರು ಸಿರಿಭೂವಲಯದಲ್ಲಿ ಕಾಣಬಹುದು.
-ಸಿರಿಭೂವಲಯದಸುಧಾರ್ಥಿ.
No comments:
Post a Comment