ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲ ಕಾರ್ಯಾಲಯಗಳಲ್ಲೂ ’ಅಪ್ಪಣೆ ಇಲ್ಲದೇ ಪ್ರವೇಶವಿಲ್ಲ’ ’ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ’ ’ಅತಿಕ್ರಮಪ್ರವೇಶ ಶಿಕ್ಷಾರ್ಹ ಅಪರಾಧ’ ಮುಂತಾದ ಫಲಕಗಳಿರುತ್ತವೆ. ಅಲ್ಲಿ ಕೆಲಸಮಾಡುವವರ ಹಿತದೃಷ್ಟಿಯಿಂದ ಇದು ಅಗತ್ಯವೂ ಇರಬಹುದು. ಇಲ್ಲಿನ ವಿಚಿತ್ರವೆಂದರೆ, ಸಿರಿಭೂವಲಯವೂ ಕೂಡ ಅನರ್ಹರನ್ನು ಈ ರೀತಿಯಲ್ಲಿ ನಿಷೇಧಿಸಿರುವುದಿದೆ!! ಇಂಥ ನಿಷೇಧಕ್ಕೆ ಕಾರಣವೇನೆಂಬುದನ್ನೂ ಕೂಡ ಅಲ್ಲಿ ಸೂಚಿಸಲಾಗಿದೆ!!!
ವೈಶೇಷಿಕ, ನ್ಯಾಯ, ಯೋಗ, ಸಾಂಖ್ಯ, ವೇದಾಂತ, ಮೀಮಾಂಸೆಗಳೆಂಬ ತತ್ವಶಾಸ್ತ್ರದ ಸಮೂಹವನ್ನು ’ದರ್ಶನ’ ಎಂದು ಸೂಚಿಸಲಾಗುತ್ತದೆ. ಇಂಥ ದರ್ಶನದ ಶಕ್ತಿಯೊಂದಿಗೆ ತಿಳುವಳಿಕೆಯ ಶಕ್ತಿ, ಸನ್ನಡತೆಯುಸೇರಿದ ರತ್ನಗಳ ಶಬ್ದ ಇವುಗಳನ್ನು ಬರೆಯಬಾರದು. ಬರೆದರೂ ಅವುಗಳನ್ನು ಓದಬಾರದು! ಈ ರೀತಿಯ ಸಂಪತ್ತಿನ ಸಿದ್ಧಿಯನ್ನು ಸಿರಿಭೂವಲಯವು ಹೊಂದಿದೆ. ಆದ ಕಾರಣ ಇಂಥ ಸಂಪತ್ತನ್ನು ಸಂಗ್ರಹಿಸಿ ಸಂರಕ್ಷಿಸಿರುವ ಕೋಶಾಗಾರಕ್ಕೆ ಸಾಮನ್ಯ ಜನರಿಗೆ ಪ್ರವೇಶವಿರಲು ಹೇಗೆ ಸಾಧ್ಯಾ!!?? ನೋಡಿ: ’ದರುಷನಶಕ್ತಿ ಜ್ಞಾನದಶಕ್ತಿ ಚಾರಿತ್ರ|ವೆರಸಿದರತ್ನತ್ವರವ! ಬರೆಯಬಾರದ ಬರೆದರುಓದಬಾರದ|ಸಿರಿಯ ಸಿದ್ಧತ್ವ ಭೂವಲಯ||”
ಹೆಚ್ಚು ಬೆಲೆಬಾಳುವ ಸಂಪತ್ತಿನ ಇನ್ನೊಂದು ರೂಪ ’ಶಕ್ತಿ’ ಇಂಥ ಶಾಕ್ತಿಯು ಹೇರಳವಾಗಿ ಸಂಗ್ರಹವಾಗಿರುವಲ್ಲಿ ಅದು ತನ್ನದೇಆದ ಶಬ್ದವನ್ನು ಹೊರಹೊಮ್ಮಿಸುವುದು ಸಹಜ ಸಂಗತಿ.
ನಮ್ಮ ಕಣ್ಣಿಗೆ ಕಾಣಿಸುವ ಸೂರ್ಯನಲ್ಲಿ ಅಪಾರವಾದ ಶಕ್ತಿಯ ಸಂಗ್ರಹವಿದೆ. ಅಲ್ಲಿಂದ ಪಸರಿಸುವ ಬೆಳಕಿನ ಕಿರಣಗಳೊಂದಿಗೆ ರವಿಯ’ರವ’ವೂ ಸೇರಿರುತ್ತದೆ! ಅದು ’ಓಂ’ ಕಾರದ ರೂಪದಲ್ಲಿ ಹೊರಹೊಮ್ಮುವಂಥದು. ಅದನ್ನು ಇಂದಿನ ವಿಜ್ಞಾನಿಗಳೂ ಸಮರ್ಥಿಸುತ್ತಾರೆ.
ಸಿರಿಭೂವಲಯದಲ್ಲಿ ಜಗತ್ತಿನ ಜ್ಞಾನವನ್ನೆಲ್ಲ ಒಂದೆಡೆಯಲ್ಲಿ ಸಂಗ್ರಹಿಸಿ ಸಂರಕ್ಷಿಸಲಾಗಿದೆ! ಇಲ್ಲಿಯೂ ಅಮೂಲ್ಯವಾದ ರತ್ನಗಳ’ರವ’ ವಿರುವುದು ಸಹಜವಲ್ಲವೇ!? ಇಂಥ ಮಹತ್ತರವಾದ ಕಾವ್ಯ ಸಿರಿಭೂವಲಯ ಎಂಬುದು ಕವಿಯಭಾವ.
ಆತ್ಮೀಯ ಓದುಗರೇ, ಒಂದೊಂದು ಸಾಂಗತ್ಯ ಪದ್ಯಕ್ಕೂ ಈ ರೀತಿಯಲ್ಲಿ ಸರಳ ವಿವರಣೆಗಳನ್ನು ಬರೆಯುತ್ತ ಹೋದಲ್ಲಿ, ’ನೂರುಸಾವಿರಲಕ್ಷಕೋಟಿ’ ಶ್ಲೋಕಗಳ ವ್ಯಾಪ್ತಿಯ ಸಿರಿಭೂವಲಯದ ೬ ಲಕ್ಷ ಮೂಲಕನ್ನಡ ಪದ್ಯಗಳಪೈಕಿ ಪ್ರಕಟವಾಗಿರುವ ಸುಮಾರು ೨೧೦೦೦ ಪದ್ಯಗಳಿಗೆ ಸರಳ ವಿವರಣೆನೀಡಲು ಎಷ್ಟು ಬರೆಯಬೇಕಾದೀತೆಂಬುದನ್ನು ದಯವಿಟ್ಟು ಗಮನಿಸಿರಿ.
ಈ ಕಾರಣದಿಂದಾಗಿಯೇ ಸಿರಿಭೂವಲಯದಸುಧಾರ್ಥಿಯು ತಾನು ಪ್ರತ್ಯಕ್ಷವಾಗಿ ಕಂಡ ಸುಮಾರು ೨೧ ಸಾವಿರ ಸಾಂಗತ್ಯ ಪದ್ಯಗಳ ಪೈಕಿ ಕೇವಲ ಹತ್ತಾರು ಸಾಂಗತ್ಯ ಪದ್ಯಗಳ ಸರಳಪರಿಚಯಮಾಡಿಕೊಡುವುದರೊಳಗೇ ತನ್ನ ಜೀವಿತದ ಮುಕ್ಕಾಲುಭಾಗವನ್ನು ಸವೆಸಿದ್ದಾಗಿದೆ!
ಓದುಗರು ದಯಮಾಡಿ ಹೆಚ್ಚಿನ ’ಸಾಂಗತ್ಯಪದ್ಯಗಳಿಗೆ ಸರಳ ಪರಿಚಯ ನೀಡಿ’ ಎಂದು ಅಪೇಕ್ಷಿಸಬಾರದಾಗಿ ವಿನಂತಿ. ಸಾಂಗತ್ಯ ಪದ್ಯಗಳನ್ನು ಒಂದೆರಡುಸಲ ಓದಿನೋಡಿ. ನಿಮ್ಮಲ್ಲಿ ನನಗಿಂತಲೂ ಹೆಚ್ಚಿನ ಮೇಧಾಶಕ್ತಿ ಇರುವುದು ಸಹಜ. ನೀವೂ ಈದಿಸೆಯಲ್ಲಿ ಪ್ರಯತ್ನಮಾಡಿದಲ್ಲಿ ಹೆಚ್ಚಿನ ಲೋಕೋಪಕಾರವಾಗುವುದು ನಿಶ್ಚಿತ ಎಂದು ಸುಧಾರ್ಥಿಯು ನಂಬಿದ್ದಾನೆ.
-ಸಿರಿಭೂವಲಯದಸುಧಾರ್ಥಿ.