ಸಿರಿಭೂವಲಯದ ಸ್ತಂಬಕಾವ್ಯರೂಪದ ಅಂತರ್ಸಾಹಿತ್ಯದಲ್ಲಿ ಸಾಮಾನ್ಯವಾಗಿ ಪದ್ಯರೂಪವೇ ಹೆಚ್ಚಾಗಿರುತ್ತದೆ. ಆದರೆ, ಅಲ್ಲಿ ದೊರೆಯುವ ಸಾಹಿತ್ಯಭಾಗವನ್ನು ಪದ್ಯರೂಪದಲ್ಲಿ ಸಂಗ್ರಹಿಸುವುದು ಕೆಲವುಸಲ ಕಷ್ಟವಾಗುತ್ತದೆ. ಒಂದು ಪದ್ಯದ ನಾಲ್ಕುಪಾದಗಳ ಪ್ರಮಾಣವೂ ಒಂದೇ ಸಮವಾಗಿರುವುದಿಲ್ಲ! ಕೆಲವೆಡೆ ಆದಿಪ್ರಾಸವನ್ನೂ ಅನುಸರಿಸಿರುವುದಿಲ್ಲ!!
ಈ ಕಾರಣದಿಂದಾಗಿ ಒಂದು ಪದ್ಯದ ನಾಲ್ಕುಪಾದಗಳನ್ನುಖಚಿತವಾಗಿ ಗುರುತಿಸಿ ಬರೆಯುವುದು ಶ್ರಮದಕಾರ್ಯವಾಗುವುದರಿಂದ ಕೆಲವೆಡೆ ಅವುಗಳನ್ನು ಪಾದವಿಭಾಮಾಡಿ ಬರೆಯದೇ ಅವು ಇದ್ದಂತೆಯೇ ವಿಂಗಡಿಸಿ ಬರೆಯಲಾಗಿದೆ. ಶ್ರಮವಹಿಸಿ ಪಾದಗಳನ್ನು ವಿಂಗಡಿಸಿ ಬರೆದಲ್ಲಿ ಅವುಗಳಿಂದ ಪುನಃ ಸ್ತಂಬಕಾವ್ಯರೂಪದಲ್ಲಿ ಬೇರೆ ಸಾಹಿತ್ಯಭಾಗವು ಹೊಸದಾಗಿ ಉಗಮವಾಗುವುದು ನಿಶ್ಚಿತ. ಶಕ್ತಿ ಇರುವವರು ಈ ಕಾರ್ಯವನ್ನು ಮುಂದುವರೆಸಿ, ಇನ್ನೂ ಅಚ್ಚರಿಯ ಸಾಹಿತ್ಯವನ್ನು ಪ್ರತ್ಯೇಕಿಸಬಹುದು.
ಇಲ್ಲಿನ ಸಾಹಿತ್ಯಭಾಗಲ್ಲಿ ಬಳಕೆಯಾಗಿರುವ ಶಬ್ದಗಳು ಸಾಕಷ್ಟು ಸರಳವಾಗಿರುವುದರಿಂದ ಅವುಗಳಿಗೆ ಪುನಃ ಭಾವಾನುವಾದಮಾಡುವ ಅಗ್ಯವಿಲ್ಲವೆಂದು ತಿಳಿದಿದ್ದೇನೆ. ಸ್ವಲ್ಪ ಆಳವಾಗಿ ಯೋಚಿಸಬಲ್ಲವರಿಗೆ ಈ ಸಾಹಿತ್ಯಭಾಗವನ್ನು ಶ್ರದ್ಧೆಯಿಂದ ಒಂದೆರಡುಸಲ ಓದುವುದರೊಳಗೇ ಅದು ಅರ್ಥವಾಗುತ್ತದೆ.
ಹಾಗಿದ್ದೂ ನಮಗೆ ಅದು ಅರ್ಥವಾಗಲಿಲ್ಲವೆಂದು ಚಿಂತಿಸುವವರಿಗೆ -ಇಲ್ಲಿಸೂಚಿಸಿರುವಷ್ಟು ಸರಳವಾದ ವಾಕ್ಯಗಳನ್ನೂ ಅರ್ಥಮಾಡಿಕೊಳ್ಳಲಾಗದವರಿಗೆ, ಈ ಕಾವ್ಯವು ಈಜನ್ಮದಲ್ಲಿ ಮಾತ್ರವಲ್ಲ, ಮುಂದಿನಜನ್ಮಕ್ಕೂ ಸುಲಭವಾಗಿ, ಸಂಪೂರ್ಣವಾಗಿ ಅರ್ಥವಾಗದೆಂದೇ ನಿರ್ಧರಿಸಬೇಕಾಗುತ್ತದೆ.
ಸಿರಿಭೂವಲಯ ಅಂಕಿಗಳು ಹಾಗೂ ಅಕ್ಷರಗಳ ಸಾಗರದಲ್ಲಿ ಮುಳುಗಿದಾಗ, ಸರಾಗವಾಗಿ ಉಸಿರಾಡುವುದೂ ಕಷ್ಟವಾಗುತ್ತದೆ! ಈ ರೀತಿಯಲ್ಲಿ ಉಸಿರುಕಟ್ಟಿಸುವ ಕಾವ್ಯವು ಅತಿಕಷ್ಟವಾದಕಾರಣದಿಂದ ಇದರ ಓದಿನಿಂದಲೇ ದೂರವಾಗುವ ನಿರ್ಧಾರ ಮಾಡಲೂ ಸಾಧ್ಯವಿಲ್ಲ!! ಅಲ್ಲಿ ಅಡಗಿರುವ ಅತ್ಯಂತ ಸರಳವಾದ ಸಾಹಿತ್ಯವನ್ನು ಓದುವಾಗ ಇಂಥ ಅಮೃತವನ್ನು ಸವಿಯದೇ ಬಿಡುವುದುಂಟೇ!? ಎಂಬ ಆಶೆ ಸೆಳೆಯುತ್ತದೆ!!! ನೋಡಿ ನಿಮಗೂ ಹಾಗೇ ಅನಿಸಬಹುದೇನೋ!!??
ಸಿರಿಭೂವಲಯದಸುಧಾರ್ಥಿ.
No comments:
Post a Comment