ಸಿರಿಭೂವಲಯದ ಸರಳ ಪರಿಚಯಗಳನ್ನು ಕುರಿತು ಕನ್ನಡಿಗರ ಆಸಕ್ತಿ ಎಂಥದು!!!
ಸಿರಿಭೂವಲಯದ ಒಳಹೊಕ್ಕು, ಅಲ್ಲಿನ ಮಾಹಿತಿಗಳನ್ನು ಸರಳವಾಗಿ ಪರಿಚಿಯಿಸುವಕಾರ್ಯದಲ್ಲಿ ಶ್ರಮವಹಿಸಿ ಯಶಸ್ವಿಯದ ಹಾಸನದ ಸುಧಾರ್ಥಿಯು , ಕಳೆದ ಒಂದು ದಶಕದ ಅವಧಿಯಲ್ಲಿ ಸುಮಾರು ೩೦೦೦ ಪುಟಗಳ ವ್ಯಾಪ್ತಿಯಲ್ಲಿ ೧೧ ಕೃತಿಗಳನ್ನು ಪ್ರಕಟಿಸಿದ್ದಾಯಿತು. ಅವುಗಳನ್ನು ಕೆಲವರು ಮಾತ್ರ ಗಮನಿಸಿ, ಒಂದು ರೀತಿಯಲ್ಲಿ ಈ ಕೃತಿಗಳನ್ನು ಮೂಲೆಗುಂಪುಮಾಡಿದ್ದಾಯಿತು. ಕಳೆದೊಂದು ವರ್ಷದಿಂದ ನಾನು fbನಲ್ಲಿ ಬರೆಯತೊಡಗಿದಮೇಲೂ ಕೇವಲ ಕೆಲವರಿಂದಮಾತ್ರ ಅದಕ್ಕೆ ಪ್ರತಿಕ್ರಿಯೆ ದೊರೆಯುತ್ತಿತ್ತು. ಪ್ರಾಸಂಗಿಕವಾಗಿ ನಾನು ಸಿರಿಭೂವಲಯದಲ್ಲಿ ಅಂತರ್ಗತವಾಗಿರುವ ’ಋಗ್ವೇದವೇ ಜಗತ್ತಿನ ಎಲ್ಲ ಜ್ಞಾನಕ್ಕೂ ಮೂಲ’ ಎಂಬ ಮಾಹಿತಿಯನ್ನು ಸೂಚಿಸುವಲ್ಲಿ ಪ್ರಕಟಿಸಿದ ಕೆಲವು ಸಾಲಿನ ಲೇಖನಕ್ಕೆ ಜೈನಸಮುದಾಯದ ಕೆಲವು ಮಿತ್ರರು ಅದನ್ನು ಪ್ರಶ್ನಿಸಿ ತಮ್ಮ ಅನಿಸಿಕೆಗಳನ್ನು ಸೂಚಿಸಿದರು. ಅವುಗಳಿಗೆ ಸೂಕ್ತ ಉತ್ತರ ನೀಡಿದರೂ ಅವರಿಗೆ ಅದು ಸಮಂಜಸವೆನಿಸಲಿಲ್ಲ. ಉತ್ತರ; ಪ್ರತ್ಯುತ್ತರಗಳಸರಣಿಯು ಬೆಳೆದು ಅನಪೇಕ್ಷಿತವಾದ ಚರ್ಚೆಯಾಯುತು ಈ ಕಾರಣದಿಂದಾಗಿ ನಾನು ಆ ಚರ್ಚೆಯಿಂದ ಹೊರಬಂದು ಈ ಸಂಬಂಧದ ಚರ್ಚೆಯನ್ನು ಮುಕ್ತಾಯಗೊಳಿಸುವ ನಿರ್ಧಾರಮಾಡುವುದು ಅನಿವಾರ್ಯವಾಯಿತು. ನನ್ನಲ್ಲಿ ಉಳಿದಿರುವ ಸಿರಿಭೂವಲಯದ ಸರಳ ಪರಿಚಯಕೃತಿಗಳ ದೊಡ್ಡ ರಾಶಿಯನ್ನು ಮುಂದೆ ಹಣಕ್ಕೆ ಮಾರಾಟಮಾಡದೇ, ’ದಾನ’ವಾಗಿ ನೀಡುವ ನಿರ್ಧಾರಮಾಡಿದೆ. ಆಸಕ್ತಿ ಇರುವವರು ಖುದ್ಧಾಗಿ ಬಂದು ಅದನ್ನು ಪಡೆಯಬಹುದು. ಯಾಪನೀಯ ಜೈನಸಂಪ್ರದಾಯದ ಮುನಿ ಕುಮುದೇಂದುವಿನ ಮೂಲಕ ಬೆಳಕುಕಂಡಿರುವ ಜಗತ್ತಿನ ಈ ಅತ್ಯಂತ ಅಚ್ಚರಿಯ ಕಾವ್ಯದಲ್ಲಿ ನಿರೂಪಿತವಾಗಿರುವ ಕನ್ನಡದ ಪ್ರಾಚೀನತೆ ಹಾಗೂ ಪ್ರಾಧಾನ್ಯತೆಯನ್ನು ಪರಿಚಯಿಸುವ ಏಕೈಕ ಉದ್ದೇಶದಿಂದ ಈ ಸರಳಪರಿಚಯಕಾರ್ಯಕ್ಕೆ ನಾನು ಕೈಹಾಕಿದ್ದೇ ವಿನಃ, ವೇದಸಂಪ್ರದಾಯ ಹಾಗೂ ಶ್ರವಣ ಸಂಪ್ರದಾಯದ ತಿಕ್ಕಾಟವನ್ನು ನೋಡುವುದು ಇದರ ಉದ್ದೇಶವಲ್ಲ, ಎಂಬುದನ್ನು ಈ ಮೂಲಕ ನನ್ನ ಅಭಿಮಾನಗಳ ಗಮನಕ್ಕೆ ತರಲು ಇಚ್ಛಿಸಿದ್ದೇನೆ. ವಂದನೆಗಳು.
- ಸಿರಿಭೂವಲಯದ ಸುಧಾರ್ಥಿ

No comments:
Post a Comment