ಐದನೇ ಅಧ್ಯಾಯದ ಪ್ರರ್ಣಪದ್ಯ ಸಂಖ್ಯೆ ೯೫ ರಿಂದ ೧೪೫ರ ವರೆಗೆ ಅಂತರಶ್ರೇಣಿಯಲ್ಲಿ (ಅಶ್ವಗತಿ) ಸಾಗಿದಾಗ ದೊರೆಯುವ ಸಂಸ್ಕೃತಸಾಹಿತ್ಯವು ಪ್ರಾಚೀನವಾದ ೧೮ಭಾಷೆಗಳ ಲಿಪಿಯ ಸಿದ್ಧಮಾತೃಕಾವರ್ಣಮಾಲೆಯನ್ನು ವಿವರಿಸುವುದಾಗಿದೆ.
'ಅಥವಾ ಪ್ರಾಕೃತ ಸಂಸ್ಕೃತ ಮಾಗಧ ಪಿಶಾಚಭಾಷಾಶ್ಚ ಶೂರಸೇನೀಚ ಷಷ್ಟೋತ್ರಭೇದೋ ದೇಶ ವಿಶೇಷಾದಪಭ್ರಂಶಹ ಕರ್ನಾಟ ಮಾಗಧ ಮಾಲವ ಲಾಟ ಗೌಡ ಗುರ್ಜರ ಪ್ರತ್ಯೇಕತ್ರಯ ಮಿತ್ಯಷ್ಟಾದಶ ಮಹಾಭಾಷಾ ಸರ್ವಭಾಷಾಮಯೀಭಾಷಾ ವಿಶ್ವ ವಿದ್ಯಾವಭಾಸಿನೇ ತ್ರಿಷಷ್ಟಿಹಿ ಚತುಃಷಷ್ಟಿರ್ವಾ ವರ್ಣಾಾಹ ಶುಭಮತೇಮತಾಃ ಪ್ರಾಕೃತೇ ಸಂಸ್ಕೃತೇಚಾಪಿ ಸ್ವಯಂಪ್ರೋಕ್ತಾಹ ಸ್ವಯಂಭುವಾ ಅಕಾರಾದಿ ಹಕಾರಾಂತಂ ಶುದ್ಧಾ ಮುಕ್ತಾವಲೀಮಿವ ಸ್ವರ ವ್ಯಂಜನ ಭೇದೇನ ದ್ವಿದಾಭೇದಮುಪಯ್ಯುಷೀಂ ಅಯೋಗವಾಹಪರ್ಯುಂತಾಂ ಸರ್ವ ವಿದ್ಯಾಸುಸಂಗತಾಂ ಅಯೋಗಾಕ್ಷರಸಂಭುತಿಂ ನೈಕಬೀಜಾಕ್ಷರೈಶ್ಚಿತಾಂ ಸಮವಾದಿಃ ದಧತ್ಬ್ರಾಹ್ಮೀ ಮೇಧವಿನ್ಯತಿಸುಂದರೀ ಸುಂದರೀ ಗಣಿತಂ ಸ್ಥಾನಂ ಕ್ರಮೈಹಿ ಸಂಯುಗಧಾಸ್ಯತ್ ತತೋಭಗವತೋ ವಕ್ತ್ರಾನಿಹಿ ಸ್ರುತಾಕ್ಷರಾವಲೀಂ ನಮ ಇತಿವ್ಯಕ್ತ ಸುಮಂಗಲಾಂ ಸಿದ್ಧಮಾತೃಕಾಂ' ಎಂಬ ಸಾಹಿತ್ಯವು ದೊರೆಯುತ್ತದೆ. ಭಟ್ಟಾಕಳಂಕನ ಶಬ್ದಾನುಶಾಸನದಲ್ಲಿ ಹಾಗೂ ಪಾಣಿಯ ವ್ಯಾಕರಣದಲ್ಲಿ ಅಂದಿನ ಕನ್ನಡ ವರ್ಣಮಾಲೆಯನ್ನು ಕುರಿತು ದೊರೆಯುವ ವಿವರಣೆಯೂಕೂಡ ಕೆಲವೊಂದು ವ್ಯತ್ಯಾಸಗಳೊಂದಿಗೆ ಇದೇ ಆಗಿವೆ ಎಂಬುದನ್ನು ಕರ್ಲಮಂಗಲಂ ಶ್ರೀಕಂಠಯ್ಯನವರು ವಿವರಿಸಿದ್ದಾರೆ. ಈ ಕಾರಣದಿಂದಾಗಿ ಪಾಣಿನಿಯ ಕಾಲದಲ್ಲೇ ೬೪ ಧ್ವನಿಸಂಕೇತಗಳ ವರ್ಣಮಾಲೆಯು ಕನ್ನಡಭಾಷೆಯದೆಂಬ ವಿಚಾರ ಖಚಿತವಾಗಿದೆ! ಆದರೂ ಈ ೬೪ ಧ್ವನಿಸಂಕೇತಗಳ ವರ್ಣಮಾಲೆಯು ಸಂಸ್ಕೃತದ್ದೆಂದು ನಿರ್ಧರಿಸುವ ಆಧುನಿಕ ವಿದ್ವಾಂಸರ ವಿತಂಡವಾದದಿಂದಾಗಿ ಸಂಸ್ಕೃತಭಾಷೆಯ ಪೇಟೆಂಟ್ ಪಡೆದಿರುವ ಜರ್ಮನರು ಇದು ತಮ್ಮ್ಮ ಸ್ವಾಮ್ಯಕ್ಕೆ ಸೇರಿದ್ದೆಂದು ಸ್ವಾತಂತ್ರ್ಯವಹಿಸಲು ಹಾದಿ ಸುಗಮವಾಯಿತು!! ಇದು ಕನ್ನಡದ ಪ್ರಾಚೀನ ಆಸ್ಥಿ ಎಂಬುದನ್ನು ಕನ್ನಡ ವಿದ್ವಾಂಸರು ಆಗಲೇ ಪ್ರತಿಪಾದಿಸಿದ್ದಲ್ಲಿ ಸೂಪರ್ ಕಂಪ್ಯೂಟರಿಗೆ ಸಾಫ್ಟ್ವೇರ್ ರೂಪಿಸುವಲ್ಲಿ ಸನ್ ಮೈಕ್ರೋಸಿಸ್ಟಮ್ ನವರು ಕನ್ನಡಭಾಷೆಗೆ ರಾಜಧನ (ರಾಯಲ್ಟಿ) ಕೊಡಬೇಕಾದುದು ಅನಿವಾರ್ಯವಾಗುತ್ತಿತ್ತು.